ಬೇಸಿಗೆಯಲ್ಲಿ ಸ್ಪೆಷಲ್ ಬ್ಯುಸಿನೆಸ್ ಐಡಿಯಾ! ದಿನಕ್ಕೆ 3 ಗಂಟೆ ಕೆಲಸ ಮಾಡಿ, ತಿಂಗಳಿಗೆ ಲಕ್ಷ ಗಳಿಸಿ!
ಬೇಸಿಗೆ ಕಾಲದಲ್ಲಿ ಐಸ್ ಕ್ರೀಮ್ ಪಾರ್ಲರ್‌ಗಳಿಗಿಂತ ಮೊಬೈಲ್ ಐಸ್ ಕ್ರೀಮ್ ಟ್ರಕ್‌ಗಳು ಹೆಚ್ಚು ಲಾಭ ತರುತ್ತವೆ. ಸೆಕೆಂಡ್ ಹ್ಯಾಂಡ್ ವಾಹನ, ಫ್ರೀಜರ್‌ಗಳು, ಬ್ರ್ಯಾಂಡಿಂಗ್ ಮತ್ತು ಸ್ಟಾಕ್ ಸೇರಿ ಸುಮಾರು 10 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಈ ಬ್ಯುಸಿನೆಸ್ ಶುರು ಮಾಡಬಹುದು.
15

Image Credit : Money\Twitter
ಸಮ್ಮರ್ ಸ್ಪೆಷಲ್ ಬಿಸಿನೆಸ್ ಐಡಿಯಾ
ಬೇಸಿಗೆ ಕಾಲ ಬಂತೆಂದರೆ ಸಾಕು, ತಂಪು ತಂಪಾದ ಐಸ್ ಕ್ರೀಮ್, ಕೂಲ್ ಡ್ರಿಂಕ್ಸ್‌ಗಾಗಿ ಎಲ್ಲರೂ ಕಾಯುತ್ತಿರುತ್ತಾರೆ. ಈ ಬೇಡಿಕೆಯನ್ನೇ ಬ್ಯುಸಿನೆಸ್ ಆಗಿ ಪರಿವರ್ತಿಸಲು 'ಐಸ್ ಕ್ರೀಮ್ ಟ್ರಕ್' ಒಂದು ಹೊಸ ಮತ್ತು ಲಾಭದಾಯಕ ಮಾರ್ಗ. ಐಸ್ ಕ್ರೀಮ್ ಪಾರ್ಲರ್ ಒಂದೇ ಕಡೆ ಇರಬೇಕು, ಆದರೆ ಟ್ರಕ್ ಮೂಲಕ ಗ್ರಾಹಕರ ಬಳಿಯೇ ಹೋಗಬಹುದು.
25
Image Credit : Pinterest
ಕೇವಲ 10 ಲಕ್ಷ ರುಪಾಯಿ ಬಂಡವಾಳ ಸಾಕು
ಈ ಬ್ಯುಸಿನೆಸ್ ಶುರು ಮಾಡಲು ಸುಮಾರು 10 ಲಕ್ಷ ರೂಪಾಯಿ ಹೂಡಿಕೆ ಬೇಕಾಗುತ್ತದೆ. ಇದರಲ್ಲಿ ಸೆಕೆಂಡ್ ಹ್ಯಾಂಡ್ ಟ್ರಕ್‌ಗೆ 2-5 ಲಕ್ಷ, ಫ್ರೀಜರ್‌ಗಳು ಮತ್ತು ವಾಹನದ ವಿನ್ಯಾಸಕ್ಕೆ ಸ್ವಲ್ಪ ಹಣ, ಉಳಿದ ಮೊತ್ತವನ್ನು ಸ್ಟಾಕ್ ಮತ್ತು ಲೈಸೆನ್ಸ್‌ಗಳಿಗಾಗಿ ಬಳಸಬಹುದು. ಸೈಕಲ್ ಮೇಲೆ ಮಾರುವ ಐಸ್ ಕ್ರೀಮ್ ಒಂದೇ ಬ್ರ್ಯಾಂಡ್‌ಗೆ ಸೀಮಿತವಾಗಿರುತ್ತದೆ. ಆದರೆ, ಟ್ರಕ್ ಮೂಲಕ 15-20 ಬಗೆಯ ಬ್ರ್ಯಾಂಡ್‌ಗಳು ಮತ್ತು ವಿವಿಧ ಫ್ಲೇವರ್‌ಗಳನ್ನು ಗ್ರಾಹಕರಿಗೆ ನೀಡಬಹುದು.
35
Image Credit : Getty
25-30% ಲಾಭ
ಐಸ್ ಕ್ರೀಮ್ ಬ್ಯುಸಿನೆಸ್‌ನಲ್ಲಿ ಲಾಭಾಂಶವು ಬ್ರ್ಯಾಂಡ್ ಅನ್ನು ಅವಲಂಬಿಸಿರುತ್ತದೆ. ದೊಡ್ಡ ಕಾರ್ಪೊರೇಟ್ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡಿದರೆ ಶೇ. 10ರಿಂದ 15ರಷ್ಟು ಲಾಭ ಸಿಗುತ್ತದೆ. ಅದೇ ಹೊಸ ಅಥವಾ ಸ್ಥಳೀಯ ಗುಣಮಟ್ಟದ ಬ್ರ್ಯಾಂಡ್‌ಗಳಾದರೆ ಶೇ. 25ರಿಂದ 30ರಷ್ಟು ಲಾಭ ಗಳಿಸಬಹುದು. ದಿನಕ್ಕೆ ಒಂದು ಲಕ್ಷ ರೂಪಾಯಿ ಮಾರಾಟವಾದರೆ, ಅದರಲ್ಲಿ ಸುಮಾರು 25 ಸಾವಿರ ರೂಪಾಯಿವರೆಗೆ ನಿವ್ವಳ ಲಾಭ ಗಳಿಸುವ ಸಾಧ್ಯತೆ ಇದೆ.
45
Image Credit : Money\Twitter
ಐಸ್ ಕ್ರೀಮ್ ವರ್ಷಪೂರ್ತಿ ನಡೆಯುವ ಬಿಸಿನೆಸ್
ಐಸ್ ಕ್ರೀಮ್ ಅಂದರೆ ಕೇವಲ ಬೇಸಿಗೆಯಲ್ಲಿ ತಿನ್ನುವುದು ಎಂಬ ಭಾವನೆ ಈಗ ಬದಲಾಗಿದೆ. ಜನರು ವರ್ಷಪೂರ್ತಿ ಇದನ್ನು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಮಾರಾಟ ಜೋರಾಗಿದ್ದರೆ, ಉಳಿದ ಸಮಯದಲ್ಲಿ ಸ್ವಲ್ಪ ಕಡಿಮೆ ಇರಬಹುದು, ಆದರೆ ವ್ಯಾಪಾರ ನಿಲ್ಲುವುದಿಲ್ಲ.
55
Image Credit : Money\Twitter
ಕಡಿಮೆ ರಿಸ್ಕ್ ಇರುವ ಈ ಐಸ್ ಕ್ರೀಮ್ ಟ್ರಕ್
ಅಷ್ಟೇ ಅಲ್ಲದೆ, ಸೀಸನ್‌ಗೆ ತಕ್ಕಂತೆ ಟ್ರಕ್‌ನಲ್ಲಿ ಇತರ ಆಹಾರ ಪದಾರ್ಥಗಳನ್ನು ಕೂಡ ಮಾರಾಟ ಮಾಡಬಹುದು. ಹೊಸದಾಗಿ ಬ್ಯುಸಿನೆಸ್ ಮಾಡಲು ಬಯಸುವ ಯುವಕರಿಗೆ, ಕಡಿಮೆ ರಿಸ್ಕ್ ಇರುವ ಈ ಐಸ್ ಕ್ರೀಮ್ ಟ್ರಕ್ ಐಡಿಯಾ ತುಂಬಾ ಉಪಯುಕ್ತವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.
Latest Videos

