MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ರಕ್ಷಿತಾ ಶೆಟ್ಟಿಗೆ ಮಾತಿನಂತೆ 2 ಲಕ್ಷ ನೀಡಲು ವರ್ತೂರು ಸಂತೋಷ್​ ಆಹ್ವಾನ: ಪುಟ್ಟಿ ಕಕ್ಕಾಬಿಕ್ಕಿ

Bigg Boss ರಕ್ಷಿತಾ ಶೆಟ್ಟಿಗೆ ಮಾತಿನಂತೆ 2 ಲಕ್ಷ ನೀಡಲು ವರ್ತೂರು ಸಂತೋಷ್​ ಆಹ್ವಾನ: ಪುಟ್ಟಿ ಕಕ್ಕಾಬಿಕ್ಕಿ

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ರನ್ನರ್ ಅಪ್‌ಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ, ಮೊದಲ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಕರೆ ಮಾಡಿ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಈ ಅನಿರೀಕ್ಷಿತ ಕರೆಯಿಂದ ರಕ್ಷಿತಾ ಗೊಂದಲಕ್ಕೊಳಗಾದರು.

1 Min read
Author : Suchethana D
Published : Feb 07 2026, 05:36 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್​ಬಾಸ್​ 10 ವರ್ತೂರು ಸಂತೋಷ್​
Image Credit : our own

ಬಿಗ್​ಬಾಸ್​ 10 ವರ್ತೂರು ಸಂತೋಷ್​

ಬಿಗ್​ಬಾಸ್​ 10ರಲ್ಲಿ ಹವಾ ಸೃಷ್ಟಿಸಿದವರ ಪೈಕಿ ವರ್ತೂರು ಸಂತೋಷ್​ ಒಬ್ಬರು. ನಾಲ್ಕನೆಯ ರನ್ನರ್​ ಅಪ್​ ಆಗಿ ಹೊರಬಂದವರು ಇವರು. ಈ ಬಾರಿ ಅವರೊಂದು ಘೋಷಣೆ ಮಾಡಿದ್ದರು. ಅದೇನೆಂದರೆ, ಬಿಗ್​ಬಾಸ್​ 12ನೇ ಸಂಚಿಕೆಯ ರನ್ನರ್​ ಅಪ್​ಗೆ 10 ಲಕ್ಷ ನೀಡುವುದಾಗಿ ಹೇಳಿದ್ದರು.

26
ಷರತ್ತು ವಿಧಿಸಿದ್ದ ವರ್ತೂರು
Image Credit : our own

ಷರತ್ತು ವಿಧಿಸಿದ್ದ ವರ್ತೂರು

ವರ್ತೂರು ಸಂತೋಷ್​ (Bigg Boss varthur santhosh), ಕೊನೆಯ ಕ್ಷಣದವರೆಗೆ ಬಂದು, ಗೆಲುವು ಸಾಧಿಸಿಲ್ಲ ಎಂದರೆ ತುಂಬಾ ನೋವಾಗುತ್ತದೆ. ಆದ್ದರಿಂದ 2ನೇ ರನ್ನರ್​ ಅಪ್​ಗೆ ಹಣವನ್ನು ನೀಡಲು ಆಸೆ ಪಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ, ಇದಕ್ಕೊಂದು ಷರತ್ತನ್ನೂ ಅವರು ವಿಧಿಸಿದ್ದರು. ಅದೇನೆಂದರೆ, ಬಿಗ್​ಬಾಸ್​ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಅಲ್ಲಿಯೇ 2ನೇ ರನ್ನರ್​ ಅಪ್​ಗೆ ಹಣವನ್ನು ನೀಡುತ್ತೇನೆ. ಒಂದು ವೇಳೆ ಬಿಗ್​ಬಾಸ್​​ ವೇದಿಕೆ ಮೇಲೆ ನನ್ನನ್ನು ಕರೆದಿಲ್ಲ ಎಂತಾದರೆ, ರನ್ನರ್​ ಅಪ್​ಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎನ್ನುವ ಮೂಲಕ, ವೇದಿಕೆಯ ಮೇಲೆ ಕರೆದರಷ್ಟೇ ಹಣವನ್ನು ಕೊಡುವುದಾಗಿ ಹೇಳಿದ್ದರು.

Related Articles

Related image1
BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!
Related image2
Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?
36
2 ಲಕ್ಷ ಬಹುಮಾನ
Image Credit : Asianet News

2 ಲಕ್ಷ ಬಹುಮಾನ

ತಮ್ಮ ಜೊತೆ ಹಳ್ಳಿಕಾರ್​ ಹಸುವನ್ನೂ ವೇದಿಕೆ ಮೇಲೆ ಬಿಡಬೇಕು ಎಂದೂ ಹೇಳಿದ್ದರು. ಆದರೆ ಅದನ್ನು ಬಿಗ್​ಬಾಸ್​​ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕೊನೆಯದಾಗಿ ವರ್ತೂರು ಸಂತೋಷ್​ ಅವರು, ಮೊದಲ ರನ್ನರ್​ ಅಪ್​ಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.

