Vegetarian Alert: ನಿಮ್ಮ ಆಹಾರದ ಜೊತೆ ಪ್ರತಿದಿನ ನೀವು ಎಷ್ಟು ‘ಕೀಟಗಳನ್ನು’ ತಿನ್ನುವಿರಿ ಗೊತ್ತಾ?
Vegetarians Alert: ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಕೀಟಗಳು ಇರೋದು ಸಾಮಾನ್ಯ.. ಎಷ್ಟೊಂದು ಕೀಟಗಳು ನಮ್ಮ ಹೊಟ್ಟೆಯನ್ನು ಸೇರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲ ಅಂದ್ರೆ ಇದನ್ನು ನೀವು ಓದಲೇಬೇಕು. ಇದು ನಿಮಗೆ ಶಾಕಿಂಗ್ ಅನಿಸಬಹುದು. ಆದರೆ ಇದು ಸತ್ಯವಾದ ವಿಷಯ.

ಆಹಾರದಲ್ಲಿ ಕೀಟಾಣು
ಏನು ನಮ್ಮ ಆಹಾರದಲ್ಲಿ ಕೀಟಗಳಿರುತ್ತಾ? ಅವು ನಮ್ಮ ಹೊಟ್ಟೆಯನ್ನು ಸೇರುತ್ತಾ? ಯೆಸ್ ಖಂಡಿತಾ ಸೇರುತ್ತೆ. ನಾವು ತಿನ್ನುವಂತಹ ಹಲವು ಆಹಾರಗಳಲ್ಲಿ ಕೀಟಗಳು ಇರೋದು ಸಾಮಾನ್ಯ. ಇದು ಅಡೂಗೆ ಮಾಡುವ ಸಂದರ್ಭ, ತರಕಾರಿ ಬೆಳೆಯುವ ಸಂದರ್ಭ ಹೀಗೆ ಎಲ್ಲಾ ಸಂದರ್ಭಗಳಿಂದ ನಮ್ಮ ದೇಹವನ್ನು ಸೇರುತ್ತೆ. ಯಾವ ಆಹಾರದಲ್ಲಿ ಎಷ್ಟು ಕೀಟಾಣುಗಳಿವೆ ನೋಡೋಣ.
ಓರಿಗಾನೋ
ನಾವು ಪಿಜ್ಜಾ ಹಾಗೂ ಇತರ ಕಡೆ ಬಳಕೆ ಮಾಡುವಂತಹ ಒರೆಗಾನೋದಲ್ಲಿ ಕೂಡ ಕೀಟಗಳಿರುತ್ತೆ. ಸುಮಾರು 10ಗ್ರಾಂ ಒರೆಗಾನೋದಲ್ಲಿ ಸುಮಾರು 1250 ಕೀಟಗಳ ಅವಶೇಷಗಳಿದ್ದು, ಇವು ತಿನ್ನೋದಕ್ಕೂ ಸುರಕ್ಷಿತವಾಗಿದೆ. ಭಯಪಡುವ ಅವಶ್ಯಕತೆ ಇಲ್ಲ.
ಪೀನಟ್ ಬಟರ್
ನೀವು ಬ್ರೆಡ್ ಜೊತೆ ಹಾಕಿ ತಿನ್ನುವ 200 ಗ್ರಾಂ ಪೀನಟ್ ಬಟರ್ ಬಾಟಲಿಯಲ್ಲಿ ಸುಮಾರು 60 ಕೀಟಾಣುಗಳು ಇರುತ್ತವೆ. ಅಂದ್ರೆ ಕೀಟಾಣುಗಳು ಕಾಲು, ರೆಕ್ಕೆ ಅಥವ ದೇಹ ಇದರಲ್ಲಿ ಸೇರಿರುತ್ತೆ.
ಟೋಮಾಟೊ ಕೆಚಪ್
ನೀವು ಇಷ್ಟಪಟ್ಟು ಚಪಾತಿ ಜೊತೆ, ಸಮೋಸ ಜೊತೆಗೆ ಹೀಗೆ ಎಲ್ಲದರ ಜೊತೆಗೂ ಬಾಯಿ ಚಪ್ಪರಿಸಿ ತಿನ್ನುವಂತಹ ಟೊಮಾಟೊ ಕೆಚಪ್ ನಲ್ಲೂ ಕೂಡ ಸುಮಾರು 30ರಷ್ಟು ಕೀಟಗಳ ಅವಶೇಷಗಳು ಇರುತ್ತವೆ. ಅದಕ್ಕೇ ಅನ್ಸತ್ತೆ ಕೆಚಪ್ ಅಷ್ಟೋಂದು ಟೇಸ್ಟಿಯಾಗಿರೋದು ಅಲ್ವಾ?
ಕಾಫಿ
ಯೆಸ್, ನೀವು ಕುಡಿಯುವ ಕಾಫಿಯಲ್ಲೂ ಕೀಟಗಳ ಅವಶೇಷಗಳು ಸೇರಿಕೊಂಡಿರುತ್ತೆ. ಸುಮಾರು 100 ಗ್ರಾಂ ಕಾಫಿಯಲ್ಲಿ 60 ರಿಂದ 70 ಕೀಟಗಳ ತುಣುಕು ಇರುತ್ತೆ. ಹೌದು ನೀವು ಬೆಳಗ್ಗೆ ಎದ್ದ ತಕ್ಷಣ ಸಿಪ್ ಮಾಡುವ ಒಂದು ಕಪ್ ಕಾಫಿಯಲ್ಲಿ ಇದೆಲ್ಲಾ ಇದೆ.
ಮಶ್ರೂಮ್
ಕೆಲವರು ಮಶ್ರೂಮ್ ಅನ್ನೋದು ಒಂದು ಫಂಗಸ್ ಅಂತ ಅದನ್ನು ತಿನ್ನೋದೆ ಇಲ್ಲ. ಆದರೆ ತಿನ್ನುವವರು ನೀವಾಗಿದ್ರೆ ಕೇಳಿ 100 ಗ್ರಾಂ ಮಶ್ರೂಮ್ ನಲ್ಲಿ ಸುಮಾರು 70 ಕೀಟಾಣುಗಳ ತುಣುಕು ಇರುತ್ತವೆ. ಭಯ ಬೇಡ ಇದರಿಂದೇನು ಆರೋಗ್ಯಕ್ಕೆ ಹಾನಿ ಇಲ್ಲ.
ನೂಡಲ್ಸ್
ಆಹಾ ಎನ್ನುತ್ತಾ ನೀವು ತಿನ್ನುವ ನೂಡಲ್ಸ್ ನಲ್ಲಿ ನಿಮಗೆ ಗೊತ್ತಿಲ್ಲದಂತೆ ಸುಮಾರು ಕೀಟಾಣುಗಳೂ ಕೂಡ ಸೇರಿರುತ್ತವೆ. ನಿಮಗೆ ಗೊತ್ತಾ ನೀವು ತಿನ್ನುವ 225ಗ್ರಾಂ ನೂಡಲ್ಸ್ ನಲ್ಲಿ ಅಷ್ಟೇ ಅಂದ್ರೆ 225 ಕೀಟಾಣುಗಳು ಇರುತ್ತವೆ. ಹಾಗಂತ ಖಂಡಿತಾ ಅವಾಯ್ಡ್ ಮಾಡೋದಕ್ಕೆ ಆಗಲ್ಲ ಅಲ್ವಾ?