- Home
- Sports
- Cricket
- Virat Kohli: ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!
Virat Kohli: ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!
Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್ ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.

ಎಲ್ಲಿಯವ್ರು
ಮೂಲತಃ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆಯವರು. ಸಿದ್ದಾಪುರ ವಿದ್ಯಾಗಿರಿಯಲ್ಲಿ ವಾಸಿಸುತ್ತಿರುವ ಶಿಕ್ಷಕ ಜಿ.ಜಿ ಹೆಗಡೆ ಮತ್ತು ರೂಪಾ ಹೆಬ್ಬಾರ ದಂಪತಿಯ ಮತ್ರ.
ಶಿಕ್ಷಣ ಏನು?
ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಾಲ್ಯದಿಂದಲೆ ವಾಲಿಬಾಲ್, ಬ್ಯಾಡ್ಮಿಟನ್, ಕ್ರಿಕೆಟ್‌ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗರಾಜ ಹೆಗಡೆ ನಾಲ್ಕು ಐದು ವರ್ಷಗಳಿಂದ ಶಿಕ್ಷಣದ ಜತೆ ಜತೆಗೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಕ್ರಿಕೆಟ್ ತರಬೇತಿ ಮಾಡುತ್ತಿದ್ದಾರೆ.
ಆಫರ್ ಹೇಗೆ ಸಿಕ್ಕಿತು?
ಸದ್ಯ ಇವರು ಆಡುತ್ತಿರುವ ಕ್ಲಬ್‌ಗೆ ಜಾಹೀರಾತು ಆಫರ್ ಬಂದಿದ್ದು 30 ಜನರಲ್ಲಿ ಇವರು ಆಯ್ಕೆಯಾಗಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.
ಈ ಬಗ್ಗೆ ನಾಗರಾಜ್ ಹೆಗಡೆ ಏನಂದ್ರು?
ಇದು ನಿಜವೋ ಎಂಬಂತೆ ಇಂದಿಗೂ ಅನಿಸುತ್ತಿಲ್ಲ, ಆ ಕ್ಷಣದ ಕೆಲವು ನೆನಪುಗಳು ಇಲ್ಲಿವೆ.
ಅವರನ್ನು ನೋಡುತ್ತಾ ಬೆಳೆದ ನಾನು, ಇಂದು ವಿರಾಟ್ ಕೊಹ್ಲಿ ಅವರ ಜೊತೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ನೋಡಿದರೆ, ಜೀವನವು ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಅಚ್ಚರಿಗೊಳಿಸುತ್ತದೆ ಎಂದು ಅನಿಸುತ್ತದೆ.
ಶೂಟ್‌ನಲ್ಲಿ ಭಾಗಿಯಾದೆ: ನಾಗರಾಜ್ ಹೆಗಡೆ
'Oakley Meta AI' ಗ್ಲಾಸಸ್‌ಗಳ ಈ ಚಿತ್ರೀಕರಣದ ಭಾಗವಾಗಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಯಾವಾಗಲೂ ಗೌರವದಿಂದ ಕಾಣುವ ವ್ಯಕ್ತಿಯೊಂದಿಗೆ ಮಾತುಕತೆ ಆಡಿದ್ದು, ಈ ಅನುಭವಕ್ಕೆ ನಾನು ಚಿರಋಣಿ.
ಈ ಕ್ಷಣದಲ್ಲಿ ನನಗೆ ವಿಶೇಷವಾಗಿ ಅನ್ನಿಸಿದ್ದು ಅವರ ಸಾಧನೆಯಲ್ಲ, ಬದಲಾಗಿ ಕ್ರಿಕೆಟ್ ಲೋಕದಲ್ಲಿ ಎಲ್ಲವನ್ನೂ ಸಾಧಿಸಿದ್ದರೂ ಅವರು ತೋರುವ ಆ ನಮ್ರತೆ ಮತ್ತು ಅವರ ವ್ಯಕ್ತಿತ್ವ.
ಇದು ಸುಂದರವಾದ ನೆನಪು: ನಾಗರಾಜ್ ಹೆಗಡೆ
ಇದು ನಾನು ಯಾವಾಗಲೂ ಹತ್ತಿರವಾಗಿ ಇಟ್ಟುಕೊಳ್ಳುವ ನೆನಪುಗಳಲ್ಲಿ ಒಂದು. ಕೆಲವೊಮ್ಮೆ ಕೇವಲ ಮೆಚ್ಚುಗೆಯಾಗಿ ಆರಂಭವಾಗಿದ್ದು ಹೇಗೆ ವಾಸ್ತವವಾಗಿ ಬದಲಾಗಬಲ್ಲದು ಎಂಬುದಕ್ಕೆ ಇದೊಂದು ನೆನಪಿನ ಬುತ್ತಿ.
ಆಟೋಗ್ರಾಫ್ ಸಿಕ್ಕಿತು
ವಿರಾಟ್ ಕೊಹ್ಲಿ ಅವರಿಂದ ಆಟೋಗ್ರಾಫ್ ಕೂಡ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

