ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತ್ತೀಚೆಗೆ ಟಿಕೆಟ್ ದರಗಳನ್ನು ಏರಿಸಿದ್ದು, ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ ಸೇವೆಯಾಗಿದೆ ಎಂಬ ಚರ್ಚೆ ಹುಟ್ಟುಹಾಕಿದೆ. ದೆಹಲಿ, ಮುಂಬೈ, ಕೋಲ್ಕತ್ತಾದಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗರಿಷ್ಠ ದರಕ್ಕೆ ತಲುಪಿದೆ.

ಬೆಂಗಳೂರು: ದಿನನಿತ್ಯ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ನಮ್ಮ ಮೆಟ್ರೋ (ನಮ್ಮ ಮೆಟ್ರೋ ರೈಲು) ಈಗ ದೇಶದಲ್ಲೇ ಅತೀ ದುಬಾರಿ ಮೆಟ್ರೋ ಸೇವೆಯಾಗಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ. ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಟಿಕೆಟ್ ದರ ಏರಿಕೆಗೆ ಮುಂದಾಗಿರುವ ಚರ್ಚೆಯ ಮಧ್ಯೆ ಜನ ಸಾಮಾನ್ಯರ ಕೋಪಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಫೆಬ್ರವರಿ 9ರಿಂದ ಜಾರಿಗೆ ಬಂದ ಹೊಸ ದರ

ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಬಹುತೇಕ ಎಲ್ಲ ದೂರಗಳಲ್ಲೂ ಹೆಚ್ಚಿಸಲಾಗಿದೆ. ಈ ಹಿಂದೆ ಇದ್ದ ದರಕ್ಕೆ ಹೋಲಿಸಿದರೆ 1ರಿಂದ 5 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ಮೆಟ್ರೋ ಹೊಸ ಟಿಕೆಟ್ ದರ ವಿವರ

0–2 ಕಿ.ಮೀ: ₹10 ➝ ₹11

2–4 ಕಿ.ಮೀ: ₹20 ➝ ₹21

4–6 ಕಿ.ಮೀ: ₹30 ➝ ₹32

6–8 ಕಿ.ಮೀ: ₹40 ➝ ₹42

8–10 ಕಿ.ಮೀ: ₹50 ➝ ₹53

10–15 ಕಿ.ಮೀ: ₹60 ➝ ₹63

15–20 ಕಿ.ಮೀ: ₹70 ➝ ₹74

ಇದುವರೆಗೆ ಗರಿಷ್ಠ ಪ್ರಯಾಣ ದರ ₹90 ಆಗಿದ್ದರೆ, ಫೆಬ್ರವರಿ 9ರಿಂದ ₹95ಕ್ಕೆ ಏರಿಸಲಾಗಿದೆ. ಈ ಮೂಲಕ ಬೆಂಗಳೂರು ಮೆಟ್ರೋ ದೇಶದಲ್ಲೇ ಅತೀ ಹೆಚ್ಚು ದರ ಹೊಂದಿರುವ ಮೆಟ್ರೋ ಎಂಬ ಸ್ಥಾನಕ್ಕೆ ತಲುಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇತರೆ ರಾಜ್ಯಗಳ ಮೆಟ್ರೋ ದರಗಳೊಂದಿಗೆ ಹೋಲಿಕೆ

ದೆಹಲಿ ಮೆಟ್ರೋ

ದೇಶದ ಅತೀ ದೊಡ್ಡ ಹಾಗೂ ವಿಸ್ತೃತ ಮೆಟ್ರೋ ಜಾಲ ಹೊಂದಿರುವ ದೆಹಲಿ ಮೆಟ್ರೋ, 394 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ನೆಟ್‌ವರ್ಕ್ ಹೊಂದಿದೆ.

ಗರಿಷ್ಠ ಟಿಕೆಟ್ ದರ: ₹64

32 ಕಿ.ಮೀ.ಗಿಂತ ಹೆಚ್ಚು ದೂರದ ಪ್ರಯಾಣಕ್ಕೂ ಇದೇ ಗರಿಷ್ಠ ದರ

ಮುಂಬೈ ಮೆಟ್ರೋ

ಸುಮಾರು 80 ಕಿಲೋಮೀಟರ್ ಮೆಟ್ರೋ ಜಾಲ ಹೊಂದಿರುವ ಮುಂಬೈ ಮೆಟ್ರೋದಲ್ಲಿ

ಗರಿಷ್ಠ ದರ: ₹80

42 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣ ಸಾಧ್ಯ

ಹೈದರಾಬಾದ್ ಮೆಟ್ರೋ

ಆಧುನಿಕ ಸೌಲಭ್ಯಗಳಿಗೆ ಹೆಸರಾದ ಹೈದರಾಬಾದ್ ಮೆಟ್ರೋದಲ್ಲಿ

ಗರಿಷ್ಠ ಪ್ರಯಾಣ ದರ: ₹69

ಕೋಲ್ಕತ್ತಾ ಮೆಟ್ರೋ

ದೇಶದಲ್ಲೇ ಮೊದಲಿಗೆ ಆರಂಭವಾದ ಮೆಟ್ರೋ ವ್ಯವಸ್ಥೆಯಾದ ಕೋಲ್ಕತ್ತಾ ಮೆಟ್ರೋದಲ್ಲಿ

ಗರಿಷ್ಠ ದರ ಕೇವಲ ₹50

ಅತೀ ಕಡಿಮೆ ಮೆಟ್ರೋ ದರ ಯಾವ ನಗರದಲ್ಲಿದೆ?

ಹೋಲಿಕೆ ಮಾಡಿದರೆ, ಕೋಲ್ಕತ್ತಾ ಮೆಟ್ರೋ ದೇಶದಲ್ಲೇ ಅತೀ ಕಡಿಮೆ ಟಿಕೆಟ್ ದರ ಹೊಂದಿರುವ ಮೆಟ್ರೋ ವ್ಯವಸ್ಥೆಯಾಗಿದೆ. ಇತ್ತ ಬೆಂಗಳೂರು ಮೆಟ್ರೋ, ಕಡಿಮೆ ದೂರಕ್ಕೂ ಹೆಚ್ಚು ದರ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಮೆಟ್ರೋ ದರ ಏರಿಕೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮೆಟ್ರೋ ಸಾಮಾನ್ಯರ ಕೈಗೆಟುಕದ ಸೇವೆಯಾಗುತ್ತಿದೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ದುಬಾರಿ. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಬೇಕಾದರೆ ದರ ಇಳಿಸಬೇಕು ಎಂಬ ಆಕ್ರೋಶದ ಧ್ವನಿಗಳು ಕೇಳಿಬರುತ್ತಿವೆ.