MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಎಲ್ಲಾ ಓಕೆ, ಆದ್ರೂ ವೀಕ್ಷಕರು ಮಾತ್ರ ನಂಬ್ತಿಲ್ಲ; ಅಮೃತಧಾರೆ ಬಗ್ಗೆ ಹೀಗೊಂದು ಅನುಮಾನ

ಎಲ್ಲಾ ಓಕೆ, ಆದ್ರೂ ವೀಕ್ಷಕರು ಮಾತ್ರ ನಂಬ್ತಿಲ್ಲ; ಅಮೃತಧಾರೆ ಬಗ್ಗೆ ಹೀಗೊಂದು ಅನುಮಾನ

ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.

1 Min read
Author : Mahmad Rafik
Published : May 07 2026, 02:29 PM IST
Share this Photo Gallery
  • FB
  • TW
  • Linkdin
  • Whatsapp
15
ಅಮೃತಧಾರೆ
Image Credit : zee kannada

ಅಮೃತಧಾರೆ

ಕಳೆದ ನಾಲ್ಕೈದು ದಿನಗಳಿಂದ ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಮುಕ್ತಾಯಗೊಳ್ಳಲಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಜೈದೇವ್‌ನನ್ನು ಹೊರತುಪಡಿಸಿ ಗೌತಮ್ ತನ್ನೆಲ್ಲಾ ಕುಟುಂಬಸ್ಥರೊಂದಿಗೆ ದಿವಾನ್ ಮನೆ ಸೇರಿದ್ದಾನೆ. ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಶಕುಂತಲಾ ಸಹ ತನ್ನ ಕೆಟ್ಟ ಚಾಳಿಯನ್ನು ಮರೆತು ಒಳ್ಳೆಯವಳಾಗಿದ್ದಾಳೆ. ಇದಕ್ಕೂ ಮೊದಲು ಶಕುನಿ ಮಾಮ ಸಹ ಚೇಂಜ್ ಆಗಿದ್ರು.

25
 ಶಕುಂತಲಾ ನಾಟಕ
Image Credit : zee kannada

ಶಕುಂತಲಾ ನಾಟಕ

ಹೌದು, ಶಕುಂತಲಾ ಬದಲಾಗಿರೋದನ್ನು ಸೀರಿಯಲ್ ವೀಕ್ಷಕರು ಮಾತ್ರ ನಂಬುತ್ತಿಲ್ಲ. ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಶಕುಂತಲಾ ದೇವಿದು ನಾಟಕಾನೇ ಇರುತ್ತದೆ. ನಂಬಬೇಡಿ. ಯಾಕೋ ಶಕುಂತಲಾ ನಾಟಕ ಮಾಡ್ತಿದ್ದಾಳೆ ಅನ್ನಿಸುತ್ತಿದೆ ಯಾರು ಇದನ್ನ ನಂಬಬಾರದು ಹಾಗೇ ಮೋಸ ಹೋಗ್ಬಾರ್ದು ಅನ್ನೋದೇ ನನ್ನ ಸಲಹೆ ಎಂದು ಹೇಳಿದ್ದಾರೆ.

Related Articles

Related image1
ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
Related image2
ಎರಡು ಸೀರಿಯಲ್​ಗಳ ಆಗರ್ಭ ಶ್ರೀಮಂತ ನಾಯಕರು ರಾತ್ರೋರಾತ್ರಿ ಬೀದಿಪಾಲು: ಜಾತಕದಲ್ಲಿ ಇರುವುದೇನು?
35
ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ
Image Credit : zee kannada

ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ

ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ, ಗುಂಡು ಡಕ್ ಔಟ್ ಆಗೋದು ನಿಶ್ಚಿತ ಮತ್ತು ಚತುರ ನಿರ್ದೇಶಕ ಎಂದು ಹೇಳಿದ್ದಾರೆ. ಈ ರೀತಿಯ ಸಾಲು ಸಾಲು ಕಮೆಂಟ್‌ಗಳು ಪ್ರೋಮೋಗೆ ಬಂದಿದ್ದು, ಸೀರಿಯಲ್ ಮುಗಿಯುತ್ತೆ ಅನ್ನೋದಕ್ಕೂ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ದಿಯಾ ಬೇಬಿಯನ್ನು ಮನವೊಲಿಸಲು ಜೈದೇವ್‌ ನಿರಂತರವಾಗಿ ಪ್ರಯತ್ನದಲ್ಲಿದ್ದಾರೆ.

45
ಜೈಲು ಸೇರಿದ ಜೈದೇವ್
Image Credit : zee kannada

ಜೈಲು ಸೇರಿದ ಜೈದೇವ್

ದಿಯಾ ಮನೆ ಮುಂದೆಯೇ ಸುತ್ತಾಡುತ್ತಿದ್ದ ಜೈದೇವ್ ಸದ್ಯ ಜೈಲು ಸೇರಿದ್ದಾನೆ. ತನ್ನ ಮನೆ ಮುಂದೆ ಬರದಂತೆ ಎಚ್ಚರಿಕೆ ನೀಡಿದರೂ ಜೈದೇವ್ ಅಲ್ಲೇ ಸುತ್ತಾಡುತ್ತಿದ್ದನು. ಇದರಿಂದ ಬೇಸತ್ತ ದಿಯಾ, ಪೊಲೀಸರಿಗೆ ದೂರು ನೀಡಿದ್ದಳು. ಇಂದಿನ ಪ್ರೋಮೋದಲ್ಲಿ ಜೈದೇವ್‌ನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರೋದನ್ನು ತೋರಿಸಲಾಗಿದೆ.

55
ಶಕುಂತಲಾ ಮಗಳು ಅಶ್ವಿನಿ ಎಲ್ಲಿ?
Image Credit : zee kannada

ಶಕುಂತಲಾ ಮಗಳು ಅಶ್ವಿನಿ ಎಲ್ಲಿ?

ಶಕುಂತಲಾಗೆ ಜೈದೇವ್, ಪಾರ್ಥ್, ಮಹಿಮಾ ಮತ್ತು ಅಶ್ವಿನಿ ಎಂಬ ನಾಲ್ಕು ಮಕ್ಕಳು. ಕಳೆದ ಹಲವು ತಿಂಗಳುಗಳಿಂದ ಅಶ್ವಿನಿ ಪಾತ್ರವನ್ನು ತೆರೆಯ ಹಿಂದೆ ಸರಿಸಲಾಗಿದೆ. ಅಶ್ವಿನಿ ಎಲ್ಲಿ ಹೋದ್ಳು ಎಂಬುದರ ಬಗ್ಗೆ ವೀಕ್ಷಕರು ಆಗಾಗ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮಹಿಮಾ ಪಾತ್ರಧಾರಿಯೂ ಮೂರು ಬಾರಿ ಬದಲಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು
Recommended image2
Amruthadhaare Serial: ಬಟ್ಟೆ ಬಿಚ್ಚಿದ ಪೊಲೀಸ್ರು, ಕಮ್ಮಿಯಾಗದ ಜಯದೇವ್‌ ಕೊಬ್ಬು; ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ?
Recommended image3
‘ಆಸೆ’ ಸೀರಿಯಲ್ ನಾಯಕ ಸೂರ್ಯನ ದುರಂತ ಅಂತ್ಯ… ವೀಕ್ಷಕರು ನಂಬೋದಕ್ಕೆ ತಯಾರಿಲ್ಲ!
Related Stories
Recommended image1
ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
Recommended image2
ಎರಡು ಸೀರಿಯಲ್​ಗಳ ಆಗರ್ಭ ಶ್ರೀಮಂತ ನಾಯಕರು ರಾತ್ರೋರಾತ್ರಿ ಬೀದಿಪಾಲು: ಜಾತಕದಲ್ಲಿ ಇರುವುದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved