- Home
- Life
- Health
- Paneer Side Effects: ಪ್ರೋಟೀನ್ ಅಂತ ಪನೀರ್ ತಿಂತೀರಾ? ಈ ಸಮಸ್ಯೆ ಇದ್ದವ್ರು ತಿಂದ್ರೆ ಅಷ್ಟೇ ಕಥೆ!
Paneer Side Effects: ಪ್ರೋಟೀನ್ ಅಂತ ಪನೀರ್ ತಿಂತೀರಾ? ಈ ಸಮಸ್ಯೆ ಇದ್ದವ್ರು ತಿಂದ್ರೆ ಅಷ್ಟೇ ಕಥೆ!
Paneer Consumption Guide: ಹಾಲಿನಿಂದ ತಯಾರಿಸುವ ಪನ್ನೀರ್ ಇಷ್ಟಪಡದವರು ತುಂಬಾ ಕಡಿಮೆ. ಮದುವೆ, ಪಾರ್ಟಿ ಅಥವಾ ಯಾವುದೇ ಶುಭ ಸಮಾರಂಭವಿರಲಿ, ಪನ್ನೀರ್ ಇರಲೇಬೇಕು. ಆದರೆ, ಈ ಪನ್ನೀರ್ ಎಲ್ಲರಿಗೂ ಒಳ್ಳೆಯದಲ್ಲ, ಕೆಲವರು ಇದನ್ನು ತಿನ್ನಲೇಬಾರದು. ಅದು ಯಾರೆಂದು ನಿಮಗೆ ಗೊತ್ತಾ?

ಪನೀರ್‌ನಿಂದ ಆಗುವ ಪ್ರಯೋಜನಗಳು ಯಾವುವು?
ಪನೀರ್ ತುಂಬಾ ರುಚಿಕರ. ಬರೀ ರುಚಿ ಮಾತ್ರವಲ್ಲ, ಇದರಲ್ಲಿ ಪೋಷಕಾಂಶಗಳು ಕೂಡಾ ಸಮೃದ್ಧವಾಗಿವೆ. ಪನೀರ್‌ನಲ್ಲಿರುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ದೇಹವನ್ನು ಬಲಪಡಿಸಿ, ಮೂಳೆ ಮತ್ತು ಸ್ನಾಯುಗಳನ್ನು ಆರೋಗ್ಯವಾಗಿಡುತ್ತದೆ. ಇದೇ ಕಾರಣಕ್ಕೆ ಸಸ್ಯಾಹಾರಿಗಳಿಗೆ ಇದೊಂದು ಉತ್ತಮ ಆರೋಗ್ಯಕರ ಆಯ್ಕೆ.
ಇದರಲ್ಲಿರುವ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಮಕ್ಕಳ ಬೆಳವಣಿಗೆ, ಸ್ನಾಯುಗಳ ಅಭಿವೃದ್ಧಿ ಮತ್ತು ಮೂಳೆಗಳ ಬಲಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಇಳಿಸಬೇಕೆನ್ನುವವರು ಮತ್ತು ಪ್ರೋಟೀನ್‌ಗಾಗಿ ಪನೀರ್ ಸೇವಿಸುತ್ತಾರೆ. ಗರ್ಭಿಣಿಯರಿಗೂ ತಾಜಾ ಪನೀರ್ ತುಂಬಾ ಒಳ್ಳೆಯದು. ಆದರೆ ಇಷ್ಟೆಲ್ಲ ಪ್ರಯೋಜನಗಳಿದ್ದರೂ, ಕೆಲವರು ಇದನ್ನು ತಿನ್ನಬಾರದು. ಅವರು ಯಾರೆಂದು ನೋಡೋಣ.
ಈ ಆರೋಗ್ಯ ಸಮಸ್ಯೆ ಇದ್ದರೆ ಪನೀರ್ ಬೇಡ
ಪನೀರ್ ಆರೋಗ್ಯಕ್ಕೆ ಒಳ್ಳೆಯದಾದರೂ, ಎಲ್ಲರಿಗೂ ಇದು ಸಂಪೂರ್ಣವಾಗಿ ಸುರಕ್ಷಿತವಲ್ಲ. ಇದರಲ್ಲಿ ಕೊಬ್ಬಿನಾಂಶ ಹೆಚ್ಚಿರುವುದರಿಂದ, ಹೆಚ್ಚು ಸೇವಿಸಿದರೆ ಹೃದಯದ ಸಮಸ್ಯೆ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಹಾಲು ಅಥವಾ ಹಾಲಿನ ಉತ್ಪನ್ನಗಳಿಗೆ ಅಲರ್ಜಿ ಇರುವವರು ಪನ್ನೀರ್ ತಿನ್ನಬಾರದು.
ಎಷ್ಟು ಸೇವನೆ ಮಾಡಬೇಕು?
ಪನೀರ್‌ನ್ನು ಯಾವಾಗಲೂ ಮಿತವಾಗಿ ಸೇವಿಸಬೇಕು. ದಿನಕ್ಕೆ 50 ರಿಂದ 100 ಗ್ರಾಂ ಪನ್ನೀರ್ ತಿಂದರೆ ಸಾಕು. ಹಾಗೆಯೇ, ತಾಜಾ ಮತ್ತು ಗುಣಮಟ್ಟದ ಪನ್ನೀರ್ ಅನ್ನು ಮಾತ್ರ ತಿನ್ನಬೇಕು. ರಾತ್ರಿ ಹೊತ್ತು ಇದನ್ನು ತಿನ್ನದಿರುವುದು ಒಳ್ಳೆಯದು, ಯಾಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ಅಸಿಡಿಟಿಯನ್ನು ಹೆಚ್ಚಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

