10:47 PM (IST) Feb 07

Karnataka News Live 7 February 2026ಸೂರಜ್‌ಕುಂಡ್ ಮೇಳದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ!

ಪ್ರಸಿದ್ಧ ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ದೈತ್ಯ ಜಾಯಿಂಟ್ ವ್ಹೀಲ್ ಮುರಿದು ಬಿದ್ದಿದೆ. ಈ ದುರಂತದಲ್ಲಿ ಜನರನ್ನು ರಕ್ಷಿಸಲು ಹೋದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಮೇಳದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.

Read Full Story
09:38 PM (IST) Feb 07

Karnataka News Live 7 February 2026ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡರ್, ತನ್ನದೇ ಸ್ಟೇಷನ್ ಕಂಬಿ ಹಿಂದೆ ಕಾನ್‌ಸ್ಟೇಬಲ್ - ಗೌಡರ ಮನೆ ಕಳ್ಳತನ ಕೇಸ್‌ಗೆ ಟ್ವಿಸ್ಟ್!

ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್ ಕಾನ್ಸ್‌ಟೇಬಲ್ ಓರ್ವನೇ ಕಳ್ಳರ ತಂಡಕ್ಕೆ ನಾಯಕನಾಗಿ ತೋಟದ ಮನೆಯಲ್ಲಿ ದರೋಡೆ ಮಾಡಿಸಿದ್ದಾನೆ. ಗ್ರಾಮದ ಅಳಿಯನಾಗಿದ್ದ ಈತ, ಕಳ್ಳತನಕ್ಕೆ ಪಕ್ಕಾ ಸ್ಕೆಚ್ ಹಾಕಿಕೊಟ್ಟಿದ್ದು, ಇದೀಗ ಐವರು ಆರೋಪಿಗಳ ಸಹಿತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Read Full Story
09:25 PM (IST) Feb 07

Karnataka News Live 7 February 2026ಶಿವರಾತ್ರಿ 'ಚಂದಾ' ನೀಡದ ಅಂಗಡಿ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

ಬೀದರ್‌ನಲ್ಲಿ ಮಹಾಶಿವರಾತ್ರಿ ಹಬ್ಬದ ಚಂದಾ ವಸೂಲಿ ವೇಳೆ, ಕೇಳಿದಷ್ಟು ಹಣ ನೀಡದ ಕಾರಣಕ್ಕೆ ಯುವಕರ ಗುಂಪೊಂದು ಅಂಗಡಿಯಲ್ಲಿದ್ದ ಮಹೇಶ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಗುಂಪಿನಲ್ಲಿದ್ದ ಓರ್ವ ಮಹೇಶ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.

Read Full Story
09:04 PM (IST) Feb 07

Karnataka News Live 7 February 2026Vaibhav Suryavanshi - ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ 14ರ ಪೋರ ವೈಭವ್! ಈತ ಭವಿಷ್ಯದ ಸೂಪರ್‌ ಸ್ಟಾರ್?

ಕೇವಲ 14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿ ಅನ್ನೋ ಹುಡುಗ ಅಂಡರ್-19 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಗಳನ್ನೇ ಮುರಿಯುತ್ತಿದ್ದಾನೆ. ತನ್ನ ಅದ್ಭುತ ಸ್ಟ್ರೈಕ್ ರೇಟ್‌ನಿಂದ ಭಾರತಕ್ಕೆ ಹೊಸ ಭರವಸೆಯಾಗಿದ್ದಾನೆ. ಯೂತ್ ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ದೊಡ್ಡ ಆಟಗಾರ ಸಿಕ್ಕಿಬಿಟ್ಟನಾ?
Read Full Story
08:17 PM (IST) Feb 07

Karnataka News Live 7 February 2026ಸಿಸಿಎಲ್ ಆಡಲು ಅಭಿಮಾನಿಗಳಿಗೂ ಅವಕಾಶ - 'ಕರ್ನಾಟಕ ಬುಲ್ಡೋಜರ್ಸ್' ತಂಡ ಸೇರಲು ಗಲ್ಲಿ ಕ್ರಿಕೆಟಿಗರಿಗೂ ಕಿಚ್ಚನ ಆಹ್ವಾನ!

