10:33 PM (IST) Nov 07

Karnataka News Live 7 November 2025 Bigg Bossನಿಂದ ನರಕ ಅನುಭವಿಸಿದೆ, ನನ್ನ ಚಪ್ಪಲಿಯಿಂದ ನಾನೇ ಹೊಡೆದುಕೊಳ್ಳಬೇಕು ಎನ್ನೋದಾ ಈ ಖ್ಯಾತ ನಟಿ?

ತೆಲುಗು ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿರುವ ನಟಿ ವಿಷ್ಣುಪ್ರಿಯ, ಅದೊಂದು ನರಕದ ಅನುಭವ ಎಂದಿದ್ದಾರೆ. ನಿದ್ದೆ, ಊಟ, ಕಾಫಿ ಇಲ್ಲದೆ ಹಿಂಸೆ ಅನುಭವಿಸಿದ್ದಾಗಿ ಹೇಳಿದ್ದು, ಹೊಸ ಮನೆ ಖರೀದಿಸುವ ಆಸೆ ಈಡೇರದೇ, 'ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು' ಎಂದಿದ್ದಾರೆ.

Read Full Story
10:18 PM (IST) Nov 07

Karnataka News Live 7 November 2025 Amruthadhaare - ತಮ್ಮಂಗೆ ಮುದ್ದು ಮಾಡಿದ್ರೆ ಈ ಅಕ್ಕಂಗೆ ಸಿಕ್ಕಾಪಟ್ಟೆ ಕೋಪ- ಒಂದಾಗೋ ಕಾಲ ಬಂದೇ ಬಿಡ್ತಾ?

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾಳ ಮದುವೆಯ ವಾರ್ಷಿಕೋತ್ಸವದಂದು ಅವರನ್ನು ಒಂದು ಮಾಡಲು ಮಲ್ಲಿ ಮತ್ತು ಆನಂದ್ ಹೋಟೆಲ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಗೌತಮ್-ಭೂಮಿಕಾ ಹುಸಿ ಮುನಿಸು ತೋರಿದರೆ, ಇನ್ನೊಂದೆಡೆ ಆಕಾಶ್ ಮತ್ತು ಮಿಂಚು ನಡುವೆ ಮುದ್ದಾದ ಜಗಳ ನಡೆಯುತ್ತದೆ.
Read Full Story
10:15 PM (IST) Nov 07

Karnataka News Live 7 November 2025 ಪ್ರೀತಿಸಿದ ಯುವಕನಿಂದ ಮೋಸ.. ಮನನೊಂದ ಯುವತಿ ಆ*ಹತ್ಯೆಗೆ ಶರಣು - ಪೋಷಕರ ಆಕ್ರಂದನ

ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ ಆ*ಹತ್ಯೆಗೆ ಮಾಡಿಕೊಂಡ ಯುವತಿ.

Read Full Story
09:50 PM (IST) Nov 07

Karnataka News Live 7 November 2025 ಶಿಕ್ಷಕರ ಸಂಬಳಕ್ಕೆ ನನ್ನ ವೇತನ ಮೀಸಲು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಸಿಎಸ್‌ಆರ್ ಅನುದಾನದಿಂದ ಶಿಕ್ಷಕರ ವೇತನ ನೀಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ವೇತನ ಪಾವತಿಸಲು ಕೊಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

Read Full Story
09:48 PM (IST) Nov 07

Karnataka News Live 7 November 2025 Karna - ಏನಾಗ್ಬಾರ್ದು ಎಂದು ವೀಕ್ಷಕರು ಅಂದುಕೊಂಡಿದ್ರೋ ಅದೇ ಆಗೋಯ್ತು! ಕರ್ಣ-ನಿಧಿ ಒಂದಾಗೋದು ಇನ್ನು ಕನಸೇ

ತಾನು ಗರ್ಭಿಣಿ ಎಂದು ತಿಳಿದು ಮಗುವನ್ನು ತೆಗೆಸಲು ನಿತ್ಯಾ ನಿರ್ಧರಿಸುತ್ತಾಳೆ. ಆದರೆ, ಅನಾಥ ಮಗುವಿನ ನೋವನ್ನರಿತ ಕರ್ಣ, ತಾನೇ ಆ ಮಗುವಿಗೆ ಅಪ್ಪನಾಗುವುದಾಗಿ ಹೇಳಿ ನಿತ್ಯಾಗೆ ಆಘಾತ ನೀಡುತ್ತಾನೆ. ಈ ಬೆಳವಣಿಗೆಯು ಕರ್ಣ ಮತ್ತು ನಿಧಿ ಒಂದಾಗುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ.
Read Full Story
09:42 PM (IST) Nov 07

Karnataka News Live 7 November 2025 ರಾಮ್ ಚರಣ್ ಬೀಡಿ ಡ್ಯಾನ್ಸ್, ರೆಹಮಾನ್ ಬೀಟ್ಸ್, ಜಾನ್ವಿ ಗ್ಲಾಮರ್.. ಇಂಟರ್ನೆಟ್‌ನಲ್ಲಿ ಚಿಕಿರಿ ಚಿಕಿರಿ ಸಾಂಗ್ ಹವಾ!

ರಾಮ್ ಚರಣ್ ಅವರ ಪೆದ್ದಿ ಸಿನಿಮಾದಿಂದ 'ಚಿಕಿರಿ' ಹಾಡು ರಿಲೀಸ್ ಆಗಿದೆ. ಪ್ರೋಮೋದಲ್ಲಿ ರಾಮ್ ಚರಣ್ ತಮ್ಮ ಡ್ಯಾನ್ಸ್‌ನಿಂದ ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದ್ದರು. ಇದೀಗ ಪೂರ್ತಿ ಹಾಡು ಬಂದಿದೆ. ಹಾಡು ಹೇಗಿದೆ ಅಂತ ಈ ಸುದ್ದಿಯಲ್ಲಿ ನೋಡೋಣ.

Read Full Story
09:12 PM (IST) Nov 07

Karnataka News Live 7 November 2025 ಮತಗಳ್ಳತನ ಬಗ್ಗೆ ರಾಹುಲ್‌ ಗಾಂಧಿ ಆರೋಪ ನಿಜ - ಗೃಹ ಸಚಿವ ಪರಮೇಶ್ವರ್

ರಾಹುಲ್‌ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಅವರು ಬಹಿರಂಗ ಪಡಿಸಿದ್ದು, ಮತಗಳ್ಳತನ ಆಗಿರುವುದು ನಿಜ ಎಂದು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.

Read Full Story
09:06 PM (IST) Nov 07

Karnataka News Live 7 November 2025 2014ರಿಂದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಮತಗಳವು ಕುತಂತ್ರ - ಸಚಿವ ರಾಮಲಿಂಗಾರೆಡ್ಡಿ

ಬಿಜೆಪಿಯವರಿಗೆ ಮತಗಳವು ಹೊಸದಲ್ಲ. 2014ರಿಂದಲೇ ಮತಗಳವು ಪ್ರಾರಂಭವಾಗಿದೆ, ನಂತರದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯವರು ಮತಗಳವು ಕುತಂತ್ರ ನಡೆಸಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

Read Full Story
08:13 PM (IST) Nov 07

Karnataka News Live 7 November 2025 ರುಕ್ಮಿಣಿ ವಸಂತ್ ಹೆಸರಿನಲ್ಲಿ ಅನಾಮಿಕ ವ್ಯಕ್ತಿಯಿಂದ ಹಣ ಸುಲಿಗೆ - ಅಭಿಮಾನಿಗಳಿಗೆ ಮನವಿ ಮಾಡಿದ ನಟಿ!

ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ ಕೇಳುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ರುಕ್ಮಿಣಿ ವಸಂತ್ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Read Full Story
07:51 PM (IST) Nov 07

Karnataka News Live 7 November 2025 ಚಿಕ್ಕ ವಯಸ್ಸಿನಲ್ಲೇ ಬಂದ ಆಸೆ! ಅದಕ್ಕಾಗಿ ಚಿಂತಿಸಲ್ಲ... ಜಿಂಕೆ ಮರಿ ನಂದಿತಾ ಶ್ವೇತಾ ಓಪನ್ ಟಾಕ್!

ಕನ್ನಡದ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ನಟಿ ನಂದಿತಾ ಶ್ವೇತಾ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಬಾಲ್ಯದ ಆಸೆ ಮತ್ತು ಕೈತಪ್ಪಿ ಹೋದ ಹಿಟ್ ಸಿನಿಮಾಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story
07:42 PM (IST) Nov 07

Karnataka News Live 7 November 2025 Photos - ದಾವಣಗೆರೆಯಲ್ಲಿ ನಡೆದ 'ಪದ್ಮಾವತಿ' ಕಲ್ಯಾಣ; ಕನ್ನಡ ಸೀರಿಯಲ್ ನಟಿ ದೀಪ್ತಿ ಮನ್ನೆ ಮದುವೆ ಫೋಟೋಗಳಿವು

‘ಪದ್ಮಾಪತಿ’ ಧಾರಾವಾಹಿಯಲ್ಲಿ ತುಳಸಿ ಎನ್ನುವ ಮುಗ್ಧೆ, ಸಂಪ್ರದಾಯಸ್ಥೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪ್ತಿ ಮನ್ನೆ ಅವರು ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಈಗ ತವರೂರಿನಲ್ಲಿ ಮದುವೆಯಾಗಿದ್ದಾರೆ.

Read Full Story
07:12 PM (IST) Nov 07

Karnataka News Live 7 November 2025 ಮುರುಡೇಶ್ವರದಲ್ಲಿ ಕಟ್ಟಡ ಕಾಮಗಾರಿ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿತ - ಇಬ್ಬರು ಕಾರ್ಮಿಕರ ದಾರುಣ ಸಾವು

ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದು, ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story
06:58 PM (IST) Nov 07

Karnataka News Live 7 November 2025 ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು - ಅಷ್ಟಕ್ಕೂ ಆಗಿದ್ದೇನು?

ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವನಪ್ಪಿದ ಘಟನೆ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ‌ ನಡೆದಿದೆ.

Read Full Story
06:47 PM (IST) Nov 07

Karnataka News Live 7 November 2025 ಡಾರ್ಲಿಂಗ್ ಪ್ರಭಾಸ್ ಕೆರಿಯರ್‌ನ ಬೆಸ್ಟ್ ನಿರ್ಧಾರ - ಈ ಸಿನಿಮಾ ರಿಜೆಕ್ಟ್ ಮಾಡಿದ್ದೇ ಅದೃಷ್ಟವಂತೆ!

ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೈಬಿಟ್ಟಿದ್ದಾರೆ. ಸಿಂಹಾದ್ರಿ, ಕಿಕ್‌ನಂತಹ ಚಿತ್ರಗಳು ಆ ಪಟ್ಟಿಯಲ್ಲಿವೆ. ಆದರೆ ಈ ಒಂದು ಚಿತ್ರವನ್ನು ತಿರಸ್ಕರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

Read Full Story
06:17 PM (IST) Nov 07

Karnataka News Live 7 November 2025 ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಟನ್ ಕಬ್ಬಿಗೆ 3300 ನಿಗದಿ - ಎಚ್‌.ಕೆ. ಪಾಟೀಲ್ ಹೇಳಿದ್ದೇನು?

ಕಬ್ಬಿಗೆ 3500 ರೂಪಾಯಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದ ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಚ್‌.ಕೆ. ಪಾಟೀಲ್ 1 ಟನ್ ಕಬ್ಬಿಗೆ 3300 ನಿಗದಿ ಮಾಡಲಾಗಿದೆ.

Read Full Story
06:04 PM (IST) Nov 07

Karnataka News Live 7 November 2025 ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ - ವಿಚಾರಣೆ ಮತ್ತೆ ನ.13ಕ್ಕೆ ಮುಂದೂಡಿದ ಹೈಕೋರ್ಟ್

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವ ಕುರಿತ ವಿಚಾರಣೆಯನ್ನು ಮತ್ತೆ ನ.13ಕ್ಕೆ ಹೈಕೋರ್ಟ್ ಮುಂದೂಡಿದೆ. ಅನುಮತಿ ಕೋರಿದ್ದ ಆರ್‌ಎಸ್‌ಎಸ್‌ ನ.13 ಅಥವಾ 16ಕ್ಕೆ ಪಥ ಸಂಚಲನ ಅನುಮತಿ ಕೋರಿತ್ತು.

Read Full Story
05:44 PM (IST) Nov 07

Karnataka News Live 7 November 2025 ಶಂಕರ್‌ನಾಗ್‌ ಜನ್ಮದಿನದ ಪ್ರಯುಕ್ತ ನ.9 ರಂದು ಚಾಲಕರ ದಿನಾಚರಣೆ - ಆಟೋ ರಾಯಭಾರಿಯಾಗಿ ನಟಿ ರಚಿತಾ ರಾಮ್‌

ಮೇರುನಟ ದಿ. ಶಂಕರ್‌ನಾಗ್‌ ಅವರ ಜನ್ಮದಿನದ ಪ್ರಯುಕ್ತ ಈ ಬಾರಿಯ ಚಾಲಕರ ದಿನಾಚರಣೆಗೆ 'ಆಟೋ ರಾಯಭಾರಿ'ಯಾಗಿ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಆಯ್ಕೆಯಾಗಿದ್ದಾರೆ. ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ.

Read Full Story
05:18 PM (IST) Nov 07

Karnataka News Live 7 November 2025 ಉಪೇಂದ್ರ ನನ್ನ ಗುರು.. ರಾಜಕೀಯದ ಆಕರ್ಷಣೆಯಿಂದ ಸಿನಿಮಾಕ್ಕೆ ಬಂದೆ - ರವಿ ಗೌಡ ಹೇಳಿದ್ದೇನು?

ರವಿ ಗೌಡ ನಟನೆ, ನಿರ್ದೇಶನ, ನಿರ್ಮಾಣದ ರೊಮ್ಯಾಂಟಿಕ್‌ ಥ್ರಿಲ್ಲರ್‌ ಐ ಆ್ಯಮ್‌ ಗಾಡ್‌. ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ ಐ ಆ್ಯಮ್‌ ಗಾಡ್‌ ಎಂಬ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.

Read Full Story
05:00 PM (IST) Nov 07

Karnataka News Live 7 November 2025 ಸುದೀಪ್‌ಗೆ ಸ್ಪರ್ಧೆ ಕೊಡುವಷ್ಟು ದೊಡ್ಡವನಲ್ಲ, ನೀವು ನನ್ನ ಸಿನಿಮಾ ನೋಡಿ - ಅರ್ಜುನ್‌ ಜನ್ಯ ಸಂದರ್ಶನ

‘45’ ಚಿತ್ರ ಡಿ.25ಕ್ಕೆ ತೆರೆ ಕಾಣಲಿದೆ. ಚಿತ್ರದ ಮೇಕಿಂಗ್‌, ಬಜೆಟ್‌, ತೆಗೆದುಕೊಳ್ಳುತ್ತಿರುವ ಸಮಯ ನೋಡಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ಅರ್ಜುನ್‌ ಜನ್ಯ ಮಾತನಾಡಿದ್ದಾರೆ.

Read Full Story
04:47 PM (IST) Nov 07

Karnataka News Live 7 November 2025 Vegetarian Alert! ನಿಮ್ಮ ಆಹಾರದ ಜೊತೆ ಪ್ರತಿದಿನ ನೀವು ಎಷ್ಟು ‘ಕೀಟಗಳನ್ನು’ ತಿನ್ನುವಿರಿ ಗೊತ್ತಾ?

Vegetarians Alert: ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಕೀಟಗಳು ಇರೋದು ಸಾಮಾನ್ಯ.. ಎಷ್ಟೊಂದು ಕೀಟಗಳು ನಮ್ಮ ಹೊಟ್ಟೆಯನ್ನು ಸೇರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲ ಅಂದ್ರೆ ಇದನ್ನು ನೀವು ಓದಲೇಬೇಕು. ಇದು ನಿಮಗೆ ಶಾಕಿಂಗ್ ಅನಿಸಬಹುದು. ಆದರೆ ಇದು ಸತ್ಯವಾದ ವಿಷಯ.

Read Full Story