MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು

ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್‌ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ  'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್‌ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?

2 Min read
Author : Suchethana D
Published : May 07 2026, 02:06 PM IST
Share this Photo Gallery
  • FB
  • TW
  • Linkdin
  • Whatsapp
16
ಬಾಯಿ ಬಿಟ್ಟರೆ ಕೋಟಿ
Image Credit : Instagram

ಬಾಯಿ ಬಿಟ್ಟರೆ ಕೋಟಿ

ಬಾಯಿ ಬಿಟ್ಟರೆ ಕೋಟಿ ಕೋಟಿಯಲ್ಲಿ ಮಾತನಾಡುವ, ತಮಗಿಂತ ಸುಂದರ ಯಾರೂ ಇಲ್ಲ ಎನ್ನುವ, ತಾನೊಬ್ಬನಿದ್ದರೆ ಬಿಗ್​ಬಾಸ್ ಕನ್ನಡವನ್ನು ವಿಶ್ವದ ಮಟ್ಟಕ್ಕೆ ಒಯ್ಯುತ್ತೇನೆ ಎನ್ನುವ, ತನ್ನ ಹಿಂದೆ ಮುಂದೆ ಸುರಸುಂದರಿಯರು ತಿರುಗುತ್ತಾರೆ, ರಾಜಕಾರಣಿಗಳು, ಮಾಧ್ಯಮದವರು ನನ್ನ ಪಾಕೆಟ್​ನಲ್ಲಿ ಇದ್ದಾರೆ ಎಂದೆಲ್ಲಾ ಹೇಳುವ Bigg Boss ಖ್ಯಾತಿಯ ಡಾಗ್​ ಸತೀಶ್​ ಇದೀಗ ತಮ್ಮ ಬಳಿ ಇರುವ ನಾಯಿಯ ಬೆಲೆ 100 ಕೋಟಿ ಎಂದು ಹೇಳುವ ಮೂಲಕ ಸಾಕಷ್ಟು ಬಾರಿ ಟ್ರೋಲ್​ಗೆ ಒಳಗಾಗಿದ್ದು ಗೊತ್ತೇ ಇದೆ.

26
100 ಕೋಟಿ ನಾಯಿ ಬರ್ತ್​ಡೇ
Image Credit : Colors Kannada Instagram

100 ಕೋಟಿ ನಾಯಿ ಬರ್ತ್​ಡೇ

ಅದೇ 100 ಕೋಟಿ ಎನ್ನುವ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದರೋ ಡಾಗ್​ ಸತೀಶ್​, ಇದೀಗ ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್​ ಕುರಿತು ಕೇಳಿರುವ ಪ್ರಶ್ನೆಗೆ ಕುತೂಹಲ ಎನ್ನುವಂಥ ಉತ್ತರವನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಡಾಗ್​ ಸತೀಶ್​ ಅವರ ಮೇಲೆ ಇದಾಗಲೇ ಕೇಸ್​ ಕೂಡ ಆಗಿತ್ತು. ವೂಲ್ಫ್ ಡಾಗ್ ಅನ್ನು ಖರೀದಿಸಿರುವ ಬಗ್ಗೆ ಅವರು ಪೋಸ್ಟ್​ ಹಾಕಿದ್ದರು. ಇದು ಬಿಗ್​ಬಾಸ್​ಗೂ ಹೋಗುವ ಮುನ್ನ ನಡೆದಿದ್ದ ಘಟನೆ. ಐವತ್ತು ಕೋಟಿ ರೂ. ಶ್ವಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಅವರ ನಿವಾಸದ ಮೇಲೆ ದಾಳಿ ಕೂಡ ನಡೆಸಿತ್ತು. ಹಲವಾರು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಸುಳ್ಳು ಎಂದೇ ಹೇಳಿದ್ದರು. ಕೊನೆಗೆ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

Related Articles

Related image1
ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish
Related image2
Bigg Bossನಿಂದ ಚೀಪ್​ ಆಗ್ಬಿಟ್ಟೆ, ಕಡಿಮೆ ರೇಟ್​ಗೆ ಕರೀತಾರೆ ಎಂದ Dog Satish, ಗಿಲ್ಲಿ ಸರ ವಾಪಸ್​ಗೆ ಲೇವಡಿ
36
ಹಿಂದೆ ಜೈಲಿಗೆ ಹೋಗಿದ್ರು
Image Credit : Instagram

