MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಇದೊಂದು ಅಪರೂಪದ ಕನಕಾಭಿಷೇಕ; ಉತ್ತರ ಕನ್ನಡ-ಸಿದ್ದಾಪುರದ ಗೋಳಿಕೈನಲ್ಲಿ 'ಮರಿಮಗ'ನನ್ನು ನೋಡಿದ ಅಜ್ಜ-ಅಜ್ಜಿಗೆ ಅದೆಷ್ಟು ಖುಷಿ!

ಇದೊಂದು ಅಪರೂಪದ ಕನಕಾಭಿಷೇಕ; ಉತ್ತರ ಕನ್ನಡ-ಸಿದ್ದಾಪುರದ ಗೋಳಿಕೈನಲ್ಲಿ 'ಮರಿಮಗ'ನನ್ನು ನೋಡಿದ ಅಜ್ಜ-ಅಜ್ಜಿಗೆ ಅದೆಷ್ಟು ಖುಷಿ!

ಇಲ್ಲೊಂದು ಅಪರೂಪದಲ್ಲಿ ಅಪರೂಪ ಎನ್ನುವ ಸಂಗತಿ ಘಟಿಸಿದೆ. ಈಗಿನ ಕಾಲದಲ್ಲಿ ಮಕ್ಕಳ ಮದುವೆ ನೋಡುವುದೇ ಕಷ್ಟ, ಅಷ್ಟು ಆಯುಷ್ಯ ಇರುವದೇ ಅಪರೂಪ ಎಂಬಂತಹ ಕಾಲದಲ್ಲಿ ಮಗನ ಮಗನ ಮಗನನ್ನು ಈ ದಂಪತಿ ನೋಡಿ ಖುಷಿ ಪಟ್ಟಿರುವ ಸಂಗತಿ ನಡೆದಿದೆ. ಎಲ್ಲಿ, ಏನು ನೋಡಿ..

1 Min read
Author : Shriram Bhat
Published : Feb 27 2026, 08:22 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಇಲ್ಲೊಂದು ಅಪರೂಪದಲ್ಲಿ ಅಪರೂಪ ಎನ್ನುವ ಸಂಗತಿ ಘಟಿಸಿದೆ. ಈಗಿನ ಕಾಲದಲ್ಲಿ ಮಕ್ಕಳ ಮದುವೆ ನೋಡುವುದೇ ಕಷ್ಟ, ಅಷ್ಟು ಆಯುಷ್ಯ ಇರುವದೇ ಅಪರೂಪ ಎಂಬಂತಹ ಕಾಲದಲ್ಲಿ ಮಗನ ಮಗನ ಮಗನನ್ನು ಈ ದಂಪತಿ ನೋಡಿ ಖುಷಿ ಪಟ್ಟಿರುವ ಸಂಗತಿ ನಡೆದಿದೆ. ಇಂತಹ ಕುತೂಹಲಕಾರಿ ಸಂತೋಷದ ಸಂಗತಿ ನಡೆದಿರೋದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಗೋಳಿಕೈ ಎಂಬ ಊರಿನಲ್ಲಿ!

27
Image Credit : Asianet News

ಈ ಖುಷಿಗೆ ಅಲ್ಲಿ 'ಕನಕಾಭಿಷೇಕ ನಡೆದಿದೆ. ಹಾಗಂದರೇನು ಅಂತ ಕೆಲವರಿಗೆ ಪ್ರಶ್ನೆ ಮೂಡಬಹುದು. ನಿಮ್ಮ ಕುತೂಹಲದ ಪ್ರಶ್ನೆಗೆ ಮುಂದಿದೆ ನೋಡಿ ಉತ್ತರ..

Related Articles

Related image1
ರಾಮಚಂದ್ರಾಪುರ ಮಠ- ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ; ಅಯೋಧ್ಯೆಯ ಪುಣ್ಯ ಮಣ್ಣಿನ ಸ್ಪರ್ಶ
Related image2
ತಾಳಿಕಟ್ಟಿದ ಶುಭವೇಳೆ, ರಶ್ಮಿಕಾ ಕಣ್ಣಲ್ಲಿ ಕಂಬನಿಧಾರೆ; ಎಂಥ ನಟಿಯಾದ್ರೂ ತವರು ತೊರೆಯೋದು ವೇದನೆಯೇ ಸರಿ ಎಂದ ನೆಟ್ಟಿಗರು!
37
Image Credit : Asianet News

ಮರಿಮಗ ಅಥವಾ ಮಿಮ್ಮಗನ ಜನ್ಮ ನೋಡಿದ ಮುತ್ತಜ್ಜ-ಮುತ್ತಜ್ಜಿ ತನ್ನ ಕುಟುಂಬದ ನಾಲ್ಕನೇ ತಲೆಮಾರು ಕಂಡು ವಂಶ ಮುಂದುವರಿಯುತ್ತಿರುವದನ್ನು ನೋಡಿದಾಗ ಕಾಣುವ ನೆಮ್ಮದಿ ಆನಂದ, ಸಂತಸದ ಕ್ಷಣಗಳಿಗೆ, ಸನ್ನಿವೇಶಕ್ಕೆ ಸಡಗರದ ಮೆರುಗು ನೀಡುವುದೇ ಕನಕಾಭಿಷೇಕ ಆಚರಣೆ.

47
Image Credit : Asianet News

ಹೌದು, ಸಂಪ್ರದಾಯದ ಭಾಗವಾಗಿರುವ ಇಂತಹ ಒಂದು ಅತೀ ಅಪರೂಪದ ಕನಕಾಭಿಷೇಕ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಸಮೀಪದ ಗೋಳಿಕೈ ಗಣಪತಿ ಹೆಗಡೆ ಮತ್ತು ಲಕ್ಷ್ಮೀ ಹೆಗಡೆ ದಂಪತಿಗಳ ಕುಟುಂಬ.

57
Image Credit : Asianet News

ಜೇಷ್ಠ ಪುತ್ರನ ಜೇಷ್ಠ ಪುತ್ರನಿಗೆ ಜೇಷ್ಠ ಪುತ್ರನೇ ಜನಿಸಿದಾಗ ನಡೆಸುವ ಕನಕಾಭಿಷೇಕ ಶ್ರೇಷ್ಠ ಎನ್ನುವುದು ಶಾಸ್ತ್ರದ ಉಲ್ಲೇಖ. ಅದರಂತೆಯೇ ಗೋಳಿಕೈ ಗಣಪತಿ ಹೆಗಡೆಯವರ ಹಿರಿಯ ಮಗನ ಹಿರಿಯ ಮಗನಿಗೆ ಹಿರಿಯವನೇ ಮಗನಾಗಿ ಹುಟ್ಟಿರುವುದು ಇವರ ಸುಯೋಗ, ಕನಕಾಭಿಷೇಕ ಆಚರಣೆಯು ಅರ್ಥಪೂರ್ಣ, ಪರಿಪೂರ್ಣ ಎಂಬ ಮಾತು ಈಗ ಇಡೀ ಜೆಲ್ಲೆಯ ತುಂಬಾ ವೈರಲ್ ಆಗುತ್ತಿದೆ.

67
Image Credit : Asianet News

ಇಂಥ ಅಪರೂಪದ ಖುಷಿಯ ಕ್ಷಣಕ್ಕೆ ಕುಟುಂಬದ ಸದಸ್ಯರ ಜೊತೆಗೆ ಅಲ್ಲಿನ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸಾಕ್ಷಿಯಾಗಿದ್ದಾರೆ. 

77
Image Credit : Asianet News

ಅಲ್ಲಿ ಹಾಜರಿದ್ದ ಕಾಗೇರಿಯವರು 'ಗೋಳಿಕೈ ಗಣಪತಿ ಹೆಗಡೆ ನೂರು ವಸಂತ ಪೊರೈಸಲಿ' ಎಂದು ಶುಭಹಾರೈಸಿದರು. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸುದ್ದಿ
ವೈರಲ್ ಸುದ್ದಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಮಾಧ್ಯಮದವರನ್ನ ನಿರ್ಬಂಧಿಸಿದ್ರೆ ವಿಧಾನಸೌಧದ ಗೇಟಿಗೆ ಮಲಗುವೆ: ರಾಜ್ಯ ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್ ಕೊಟ್ಟ ವಾಟಾಳ್!
Recommended image2
ಹಟ್ಟಿ ಗೋಲ್ಡ್ ಮೈನ್ಸ್‌ ಎದುರು ಸ್ಫೋಟಕಗಳ ರಾಶಿ!: ಸಿಸಿಟಿವಿಯಲ್ಲಿ ಕಂಡ ನಂಬರ್ ಪ್ಲೇಟ್ ಇಲ್ಲದ ಆ ನಿಗೂಢ ಬೈಕ್ ಯಾರದ್ದು?
Recommended image3
ರಾಮಚಂದ್ರಾಪುರ ಮಠ- ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ; ಅಯೋಧ್ಯೆಯ ಪುಣ್ಯ ಮಣ್ಣಿನ ಸ್ಪರ್ಶ
Related Stories
Recommended image1
ರಾಮಚಂದ್ರಾಪುರ ಮಠ- ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ; ಅಯೋಧ್ಯೆಯ ಪುಣ್ಯ ಮಣ್ಣಿನ ಸ್ಪರ್ಶ
Recommended image2
ತಾಳಿಕಟ್ಟಿದ ಶುಭವೇಳೆ, ರಶ್ಮಿಕಾ ಕಣ್ಣಲ್ಲಿ ಕಂಬನಿಧಾರೆ; ಎಂಥ ನಟಿಯಾದ್ರೂ ತವರು ತೊರೆಯೋದು ವೇದನೆಯೇ ಸರಿ ಎಂದ ನೆಟ್ಟಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved