11:25 PM (IST) Dec 07

Karnataka News Live 7 December 2025ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!

ಕಿಚ್ಚ ಸುದೀಪ್‌ ನಟನೆಯ ಬಹು ನಿರೀಕ್ಷೆಯ ‘ಮಾರ್ಕ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಪಕ್ಕಾ ಆ್ಯಕ್ಷನ್‌ನಿಂದ ಕೂಡಿದ ಈ ಚಿತ್ರದ ಟ್ರೇಲರ್‌ ಇದಾಗಿದೆ. ಟ್ರೇಲರ್‌ನಲ್ಲಿ ಮಕ್ಕಳ ಅಪಹರಣದ ದೃಶ್ಯಗಳು ಬಂದಿದ್ದು, ಕತೆಯ ಗುಟ್ಟು ಕೂಡ ಬಿಟ್ಟು ಕೊಡಲಾಗಿದೆ.

Read Full Story
11:03 PM (IST) Dec 07

Karnataka News Live 7 December 2025ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು, ಹಸೆಮಣೆ ಏರಬೇಕಿದ್ದ ನವ ಜೋಡಿಗಳು ದುರಂತ ಅಂತ್ಯಕಂಡ ಘಟನೆ ಗಂಗಾವತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read Full Story
10:56 PM (IST) Dec 07

Karnataka News Live 7 December 2025ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು - ನಟ ಶಿವಣ್ಣ ಹೇಳಿದ್ದೇನು?

ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು ಎಂದು ನಟ ಶಿವರಾಜ್‌ಕುಮಾರ್‌ ತಿಳಿಸಿದರು.

Read Full Story
10:35 PM (IST) Dec 07

Karnataka News Live 7 December 2025ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್ - ಮದುವೆ ಸೀಸನ್‌ನ ಹೊಸ ಟ್ರೆಂಡ್!

ಸೀರೆಯ ವಿನ್ಯಾಸ, ಆಲಿಯಾ ಭಟ್ ಎಂಬ ಸುಂದರಿಯ ಮೈಬಣ್ಣ ಎಲ್ಲ ಸೇರಿ, ‘ಚೆಂದಕಿಂತ ಚೆಂದ ನೀನೆ ಸುಂದರ’ ಎಂದು ಹಾಡು ಹೇಳೋ ರೇಂಜ್‌ಗೆ ಮನಮೋಹಕವಾಗಿತ್ತು. ಈ ಟಿಶ್ಯೂ ಸಾರಿ ಲೇಟೆಸ್ಟಾಗಿ ಎಂಟ್ರಿ ಕೊಟ್ಟಿರೋದೇನಲ್ಲ.

Read Full Story
10:03 PM (IST) Dec 07

Karnataka News Live 7 December 2025ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ - ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ

ಸರ್ಕಾರಕ್ಕೆ ಕಿಂಚಿತ್ತು ನಾಚಿಕೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಹಾಗೂ ಸಾರ್ವಜನಿಕರ ಪಾಲಿಗೆ ಸತ್ತೇಹೋಗಿದೆ. ಶೇ. 60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.

Read Full Story
09:33 PM (IST) Dec 07

Karnataka News Live 7 December 2025ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!

ಮಹಿಳೆಯರನ್ನು ಬಾಧಿಸುವ ಪ್ರಮುಖ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಕೂಡ ಒಂದು. ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಸರಿಯಾದ ರೋಗನಿರ್ಣಯದಿಂದ ಮೂರರಲ್ಲಿ ಎರಡು ಪ್ರಕರಣಗಳನ್ನು ಗುಣಪಡಿಸಬಹುದು.

Read Full Story
09:06 PM (IST) Dec 07

Karnataka News Live 7 December 2025ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ - ಛಲವಾದಿ ನಾರಾಯಣಸ್ವಾಮಿ

ಬ್ರೇಕ್‌ಫಾಸ್ಟ್ ಪಾರ್ಟಿ ಮಾಡುವ ಮೂಲಕ ಟೈಮ್ ಪಾಸ್ ಮಾಡುತ್ತಿದ್ದಾರೆಯೇ ಹೊರತು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಲಿ, ರಾಜ್ಯದ ಅಭಿವೃದ್ಧಿಗಾಗಿ ಒಂದು ದಿನ ಕೂಡ ಕುಳಿತು ಮಾತನಾಡಿದ್ದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

Read Full Story
08:50 PM (IST) Dec 07

Karnataka News Live 7 December 2025ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ, ಭಾರಿ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆ ಹೈಕೋರ್ಟ್ ವರೆಗೂ ತಲುಪಿತ್ತು. ಇಂದು ನಡೆದ ಮತದಾನದಲ್ಲಿ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಗೆಲುವು ಕಂಡಿದ್ದಾರೆ.

Read Full Story
08:43 PM (IST) Dec 07

Karnataka News Live 7 December 2025ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ - ಸರ್ಕಾರಕ್ಕೆ ಸಿ.ಟಿ.ರವಿ ಸವಾಲು

ರಾಜ್ಯದ ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದ್ದು, ಚುನಾವಣೆಗೆ ಹೋಗುತ್ತೇವೆ ಎಂಬ ಚಾಲೆಂಜ್‌ ಸ್ವೀಕಾರ ಮಾಡಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದರು.

Read Full Story
08:22 PM (IST) Dec 07

Karnataka News Live 7 December 2025ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ - ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ

ಸಂಸ್ಕಾರ ಹಾಗೂ ಸಂಸ್ಕೃತಿ ಇಲ್ಲದ, ಮಾತೆತ್ತಿದರೆ ಭಾಗ್ಯ, ಭಾಗ್ಯ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.

Read Full Story
08:09 PM (IST) Dec 07

Karnataka News Live 7 December 2025ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ - ಬಸವರಾಜ ರಾಯರೆಡ್ಡಿ

ಅಭಿವೃದ್ಧಿಗೆ ಆದ್ಯತೆ ನೀಡಿ, ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಬೇಕಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಖುರ್ಚಿ ಕಾದಾಟ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಬದಲಾವಣೆಯೂ ಇಲ್ಲ ಎಂದು ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

Read Full Story
08:04 PM (IST) Dec 07

Karnataka News Live 7 December 2025ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!

ಮದುವೆ ಸಮಾರಂಭದ ನಂತರ, ಭವಾನಿ ತಲ್ವಾರ್ ವರ್ಮಾ ಎಂಬ ನವವಧು ತಾನೇ ಕಾರ್ ಓಡಿಸಿಕೊಂಡು ಗಂಡನ ಮನೆಗೆ ಹೋಗುವ ವಿಡಿಯೋ ವೈರಲ್ ಆಗಿದೆ. ಭಾರವಾದ ಉಡುಗೆಯಲ್ಲಿದ್ದರೂ ಉತ್ಸಾಹದಿಂದ ಡ್ರೈವಿಂಗ್ ಮಾಡುವ ಆಕೆಗೆ ಪತಿ ಸಾಥ್ ನೀಡಿದ್ದು, ಈ ಸುಂದರ ಕ್ಷಣ ನೆಟ್ಟಿಗರ ಮನಗೆದ್ದಿದೆ.

Read Full Story
07:59 PM (IST) Dec 07

Karnataka News Live 7 December 2025Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ

ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. 40 ಮಂದಿ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ದೇವಸ್ಥಾನದಿಂದ ಮರಳುವಾಗ ಈ ಘಟನೆ ನಡೆದಿದೆ.

Read Full Story
07:52 PM (IST) Dec 07

Karnataka News Live 7 December 2025ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್

ಪ್ರಭಾಸ್‌ಗೆ ಒಂದೇ ವರ್ಷದಲ್ಲಿ 2 ಬ್ಯಾಕ್ ಟು ಬ್ಯಾಕ್ ಫ್ಲಾಪ್‌ಗಳು ಎದುರಾದವು. ಅಲ್ಲು ಅರ್ಜುನ್ ಮತ್ತು ವೆಂಕಟೇಶ್ ಚಿತ್ರಗಳ ಜೊತೆ ಸ್ಪರ್ಧೆಗೆ ಇಳಿದಿದ್ದರಿಂದ ನೆಗೆಟಿವ್ ರಿಸಲ್ಟ್ ತಪ್ಪಲಿಲ್ಲ. ಆ ಸಿನಿಮಾಗಳು ಯಾವುವು ಅಂತ ಈ ಸ್ಟೋರಿಲಿ ನೋಡೋಣ.

Read Full Story
07:30 PM (IST) Dec 07

Karnataka News Live 7 December 2025700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?

700 ಕೋಟಿ ಆಸ್ತಿಯ ಒಡತಿ, ಸೌತ್ ಜೊತೆಗೆ ಬಾಲಿವುಡ್, ಹಾಲಿವುಡ್‌ನಲ್ಲೂ ಫೇಮಸ್ ಆದ ನಟಿ, 40 ದಾಟಿದ್ರೂ ಇಮೇಜ್ ಕಮ್ಮಿಯಾಗದ ಸುಂದರಿ.. ತನಗಿಂತ 10 ವರ್ಷ ಚಿಕ್ಕವನನ್ನು ಮದುವೆಯಾದ ಈ ನಟಿ ಯಾರು ಗೊತ್ತಾ?

Read Full Story
07:25 PM (IST) Dec 07

Karnataka News Live 7 December 2025Bigg Boss - ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?

ಬಿಗ್ ಬಾಸ್ ಮನೆಯಲ್ಲಿ ಜನಪ್ರಿಯತೆ ಗಳಿಸಿರುವ ರಕ್ಷಿತಾ ಶೆಟ್ಟಿ, ಶೋ ಮುಗಿದ ನಂತರದ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಮದುವೆ ಹಾಗೂ ಮಕ್ಕಳನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಚಿಂತೆಯನ್ನೂ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?

Read Full Story
07:21 PM (IST) Dec 07

Karnataka News Live 7 December 2025ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?

ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಅಥವಾ ಸ್ಮಾರ್ಟ್‌ಫೋನ್ ಇಲ್ಲದೆಯೂ USSD ಆಧಾರಿತ (*99#) UPI ಪಾವತಿಗಳನ್ನು ಮಾಡಬಹುದು. ಈ ವೈಶಿಷ್ಟ್ಯವನ್ನು ಹೇಗೆ ಸಕ್ರಿಯಗೊಳಿಸುವುದು, ವಹಿವಾಟಿನ ಮಿತಿಗಳು ಮತ್ತು ಇಂಟರ್ನೆಟ್ ಇಲ್ಲದೆ ಹಣ ಕಳುಹಿಸುವ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ.

Read Full Story
07:06 PM (IST) Dec 07

Karnataka News Live 7 December 2025ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ - ಸಂಸದ ಜಗದೀಶ್ ಶೆಟ್ಟರ್

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಯಿದೆ. ಮೇಲ್ನೋಟಕ್ಕೆ ಬ್ರೇಕ್‌ಫಾಸ್ಟ್ ನಾಟಕ ಮಾಡುತ್ತಿದ್ದಾರೆ. ಅಧಿವೇಶನ ಬಂದಿದ್ದರಿಂದ ಹೋದಾಣಿಕೆ ತೋರಿಸುತ್ತಿದ್ದಾರೆ. ಆದರೆ, ಅವರ ಹಿಂಬಾಲಕರ ನಡುವೆ ಕುಸ್ತಿ ನಡೆದಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.

Read Full Story
06:56 PM (IST) Dec 07

Karnataka News Live 7 December 2025ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ

ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ, ಅರ್ಪೋರಾದಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ ಕನ್ನಡಿಗನೂ ಬಲಿಯಾಗಿದ್ದಾರೆ.

Read Full Story
06:52 PM (IST) Dec 07

Karnataka News Live 7 December 2025ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಡಿಸೆಂಬರ್ 25 ರಂದು ಚಿತ್ರ ತೆರೆಗೆ ಬರಲಿದೆ. ಪತ್ರಿಕಾಗೋಷ್ಠಿಯಲ್ಲಿ, 'ಸ್ತ್ರೀದೋಷ' ಇದೆಯೇ ಎಂಬ ಪ್ರಶ್ನೆಗೆ ಸುದೀಪ್ ತಮ್ಮ ಪತ್ನಿ ಪ್ರಿಯಾ ಸಮ್ಮುಖದಲ್ಲಿಯೇ ಉತ್ತರಿಸಿದ್ದಾರೆ. ಅವರು ಹೇಳಿದ್ದೇನು?

Read Full Story