11:12 PM (IST) Jan 08

Karnataka News Live 8 January 2026ಬಾಕ್ಸ್ ಆಫೀಸ್ ಸುನಾಮಿ 'ರಾಜಾಸಾಬ್' ಎಂಟ್ರಿ! ನಾಳೆಯಿಂದ ಥಿಯೇಟರ್‌ಗಳಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಅಟ್ಟಹಾಸ ಶುರು!

'ಕಲ್ಕಿ' ನಂತರ ಪ್ರಭಾಸ್ 'ದಿ ರಾಜಾಸಾಬ್' ಆಗಿ ಹಾರರ್-ಫ್ಯಾಂಟಸಿ ಜಗತ್ತಿಗೆ ಕಾಲಿಡುತ್ತಿದ್ದಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರು, ಭಯ ಮತ್ತು ಹಾಸ್ಯವನ್ನು ಮೇಳೈಸಿದ ಈ ಪ್ಯಾನ್-ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ.
Read Full Story
11:00 PM (IST) Jan 08

Karnataka News Live 8 January 2026Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್​ಚಲ್​ ಸೃಷ್ಟಿಸ್ತಿದೆ ವಿಡಿಯೊ!

ಬಿಗ್​ಬಾಸ್​ 12ರ ಫೈನಲ್​ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟನ ಗೆಲುವಿನ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ, ಶನೈಶ್ಚರ ದೇಗುಲದಲ್ಲಿ ಗಿಲ್ಲಿ ನಟನ ಗೆಲುವಿಗೆ ದೇವರೇ ಪ್ರಸಾದ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು, ಇದರ ಅಸಲಿಯತ್ತಿನ ಬಗ್ಗೆ ಅನುಮಾನಗಳು ಮೂಡಿವೆ.
Read Full Story
10:53 PM (IST) Jan 08

Karnataka News Live 8 January 2026'ಜೀವನಾನ ಎಂಜಾಯ್‌ ಮಾಡೋದು ಅವನಿಂದ ಕಲಿತಿದ್ದೇನೆ..' ಬಿಗ್‌ಬಾಸ್‌ ಮನೆಯಲ್ಲೇ ಗಿಲ್ಲಿಗೆ ರಘು ಬಹುಪರಾಕ್‌!

ಆರಂಭದಲ್ಲಿ ಗಿಲ್ಲಿಯನ್ನು ಕಂಡರೆ ಆಗುವುದಿಲ್ಲ ಎನ್ನುತ್ತಿದ್ದ ರಘು, ಇದೀಗ ಅವರ ನಿಜವಾದ ಗುಣವನ್ನು ಅರಿತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಒಬ್ಬ ಒಳ್ಳೆಯ ಮನುಷ್ಯ, ಅವನ ಯೋಚನಾ ರೀತಿ ತನಗೆ ಇಷ್ಟವಾಗಿದೆ ಎಂದು ರಘು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ. 

Read Full Story
10:46 PM (IST) Jan 08

Karnataka News Live 8 January 2026ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಬೆಂಗಳೂರಿನಲ್ಲಿ ಕುತೂಹಲದ ಘಟನೆ- ಏನಿದರ ಅಸಲಿಯತ್ತು?

ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯೊಬ್ಬರಲ್ಲಿ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತೇನು? ಯಾರೀ ಯುವತಿಯರು? ಈ ಸುದ್ದಿಯ ಹಿಂದೆ ಏನಿದೆ? ಇಲ್ಲಿದೆ ಕುತೂಹಲ

Read Full Story
10:00 PM (IST) Jan 08

Karnataka News Live 8 January 2026ಬಳ್ಳಾರಿ - ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; ಟ್ರ್ಯಾಕ್ ಮೇಲೆ ನಡೆಯುತ್ತಿದ್ದ ವ್ಯಕ್ತಿ ಬಲಿ, ರಸ್ತೆಗೆ ಬಿದ್ದ ಕಾಲು!

ಬಳ್ಳಾರಿಯ ಕನಕ ದುರ್ಗಮ್ಮ ರೈಲ್ವೇ ಮೇಲ್ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ಸುಮಾರು 40 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಮೀರ್ ಎಕ್ಸ್‌ಪ್ರೆಸ್ ಡಿಕ್ಕಿಯ ರಭಸಕ್ಕೆ ದೇಹ ಛಿದ್ರಗೊಂಡಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ರೈಲ್ವೇ ಪೊಲೀಸರು ಪ್ರಕರಣ ದಾಖಲು

Read Full Story
09:55 PM (IST) Jan 08

Karnataka News Live 8 January 2026Amruthadhaare - ಹುಡುಗಿ ಅಂಕಲ್​ನ, ಯುವಕ ಆಂಟಿಯನ್ನು ಲವ್​ ಮಾಡೋದು ಟ್ರೆಂಡಂತೆ ನೋಡ್ರಪ್ಪಾ!

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್‌ಗೆ ಮನಸೋತ ಯುವತಿ ಸುಷ್ಮಾ, ಆತನಿಗೆ ಲವ್ ಲೆಟರ್ ನೀಡುವಂತೆ ಪತ್ನಿ ಭೂಮಿಕಾಳ ಬಳಿಯೇ ಕೇಳುತ್ತಾಳೆ. ಮತ್ತೊಂದೆಡೆ, ಸುನಿಲ್ ಕೂಡ ತನಗಿಂತ ಹಿರಿಯ ವಯಸ್ಸಿನ ಮಲ್ಲಿಯ ಪ್ರೀತಿಯಲ್ಲಿ ಬಿದ್ದಿದ್ದು, ವಯಸ್ಸಿನ ಅಂತರವಿರುವ ಪ್ರೇಮಕಥೆಯ ಹೊಸ ಟ್ರೆಂಡ್ ಅನ್ನು ತೋರಿಸುತ್ತಿದೆ.

Read Full Story
09:18 PM (IST) Jan 08

Karnataka News Live 8 January 2026'ಕಾಸರಗೋಡು ಕನ್ನಡಿಗರ ಮೇಲೆ ಮಲಯಾಳಂ ಹೇರಬೇಡಿ..' ಕೇರಳದ ಭಾಷಾ ಮಸೂದೆಗೆ ಸಿದ್ದರಾಮಯ್ಯ ಕಿಡಿ!

ಕೇರಳ ಸರ್ಕಾರದ ಪ್ರಸ್ತಾಪಿತ ಮಲಯಾಳಿ ಭಾಷಾ ಮಸೂದೆ-2025ಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯು ಕಾಸರಗೋಡಿನ ಕನ್ನಡಿಗರ ಭಾಷಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

Read Full Story
08:31 PM (IST) Jan 08

Karnataka News Live 8 January 2026Bigg Boss ಜಾಹ್ನವಿಗೆ ಈ ಪರಿ ಭಯ ಹುಟ್ಟಿಸೋದಾ ರಕ್ಷಿತಾ ಶೆಟ್ಟಿ? ತುಳುನಾಡಿಗೆ ಕಾಲಿಡಲು ಭಯವಂತೆ!

ಬಿಗ್‌ಬಾಸ್‌ನಿಂದ ಹೊರಬಂದ ನಂತರ ಜಾಹ್ನವಿ ದಕ್ಷಿಣ ಕನ್ನಡದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿಗೆ ಕಾಟ ಕೊಟ್ಟಿದ್ದರಿಂದ ಇಲ್ಲಿನ ಜನ ತನಗೆ ತೊಂದರೆ ಕೊಡಬಹುದೆಂಬ ಭಯದಲ್ಲಿದ್ದೆ ಎಂದು ಅವರು ಬಹಿರಂಗಪಡಿಸಿದರು.

Read Full Story
07:54 PM (IST) Jan 08

Karnataka News Live 8 January 2026ಮೂರನೇ ದಿನವೂ ಮುಂದುವರಿದ ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿ; 2 ಟಿಎಂಸಿ ನೀರು ವ್ಯರ್ಥ!

ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಕಟ್ ಆಗಿ ಮೂರು ದಿನಗಳಿಂದ ಸುಮಾರು 2 ಟಿಎಂಸಿ ಕೃಷ್ಣಾ ನದಿ ನೀರು ಪೋಲು. ತಾಂತ್ರಿಕ ದೋಷದಿಂದ ದುರಸ್ತಿ ಕಾರ್ಯ ವಿಳಂಬವಾಗಿದ್ದು, 120 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವದ ಭೀತಿ ಎದುರಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ

Read Full Story
07:44 PM (IST) Jan 08

Karnataka News Live 8 January 2026Breaking - ಜಯಮಾಲ, ಸಾ.ರಾ.ಗೋವಿಂದಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ಸುಂದರ್‌ರಾಜ್‌ಗೆ ವಿಷ್ಣುವರ್ಧನ ಪ್ರಶಸ್ತಿ ಪ್ರಕಟ!

ರಾಜ್ಯ ಸರ್ಕಾರವು 2020 ಮತ್ತು 2021ನೇ ಸಾಲಿನ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಹಾಗೂ ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಡಾ. ಜಯಮಾಲಾ, ಸಾ.ರಾ. ಗೋವಿಂದ್, ಎಂ.ಎಸ್. ಸತ್ಯು, ಶಿವರುದ್ರಯ್ಯ, ಪ್ರಗತಿ ಅಶ್ವಥ್ ನಾರಾಯಣ್ ಹಾಗೂ ಎಂ.ಕೆ. ಸುಂದರ್ ರಾಜ್ ಅವರು ಭಾಜನರಾಗಿದ್ದಾರೆ.

Read Full Story
07:31 PM (IST) Jan 08

Karnataka News Live 8 January 2026ತುಂಗಭದ್ರಾ ಜಲಾಶಯ 33 ಗೇಟ್‌ ಬದಲಾವಣೆ ಕಾಮಗಾರಿ, 18ನೇ ಗೇಟ್ ಅಳವಡಿಕೆ ಬರೋಬ್ಬರಿ 15 ದಿನದಲ್ಲಿ ಯಶಸ್ವಿ

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನವೀಕರಣ ಕಾರ್ಯದಲ್ಲಿ ಮಹತ್ವದ ಪ್ರಗತಿಯಾಗಿದ್ದು, 18ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟು 33 ಹಳೆಯ ಗೇಟ್‌ಗಳನ್ನು ಬದಲಿಸುವ ಈ ಯೋಜನೆಯು ಜಲಾಶಯದ ಭದ್ರತೆ ಮತ್ತು ನೀರು ನಿರ್ವಹಣೆಯನ್ನು ಬಲಪಡಿಸುವ ಗುರಿ ಹೊಂದಿದೆ.

Read Full Story
07:22 PM (IST) Jan 08

Karnataka News Live 8 January 2026ಬಳ್ಳಾರಿ ಶೂಟೌಟ್ ಪ್ರಕರಣ - ಪೊಲೀಸರೇ ಆರೋಪಿಗಳಿಗೆ ಬಾಡಿಗಾರ್ಡ್ಸ್! ಗೃಹಸಚಿವರೇ ಅಸಮರ್ಥ, ಜನಾರ್ದನ ರೆಡ್ಡಿ ಕೆಂಡಾಮಂಡಲ

ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಶಾಸಕ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಗೃಹ ಸಚಿವ ಪರಮೇಶ್ವರ್ ಅಸಮರ್ಥರೆಂದು ಟೀಕಿಸಿದರು.

Read Full Story
07:15 PM (IST) Jan 08

Karnataka News Live 8 January 2026ಗಂಡನ ಸಾವಿನ ನಂತರ ಮಕ್ಕಳ ತೊರೆದು ಪ್ರಿಯಕರನೊಂದಿಗೆ ವಾಸವಿದ್ದ 7 ಮಕ್ಕಳ ತಾಯಿ - ಪ್ರಿಯಕರನಿಂದಲೇ ಕೊ*ಲೆ

ಗಂಡನ ಸಾವಿನ ನಂತರ ಪಕ್ಕದ ಮನೆಯವನೊಂದಿಗೆ ಪ್ರೇಮದಲ್ಲಿ ಬಿದ್ದ 7 ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೇ ಕೊಂದಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇಡೀ ಊರನ್ನು ಈ ಘಟನೆ ಬೆಚ್ಚಿಬೀಳಿಸಿದ್ದೆ. 10 ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣದ ಡಿಟೇಲ್ ಸ್ಟೋರಿ

Read Full Story
06:53 PM (IST) Jan 08

Karnataka News Live 8 January 2026ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ, ಪಕ್ಷದಲ್ಲಿ ಬ್ಯಾನರ್ ಕಟ್ಟುವ ಕಾರ್ಯಕರ್ತನಿಗೂ ಈ ಹಕ್ಕಿದೆ - ನಾಗೇಂದ್ರಗೆ ಸಿಂಹ ತಿರುಗೇಟು

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಇದು ಪರಾಜಿತ ಅಭ್ಯರ್ಥಿ ನಾಗೇಂದ್ರ ಅವರೊಂದಿಗೆ ಮಾತಿನ ಚಕಮಕಿಗೆ ಕಾರಣವಾಗಿದೆ. ಆಕಾಂಕ್ಷಿ ಮತ್ತು ಅಭ್ಯರ್ಥಿ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story
06:45 PM (IST) Jan 08

Karnataka News Live 8 January 2026ಅಶ್ವಿನಿ, ರಘು, ಕಾವ್ಯಾ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ಹೋದವರ್ಯಾರು? ನಿಜಕ್ಕೂ ಎಲಿಮಿನೇಷನ್‌ ಆಗಿದ್ಯಾ?

ಬಿಗ್‌ಬಾಸ್‌ ಕನ್ನಡ 12ನೇ ಆವೃತ್ತಿ ಮುಕ್ತಾಯದ ಹಂತದಲ್ಲಿದ್ದು, ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಮಿಡ್‌ವೀಕ್‌ ಎಲಿಮಿನೇಷನ್‌ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಘು, ಅಶ್ವಿನಿ ಅಥವಾ ಕಾವ್ಯಾ ಹೊರಬಿದ್ದಿದ್ದಾರೆ ಎಂದು ಚರ್ಚೆಯಾಗುತ್ತಿದೆಯಾದರೂ, ಇದು ಕೇವಲ ವದಂತಿ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
Read Full Story
06:36 PM (IST) Jan 08

Karnataka News Live 8 January 2026Pocso - ಮ್ಯೂಸಿಕ್ ಮೈಲಾರಿಗೆ ಬಿಗ್ ಶಾಕ್; ಅಪ್ರಾಪ್ತೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಅರ್ಜಿ ತಿರಸ್ಕೃತ!

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮ್ಯೂಸಿಕ್ ಮೈಲಾರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಬಾಗಲಕೋಟೆ ಪೋಕ್ಸೊ ನ್ಯಾಯಾಲಯವು ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಸದ್ಯಕ್ಕೆ ಆತ ನ್ಯಾಯಾಂಗ ಬಂಧನದಲ್ಲಿಯೇ ಮುಂದುವರಿಯಲಿದ್ದಾನೆ.
Read Full Story
06:05 PM (IST) Jan 08

Karnataka News Live 8 January 2026ನಿಮ್ಮದೇನಿದ್ದರೂ ರಾಜ್ಯ ದಿವಾಳಿ ಮಾಡಿದ್ದೇ ಸಾಧನೆ - ದೇವರಾಜು ಅರಸು ಹೋಲಿಕೆಗೆ ಸಿದ್ದು ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯ

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೇವರಾಜು ಅರಸು ಅವರಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರಸು ಅವರು ಭೂ ಸುಧಾರಣೆ ಮತ್ತು ಸಣ್ಣ ಸಮುದಾಯಗಳ ನಾಯಕರನ್ನು ಬೆಳೆಸಿದರೆ, ಸಿದ್ದರಾಮಯ್ಯನವರು ರಾಜ್ಯವನ್ನು ಸಾಲದ ಸುಳಿಗೆ ತಳ್ಳಿ, ಜನರಿಗೆ ಟೋಪಿ ಹಾಕುತ್ತಿದ್ದಾರೆ.

Read Full Story
05:46 PM (IST) Jan 08

Karnataka News Live 8 January 2026ಹುಬ್ಬಳ್ಳಿ ಮರ್ಯಾದಾ ಹತ್ಯೆ - ಮಾಲೀಕ ಜೈಲಲ್ಲಿ, ಗುಳೆ ಹೋದ ಮನೆಯವರು, ಬಾಗಿಲ ಬಳಿ ಹೆಜ್ಜೆ ಸಪ್ಪಳಕ್ಕೆ ಇಣುಕುವ ದನ-ಕರುಗಳು!

ಹುಬ್ಬಳ್ಳಿಯ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದ ಬಳಿಕ, ಆರೋಪಿಗಳ ಕುಟುಂಬದ ಗಂಡಸರು ಜೈಲು ಪಾಲಾಗಿದ್ದಾರೆ. ಮನೆಯ ಮಹಿಳೆಯರು ಮತ್ತು ಮಕ್ಕಳು ಊರು ಬಿಟ್ಟಿದ್ದು, ಮನೆಯಲ್ಲಿದ್ದ ಜಾನುವಾರುಗಳು ಅನಾಥವಾಗಿವೆ ಹಾಗೂ ಮಕ್ಕಳ ವಿದ್ಯಾಭ್ಯಾಸವು ಅರ್ಧಕ್ಕೆ ನಿಂತಿದೆ. 

Read Full Story
05:39 PM (IST) Jan 08

Karnataka News Live 8 January 2026ಮುಡಾ ಹಗರಣ - ಸಿಎಂ ಸಿದ್ದರಾಮಯ್ಯ ವಿರುದ್ಧದ ಬಿ-ರಿಪೋರ್ಟ್ ಪ್ರಶ್ನಿಸಿ ವಾದ; ವಿಚಾರಣೆ ಜ.13ಕ್ಕೆ ಮುಂದೂಡಿಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖಾ ವರದಿಗೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆ ಸಲ್ಲಿಸಿರುವ 'ಬಿ-ರಿಪೋರ್ಟ್' ಅನ್ನು ತಿರಸ್ಕರಿಸಬೇಕೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿದರು, ವಿಚಾರಣೆ ಜ.13ಕ್ಕೆ ಮುಂದೂಡಿಕೆ.

Read Full Story
05:08 PM (IST) Jan 08

Karnataka News Live 8 January 2026ದಾವಣಗೆರೆ - ನನಗೆ ಗಂಡ ಬೇಕು ಎಂದು ಮಗಳೊಂದಿಗೆ ಪತಿ ಮನೆ ಮುಂದೆ ಪತ್ನಿ ಧರಣಿ!

ದಾವಣಗೆರೆಯಲ್ಲಿ, ವಿದ್ಯಾಶ್ರೀ ಎಂಬ ಮಹಿಳೆ ತನ್ನ ಪತಿ ಭಾರ್ಗವ್ ಬೇಕೆಂದು 11 ವರ್ಷದ ಮಗಳೊಂದಿಗೆ ಅವರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಹೆಣ್ಣು ಮಗು ಜನಿಸಿದ್ದೇ ಕಲಹಕ್ಕೆ ಕಾರಣ ಎಂದು ಆರೋಪಿಸಿದ್ದು, ಮೂರು ವರ್ಷಗಳಿಂದ ಬೇರೆಯಾಗಿ ವಾಸಿಸುತ್ತಿರುವ ದಂಪತಿಯ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Read Full Story