'ಕರ್ನಾಟಕ ಬುಲ್ಡೋಜರ್ಸ್' ನಾಯಕ ಕಿಚ್ಚ ಸುದೀಪ್, ಪ್ರತಿಭೆಯುಳ್ಳ ಅಭಿಮಾನಿಗಳಿಗೆ ಸಿಸಿಎಲ್ ತಂಡ ಸೇರಲು ಮುಕ್ತ ಆಹ್ವಾನ ನೀಡಿದ್ದಾರೆ. ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಎಲ್ಲಿಯೂ ಕನ್ನಡ ಧ್ವಜ ಹಾರಿಸಲು ಹಿಂಜರಿಯಬಾರದು ಎಂದು ಧೈರ್ಯ ತುಂಬಿದ್ದಾರೆ.
Read Full Story
07:35 PM (IST) Feb 07

Karnataka News Live 7 February 2026ಕನಕಪುರ ಶ್ರೀನಿವಾಸ್‌ಗೆ ಹುಚ್ಚು ಹಿಡಿದಿದ್ರೆ ಆಸ್ಪತ್ರೆಗೆ ಸೇರಿಸಿ; ನಾವು ಮಂಡ್ಯದವ್ರು, ನಮಗೂ ಮಾತು ಬರುತ್ತೆ-ಎಪಿ ಅರ್ಜುನ್

ಕನಕಪುರ ಶ್ರೀನಿವಾಸ್ ಅವರ ವರ್ತನೆ ನೋಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಮನೆಯವರು ತಕ್ಷಣ ಅವರಿಗೆ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ನಾವೂ ಮಂಡ್ಯದವರು, ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ ಎಂದು ನಿರ್ದೇಶಕ ಎ.ಪಿ. ಅರ್ಜುನ್ ಎಚ್ಚರಿಕೆ ನೀಡಿದ್ದಾರೆ.

Read Full Story
07:15 PM (IST) Feb 07

Karnataka News Live 7 February 2026ಬಿಗ್‌ ಬಾಸ್​ ಗೆದ್ದ ಗಿಲ್ಲಿ ಮೇಲೆ ದೊಡ್ಡ ಆರೋಪ! ನಲ್ಲಿ ಮೂಳೆ ಸ್ಟಾರ್ ಮೇಲೆ ದಾಖಲಾಯ್ತು ಕೇಸ್​..!

ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ, ಅವರು ನಟಿಸಿದ್ದ 'ಸರ್ಕಾರಿ ಶಾಲೆ ಎಚ್​​8' ಚಿತ್ರದ ಪ್ರಚಾರಕ್ಕೆ ಗೈರಾಗಿದ್ದಾರೆ ಎಂದು ನಿರ್ಮಾಪಕ ತೇಜಸ್ವಿ ಎಸ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

Read Full Story
07:06 PM (IST) Feb 07

Karnataka News Live 7 February 2026ಸೀರಿಯಲ್​ ಮೂಲಕ 'ನಿತ್ಯ' ಎಲ್ಲರ ಮನಸ್ಸು ಕದಿತಿರೋ Bigg Boss ನಾಯಕಿ ಯಾರೀಕೆ ತಿಳಿಯಿತಾ?

ಜೀ ಕನ್ನಡದ ಜನಪ್ರಿಯ ಸೀರಿಯಲ್ ನಟಿ ಮತ್ತು ಬಿಗ್​ಬಾಸ್​ ಸ್ಪರ್ಧಿ ತಮ್ಮ ಬಾಲ್ಯದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 'ಕರ್ಣ' ಸೀರಿಯಲ್ ಖ್ಯಾತಿಯ ನಟಿಯ ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ಮನಸೋತಿದ್ದು, ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.

Read Full Story
07:03 PM (IST) Feb 07

Karnataka News Live 7 February 2026ಬೆಂಗಳೂರು ರಸ್ತೆಯಲ್ಲಿ ಹೆಚ್ಚುತ್ತಿರುವ ರೋಡ್ ರೇಜ್, ಎರಡು ವಿಭಿನ್ನ ಘಟನೆ, ಎರಡು ವಿಭಿನ್ನ ಪ್ರತಿಕ್ರಿಯೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳಿಗೆ ಇತ್ತೀಚಿನ ಎರಡು ಘಟನೆಗಳು ಸಾಕ್ಷಿಯಾಗಿವೆ. ಒಂದು ಕಡೆ ಬೈಕ್ ಸವಾರನೊಬ್ಬನ ಅಜಾಗರೂಕ ವರ್ತನೆ ಆತಂಕ ಸೃಷ್ಟಿಸಿದರೆ, ಮತ್ತೊಂದೆಡೆ ಕಾರು ಚಾಲಕನ ನಿಂದನೆಗೆ ಬೈಕ್ ಸವಾರನೊಬ್ಬ ತೋರಿದ ಸಂಯಮವು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story
06:40 PM (IST) Feb 07

Karnataka News Live 7 February 2026ಬೆಂಗಳೂರು ಮೆಟ್ರೋ ಬಾಗಿಲಲ್ಲೇ 10 ಹೊಸ ಬಿಎಂಟಿಸಿ ಬಸ್ ನಿಲ್ದಾಣ; ವಿಮಾನ ನಿಲ್ದಾಣವೂ ಮತ್ತಷ್ಟು ಹತ್ತಿರ!

ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ, BMRCL ಮತ್ತು BMTC ಜಂಟಿಯಾಗಿ 'ನೇರಳೆ' ಮತ್ತು 'ಹಸಿರು' ಮಾರ್ಗದ ಪ್ರಮುಖ ನಿಲ್ದಾಣಗಳ ದ್ವಾರದ ಬಳಿ ಹೊಸ ಬಸ್ ನಿಲ್ದಾಣಗಳನ್ನು ಸ್ಥಾಪಿಸಿವೆ. ಮೆಟ್ರೋ ಮತ್ತು ಬಸ್ ನಡುವಿನ ಸಂಪರ್ಕ ಸುಧಾರಿಸಿ, ಪ್ರಯಾಣಿಕರು ನಡೆಯುವ ಪ್ರಯಾಸ ಕಡಿಮೆಯಾಗಲಿದೆ.

Read Full Story
06:38 PM (IST) Feb 07

Karnataka News Live 7 February 2026ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿಗೆ ಹೊಸ ಚಾಲೆಂಜ್​! ಮಲೆಯಾಳಂನ 1,000 ಕೋಟಿ ಬಜೆಟ್ ಸಿನಿಮಾದಲ್ಲಿ ರಿಷಬ್?

'ಕಾಂತಾರ' ಯಶಸ್ಸಿನ ನಂತರ ರಿಷಬ್ ಶೆಟ್ಟಿ ಮಲಯಾಳಂನ 1000 ಕೋಟಿ ಬಜೆಟ್‌ನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರವು 'ರಂಡಮೂಳಂ' ಕಾದಂಬರಿ ಆಧಾರಿತವಾಗಿದ್ದು, ಈ ಹಿಂದೆ ಮೋಹನ್‌ಲಾಲ್ ನಟಿಸಬೇಕಿದ್ದ ಭೀಮನ ಪಾತ್ರಕ್ಕೆ ಈಗ ರಿಷಬ್ ಶೆಟ್ಟಿ ಹೆಸರು ಕೇಳಿಬರುತ್ತಿದೆ.
Read Full Story
06:21 PM (IST) Feb 07

Karnataka News Live 7 February 2026ಗೃಹಲಕ್ಷ್ಮಿ ಹಣಕ್ಕೆ ಹೊಸ ರೂಲ್ಸ್? ಇನ್ಮುಂದೆ 'ಜೀವಿತ ಪ್ರಮಾಣ ಪತ್ರ' ಕಡ್ಡಾಯ; ಸಿಎಂ ಮಹತ್ವದ ಆದೇಶ

ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಸೋರಿಕೆ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತಿಸುತ್ತಿದೆ. ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಪ್ರತಿ ವರ್ಷ 'ಜೀವಿತ ಪ್ರಮಾಣ ಪತ್ರ' ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆಯಿದ್ದು, ಈ ಪ್ರಸ್ತಾವನೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

Read Full Story
06:05 PM (IST) Feb 07

Karnataka News Live 7 February 2026ಬೆಂಗಳೂರು ಮೆಟ್ರೋ ದರ ಏರಿಕೆಗೆ ಸದ್ಯಕ್ಕೆ ತಡೆ, ಸಂಸದ ತೇಜಸ್ವಿ ಸೂರ್ಯ ಮನವಿಗೆ ಕೇಂದ್ರದ ಸ್ಪಂದನೆ

ಸೋಮವಾರದಿಂದ ಜಾರಿಯಾಗಬೇಕಿದ್ದ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರ ಮನವಿಯ ಮೇರೆಗೆ ಕೇಂದ್ರ ಸಚಿವ ಎಂ.ಎಲ್. ಖಟ್ಟರ್ ಈ ಸೂಚನೆ ನೀಡಿದ್ದು, ಪ್ರಯಾಣಿಕರಿಗೆ ಸದ್ಯಕ್ಕೆ ನಿರಾಳ ಸಿಕ್ಕಿದೆ. 

Read Full Story
05:59 PM (IST) Feb 07

Karnataka News Live 7 February 2026ಗ್ಯಾಸ್ ಗೀಸರ್ ಸೋರಿಕೆಯಿಂದ ಗಂಡನ ಸಾವು, ಮುಖವನ್ನೂ ನೋಡಲು ಧೈರ್ಯವಾಗದೇ ನೇಣಿಗೆ ಕೊರಳೊಡ್ಡಿದ ಪತ್ನಿ!

ನೆಲಮಂಗಲದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ, ಗ್ಯಾಸ್ ಗೀಸರ್ ಸೋರಿಕೆಯಿಂದ ಪತಿ ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗದ ಪತ್ನಿ, ಪತಿಯ ಮುಖವನ್ನೂ ನೋಡದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮಗನ ಆಕ್ರಂದನ ಮುಗಿಲು ಮುಟ್ಟಿದೆ.
Read Full Story
05:36 PM (IST) Feb 07

Karnataka News Live 7 February 2026Bigg Boss ರಕ್ಷಿತಾ ಶೆಟ್ಟಿಗೆ ಮಾತಿನಂತೆ 2 ಲಕ್ಷ ನೀಡಲು ವರ್ತೂರು ಸಂತೋಷ್​ ಆಹ್ವಾನ - ಪುಟ್ಟಿ ಕಕ್ಕಾಬಿಕ್ಕಿ

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ರನ್ನರ್ ಅಪ್‌ಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ, ಮೊದಲ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಕರೆ ಮಾಡಿ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಈ ಅನಿರೀಕ್ಷಿತ ಕರೆಯಿಂದ ರಕ್ಷಿತಾ ಗೊಂದಲಕ್ಕೊಳಗಾದರು.
Read Full Story
05:34 PM (IST) Feb 07

Karnataka News Live 7 February 2026ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತ್ತೀಚೆಗೆ ಟಿಕೆಟ್ ದರಗಳನ್ನು ಏರಿಸಿದ್ದು, ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ ಸೇವೆಯಾಗಿದೆ ಎಂಬ ಚರ್ಚೆ ಹುಟ್ಟುಹಾಕಿದೆ. ದೆಹಲಿ, ಮುಂಬೈ, ಕೋಲ್ಕತ್ತಾದಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗರಿಷ್ಠ ದರಕ್ಕೆ ತಲುಪಿದೆ.

Read Full Story
04:48 PM (IST) Feb 07

Karnataka News Live 7 February 2026Shivamogga Convertion - ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಹೆಂಡ್ತಿ; ಗಂಡ-ಮಕ್ಕಳಿಗೂ ಮತಾಂತರವಾಗಲು ಕಿರುಕುಳ!

ಶಿವಮೊಗ್ಗದಲ್ಲಿ, ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ತನಗೂ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಪತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ.

Read Full Story
04:45 PM (IST) Feb 07

Karnataka News Live 7 February 2026ಕೋಲಾರ ಶಾಕಿಂಗ್ - ಕಮೀಷನ್ ಆಸೆಗೆ ಲೀವ್ ಇನ್ ಟುಗೆದರ್‌ ಜೋಡಿಯ ಮಗು ಮಾರಿಸಿದ ಮಧ್ಯವರ್ತಿ, 5 ಲಕ್ಷಕ್ಕೆ ಮಾರಾಟ!

ಕೋಲಾರದ ಶ್ರೀನಿವಾಸಪುರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಜೋಡಿಯೊಂದು ಹಣದಾಸೆಗೆ ತಮ್ಮ ನವಜಾತ ಗಂಡು ಮಗುವನ್ನು ಮಾರಾಟ ಮಾಡಿದೆ. ಈ ಮಗು ಮಾರಾಟ ಜಾಲವನ್ನು ಪತ್ತೆಹಚ್ಚಿದ ಪೊಲೀಸರು, ಮಗುವನ್ನು ಖರೀದಿಸಿದ ದಂಪತಿ ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

Read Full Story
04:36 PM (IST) Feb 07

Karnataka News Live 7 February 2026ಕೊಳ್ಳಿದೆವ್ವದ ಬೆಳಕಲ್ಲಿ ಕೊಲೆಗಾರನ ಅನಾವರಣ - ರಾಜ್‌ ಬಿ ಶೆಟ್ಟಿ Rakkasapuradhol Movie Review

Rakkasapuradhol Kannada Movie Review: ರಾಜ್‌ ಬಿ ಶೆಟ್ಟಿ, ಸ್ವಾತಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ, ಅನಿರುದ್ಧ ಭಟ್‌ ನಟನೆಯ ರಕ್ಕದಪುರದೋಳ್‌ ಸಿನಿಮಾ ರಿಲೀಸ್‌ ಆಗಿದೆ. ಹಾಗಾದರೆ ಈ ಸಿಮಾ ಹೇಗಿದೆ?

Read Full Story
04:18 PM (IST) Feb 07

Karnataka News Live 7 February 2026JC Movie Review - ಗಾಢ ಸಂದೇಶ ಕೊಟ್ಟು, ರೌಡಿಸಂ ಕತೆಯ ಕೊನೆಯಲ್ಲಿ ಸಣ್ಣ ನಿಟ್ಟುಸಿರು!

JC Kannada Movie Review: ಸೂರ್ಯ ಪ್ರಖ್ಯಾತ್‌, ರಂಗಾಯಣ ರಘು, ಭಾವನಾ ರೆಡ್ಡಿ, ವಿಜಯ್‌ ಸಿಂಹ ನಟನೆಯ ಜೆಸಿ ಸಿನಿಮಾ ರಿಲೀಸ್‌ ಆಗಿದೆ. ಈ ಚಿತ್ರಕ್ಕೆ ನಟ ಧನಂಜಯ ಅವರು ಹಣ ಹೂಡಿದ್ದಾರೆ. 

Read Full Story