08:55 PM (IST) May 07

Karnataka News Live 7 May 2026ಗ್ರೇಟರ್ ರಾಜಾಸೀಟು ಕಾಮಗಾರಿಯಲ್ಲಿ ಹಣ ದುರುಪಯೋಗ - ಲೋಕಾಯುಕ್ತದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿಗೆ ಹೊಂದಿಕೊಂಡಂತೆ ಇರುವ ಗ್ರೇಟರ್ ರಾಜಾಸೀಟಿನಲ್ಲಿ ನಡೆದಿರುವ ಅವ್ಯವಹಾರ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಹೌದು ಮಡಿಕೇರಿಯ..

Read Full Story
08:39 PM (IST) May 07

Karnataka News Live 7 May 2026Mothers Day 2026 - ಅಮ್ಮನ ಜೊತೆ ಟ್ರಿಪ್ ಪ್ಲಾನ್ ಇದ್ಯಾ? ಬೆಟ್ಟ, ಬೀಚ್, ದೇವಸ್ಥಾನ... ಇಲ್ಲಿದೆ ಬೆಸ್ಟ್ ಲಿಸ್ಟ್!

2026ರ ಅಮ್ಮಂದಿರ ದಿನಕ್ಕೆ ನಿಮ್ಮ ಅಮ್ಮನ ಜೊತೆ ಎಲ್ಲಿಗೆ ಟ್ರಿಪ್ ಹೋಗೋದು ಅಂತ ಯೋಚನೆ ಮಾಡ್ತಿದ್ದೀರಾ? ಬೆಟ್ಟಗಳ ತಂಪು, ಬೀಚ್‌ನ ನಿರಾಳತೆ ಅಥವಾ ದೇವಸ್ಥಾನಗಳ ದೈವಿಕ ಅನುಭವ... ಅಮ್ಮನ ಇಷ್ಟಕ್ಕೆ ತಕ್ಕಂತೆ ಬೆಸ್ಟ್ ಜಾಗಗಳ ಲಿಸ್ಟ್ ಇಲ್ಲಿದೆ. ಈ ದಿನವನ್ನು ಅವಿಸ್ಮರಣೀಯವಾಗಿಸಿ.

Read Full Story
07:09 PM (IST) May 07

Karnataka News Live 7 May 2026ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು - ಪಟ್ಟಣಶೆಟ್ಟಿ ಟೀಕೆ

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ಕಾಂಗ್ರೆಸ್ ಪಕ್ಷದವರೇಯಾಗಿರುವ ಮುಖಂಡ ಹಾಗು ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿ ಟೀಕಿಸಿದ್ದಾರೆ.

Read Full Story
06:05 PM (IST) May 07

Karnataka News Live 7 May 2026ದುಬಾರೆಯಲ್ಲಿ 7.30 ಕೋಟಿ ರೂ. ವೆಚ್ಚದ ತೂಗು ಸೇತುವೆ, ಮಾನವ ವನ್ಯಜೀವಿ ಸಂಘರ್ಷಕ್ಕೆ ಸಿಗುವುದೇ ಮುಕ್ತಿ?

ಕೊಡಗಿನ ದುಬಾರೆಯಲ್ಲಿ 7.30 ಕೋಟಿ ರೂ. ವೆಚ್ಚದ ತೂಗು ಸೇತುವೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸೇತುವೆಯು 150ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಕಲ್ಪಿಸಲಿದ್ದು, ಇದೇ ವೇಳೆ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ವನ್ಯಜೀವಿಗಳ ಸಂತಾನ ನಿಯಂತ್ರಣದಂತಹ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.
Read Full Story
05:15 PM (IST) May 07

Karnataka News Live 7 May 2026ವಿಟಿಯು ಪರೀಕ್ಷಾ ದಿನಾಂಕ ಪ್ರಕಟ - ಯುಜಿ ಹಾಗೂ ಪಿಜಿ ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತನ್ನ ಪದವಿ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನ್ ಎರಡನೇ ವಾರದಿಂದ ಆಗಸ್ಟ್ ಮೂರನೇ ವಾರದವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.
Read Full Story
03:52 PM (IST) May 07

Karnataka News Live 7 May 2026ಖಾತೆ ಬದಲಾವಣೆಗೆ ಲಂಚದ ಆರೋಪ, ದಾವಣಗೆರೆ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತರ ತೀವ್ರ ಶೋಧ!

ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿ-1 ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಇಸ್ವತ್ತು ಮತ್ತು ಖಾತೆ ಬದಲಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
Read Full Story
03:31 PM (IST) May 07

Karnataka News Live 7 May 2026ಚಿಕ್ಕಮಗಳೂರು ಸೈಬರ್ ವಂಚನೆ - ಗೋಲ್ಡ್ ಲೋನ್ ಪಡೆದು ಬ್ಯಾಂಕ್ ನಿಂದ ಹೊರಬಂದ ತಕ್ಷಣ ಹಣ ಮಾಯ!

ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರು ಚಿನ್ನದ ಸಾಲ ಪಡೆದ ಕೆಲವೇ ಕ್ಷಣಗಳಲ್ಲಿ, ಅವರ ಬ್ಯಾಂಕ್ ಖಾತೆಯಿಂದ ಸುಮಾರು ಒಂದು ಲಕ್ಷ ರೂಪಾಯಿ ಸೈಬರ್ ವಂಚಕರಿಂದ ಕಳುವಾಗಿದೆ. ಯಾವುದೇ ಓಟಿಪಿ ಅಥವಾ ಲಿಂಕ್ ಇಲ್ಲದೆ ಹಣ ವರ್ಗಾವಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
02:29 PM (IST) May 07

Karnataka News Live 7 May 2026ಎಲ್ಲಾ ಓಕೆ, ಆದ್ರೂ ವೀಕ್ಷಕರು ಮಾತ್ರ ನಂಬ್ತಿಲ್ಲ; ಅಮೃತಧಾರೆ ಬಗ್ಗೆ ಹೀಗೊಂದು ಅನುಮಾನ

ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.

Read Full Story
02:06 PM (IST) May 07

Karnataka News Live 7 May 2026ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​ - ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್‌ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ 'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್‌ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?

Read Full Story
01:53 PM (IST) May 07

Karnataka News Live 7 May 2026ಕೊಪ್ಪಳ ಹೋಟೆಲ್ ನಲ್ಲಿ ಅಪ್ರಾಪ್ತೆಯೊಂದಿಗೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ, ಭುಗಿಲೆದ್ದ ವಿವಾದ

ಕೊಪ್ಪಳದ ಹೋಟೆಲ್ ಒಂದರಲ್ಲಿ ಮುಸ್ಲಿಂ ಯುವಕನೊಂದಿಗೆ ಅಪ್ರಾಪ್ತ ಹಿಂದೂ ಯುವತಿ ಪತ್ತೆಯಾದ ಘಟನೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಈ ಸಂಬಂಧ ಭಜರಂಗ ದಳದ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿವೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Read Full Story
01:08 PM (IST) May 07

Karnataka News Live 7 May 2026ರಾಜ್ಯದ ಬಂಡವಾಳ ಗುಜರಾತ್‌ಗೆ, ಐಪಿಎಲ್ ಮ್ಯಾಚ್‌ ಕೂಡ ಶಿಫ್ಟ್, ಇಲ್ಲೇನು ಭದ್ರತೆ ಇಲ್ವಾ? ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ತಮಿಳುನಾಡಿನಲ್ಲಿ ತಮ್ಮ ಸಿದ್ಧಾಂತ ರಕ್ಷಣೆಗಾಗಿ ಕಾಂಗ್ರೆಸ್, ಡಿಎಂಕೆ ಬದಲು ಟಿವಿಕೆ ಪಕ್ಷವನ್ನು ಬೆಂಬಲಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು. ರಾಜ್ಯಪಾಲರ ಕಚೇರಿಗಳು ಬಿಜೆಪಿ ಕಚೇರಿಗಳಾಗಿವೆ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳನ್ನು ನಿರ್ಲಕ್ಷ್ಯಕ್ಕೆ ಕಿಡಿ.

Read Full Story
12:55 PM (IST) May 07

Karnataka News Live 7 May 2026ವಿಜಯನಗರದ ಅಪರೂಪದ ಶಾಸನ ಹಂಪಾದೇವನಹಳ್ಳಿ ಮತ್ತೆ, ಶ್ರೀಕೃಷ್ಣದೇವರಾಯನ ಮರೆತ ಅಧ್ಯಾಯ ಮತ್ತೆ ಮರುಕಳಿಸಿತು

ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಸಾಮ್ರಾಜ್ಯದ ಅಪರೂಪದ, ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಗ್ರಾಮವನ್ನು 'ಕೃಷ್ಣರಾಯಪುರ' ಎಂದು ಮರುನಾಮಕರಣ ಮಾಡಿ ದಾನ ನೀಡಿದ ಬಗ್ಗೆ ಉಲ್ಲೇಖಿಸಿದ್ದು, ಇದು ಶ್ರೀಕೃಷ್ಣದೇವರಾಯರ ಕಾಲದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
Read Full Story
12:53 PM (IST) May 07

Karnataka News Live 7 May 2026ಆಹಾರ ಪ್ರಿಯರನ್ನು ಹುಚ್ಚರನ್ನಾಗಿ ಮಾಡ್ತಿರೋ ಕೊಂಕಣಿ ಶೈಲಿಯ 'ಅಂಬಾಟ ಬಟಾಟ' ರೆಸಿಪಿ

ಕೊಂಕಣಿ ಭಾಗದ ಸಾಂಪ್ರದಾಯಿಕ ಅಡುಗೆಯಾದ ಅಂಬಾಟ ಬಟಾಟ ಸಾಂಬರ್ ತಯಾರಿಸುವ ಸರಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ತೆಂಗಿನಕಾಯಿ ಮಸಾಲೆ ಮತ್ತು ಆಲೂಗಡ್ಡೆಯನ್ನು ಬಳಸಿ, ರುಚಿಕರವಾದ ಈ ಕರ್ರಿಯನ್ನು ಹೇಗೆ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Read Full Story
12:05 PM (IST) May 07

Karnataka News Live 7 May 2026Virat Kohli - ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!

Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್‌ ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.

Read Full Story
12:01 PM (IST) May 07

Karnataka News Live 7 May 2026ಗಂಡ ಮನೆಯಲ್ಲಿರುವಾಗಲೇ ನೇಣಿಗೆ ಶರಣಾದ ಪತ್ನಿ; ವಿಡಿಯೋ ಕಾಲ್ ಮಾಡಿದ್ರೂ ಕ್ಯಾರೇ ಎನ್ನದ ಪತಿ

ಶಾರದಾ ಮತ್ತು ಮಹೇಶ್ ದಂಪತಿಗಳ ಮದುವೆಯಾಗಿ ಕೇವಲ ಎಂಟು ತಿಂಗಳು ಕಳೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಹಣಕ್ಕಾಗಿ ಪತಿ ಮಹೇಶ್ ಪೀಡಿಸುತ್ತಿದ್ದ ಎಂಬುದು ಕುಟುಂಬದ ಗಂಭೀರ ಆರೋಪವಾಗಿದೆ. ಘಟನಾ ಸ್ಥಳದ ಮಹಜರು ಪ್ರಕ್ರಿಯೆಯಲ್ಲಿ ಪೊಲೀಸರು ಲೋಪ ಎಸಗಿದ್ದಾರೆ ಎಂದು ಶಾರದಾ ಪೋಷಕರು ಆರೋಪಿಸಿದ್ದಾರೆ. 

Read Full Story
11:53 AM (IST) May 07

Karnataka News Live 7 May 2026'ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಸ್ವಲ್ಪ ಜಾಸ್ತಿಯೇ ಆಸೆ ಇದೆ; ಸಿಎಂ ಬದಲಾವಣೆ ಕುರಿತು ರಾಜಣ್ಣ ಹೇಳಿಕೆ ರಾಜಕೀಯ ಸಂಚಲನ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಗೊಂದಲ ಮುಂದುವರೆದರೆ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದರು.

Read Full Story
11:11 AM (IST) May 07

Karnataka News Live 7 May 20262028ಕ್ಕೆ ರಾಜ್ಯ ಬಿಜೆಪಿಯಿಂದಲೂ ಗ್ಯಾರಂಟಿ? 'ಮುಳ್ಳನ್ನ ಮುಳ್ಳಿನಿಂದ್ಲೇ ತೆಗಿತೀವಿ' ಅಂದಿದ್ಯಾಕೆ ಆರ್ ಅಶೋಕ್?

2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಪ್ರತಿಯಾಗಿ ಬಿಜೆಪಿ ಕೂಡ ಗ್ಯಾರಂಟಿ ಘೋಷಿಸುವ ಸುಳಿವನ್ನು ವಿಪಕ್ಷ ನಾಯಕ ಆರ್. ಅಶೋಕ್ ನೀಡಿದ್ದಾರೆ. 'ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ' ಎನ್ನುವ ಮೂಲಕ ಕಾಂಗ್ರೆಸ್ ದಾರಿಯಲ್ಲೇ ಸಾಗಿ ಅವರಿಗೆ ತಿರುಗೇಟು ನೀಡುವ ರಣತಂತ್ರ ಬಹಿರಂಗ.

Read Full Story
10:49 AM (IST) May 07

Karnataka News Live 7 May 2026ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026 - ಬೆಂಗಳೂರಿಗರ ಹಾಟ್‌ 'ಫೇವರಿಟ್' ಹೋಟೆಲ್‌ಗಳ ಪಟ್ಟಿ ಬಿಡುಗಡೆ!

ಸ್ವಿಗ್ಗಿ ತನ್ನ 'ರೆಸ್ಟೋರೆಂಟ್ ಅವಾರ್ಡ್ಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ನೆಚ್ಚಿನ ಹೋಟೆಲ್‌ಗಳನ್ನು ಬಹಿರಂಗಪಡಿಸಿದೆ. ಫುಡ್ ಡೆಲಿವರಿ ವಿಭಾಗದಲ್ಲಿ ಟ್ರಫಲ್ಸ್, ಮೇಘನಾ ಫುಡ್ಸ್ ಮತ್ತು ಡೈನ್-ಔಟ್ ವಿಭಾಗದಲ್ಲಿ ಶರೀಫ್ ಭಾಯ್ ಬಿರಿಯಾನಿ, ಐರನ್ ಹಿಲ್‌ನಂತಹ ಹೋಟೆಲ್‌ಗಳು ವಿಜೇತರಾಗಿವೆ. ಈ ಪ್ರಶಸ್ತಿಗಳನ್ನು 1.3 ಕೋಟಿ ಗ್ರಾಹಕರ ಮತಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ.
Read Full Story
10:14 AM (IST) May 07

Karnataka News Live 7 May 2026'ಕರ್ನಾಟಕ ಪೊಲೀಸ್ ಮಾದರ್ ಚೋರ್‌' - ರಸ್ತೆ ಮಧ್ಯೆ ಎಣ್ಣೆ ಪಾರ್ಟಿ, ಪ್ರಶ್ನಿಸಿದ್ದಕ್ಕೆ ಪೊಲೀಸರ ಸಮವಸ್ತ್ರ ಹರಿದು ಗೂಂಡಾಗಿರಿ!

ಬೆಂಗಳೂರಿನಲ್ಲಿ ನಸುಕಿನಲ್ಲಿ ರಸ್ತೆ ಮಧ್ಯೆ ಮದ್ಯಪಾನ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Read Full Story
10:11 AM (IST) May 07

Karnataka News Live 7 May 2026ಬೆಂಗಳೂರು-ಮುಂಬೈ‌ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್! ರೂಟ್ ಹೀಗಿದೆ

ಬೆಂಗಳೂರಿನಿಂದ ಮುಂಬೈಗೆ ಹೊಸ ಸೂಪರ್‌ಫಾಸ್ಟ್ ರೈಲು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಈ ರೈಲು ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮೂಲಕ ಸಂಚರಿಸಲಿದ್ದು, ಭವಿಷ್ಯದಲ್ಲಿ ಇದನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ.

Read Full Story