46
ಫೋನ್​ ಮೂಲಕ ಪರಿಚಯ
Image Credit : Social Media

ಫೋನ್​ ಮೂಲಕ ಪರಿಚಯ

ಅದರಂತೆಯೇ, ಇದೀಗ ರಕ್ಷಿತಾ ಶೆಟ್ಟಿ ಅವರಿಗೆ ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ವರ್ತೂರು ಸಂತೋಷ್​ ಬಗ್ಗೆ ಅರಿವಿಲ್ಲದ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಪರಿಚಯವನ್ನು ಫೋನ್​ ಮೂಲಕ ಮಾಡಿಕೊಂಡಿರುವ ವರ್ತೂರು ಅವರು ಹಣ ನೀಡುವುದಾಗಿ ಹೇಳಿದ್ದಾರೆ.

56
ಸಂಪರ್ಕಿಸುವಂತೆ ಸೂಚನೆ
Image Credit : Asianet News

ಸಂಪರ್ಕಿಸುವಂತೆ ಸೂಚನೆ

ಇದೇ 12ರ ಬಳಿಕ ಬೆಂಗಳೂರಿಗೆ ಬಂದು, ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿರುವ ವರ್ತೂರು ಸಂತೋಷ್​, ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಕೊನೆಯವರೆಗೂ ರಕ್ಷಿತಾ ಶೆಟ್ಟಿ ಕನ್​ಫ್ಯೂಷನ್​ನಲ್ಲಿಯೇ ಇದ್ದ ಹಾಗೆ ಕಾಣಿಸುತ್ತಿದೆ. ಏಕೆಂದರೆ, ಅವರಿಗೆ ಈ ಬಗ್ಗೆ ಗೊತ್ತೇ ಇಲ್ಲದ ಕಾರಣ, 2 ಲಕ್ಷ ಯಾಕೆ ಕೊಡುತ್ತಿದ್ದಾರೆ ಎನ್ನುವುದು ತಿಳಿದಂತೆ ಕಾಣುತ್ತಿಲ್ಲ.

66
ಫಿಶ್​ ಫ್ರೈ
Image Credit : Asianet News

ಫಿಶ್​ ಫ್ರೈ

ಮನೆಗೆ ಬಂದಾಗ, ಮೀನು ತರಿಸಿ ಇಡುತ್ತೇನೆ. ಫ್ರೈ ಮಾಡಿಕೊಡಬೇಕು ಎಂದು ವರ್ತೂರು ಹೇಳಿದ್ದಾರೆ. ಅದಕ್ಕೆ ರಕ್ಷಿತಾ ಶೆಟ್ಟಿ (Bigg Boss Raskhita Shetty) ಒಪ್ಪಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಕ್ಷಿತಾ
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ರಿಯಾಲಿಟಿ ಶೋ

Latest Videos
Recommended Stories
Recommended image1
Annayya Serial ನಟಿ, ಕಾಮಿಡಿ ಕಿಲಾಡಿಗಳು ಶೋ ದೀಪಿಕಾ 75 ಲಕ್ಷ ರೂ ಮನೆ ಕಟ್ಟಿದ್ರಾ? ಅಂತೂ ಸತ್ಯ ಹೊರಬಂತು!
Recommended image2
Bigg Boss ರಘು ಪಾಲಿಗೆ ಅದೃಷ್ಟದೇವತೆಯಾದ ರಕ್ಷಿತಾ ಶೆಟ್ಟಿ; ಏನ್ರೀ...ಇದು.. ಇಂಥ ದಾಖಲೆ!
Recommended image3
BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!
Related Stories
Recommended image1
BBK 12 ಪುನರ್ಮಿಲನ 'ದೊಡ್ಮನೆ ಹಬ್ಬ': ಜೋಡಿ ಹಕ್ಕಿಗಳ, ಸಿಟ್ಟು ಮಾಡ್ಕೊಂಡೋರ ಮುಖಾಮುಖಿ ಹೇಗಿದೆ ನೋಡಿ!
Recommended image2
Bigg Boss ಗಿಲ್ಲಿ ನಟನಿಗೆ ಬೆನ್ನುಬಿಡದ ಆರೋಪಗಳು: ಈಗ ಸೆಲ್ಫಿ ಕಿರಿಕ್​! ಸುದೀಪ್​ ಹೇಳಿದ್ದು ನಿಜ ಆಗೋಯ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved