MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು

ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು

ರಂಗಭೂಮಿ ಹಿನ್ನೆಲೆಯ ನಟ ಪ್ರಮೋದ್ ಶೆಟ್ಟಿ ಅವರು, ಸೀರಿಯಲ್ ಒಂದರ ಶೂಟಿಂಗ್ ವೇಳೆ ನಿರ್ದೇಶಕರಿಂದ 'ನಟನೆ ಬರುವುದಿಲ್ಲ' ಎಂದು ನೂರಾರು ಮಹಿಳೆಯರ ಮುಂದೆ ಅವಮಾನಕ್ಕೊಳಗಾಗಿದ್ದರು.  ಪ್ರೇಯಸಿ ಸುಪ್ರೀತಾಳಿಗಾಗಿ ಗಟ್ಟಿ ಮನಸ್ಸು ಮಾಡಿ, ಅದೇ ನಿರ್ದೇಶಕರಿಂದ ಶಹಬ್ಬಾಸ್ ಗಿರಿ ಪಡೆದ ಅನುಭವ ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Apr 06 2026, 07:09 PM IST
Share this Photo Gallery
  • FB
  • TW
  • Linkdin
  • Whatsapp
16
ರಂಗಭೂಮಿ ಹಿನ್ನೆಲೆ
Image Credit : our own

ರಂಗಭೂಮಿ ಹಿನ್ನೆಲೆ

ಸ್ಯಾಂಡಲ್​ವುಡ್​ ನಟ ಪ್ರಮೋದ್​ ಶೆಟ್ಟಿ (Pramod Shetty) ಅವರ ನಟನೆಗೆ ಮನಸೋಲದವರು ಇಲ್ಲವೇ ಇಲ್ಲ. ರಂಗಭೂಮಿ ನಟನಾಗಿದ್ದ ಪ್ರಮೋದ್​ ಶೆಟ್ಟಿ ಅವರಿಗೆ ಅಲ್ಲಿದ್ದ ಗೌರವವೇ ಬೇರೆ. ಪ್ರಮೋದ್ ಶತವಿ, ಮಾತ್ರುಕ, ಸಾವು ಬಂತು ಸಾವು, ಮಾದರಿ ಮಾದಯ್ಯ ಮತ್ತು ಕಾಕನಕೋಟೆಯಂತಹ ಹಲವಾರು ನಾಟಕಗಳಲ್ಲಿ ನಟಿಸಿದರು , ಇದಕ್ಕಾಗಿ ಪ್ರಮೋದ್ ಕಾಕಾ ಪಾತ್ರಕ್ಕಾಗಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

26
ಸೂಪರ್ ಹಿಟ್​ ಸಿನಿಮಾ ಕೊಟ್ಟ ನಟ
Image Credit : Instagram

ಸೂಪರ್ ಹಿಟ್​ ಸಿನಿಮಾ ಕೊಟ್ಟ ನಟ

ಪ್ರಮೋದ್​ ಅವರು ಹಲವಾರು ಕನ್ನಡ ಸೀರಿಯಲ್​ನಲ್ಲಿ ನಟಿಸಿದ್ದು, 2010 ರಲ್ಲಿ ಜುಗಾರಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು. ಉಳಿಯವರು ಕಂಡಂತೆ (2014) ಮತ್ತು ಕಿರಿಕ್ ಪಾರ್ಟಿ (2016) ಚಿತ್ರಗಳಲ್ಲಿನ ಪಾತ್ರಗಳಿಗೆ ಅವರು ಮನ್ನಣೆ ಪಡೆದರು. ಆದರೆ ಇದೀಗ ನಟನೆ ಬರುವುದಿಲ್ಲ ಎಂದು ನಿರ್ದೇಶಕರೊಬ್ಬರು ಮಹಿಳೆಯರ ಎದುರು ಮಾಡಿರುವ ಅವಮಾನದ ಬಗ್ಗೆ ಮಾತನಾಡಿದ್ದಾರೆ ನಟ.

Related Articles

Related image1
Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ
Related image2
ಡ್ರಗ್ಸ್​ ಕೇಸ್​ನಲ್ಲಿ ಹೆಸರು ಬಂದಾಗ ನಡೆದದ್ದೇನು? ಆ ಕರಾಳ ದಿನಗಳನ್ನು ನೆನೆದ Anchor Anushree
36
ಸೀರಿಯಲ್​ನಲ್ಲಿ ಮಾಡು ಅಂದಳು
Image Credit : Social Media

ಸೀರಿಯಲ್​ನಲ್ಲಿ ಮಾಡು ಅಂದಳು

ದೂರದರ್ಶನ ಚಂದನ ವಾಹಿನಿಯಲ್ಲಿ, ಅತಿಥಿಯಾಗಿ ಹೋಗಿದ್ದ ಪ್ರಮೋದ್​ ಶೆಟ್ಟಿ ಅವರು ತಮ್ಮ ಬದುಕಿನ ಹಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ರಂಗಭೂಮಿ ನಟನಾಗಿದ್ದ ವೇಳೆಯೇ ಅವರು, ಸುಪ್ರೀತಾ ಶೆಟ್ಟಿ ಅವರನ್ನು ಲವ್​ ಮಾಡಿದರು. ಆದರೆ ರಂಗಭೂಮಿ ಕಲಾವಿದನಿಗೆ ಆದಾಯ ಇರುವುದಿಲ್ಲವಲ್ಲ. ಅದಕ್ಕಾಗಿಯೇ ಸುಪ್ರೀತಾ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎನ್ನುವ ಕಾರಣಕ್ಕೆ ಕೊನೇ ಪಕ್ಷ ಸೀರಿಯಲ್​ನಲ್ಲಿ ಆದರೂ ಆ್ಯಕ್ಟ್​ ಮಾಡು, ನಾನು ಏನೋ ಒಂದು ಮನೆಯಲ್ಲಿ ಹೇಳಬಹುದು ಎಂದು ಸುಪ್ರೀತಾ ಹೇಳಿದ್ದರಂತೆ.

46
ಡೈಲಾಗ್​ ಹೇಳಲು ಬರಲಿಲ್ಲ
Image Credit : our own

ಡೈಲಾಗ್​ ಹೇಳಲು ಬರಲಿಲ್ಲ

ಇದೇ ಕಾರಣಕ್ಕೆ ಸೀರಿಯಲ್​ ಒಂದರ ನಿರ್ದೇಶಕರನ್ನು ಭೇಟಿಯಾಗಿದ್ದರು ಪ್ರಮೋದ್​, ಅಲ್ಲಿ ಡೈಲಾಗ್​ಗಳನ್ನೆಲ್ಲಾ ಹೇಳಿಸಿ ಸೆಲೆಕ್ಟ್​ ಮಾಡಲಾಗಿತ್ತು. ಆರಂಭದಲ್ಲಿಯೇ ಗಾರ್ಮೆಂಟ್ಸ್​ನಲ್ಲಿ ಶೂಟಿಂಗ್​. ಅಲ್ಲಿರುವ ಒಬ್ಬಾಕೆಯನ್ನು ಪ್ರಪೋಸ್​ ಮಾಡುವ ಸೀನ್​ ಅದಾಗಿತ್ತು. ಅಲ್ಲಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುವ ನೂರಾರು ಮಂದಿ ಇದ್ದರು. ಆ್ಯಕ್ಷನ್​ ಹೇಳಿದಾಗ ಪ್ರಮೋದ್​ ಅವರು ಪ್ರಪೋಸ್​ ಮಾಡಲು ಹೇಳಿಕೊಟ್ಟ ಡೈಲಾಗ್​ ಹೇಳಿದರಂತೆ. ಆದರೆ ಇದು ನಾಟಕದ ಸ್ಟೈಲ್ ಎನ್ನುವ ಕಾರಣಕ್ಕೆ ನಿರ್ದೇಶಕರು ಸಿಕ್ಕಾಪಟ್ಟೆ ಅವಮಾನ ಮಾಡಿದರು ಎಂದು ಪ್ರಮೋದ್​ ಹೇಳಿದ್ದಾರೆ.

56
ಕಳಿಸಿ ಆಚೆ ಅಂದರು
Image Credit : Instagram

ಕಳಿಸಿ ಆಚೆ ಅಂದರು

ಯಾರ್ಯಾರನ್ನೋ ನಾಟಕದವರನ್ನು ಕರ್ಕೊಂಡು ಬರ್ತಾರೆ. ಕಳಿಸಿ ಅವನನ್ನು ಆಚೆ ಎಂದುಬಿಟ್ಟರು. ಅಳು ತಡೆದುಕೊಳ್ಳಲು ಆಗಲಿಲ್ಲ. ಅಲ್ಲಿ ಎಲ್ಲ ಹೆಂಗಸರ ಎದುರು ಮರ್ಯಾದೆ ಹೋಗಿದ್ದು ಬೇರೆ, ಅವರ ಮುಂದೆ ಅಳಲು ಆಗುತ್ತಿರಲಿಲ್ಲ. ಕೊನೆಗೆ ವಾಷ್​ರೂಮ್​ಗೆ ಹೋಗಿ ಸಿಕ್ಕಾಪಟ್ಟೆ ಅತ್ತುಬಿಟ್ಟೆ. ನಿನಗೆ ಇದೆಲ್ಲಾ ಅಲ್ಲ, ವಾಪಸ್​ ಹೋಗು ಎಂದು ನನ್ನ ಮನಸ್ಸು ಹೇಳಿತು ಎಂದು ಅಂದು ನಡೆದ ಘಟನೆ ನೆನಪಿಸಿಕೊಂಡಿದ್ದಾರೆ ಶೆಟ್ರು.

66
ಕಣ್ಣೆದುರು ಸುಪ್ರೀತಾ ಬಂದಳು
Image Credit : Instagram

ಕಣ್ಣೆದುರು ಸುಪ್ರೀತಾ ಬಂದಳು

ಕೊನೆಗೆ, ಕಣ್ಣೆದುರು ಸುಪ್ರೀತಾ ಬಂದಳು. ಮದುವೆಯಾಗಬೇಕಿತ್ತಲ್ಲ, ಆದ್ದರಿಂದ ಇದನ್ನು ಸಹಿಸಿಕೊಳ್ಳಬೇಕಿತ್ತು. ಗಟ್ಟಿ ಮನಸ್ಸು ಮಾಡಿದೆ. ಯಾಕೆ ಆ್ಯಕ್ಟಿಂಗ್​ ಬರಲ್ಲ, ಬಂದೇ ಬರುತ್ತದೆ ಎಂದು ಹೇಳಿ ಅದೇ ಧೈರ್ಯದಿಂದ ಹೋಗಿ ಕೆಲವು ಟೇಕ್​ಗಳನ್ನು ಪಡೆದು ನಿರ್ದೇಶಕರೂ ಬೆರಗಾಗುವ ಹಾಗೆ ಆ್ಯಕ್ಟಿಂಗ್​ ಮಾಡಿದೆ. ಕೊನೆಗೆ ನಿರ್ದೇಶಕರಿಗೆ ಖುಷಿಯಾಯಿತು. ಭೇಷ್​ ಎಂದರು. ಅವರ ಬಾಯಿಯಿಂದ ಅಷ್ಟು ಕೇಳುತ್ತಲೇ ಆ ಸೀರಿಯಲ್​ಗೆ ಗುಡ್​ಬೈ ಹೇಳಿ ಬಂದೆ ಎಂದಿದ್ದಾರೆ ಪ್ರಮೋದ್​ ಶೆಟ್ಟಿ. ಅಂದಹಾಗೆ ಸುಪ್ರೀತಾ ಜೊತೆ 2010ರಲ್ಲಿ ಪ್ರಮೋದ್​ ಅವರ ಮದುವೆಯಾಗಿದ್ದು, ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಟಿವಿ ಶೋ
ಸ್ಯಾಂಡಲ್ವುಡ್ ಫಿಲ್ಮ್
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಉದ್ದೇಶವೇ ಮುಗಿದ ಮೇಲೆ ಇನ್ನೇನಕ್ಕೆ ಹೊರಗೆ ಹೋಗಬೇಕು; ಜಾಮೀನು ಅರ್ಜಿಯನ್ನೇ ಹಿಂಪಡೆದ ನಟಿ ಪವಿತ್ರಾ ಗೌಡ!
Recommended image2
ಮದುವೆಯಾದ 4 ವರ್ಷದ ಬಳಿಕ ಪ್ರೆಗ್ನೆಂಟ್‌ ಆದ ಲವ್ಲಿ ಸ್ಟಾರ್‌ ಪ್ರೇಮ್‌ ಹೀರೋಯಿನ್‌!
Recommended image3
ಡ್ರಗ್ಸ್​ ಕೇಸ್​ನಲ್ಲಿ ಹೆಸರು ಬಂದಾಗ ನಡೆದದ್ದೇನು? ಆ ಕರಾಳ ದಿನಗಳನ್ನು ನೆನೆದ Anchor Anushree
Related Stories
Recommended image1
Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ
Recommended image2
ಡ್ರಗ್ಸ್​ ಕೇಸ್​ನಲ್ಲಿ ಹೆಸರು ಬಂದಾಗ ನಡೆದದ್ದೇನು? ಆ ಕರಾಳ ದಿನಗಳನ್ನು ನೆನೆದ Anchor Anushree
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved