- Home
- Entertainment
- TV Talk
- Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್ಚಲ್ ಸೃಷ್ಟಿಸ್ತಿದೆ ವಿಡಿಯೊ!
Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್ಚಲ್ ಸೃಷ್ಟಿಸ್ತಿದೆ ವಿಡಿಯೊ!
ಬಿಗ್ಬಾಸ್ 12ರ ಫೈನಲ್ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟನ ಗೆಲುವಿನ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ, ಶನೈಶ್ಚರ ದೇಗುಲದಲ್ಲಿ ಗಿಲ್ಲಿ ನಟನ ಗೆಲುವಿಗೆ ದೇವರೇ ಪ್ರಸಾದ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು, ಇದರ ಅಸಲಿಯತ್ತಿನ ಬಗ್ಗೆ ಅನುಮಾನಗಳು ಮೂಡಿವೆ.

ಫ್ಯಾನ್ಸ್ ಕಾತರ
ಬಿಗ್ಬಾಸ್ 12 (Bigg Boss 12) ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಲಕ್ಷಾಂತರ ಬಿಗ್ಬಾಸ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮಹಿಳೆಗೆ ಗೆಲುವು
ಈ ಬಾರಿ ಮಹಿಳೆಯೊಬ್ಬಳು ಬಿಗ್ಬಾಸ್ ಗೆಲ್ಲುವುದು ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರೆ, ಎಲ್ಲರ ಬಾಯಲ್ಲೂ ಇರುವ ಹೆಸರು ಗಿಲ್ಲಿ ನಟ (Bigg Boss Gilli Nata) ವಿನ್ನರ್ ಎನ್ನುವುದು. ಇವೆಲ್ಲಕ್ಕೂ ಶೀಘ್ರವೇ ತೆರೆ ಬೀಳಲಿದೆ.
ಕುತೂಹಲದ ವಿಡಿಯೋ
ಇದೇ ವೇಳೆ ಗಿಲ್ಲಿ ನಟನಿಗಾಗಿ ಲಕ್ಷಾಂತರ ಫ್ಯಾನ್ಸ್ ಪೂಜೆ ಸಲ್ಲಿಸುತ್ತಿದ್ದರೆ, ಇಲ್ಲೊಂದು ಕುತೂಹಲದ ವಿಡಿಯೋ ವೈರಲ್ ಆಗಿದೆ. ತೀರ್ಥ ಸಿಕೆಎಂ ಎನ್ನುವವರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ಗಿಲ್ಲಿಗಾಗಿ ಪ್ರಾರ್ಥನೆ?
ಶ್ರೀ ಶನಿ ಕ್ಷೇತ್ರ ಕೋಟಹಳ್ಳಿ ಶನೈಶ್ಚರ ದೇಗುಲದಲ್ಲಿ ಗಿಲ್ಲಿ ನಟನಿಗಾಗಿ ಪ್ರಾರ್ಥನೆ ಸಲ್ಲಿಸುವಾಗ, ದೇವರು ಗಿಲ್ಲಿ ನಟನೇ ವಿನ್ ಆಗುವುದು ಎಂದು ಪ್ರಸಾದ ಕೊಟ್ಟಿರುವುದಾಗಿ ಈ ವಿಡಿಯೋದಲ್ಲಿ ಹೇಳಲಾಗುತ್ತಿದೆ.
ಶನೈಶ್ಚರನಿಗೆ ಕೇಳಿದ ಪ್ರಸಾದ
ಈ ವೈರಲ್ ವಿಡಿಯೋದಲ್ಲಿ ಶನೀಶ್ಚರನಿಗೆ ಹೂವನ್ನು ಹಾಕಲಾಗಿದೆ. ಇದು ಸಾಮಾನ್ಯವಾಗಿ ಪ್ರಸಾದ ಕೇಳುವಾಗ ಹಾಕುತ್ತಾರೆ. ಆಗ ಹಿನ್ನೆಲೆಯಲ್ಲಿ ಗಿಲ್ಲಿ ನಟನ ಬಗ್ಗೆ ಪ್ರಶ್ನಿಸಿರುವಂತೆ ತೋರಿಸಲಾಗಿದೆ. ಆದರೆ ಅಚ್ಚರಿ ಎನ್ನುವಂತೆ ದೇವರ ಪ್ರಸಾದ ಆಗಿದೆ.
ಬಲಭಾಗದಲ್ಲಿ ಹೂವು
ಅರ್ಥಾತ್ ದೇವರ ಬಲಭಾಗದಿಂದ ಹೂವು ಬಿದ್ದರೆ ಅಂದುಕೊಂಡದ್ದು ಆಗುತ್ತದೆ ಎನ್ನುವ ನಂಬಿಕೆ ಇದೆ. ಅದರಂತೆ ಇದರಲ್ಲಿ ತೋರಿಸಲಾಗಿದೆ. ಆದರೆ ಈ ವಿಡಿಯೋದ ಬಗ್ಗೆ ಹಲವಾರು ರೀತಿಯ ಅನುಮಾನಗಳು ಕೂಡ ಇದೇ ವೇಳೆ ಹುಟ್ಟಿಕೊಂಡಿವೆ. ಹೇಳಿ ಕೇಳಿ ಇದು ಎಐ ಯುಗ. ನಿಜವಾಗಿದ್ದರೂ ಎಐ ಎಂದು, ಎಐ ಆಗಿದ್ದರೂ ನಿಜವೆಂದು ನಂಬುವ ಕಾಲ ಇದು.
ವಿಡಿಯೋದ ಅಸಲಿಯತ್ತೇನು?
ವಿಡಿಯೋ ವೈರಲ್ ಆಗಬೇಕು ಎನ್ನುವ ಕಾರಣಕ್ಕೆ ಸದ್ಯ ಹಲವಾರು ಯುಟ್ಯೂಬರ್ಗಳು ಬಿಗ್ಬಾಸ್ ಅನ್ನು ತಮ್ಮ ಮಾಧ್ಯಮ ಮಾಡಿಕೊಳ್ಳುತ್ತಿದ್ದಾರೆ. ಕಂಟೆಂಟ್ಗಳನ್ನು ಹಾಕುತ್ತಿದ್ದಾರೆ. ಅದರಲ್ಲಿಯೂ ಗಿಲ್ಲಿ ನಟನ ಹವಾ ಜೋರಾಗಿಯೇ ಇದೆ. ಆದ್ದರಿಂದ ಈ ವಿಡಿಯೋದ ಅಸಲಿಯತ್ತು ಏನು ಎನ್ನುವುದು ತಿಳಿಯಬೇಕಿದೆ ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

