ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತ ತೀವ್ರಗೊಂಡಿದೆ. ಗೂಗಲ್, ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ಪ್ರಮುಖ ಕಾರಣ. ಗೂಗಲ್ ಇತ್ತೀಚೆಗೆ 200 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಈಗಾಗಲೇ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಟೆಕ್ ಉದ್ಯಮದಲ್ಲಿ ಲೇಆಫ್ ಈಗ ಸರ್ವೇಸಾಮಾನ್ಯ ಎನ್ನುವ ಹಾಗೆ ಆಗಿದೆ. ಗೂಗಲ್ ಸೇರಿದಂತೆ ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್‌ನಂತಹ ಪ್ರತಿಷ್ಠಿತ ಕಂಪನಿಗಳು ಕೂಡ ಉದ್ಯೋಗ ಕಡಿತ ಮಾಡಿವೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೋಮೇಷನ್‌ನ ಹೆಚ್ಚಿನ ಬಳಕೆಯಿಂದ ಲೇಆಫ್ ಆಗುತ್ತಿದೆ. ನೂರು ಜನರು ಮಾಡುವ ಕೆಲಸವನ್ನು AI ಈಗ ಒಂದು ದಿನದಲ್ಲಿ ಮಾಡುತ್ತದೆ ಅಂದ್ರೆ ಅಲ್ಲಿ ಮ್ಯಾನ್ ಪವರ್ ಯಾಕೆ ಬೇಕು?
200 ಉದ್ಯೋಗಿಗಳ ಕಡಿತ!
ಸ್ಪರ್ಧೆಯಲ್ಲಿ ಮುಂದಿರಲು, ಗ್ರಾಹಕರಿಗೆ ಉತ್ತಮ ಸೇವೆ ನೀಡಲು, ಲಾಭ ಗಳಿಸಲು ಕಂಪನಿಗಳು ಈ ಬದಲಾವಣೆಗಳನ್ನು ಮಾಡುತ್ತಿವೆ. ಉದ್ಯಮ ವಿಶ್ಲೇಷಕರ ಪ್ರಕಾರ, ತಂತ್ರಜ್ಞಾನದ ಏಳಿಗೆಯಿಂದ ಈ ಉದ್ಯೋಗ ಕಡಿತದ ಪ್ರವೃತ್ತಿ ಇನ್ನಷ್ಟು ಮುಂದುವರಿಯಬಹುದು. ಡೇಟಾ ಸೆಂಟರ್‌ಗಳು , AI ಅಭಿವೃದ್ಧಿಯತ್ತ ಗೂಗಲ್ ತನ್ನ ಗಮನವನ್ನು ಕೊಡ್ತಿದೆ. ತನ್ನ ಹೂಡಿಕೆಯನ್ನು AI ಕ್ಷೇತ್ರದಲ್ಲಿ ಹೆಚ್ಚಿಸಲು, ಕಡಿಮೆ ಪ್ರಾಮುಖ್ಯತೆಯ ಕ್ಷೇತ್ರಗಳಲ್ಲಿ ಕಡಿತ ಮಾಡುತ್ತಿದೆ. ಈ ಬದಲಾವಣೆಯ ಭಾಗವಾಗಿ, ಗೂಗಲ್ ತನ್ನ ಜಾಗತಿಕ ವ್ಯಾಪಾರ ಘಟಕದಲ್ಲಿ ಸುಮಾರು 200 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಈ ಘಟಕವು ಮಾರಾಟ ಮತ್ತು ಪಾಲುದಾರಿಕೆಯನ್ನು ನಿರ್ವಹಿಸುತ್ತದೆ. ಗೂಗಲ್‌ನ ಪ್ರಕಾರ, ಈ ಬದಲಾವಣೆಗಳು ಉತ್ತಮ ಸಹಯೋಗ , ಗ್ರಾಹಕ ಸೇವೆಯನ್ನು ಒದಗಿಸಲು ಸಹಾಯ ಮಾಡುತ್ತವೆ.
ಎರಡನೇ ಬಾರಿ ಕಡಿತ!
ಕಳೆದ ತಿಂಗಳು ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ತಂಡಗಳನ್ನು ಒಳಗೊಂಡಂತೆ ಪ್ಲಾಟ್‌ಫಾರ್ಮ್‌ಗಳು, ಡಿವೈಸ್‌ಗಳ ವಿಭಾಗದಲ್ಲೂ ಉದ್ಯೋಗ ಕಡಿತವಾಗಿತ್ತು. ಈ ಎರಡನೇ ಬಾರಿಯ ಕಡಿತದಿಂದ ಉದ್ಯೋಗಿಗಳಲ್ಲಿ ಉದ್ಯೋಗ ಭದ್ರತೆಯ ಬಗ್ಗೆ ಆತಂಕ ಉಂಟಾಗಿದೆ. ಎಲ್ಲ ವಿಭಾಗಗಳಲ್ಲಿಯೂ ಲೇಆಫ್ ಶುರುವಾಗಿದೆ. ಇನ್‌ಫೋಸಿಸ್ ಕೂಡ ಒಂದಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿದೆ. ಇನ್ನು ಕಾಸ್ಟ್ ಕಟಿಂಗ್ ಹೆಸರಿನಲ್ಲಿ ಸಂಬಳಕ್ಕೆ ಕೂಡ ಕತ್ತರಿ ಬೀಳ್ತಿದೆ. ಕಳೆದ ಏಪ್ರಿಲ್‌ನಲ್ಲಿ ಇನ್‌ಫೋಸಿಸ್ ಮೈಸೂರಿನಲ್ಲಿಯೇ 200 ಉದ್ಯೋಗಿಗಳನ್ನು ತೆಗೆದು ಹಾಕಿತ್ತು.