ಹಿಂದೆ ಜೈಲಿಗೆ ಹೋಗಿದ್ರು

ಇದರ ಬೆಲೆ 4.4 ಮಿಲಿಯನ್ ಪೌಂಡ್ ಆಗಿದ್ದು ಭಾರತದ ರೂಪಾಯಿಗೆ ಈ ಹಣವನ್ನು ಹೋಲಿಕೆ ಮಾಡಿದರೆ ಇದು 49 ಕೋಟಿ ರೂ. ಮೌಲ್ಯದ್ದು ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಡು ತೋಳ ಹಾಗೂ ಕಕೇಶಿಯನ್ ಶೆಪರ್ಡ್ ಎಂಬ ಎರಡು ತಳಿಗಳ ಮಿಶ್ರಣವಾಗಿದ್ದ ಈ ನಾಯಿಯು ತೀರಾ ಅಪರೂಪದಲ್ಲಿ ಅಪರೂಪದ್ದು ಎಂದು ಸತೀಶ್ ಹೇಳಿಕೊಂಡಿದ್ದರು. ಆದರೆ ಇವೆಲ್ಲವೂ ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದರು. ಇದೇ ವಿಚಾರ ಹಾಗೂ ಬಳಿಕ ಪತ್ನಿಯಿಂದ ಡಿವೋರ್ಸ್​ ವಿಚಾರವಾಗಿ ಬಹಳ ಸದ್ದು ಮಾಡಿದ್ದ ಡಾಗ್​ ಸತೀಶ್​ ಅವರಿಗೆ ಬಿಗ್​ಬಾಸ್​​ ಆಫರ್​ ಕೊಟ್ಟಿತ್ತು. ಇದೀಗ ಅವರು ಬಿಗ್​ಬಾಸ್​ ಸತೀಶ್​ ಆಗಿ ಫೇಮಸ್​ ಆಗಿದ್ದಾರೆ.

46
ದರ್ಶನ್​ ರೀತಿ ಟ್ರೀಟ್​ಮೆಂಟ್
Image Credit : Social media

ದರ್ಶನ್​ ರೀತಿ ಟ್ರೀಟ್​ಮೆಂಟ್

ಇದೀಗ ಜೈಲಿನಲ್ಲಿ ತಮಗೆ ಕೊಟ್ಟಿರುವ ಟ್ರೀಟ್​ಮೆಂಟ್​ ಹಾಗೂ ದರ್ಶನ್​ ಅವರಿಗೆ ಕೊಡುತ್ತಿರುವ ಟ್ರೀಟ್​ಮೆಂಟ್​ ಬಗ್ಗೆ ಮಾತನಾಡಿದ್ದಾರೆ. ತಮಗೆ ಜೈಲಿನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ದರ್ಶನ್​ ಅವರು ಕೋರ್ಟ್​ ಮೊರೆ ಹೋಗಿರುವ ಬಗ್ಗೆ ಕೇಳಿದಾಗ, ಸತೀಶ್​ ಅವರು, ಜೈಲಿನಲ್ಲಿ ಇದೆಲ್ಲಾ ಕಾಮನ್​. ಅಲ್ಲಿ ಆಗದವರೂ ಇರ್ತಾರೆ,, ಒಳ್ಳೆಯವರು, ಕೆಟ್ಟವರು, ಆಪೋಸಿಟ್​ ಇದ್ದವರು ಎಲ್ಲರೂ ಇರ್ತಾರೆ. ಅದಕ್ಕೆ ದರ್ಶನ್​ ಅವರಿಗೆ ಹಾಗೆ ಆಗ್ತಿದೆ. ಆದರೆ ನನಗಂತೂ ಹೀಗಾಗಲಿಲ್ಲ, ರಾಯಲ್​ ಟ್ರೀಟ್​ಮೆಂಟ್ ಸಿಕ್ಕಿತ್ತು, ರಾಜನ ರೀತಿ ಇದ್ದೆ ಎಂದಿದ್ದಾರೆ.

56
ರಾಯಲ್​ ಟ್ರೀಟ್​ಮೆಂಟ್​
Image Credit : Instagram

ರಾಯಲ್​ ಟ್ರೀಟ್​ಮೆಂಟ್​

ಈ ಹಿಂದೆ ಕೂಡ ಸತೀಶ್​ ಜೈಲಿನಲ್ಲಿ ತಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು ಎನ್ನುವ ಬಗ್ಗೆ ವಿವರಿಸಿದ್ದರು. ಜೈಲು ದಿ ಬೆಸ್ಟ್​. ಅಪ್ಪ-ಅಮ್ಮನಿಗಿಂತಲೂ ಅಲ್ಲಿ ಇರುವವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಹೊರಗಡೆ ಇರುವ ಬದಲು ಒಳಗಡೆ ಇರುವುದೇ ತುಂಬಾ ಲೇಸು ಎಂದು ಹೇಳಿದ್ದರು. ಆಚೆ ನೆಮ್ಮದಿ ಇಲ್ಲ ಎಂದೂ ಹೇಳಿದ್ದರು. ಏನಾದ್ರೂ ಇಶ್ಯು ಮಾಡಿ ಒಳಗೆ ಕಳಿಸುವ ಹಾಗಿದ್ರೆ ಕಳಿಸಿ ಸರ್​ ಎಂದು ಕೂಡ ಹೇಳಿದ್ದರು.

66
 ಗುಟ್ಟೇನು?
Image Credit : Instagram

ಗುಟ್ಟೇನು?

ಹಾಗಿದ್ದರೆ, ಇದಕ್ಕೆ ಕಾರಣ ಏನು? ನಿಮಗೆ ರಾಯಲ್ ಟ್ರೀಟ್​ಮೆಂಟ್​ ಪೊಲೀಸರು ಯಾಕೆ ಕೊಟ್ಟರು ಎನ್ನುವ ಪ್ರಶ್ನೆಗೆ ಮಾತ್ರ, ಸತೀಶ್​ ಅವೆಲ್ಲಾ ಸೀಕ್ರೇಟ್​, ಕ್ಯಾಮೆರಾ ಆಫ್​ ಮಾಡಿದ್ರೆ ಅದರ ಗುಟ್ಟನ್ನು ಹೇಳುತ್ತೇನೆ ಎಂದಿದ್ದಾರೆ. ಜೈಲಿನಲ್ಲಿ ಏಕೆ ಹೀಗೆಲ್ಲಾ ರಾಯಲ್​ ಟ್ರೀಟ್​ಮೆಂಟ್​ ಕೊಡ್ತಾರೆ ಎಂದು ಓಪನ್ ಆಗಿ ಹೇಳುವ ಹಾಗಿಲ್ಲ. ಕ್ಯಾಮೆರಾ ಮುಂದೆ ಹೇಳಿದರೆ ಕಷ್ಟ ಎನ್ನುವುದು ಅವರ ಮಾತು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ನಾಯಿ
ದರ್ಶನ್ ತೂಗುದೀಪ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
Amruthadhaare Serial: ಬಟ್ಟೆ ಬಿಚ್ಚಿದ ಪೊಲೀಸ್ರು, ಕಮ್ಮಿಯಾಗದ ಜಯದೇವ್‌ ಕೊಬ್ಬು; ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ?
Recommended image2
‘ಆಸೆ’ ಸೀರಿಯಲ್ ನಾಯಕ ಸೂರ್ಯನ ದುರಂತ ಅಂತ್ಯ… ವೀಕ್ಷಕರು ನಂಬೋದಕ್ಕೆ ತಯಾರಿಲ್ಲ!
Recommended image3
ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
Related Stories
Recommended image1
ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish
Recommended image2
Bigg Bossನಿಂದ ಚೀಪ್​ ಆಗ್ಬಿಟ್ಟೆ, ಕಡಿಮೆ ರೇಟ್​ಗೆ ಕರೀತಾರೆ ಎಂದ Dog Satish, ಗಿಲ್ಲಿ ಸರ ವಾಪಸ್​ಗೆ ಲೇವಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved