ಗಂಡನ ಸಾವಿನ ನಂತರ ಪಕ್ಕದ ಮನೆಯವನೊಂದಿಗೆ ಪ್ರೇಮದಲ್ಲಿ ಬಿದ್ದ 7 ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೇ ಕೊಂದಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇಡೀ ಊರನ್ನು ಈ ಘಟನೆ ಬೆಚ್ಚಿಬೀಳಿಸಿದ್ದೆ. 10 ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣದ ಡಿಟೇಲ್ ಸ್ಟೋರಿ
ಗಂಡನ ಸಾವಿನ ನಂತರ ಪಕ್ಕದ ಮನೆಯವನೊಂದಿಗೆ ಪ್ರೇಮದಲ್ಲಿ ಬಿದ್ದ 7 ಮಕ್ಕಳ ತಾಯಿಯನ್ನು ಆಕೆಯ ಪ್ರಿಯಕರನೇ ಕೊಂದಂತಹ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಘಟಂಪುರ ತೆಹ್ಸಿಲ್‌ನ ಟಿತ್ವಾಪುರದಲ್ಲಿ ನಡೆದಿದ್ದು, ಇಡೀ ಊರನ್ನು ಈ ಘಟನೆ ಬೆಚ್ಚಿಬೀಳಿಸಿದ್ದೆ. 10 ತಿಂಗಳ ಹಿಂದೆ ನಡೆದ ಈ ಕೊಲೆ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಕಾನ್ಪುರದ ಈ ಟಿಕ್ವಾಪುರದ ಗ್ರಾಮದ ಜನ ಎಲ್ಲರೂ ನಿದ್ದೆಗೆ ಸಿದ್ದತೆ ನಡೆಸುತ್ತಿದ್ದರೆ ಪೊಲೀಸರು ಅಲ್ಲಿ 10 ತಿಂಗಳ ಹಿಂದೆ ಹೂಳಲಾಗಿದ್ದ ಶವವನ್ನು ಮತ್ತೆ ಹೊರಗೆ ತೆಗೆಯುತ್ತಿದ್ದರು. ಗ್ರಾಮದ ಗೋಪುರದ ಬಳಿ ನೆಲವನ್ನು ಅಗೆಯುವುದಕ್ಕೆ ಕೆಲಸಗಾರರಿಗೆ ಸಹಾಯ ಮಾಡಲು ಪೊಲೀಸ್ ವಾಹನಗಳ ಹೆಡ್‌ಲೈಟ್‌ಗಳು ಮತ್ತು ಅವರ ಫೋನ್‌ಗಳಲ್ಲಿ ಟಾರ್ಚ್‌ಗಳು ಉರಿಯುತ್ತಿದ್ದವು. ಕೆಲಸ ಸಮಯದ ನಂತರ ಏಳು ಅಡಿ ನೆಲದ ಕೆಳಗೆ ಅವರಿಗೆ ಅಸ್ಥಿಪಂಜರ ಸಿಕ್ತು. ಅಲ್ಲಿ ಸಿಕ್ಕ ಮೂಳೆಗಳು ಪ್ರೀತಿ, ಕಾಮದ ಹುಚ್ಚು, ದ್ವೇಷ ಮತ್ತು ದ್ರೋಹದ ಕಥೆ ಹೇಳುತ್ತಿದ್ದವು.
ಆ ಆಸ್ತಿಪಂಜರವೇ 7 ಮಕ್ಕಳ ತಾಯಿ 45 ವರ್ಷದ ಮಹಿಳೆ ರೇಷ್ಮಾಗೆ ಸೇರಿದ್ದಾಗಿತ್ತು. ರೇಷ್ಮಾಳನ್ನು ಆಕೆಯ ಗೆಳೆಯ ಗೋರೆಲಾಲ್ ಎಂಬಾತನೇ 10 ತಿಂಗಳ ಹಿಂದೆ ಕೊಲೆ ಮಾಡಿದ್ದ. ಆಕೆಯ ಪುತ್ರ ಬಬ್ಲು ತಾಯಿಯ ಬಗ್ಗೆ ಗೋರೆಲಾಲ್ ಬಳಿ ಕೇಳಿದಾಗಲೆಲ್ಲಾ ಆತ ಆಕೆ ಇನ್ನೂ ಬರುವುದಿಲ್ಲ ಎಂದು ನೇರವಾಗಿ ಉತ್ತರಿಸಿದ್ದ, ಆರಂಭದಲ್ಲಿ ಇದನ್ನು ತಮಾಷೆಯಾಗಿ ತೆಗೆದುಕೊಂಡ ಬಬ್ಲುವಿಗೆ ಗೋರೆಲಾಲ್ ಅಮ್ಮನ ಬಗ್ಗೆ ಕೇಳಿದಾಗಲೆಲ್ಲಾ ಹೀಗೆ ಹೇಳುವುದನ್ನು ನೋಡಿ ಅನುಮಾನ ಶುರುವಾಗಿತ್ತು. ಹೀಗಾಗಿ ಡಿಸೆಂಬರ್ 29ರಂದು ಮಗ ಬಬ್ಲು ಪೊಲೀಸರಿಗೆ ತಾಯಿಯ ನಾಪತ್ತೆಯ ಬಗ್ಗೆ ದೂರು ನೀಡಿದ್ದ. ಆಗಲೇ ನೋಡಿ ಈ 10 ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು...
ಗಂಡನ ಸಾವಿನ ನಂತರ ಪಕ್ಕದ ಮನೆಯವನ ಮೇಲೆ ಪ್ರೇಮ
ರೇಷ್ಮಾಳ ಪತಿ ರಾಮ್‌ಬಾಬು ಸಂಕ್ವಾರ್ ಅವರು ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಈ ದಂಪತಿಗೆ 4 ಗಂಡು ಹಾಗೂ 3 ಹೆಣ್ಣು ಮಕ್ಕಳಿದ್ದರು. ಗಂಡನ ಸಾವಿನ ನಂತರ ರೇಷ್ಮಾಗೆ ಪಕ್ಕದ ಮನೆಯ ಗೋರೆಲಾಲ್ ಜೊತೆ ಸ್ನೇಹ ಬೆಳೆಯಿತು. ಈ ಸ್ನೇಹ ಪ್ರೇಮಕ್ಕೆ ತಿರುಗುತ್ತಿದ್ದಂತೆ ಆಕೆಯ ಬುದ್ದಿಗೇನಾಯ್ತೋ ಏನೋ ಆಕೆ ಮಕ್ಕಳನ್ನು ತೊರೆದು ಪ್ರಿಯಕರನ ಜೊತೆ ವಾಸ ಮಾಡುವುದಕ್ಕೆ ಶುರು ಮಾಡಿದಳು. ಇತ್ತ ತಾಯಿಯ ಈ ವರ್ತನೆಯಿಂದ ಬೇಸತ್ತ ಮಕ್ಕಳು ಅಮ್ಮನ ಜೊತೆ ಸಂಬಂಧವನ್ನು ಕಡಿದುಕೊಂಡಿದ್ದರು.
ಒಂದು ಮದುವೆಯ ಆಮಂತ್ರಣ: ಅಮ್ಮನಿಗಾಗಿ ಮಗನ ಹುಡುಕಾಟ
ಈ ನಡುವೆ ನವೆಂಬರ್ 29ರಂದು ರೇಷ್ಮಾ ಸಂಬಂಧಿಕರ ಮದುವೆಯೊಂದು ನಡೆದಿತ್ತು. ಈ ಮದುವೆಗೆ ರೇಷ್ಮಾಗೂ ಆಹ್ವಾನ ನೀಡಲಾಗಿತ್ತು. ಆದರೆ ಆಕೆ ಬಂದಿರಲಿಲ್ಲ. ಇದು ಮಗ ಬಬ್ಲುವಿಗೆ ಅಮ್ಮನ ಇರುವಿಕೆಯ ಬಗ್ಗೆ ಅನುಮಾನ ಮೂಡಿಸಿತು. ಸೀದಾ ಗೋರೆಲಾಲ್ ಮನೆಗೆ ಹೋದವನೇ ತನ್ನ ಅಮ್ಮ ಎಲ್ಲಿ ಎಂದು ಕೇಳಿದ ಆದರೆ ಗೋರೆಲಾಲ್ ನಿಮ್ಮಮ್ಮ ಮರಳಿ ಬರುವುದಿಲ್ಲ ಎಂದಷ್ಟೇ ಹೇಳಿದ್ದ. ಎಷ್ಟು ಪ್ರಶ್ನಿಸಿದರು ಆತ ಬಾಯಿಬಿಡದೇ ಹೋದಾಗ ಮಗ ಬಬ್ಲು ಪೊಲೀಸರನ್ನು ಸಂಪರ್ಕಿಸಿದ್ದಾನೆ.
ಇತ್ತ ಬಬ್ಲುವಿನ ದೂರಿನ ನಂತರಪೊಲೀಸರು ಗೋರೆಲಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದಾಗ ಆತ ನಿಜ ಬಾಯ್ಬಿಟ್ಟಿದ್ದಾನೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ತಾನು ಮತ್ತು ರೇಷ್ಮಾ ಜಗಳವಾಡಿದ್ದಾಗಿ ಹೇಳಿದ್ದಾನೆ. ರೇಷ್ಮಾಳಿಂದ ದೂರ ಆಗುವುದಕ್ಕಾಗಿ ಆಕೆಗೆ ಸಂಬಂಧಿಕರ ಬಳಿ ವಾಸಿಸುವಂತೆ ಹೇಳಿದ್ದಾನೆ. ಆದರೆ ರೇಷ್ಮಾ ನಿರಾಕರಿಸಿದಳು ಮತ್ತು ಇದು ಆಗಾಗ್ಗೆ ಜಗಳಗಳಿಗೆ ಕಾರಣವಾಯಿತು. ಅಂತಹ ಒಂದು ಜಗಳದ ಸಮಯದಲ್ಲಿ, ಗೋರೆಲಾಲ್ ರೇಷ್ಮಾಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಎರಡು ದಿನಗಳ ಕಾಲ, ಅವನು ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಅದನ್ನು ವಿಲೇವಾರಿ ಮಾಡುವುದಕ್ಕೆ ಪ್ಲಾನ್ ಮಾಡಿ ಮನೆ ಸಮೀಪದ ನಿರ್ಜನ ಸ್ಥಳದಲ್ಲಿ ಹೂತು ಹಾಕಿದ್ದಾನೆ.
ಇದನ್ನೂ ಓದಿ: ಕೇರಳ ಅಪಘಾತದಲ್ಲಿ ಭಿಕ್ಷುಕ ಸಾವು: ಆತನ ಪೆಟ್ಟಿಗೆ ತೆರೆದ ಅಧಿಕಾರಿಗಳಿಗೆ ಶಾಕ್: ಒಳಗಿದ್ದ ಹಣ ಎಷ್ಟು ಲಕ್ಷ?
ಹೆಣ್ಣು ಬಾಲ್ಯದಲ್ಲಿ ಪೋಷಕರ ರಕ್ಷಣೆಯಲ್ಲಿ ಯೌವ್ವನದಲ್ಲಿ ಅಣ್ಣ ತಮ್ಮಂದಿರ ರಕ್ಷಣೆಯಲ್ಲಿ ಮದುವೆಯ ನಂತರ ಪತಿ ಹಾಗೂ ವೃದ್ಧಾಪ್ಯದಲ್ಲಿಮಕ್ಕಳ ರಕ್ಷಣೆಯಲ್ಲಿ ಇರಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಆಕೆಯದ್ದು ವೃದ್ಧಾಪ್ಯದ ವಯಸ್ಸಾಗಿರಲಿಲ್ಲ. ಆದರೆ ಗಂಡಿನ ಅಧೀನದಲ್ಲೇ ಹೆಣ್ಣು ಇರಬೇಕು ಎಂದು ಯಾರು ಹೇಳುವುದಿಲ್ಲ ಹೇಳಲೂ ಬಾರದು ಏಕೆಂದರೆ ಅವಳಿಗೆ ಅವಳದ್ದೇ ಆದ ಬದುಕು ಕನಸುಗಳಿವೆ. ಆದರೆ ಬುದ್ಧಿ ವಿವೇಚನೆಗಳು ಇಲ್ಲದೇ ಬುದ್ಧಿಯನ್ನು ಮೆದುಳಿನಿಂದ ತೆಗೆದಿಟ್ಟು ಬದುಕಲು ಹೋದರೆ ರೇಷ್ಮಾಗಾದ ಗತಿ ಇನ್ಯಾವುದೋ ಹೆಣ್ಣಿಗೆ ಆಗೋದಂತು ಪಕ್ಕ. ಇದಕ್ಕೆ ನಮ್ಮ ನಡುವೆ ನಡೆದಿರುವ ನಡೆಯುತ್ತಿರುವ ಹಲವು ಇಂತಹ ಘಟನೆಗಳು ಸಾಕ್ಷಿಯಾಗಿವೆ. 7 ಮಕ್ಕಳಿದ್ದ ತಾಯಿ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಅವರಿಗೆ ಭವಿಷ್ಯ ರೂಪಿಸುವ ನಿರ್ಧಾರ ಮಾಡಿದ್ದರೆ ಇಂತಹ ದುರಂತ ನಡೆದಿರುತ್ತಿರಲಿಲ್ಲವೋ ಏನೋ... ಆದರೆ ಆಸೆಯ ಬೆನ್ನೇರಿದ ಹೆಣ್ಣು ಬಾರದ ಲೋಕಕ್ಕೆ ಪಯಣಿಸಿದ್ದಾಳೆ...
ಇದನ್ನೂ ಓದಿ: 100 KM ಮೈಲೇಜ್: ಕೇವಲ 1 ಲಕ್ಷ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಗಾಡಿ ಸಿದ್ಧಪಡಿಸಿದ ಯುವಕ


