- Home
- Life
- Relationship
- ಕಾಫಿನಾಡಲ್ಲಿ ಅರಳಿದ ಅಪರೂಪದ ಪ್ರೇಮ ಕಾವ್ಯ: ಜಾತಿ ಸಂಕೋಲೆ ಮೀರಿ ದಲಿತ ಹುಡುಗಿ ಕೈ ಹಿಡಿದ ಬ್ರಾಹ್ಮಣ ಸಮುದಾಯದ ಯುವಕ
ಕಾಫಿನಾಡಲ್ಲಿ ಅರಳಿದ ಅಪರೂಪದ ಪ್ರೇಮ ಕಾವ್ಯ: ಜಾತಿ ಸಂಕೋಲೆ ಮೀರಿ ದಲಿತ ಹುಡುಗಿ ಕೈ ಹಿಡಿದ ಬ್ರಾಹ್ಮಣ ಸಮುದಾಯದ ಯುವಕ
ಚಿಕ್ಕಮಗಳೂರಿನಲ್ಲಿ, ಬ್ರಾಹ್ಮಣ ಸಮುದಾಯದ ಯುವಕ ಸಚಿನ್ ಮತ್ತು ಪರಿಶಿಷ್ಟ ಸಮುದಾಯದ ಯುವತಿ ಸಾವಿತ್ರಿ ಜಾತಿ ಸಂಕೋಲೆ ಮೀರಿ ಪ್ರೀತಿಸಿ ವಿವಾಹವಾಗಿದ್ದಾರೆ. ಬೌದ್ಧ ಸಂಘಟನೆಯು ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಚಿಕ್ಕಮಗಳೂರಿನಲ್ಲಿ ಅಪರೂಪದ ಮದುವೆ
ಚಿಕ್ಕಮಗಳೂರು :ಕಾಫಿನಾಡಲ್ಲೊಂದು ಅಪರೂಪದ ಮದುವೆ ನಡೆದಿದೆ. ಜಾತಿ ಸಂಕೋಲೆ ಮೀರಿ ಬ್ರಾಹ್ಮಣ ಸಮುದಾಯದ ಯುವಕನೋರ್ವ ಪರಿಶಿಷ್ಟ ಸಮುದಾಯದ ಯುವತಿಯ ಕೈ ಹಿಡಿದಿದ್ದಾರೆ. ಬೌದ್ಧ ಸಂಘಟನೆ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ಈ ಮದುವೆ ನಡೆದಿದ್ದು, ನವಜೋಡಿಗೆ ಜನ ಶುಭಹಾರೈಸಿದ್ದಾರೆ.
ದಲಿತ ಯುವತಿ ಸಾವಿತ್ರಿಯ ಪ್ರೀತಿಸಿ ಮದುವೆಯಾದ ಸಚಿನ್
ಸಾಮಾನ್ಯವಾಗಿ ಯುವಕರು ಪ್ರೀತಿಸುವ ವೇಳೆ ಜಾತಿ ಧರ್ಮ ನೋಡುವುದಿಲ್ಲ, ಆದರೆ ಮದುವೆ ವಿಚಾರ ಬಂದಾಗ ಜಾತಿಯ ನೆಪ ಹೇಳಿ ಅನೇಕರು ದೂರಾಗುತ್ತಾರೆ. ಅಥವಾ ಆಸ್ತಿ ಅಂತಸ್ತಿ ಅಂತರದ ಕಾರಣ್ಕೆ ಅಥವಾ ಅಪ್ಪ ಅಮ್ಮ ಸಂಬಂಧಿಕರು ಒಪ್ಪುವುದಿಲ್ಲ ಎಂದು ನೆಪ ಹೇಳಿ ದೂರಾಗುತ್ತಾರೆ. ಆದರೆ ಇಲ್ಲಿ ಸಚಿನ್ ಅವರು ಪ್ರೀತಿಸಿದ ಹುಡುಗಿಯ ಜಾತಿ ನೋಡದೇ ಕೈ ಹಿಡಿದಿದ್ದಾರೆ.
ಪ್ರೀತಿ ಶುರುವಾಗಿದ್ದು ಹೇಗೆ?
ಸಾವಿತ್ರಿಯವರು ಎಟಿಎಂನಿಂದ ಹಣ ತೆಗೆಯುವುದಕ್ಕೆ ಹೋದಾಗ ಅವರಿಗೆ ಸಚಿನ್ ಪರಿಚಯವಾಗಿದ್ದಾರೆ. ಸಚಿನ್ ಕೂಡ ಎಟಿಎಂಗೆ ಹಣ ತೆಗೆದುಕೊಳ್ಳುವುದಕ್ಕೆ ಬಂದಿದ್ದರು. ಎಟಿಎಂನಲ್ಲಿ ಹಣ ಬಿಡಿಸುವುದಕ್ಕೆ ಸಾವಿತ್ರಿ ಕಷ್ಟಪಡುವುತ್ತಿರುವುದನ್ನು ನೋಡಿದ ಸಚಿನ್ ಅವರು ಅವರಿಗೆ ಎಟಿಎಂನಿಂದ ಹಣ ತೆಗೆದುಕೊಡುವುದಕ್ಕೆ ನೆರವಾಗಿದ್ದು, ಈ ಕ್ಷಣದಲ್ಲೇ ಇಬ್ಬರಿಗೆ ಪ್ರೀತಿಯಾಗಿದೆ.
ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ ಹಲವು ಜೋಡಿಗಳು
ನಂತರ ಇದೇ ಸಮಯದಲ್ಲಿ ಇಬ್ಬರ ನಡುವೆ ದೂರವಾಣಿ ಸಂಖ್ಯೆ ಎಕ್ಸ್‌ಚೇಂಚ್ ಆಗಿದೆ. ಮಾತನಾಡುತ್ತಾ ಆಡುತ್ತಾ ಮತ್ತಷ್ಟು ಹತ್ತಿರವಾಗಿದ್ದು, ಮದುವೆಯಾಗುವುದಕ್ಕೆ ನಿರ್ಧರಿಸಿದ್ದಾರೆ. ಎರಡು ಮನೆಯವರನ್ನು ಈ ಜೋಡಿ ಒಪ್ಪಿಸಿ ಸಾಮೂಹಿಕ ಮದುವೆಯಲ್ಲಿ ವಿವಾಹವಾಗಿದ್ದು ವಿಶೇಷವಾಗಿದೆ. ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ಈ ವಿಶೇಷ ಮದುವೆ ನಡೆದಿದೆ. ಬೌದ್ಧ ಸಂಘಟನೆ ಆಯೋಜಿಸಿದ್ದ ಈ ಸಾಮೂಹಿಕ ವಿವಾಹದಲ್ಲಿ ಇನ್ನೂ ಅನೇಕ ಜೋಡಿಗಳು ಹಸೆಮಣೆ ಏರಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