ಯಾವ ಕಂಪೆನಿಯಲ್ಲಿ ತೆಗೆಯಲಾಗಿದೆ?
ಯುಎಸ್ ಡಿಫೆನ್ಸ್ ಸೆಕ್ರೆಟರಿ ಪೀಟ್ ಹೆಗ್ಸೆತ್ ಆದೇಶದಂತೆ ಬೂಜ್ ಅಲೆನ್ ಹ್ಯಾಮಿಲ್ಟನ್, ಅಕ್ಸೆಂಚರ್, ಡೆಲಾಯ್ಟ್‌ನಂತಹ ಕಂಪನಿಗಳ $5.1 ಬಿಲಿಯನ್ ಮೌಲ್ಯದ ಹಲವು ಮಾಹಿತಿ ತಂತ್ರಜ್ಞಾನ ಸೇವೆಗಳ ಒಪ್ಪಂದಗಳನ್ನು ಮುಕ್ತಾಯಗೊಳಿಸಲು ಆದೇಶ ಹೊರಡಿಸಿದ್ದರು. ಹೀಗಾಗಿ ಒಂದಷ್ಟು ಕಂಪೆನಿಗಳಿಗೆ ಹೊಡೆತ ಬಿದ್ದಿದ್ದು, ಅಲ್ಲಿಯೂ ಲೇಆಫ್ ಆಗೋ ಚಾನ್ಸ್ ಇದೆ. ವರ್ಡ್‌ಪ್ರೆಸ್ ಕಂಪೆನಿಯಿಂದ 270 ಉದ್ಯೋಗಿಗಳನ್ನು, Canva ಕೂಡ ಒಂದಷ್ಟು ಉದ್ಯೋಗಿಗಳನ್ನು ಹೊರಗಡೆ ಕಳಿಸಲಾಗಿದೆ. ಡುಬ್ಲಿನ್ ಆಫೀಸ್‌ನಲ್ಲಿ 300 ಉದ್ಯೋಗಿಗಳು, ಒಲಾ ಎಲೆಕ್ಟ್ರಿಕ್ ಕಂಪೆನಿಯು 1000 ಉದ್ಯೋಗಿಗಳು, ಕೆಲ ಎಲೆಕ್ಡ್ರಿಕ್ ಕಂಪೆನಿಗಳು 5600 ಉದ್ಯೋಗಿಗಳು, ಏರೋ ಸ್ಪೇಸ್ ಕಂಪೆನಿಯು 1000 ಉದ್ಯೋಗಿಗಳು, ಸೇಲ್ಸ್‌ಫೋರ್ಸ್ 1000 ಉದ್ಯೋಗಿಗಳು, ಮೆಟಾದಿಂದ 3600 ಉದ್ಯೋಗಿಳು, ಹಾಗೂ ಅಮೆಜಾನ್ ಕೂಡ ಸ್ವಲ್ಪ ಉದ್ಯೋಗಿಗಳ ಕಡಿತ ಮಾಡಿದೆ ಎನ್ನಲಾಗಿದೆ.
2024ರಲ್ಲಿಯೇ ಬೆಂಗಳೂರಿನಲ್ಲಿ 50000 ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. 2025ರ ವೇಳೆಗೆ ಇನ್ನೂ ಹದಿನೈದು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕೂಡ ಹೊಡೆತ ಬೀಳಲಿದೆ. ಸಾಕಷ್ಟು ಜನರು ಕಂಪೆನಿ ಬಿಟ್ಟು ಹೊಸ ಉದ್ಯಮ ಶುರು ಮಾಡಿದ್ದಾರೆ. ಇನ್ನೂ ಕೆಲವರು ಕೃಷಿಯತ್ತ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ KCredit ಎನ್ನುವ ಕಂಪೆನಿಯ CEO, ಹಾಗೂ ಈ ಕಂಪೆನಿ ಸ್ಥಾಪಕ ಹರ್ಷ್ ಪೊಖರ್ನ ಅವರು ಕಳೆದ ವರ್ಷ ತಮ್ಮ ಕಂಪೆನಿಯ 70 ಉದ್ಯೋಗಿಗಳ ಲೇಆಫ್ ಮಾಡಿದ್ದಾರೆ. ಆಮೇಲೆ ಅವರಲ್ಲಿ 67 ಉದ್ಯೋಗಿಗಳಿಗೆ ಹೊರಗಡೆ ಕೆಲಸ ಕೊಡಿಸಿದ್ದರು.


