ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ ನಡೆದಿದೆ. ಹಲವರ ಮೊಬೈಲ್‌ನಲ್ಲಿ ಗಲಾಟೆ ದೃಶ್ಯಗಳು ಸೆರೆಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
- Home
- News
- State
- Karnataka News Live: ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ
Karnataka News Live: ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ

ಬೆಂಗಳೂರು: ಈ ಹಿಂದೆ ನೀಡಿದ ದಿನಾಂಕಗಳ ಪ್ರಕಾರ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಬೇಕಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದ ಫಲಿತಾಂಶ ಏಪ್ರಿಲ್ 8 ಅಥವಾ ಏಪ್ರಿಲ್ 9ರ ನಂತರ ಪ್ರಕಟವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 9ರಂದು ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಕಾರಣದಿಂದಲೂ ಫಲಿತಾಂಶ ಪ್ರಕಟದ ದಿನಾಂಕ ಮುಂದೂಡಿಕೆಯಾಗಿರುವ ಬಗ್ಗೆ ಅನುಮಾನಗಳು ಮೂಡಿವೆ.
ಈ ಕುರಿತು ಶಿಕ್ಷಣ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
Karnataka News Live 6 April 2026ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ
Karnataka News Live 6 April 2026ಬೆಳಗಾವಿಯಲ್ಲಿ ದುರಂತ, ಟಿಪ್ಪರ್ ಡಿಕ್ಕಿಯಾಗಿ ತಂದೆ ಕಣ್ಣೆದುರೇ ನಾಲ್ಕು ವರ್ಷದ ಮಗು ಸಾವು
ಬೆಳಗಾವಿಯಲ್ಲಿ ದುರಂತ, ಟಿಪ್ಪರ್ ಡಿಕ್ಕಿಯಾಗಿ ತಂದೆ ಕಣ್ಣೆದುರೇ ನಾಲ್ಕು ವರ್ಷದ ಮಗು ಸಾವು, ತಂದೆ ಮಗ ಬೈಕ್‌ನಲ್ಲಿ ಹೋಗುವಾಗ ಈ ಅಪಘಾತ ಸಂಭವಿಸಿದೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
Karnataka News Live 6 April 2026ದಾವಣಗೆರೆ ಅಹಿಂದ ಅಭ್ಯರ್ಥಿಗೆ ಯಾಕೆ ಸೋಲಿಸಬೇಕಪ್ಪಾ? ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಡಿ ಎನ್ನುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಸಮಾಜದ ವ್ಯಕ್ತಿಯೇ ನಿಂತಿದ್ದರೂ ಯಾಕಪ್ಪಾ ಸೋಲಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
Karnataka News Live 6 April 2026ಮೋದಿ ಪೂರೈಸಿದ ಅಕ್ಕಿ ಜನರಿಗೆ ಕೊಟ್ಟಿದ್ದನ್ನು ಬಿಟ್ಟರೆ ಕಾಂಗ್ರೆಸ್ ಏನೂ ಕೊಟ್ಟಿಲ್ಲ - ಛಲವಾದಿ ನಾರಾಯಣಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ರಾಮಯ್ಯನಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ, ಎಲ್ಲದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
Karnataka News Live 6 April 2026Haircare Foods - ಈ 11 ಆಹಾರ ಅಷ್ಟೇ; ರಾಶಿ ರಾಶಿ ಕೂದಲು ಸೋಂಪಾಗಿ ಬೆಳೆಯುತ್ತೆ!
Food for hair growth: ಪ್ರೋಟೀನ್, ಕಬ್ಬಿಣ, ಒಮೆಗಾ-3 ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವು ಕೂದಲನ್ನು ಬಲಪಡಿಸುತ್ತದೆ, ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಆರೋಗ್ಯಕರ, ಹೊಳೆಯುವ ಕೂದಲಿಗಾಗಿ ಸಹಾಯ ಮಾಡುವ 11 ಆಹಾರಗಳ ಪಟ್ಟಿ.
Karnataka News Live 6 April 2026Paneer Side Effects - ಪ್ರೋಟೀನ್ ಅಂತ ಪನೀರ್ ತಿಂತೀರಾ? ಈ ಸಮಸ್ಯೆ ಇದ್ದವ್ರು ತಿಂದ್ರೆ ಅಷ್ಟೇ ಕಥೆ!
Paneer Consumption Guide: ಹಾಲಿನಿಂದ ತಯಾರಿಸುವ ಪನ್ನೀರ್ ಇಷ್ಟಪಡದವರು ತುಂಬಾ ಕಡಿಮೆ. ಮದುವೆ, ಪಾರ್ಟಿ ಅಥವಾ ಯಾವುದೇ ಶುಭ ಸಮಾರಂಭವಿರಲಿ, ಪನ್ನೀರ್ ಇರಲೇಬೇಕು. ಆದರೆ, ಈ ಪನ್ನೀರ್ ಎಲ್ಲರಿಗೂ ಒಳ್ಳೆಯದಲ್ಲ, ಕೆಲವರು ಇದನ್ನು ತಿನ್ನಲೇಬಾರದು. ಅದು ಯಾರೆಂದು ನಿಮಗೆ ಗೊತ್ತಾ?
Karnataka News Live 6 April 2026ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಜನರ ದಂಗೆ ಎದ್ದಿದ್ದೇಕೆ? - ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ಉಪ ಕ್ಷೇತ್ರಗಳ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಲೇಬೇಕೆಂಬ ರಣೋತ್ಸಾಹ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರಲ್ಲಿ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
Karnataka News Live 6 April 2026OTT Release This Week - ಒಟಿಟಿಯಲ್ಲಿ ತೆರೆಕಂಡ ಜನರನ್ನು ಕಾಡು ಸಿನಿಮಾಗಳು; ಸಿನಿಪ್ರೇಮಿಗಳಿಗೆ ಹಬ್ಬದೂಟ
OTT Movie Release This Week: ಏಪ್ರಿಲ್ 6 ರಿಂದ 12ರ ವರೆಗೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಹಲವು ಹೊಸ ಸಿನಿಮಾ ಹಾಗೂ ಸಿರೀಸ್‌ಗಳು ಬಿಡುಗಡೆಯಾಗಲಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್ ಆಗಲಿವೆ? ಅವುಗಳ ಸಂಪೂರ್ಣ ವಿವರ ಇಲ್ಲಿದೆ.
Karnataka News Live 6 April 2026ಆ್ಯಕ್ಟಿಂಗ್ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು - ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್ ಶೆಟ್ಟಿ ಮೆಲುಕು
ರಂಗಭೂಮಿ ಹಿನ್ನೆಲೆಯ ನಟ ಪ್ರಮೋದ್ ಶೆಟ್ಟಿ ಅವರು, ಸೀರಿಯಲ್ ಒಂದರ ಶೂಟಿಂಗ್ ವೇಳೆ ನಿರ್ದೇಶಕರಿಂದ 'ನಟನೆ ಬರುವುದಿಲ್ಲ' ಎಂದು ನೂರಾರು ಮಹಿಳೆಯರ ಮುಂದೆ ಅವಮಾನಕ್ಕೊಳಗಾಗಿದ್ದರು. ಪ್ರೇಯಸಿ ಸುಪ್ರೀತಾಳಿಗಾಗಿ ಗಟ್ಟಿ ಮನಸ್ಸು ಮಾಡಿ, ಅದೇ ನಿರ್ದೇಶಕರಿಂದ ಶಹಬ್ಬಾಸ್ ಗಿರಿ ಪಡೆದ ಅನುಭವ ಹಂಚಿಕೊಂಡಿದ್ದಾರೆ.
Karnataka News Live 6 April 2026ಡ್ರಗ್ಸ್ ಕೇಸ್ನಲ್ಲಿ ಹೆಸರು ಬಂದಾಗ ನಡೆದದ್ದೇನು? ಆ ಕರಾಳ ದಿನಗಳನ್ನು ನೆನೆದ Anchor Anushree
2020ರ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ತಮ್ಮ ಹೆಸರು ಕೇಳಿಬಂದಾಗ ಅನುಭವಿಸಿದ ನರಕಯಾತನೆಯ ಬಗ್ಗೆ ಆ್ಯಂಕರ್ ಅನುಶ್ರೀ ಮಾತನಾಡಿದ್ದಾರೆ. ಪೊಲೀಸರು ಕೇವಲ ವಿಚಾರಣೆಗೆ ಕರೆದಿದ್ದರೂ, ಮಾಧ್ಯಮಗಳು ತಮ್ಮನ್ನು ತಪ್ಪಿತಸ್ಥೆಯಂತೆ ಬಿಂಬಿಸಿ 'ಮಾನಸಿಕ ಅ*ತ್ಯಾಚಾರ' ನಡೆಸಿದವು ಎಂದು ನೋವು ಹಂಚಿಕೊಂಡಿದ್ದಾರೆ.
Karnataka News Live 6 April 2026ಬೆಂಗಳೂರಿನ DRDO ಸಂಸ್ಥೆಗೆ ಬಾಂಬ್ ಬೆದರಿಕೆ - ಉದಯನಿಧಿ ಸ್ಟಾಲಿನ್ ಪುತ್ರನ ಕಿಡ್ನ್ಯಾಪ್‌ಗೆ ಸಂಚು
ಬೆಂಗಳೂರಿನ ಪ್ರತಿಷ್ಠಿತ DRDO ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭದ್ರತಾ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಈ ಇಮೇಲ್‌ನಲ್ಲಿ ಸ್ಫೋಟಕಗಳನ್ನು ಇಟ್ಟಿರುವುದಾಗಿ ಹೇಳಿರುವುದಲ್ಲದೆ, ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪುತ್ರನ ಅಪಹರಣದ ಎಚ್ಚರಿಕೆಯನ್ನೂ ನೀಡಲಾಗಿದೆ.
Karnataka News Live 6 April 2026Photos - 33ನೇ ವಯಸ್ಸಿಗೆ ಎಂಗೇಜ್ ಆದ ಖ್ಯಾತ ನಟ; ಹುಡುಗಿ ಅಪ್ಪ ವಕೀಲ, ಅಜ್ಜ ನ್ಯಾಯಾಧೀಶ!
ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ಕಾವ್ಯಾ ರೆಡ್ಡಿ ಅವರ ನಿಶ್ಚಿತಾರ್ಥ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಇವರ ಮದುವೆ ದಿನಾಂಕವೂ ನಿಗದಿಯಾಗಿದೆ. ಈ ಕುರಿತ ವಿವರ ಇಲ್ಲಿದೆ. ಟಾಲಿವುಡ್ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
Karnataka News Live 6 April 2026ದೊಡ್ಡ ದೊಡ್ಡ ಅವಕಾಶವಿದ್ರೂ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಬೆಂಗಳೂರಿನ ನಟಿ, Lankesh Pathrike ನಾಯಕಿ, ಯಾಕೆ?
Vasundhara Das: ಬೆಂಗಳೂರಿನ ವಸುಂಧರಾ ದಾಸ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ವಸುಂಧರಾ ಅವರು ಬಾಲಿವುಡ್, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಸಂಚಲನ ಮೂಡಿಸಿದ್ದರು. ಕಮಲ್ ಹಾಸನ್ ಎದುರು ನಟಿಸಿ ಮಿಂಚಿದ್ದ ಇವರು ಹಠಾತ್ತನೆ ಚಿತ್ರರಂಗದಿಂದ ದೂರವಾದರು.
Karnataka News Live 6 April 2026ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಹೊಸ ಫುಡ್ ಪಾರ್ಕ್ ಭಾಗ್ಯ - ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಿಗಲಿದೆ ಬೂಸ್ಟ್!
ಕರ್ನಾಟಕದ ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ಹೊಸ ಫುಡ್ ಪಾರ್ಕ್‌ಗಳು ಶೀಘ್ರದಲ್ಲೇ ಸ್ಥಾಪನೆಯಾಗಲಿವೆ. ನಬಾರ್ಡ್ ನೆರವಿನೊಂದಿಗೆ, ಈ ಪಾರ್ಕ್‌ಗಳು ಸ್ಥಳೀಯ ಕೃಷಿ ಉತ್ಪನ್ನಗಳಾದ ಹಣ್ಣು, ತರಕಾರಿ, ಮತ್ತು ಹಾಲು ಸಂಸ್ಕರಣೆಗೆ ಆದ್ಯತೆ ನೀಡಲಿವೆ.
Karnataka News Live 6 April 2026ಬೇಸಿಗೆಯಲ್ಲಿ ಸ್ಪೆಷಲ್ ಬ್ಯುಸಿನೆಸ್ ಐಡಿಯಾ! ದಿನಕ್ಕೆ 3 ಗಂಟೆ ಕೆಲಸ ಮಾಡಿ, ತಿಂಗಳಿಗೆ ಲಕ್ಷ ಗಳಿಸಿ!
Karnataka News Live 6 April 2026ಕೆಲಸ ಹೋದ್ರೂ ಕೆಡದ ನೆಮ್ಮದಿ - ಬೆಂಗಳೂರಿನ ಒರಾಕಲ್ ಟೆಕ್ಕಿಯ 'ಓಲ್ಡ್ ಸ್ಕೂಲ್' ಸೇವಿಂಗ್ಸ್ ಪ್ಲ್ಯಾನ್ ಈಗ ವೈರಲ್!
ಬೆಂಗಳೂರಿನ ಒರಾಕಲ್ ಕಂಪನಿಯಿಂದ ಲೇ-ಆಫ್ ಆದ 14 ವರ್ಷಗಳ ಅನುಭವಿ ಉದ್ಯೋಗಿಯೊಬ್ಬರು, ಆತಂಕಪಡದೆ ತಮ್ಮ ಊರಿಗೆ ಮರಳಿದ್ದಾರೆ. ತಮ್ಮ ಉತ್ತಮ ಆರ್ಥಿಕ ಯೋಜನೆಯಿಂದಾಗಿ, ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್‌ಡಿಗಳಿಂದ ತಿಂಗಳಿಗೆ ₹43,000 ನಿಷ್ಕ್ರಿಯ ಆದಾಯ ಗಳಿಸುತ್ತಿದ್ದು, ಸಾಲಮುಕ್ತರಾಗಿ ಹೊಸ ಜೀವನ ಆರಂಭಿಸಿದ್ದಾರೆ.
Karnataka News Live 6 April 2026ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ
ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ, ಬೆಂಗಳೂರಲ್ಲಿ ಮನೆ ಹುಡಕುವುದು ಸುಲಭದ ಮಾತಲ್ಲ, ಇಷ್ಟೇ ಅಲ್ಲ ಬಜೆಟ್‌ಗೆ ಹೊಂದಿಕೊಳ್ಳುವ ಮನೆಯೂ ಸಿಗುವುದಿಲ್ಲ.
Karnataka News Live 6 April 2026ವಿಧಾನಸಭೆಯಲ್ಲಿ ಭಾರಿ ಭದ್ರತಾ ಲೋಪ - ಗೇಟ್ ಮುರಿದು ಒಳನುಗ್ಗಿದ ಕಾರು, ಸ್ಪೀಕರ್ ವಾಹನಕ್ಕೆ ಕಪ್ಪುಮಸಿ
Karnataka News Live 6 April 2026ತನಗಿಂತ 21 ವರ್ಷ ದೊಡ್ಡವನಾದ ಗಂಡನನ್ನು ಬಿಟ್ಟು ಲವರ್ ಜೊತೆ ಹೋಗ್ತಿನಿ ಎಂದ 19ರ ಯುವತಿ, ಒಕೆ ಎಂದ ಕೋರ್ಟ್
ಗ್ವಾಲಿಯರ್ ಹೈಕೋರ್ಟ್‌ನಲ್ಲಿ, 19 ವರ್ಷದ ಯುವತಿಯೊಬ್ಬಳು ತನ್ನ 40 ವರ್ಷದ ಪತಿಯನ್ನು ತೊರೆದು ಪ್ರಿಯತಮನೊಂದಿಗೆ ಬದುಕುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ. ವಯಸ್ಕರ 'ಜೀವನ ಸಂಗಾತಿಯ ಆಯ್ಕೆಯ ಹಕ್ಕನ್ನು' ಎತ್ತಿಹಿಡಿದ ನ್ಯಾಯಾಲಯವು, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.
Karnataka News Live 6 April 2026Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ
ನಟಿ ರಾಧಾ ಭಗವತಿ ಅವರ 'ನಾನು ಕರುಣಾಕರ' ಚಿತ್ರಕ್ಕೆ ಥಿಯೇಟರ್ಗಳ ಕೊರತೆ ಎದುರಾಗಿದೆ. ಈ ಬಗ್ಗೆ ಲೈವ್ನಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ಪರಭಾಷಾ ಚಿತ್ರಗಳಿಂದ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದ್ದಾರೆ