11:20 PM (IST) Apr 04

Karnataka News Live 4 April 2026ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ ಆರೋಪ, ಕೇಸರಿ ಶಾಲು ಹಾಕಿ ಕೃತ್ಯ

ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ, ಕೇಸರಿ ಶಾಲು ಹಾಕಿ ಕೃತ್ಯ, ಸಂಘಟಕ ವಶಕ್ಕೆ ಪಡೆಯಲಾಗಿದೆ. ಬಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದೀಗ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

Read Full Story
11:19 PM (IST) Apr 04

Karnataka News Live 4 April 2026ಹೀಗೆ ಮಾಡಿದ್ರೆ ಹಸಿ ತೆಂಗಿನಕಾಯಿ ತುರಿ 6 ತಿಂಗಳಾದ್ರೂ ಹಾಳಾಗಲ್ಲ; ಎಷ್ಟೋ ಜನರಿಗೆ ಗೊತ್ತಿಲ್ಲದ ಸೀಕ್ರೇಟ್!

How to keep fresh coconut from spoiling: ಇಂದು ಗಡಿಬಿಡಿಯ ಜೀವನದಲ್ಲಿದ್ದೇವೆ, ತೆಂಗಿನಕಾಯಿ ತುರಿಯನ್ನು ಹೇಗೆ ಜಾಸ್ತಿ ದಿನ ಇಡಬಹುದು? ಹಾಳಾಗದಂತೆ ಹೇಗೆ ತಡೆಯಬಹುದು ಎಂದು ಅನೇಕರಿಗೆ ಸಂದೇಹ ಇರುತ್ತದೆ. ಇದಕ್ಕೆ ಉತ್ತಮವಾದ ಪರಿಹಾರ ಇಲ್ಲಿದೆ, ಈ ವಿಧಾನಗಳನ್ನು ಅನುಸರಿಸಿ. 

Read Full Story
10:50 PM (IST) Apr 04

Karnataka News Live 4 April 2026LPG Cylinder Price - ಎಲ್‌ಪಿಜಿ ಬಳಕೆದಾರರಿಗೆ ನೆಮ್ಮದಿಯ ಸುದ್ದಿ; ಸಿಗ್ತಿದೆ ಭರ್ಜರಿ ರಿಯಾಯಿತಿ!

LPG: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಭಾರತ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ದೇಶದ ಕೋಟ್ಯಂತರ ಬಡ ಕುಟುಂಬಗಳ, ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಇದು ಮಹತ್ವದ ಬದಲಾವಣೆ ತಂದಿದೆ. ಹೊಗೆ-ಮುಕ್ತ ಅಡುಗೆಮನೆ ಒದಗಿಸುವುದು, ಶುದ್ಧ ಇಂಧನವಾದ ಎಲ್‌ಪಿಜಿಗೆ ಸಂಪರ್ಕ ಕಲ್ಪಿಸುವುದಾಗಿದೆ. 

Read Full Story
10:37 PM (IST) Apr 04

Karnataka News Live 4 April 2026ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ

ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ ಮಾಡಲಾಗಿದೆ. ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪ್ರಾರ್ಥಿಸಿದ್ದಾರೆ. 

Read Full Story
09:45 PM (IST) Apr 04

Karnataka News Live 4 April 2026ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್

ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಪಂದ್ಯಕ್ಕೆ ಆಗಮಿಸುವ ಹಾಗೂ ಪಂದ್ಯ ಮುಗಿದ ಬಳಿಕ ಮನೆಗೆ ತೆರಳುವ ಅಭಿಮಾನಿಳಿಗೆ BMTC ಕೊಡುಗೆ ಏನು?

Read Full Story
09:03 PM (IST) Apr 04

Karnataka News Live 4 April 2026ಜಾಮೀನು ಕೊಡಲು ಹಣಕ್ಕೆ ಬೇಡಿಕೆ ಇಟ್ಟ ಇಬ್ಬರು ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ

ಜಾಮೀನು ಕೊಡಲು ಹಣಕ್ಕೆ ಬೇಡಿಕೆ ಇಟ್ಟ ಇಬ್ಬರು ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ, ಅಟ್ರಾಸಿಟಿ ಪ್ರಕರಣದಲ್ಲಿ ಜಾಮೀನು ಕೊಡಿಸಲು ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ

Read Full Story
08:46 PM (IST) Apr 04

Karnataka News Live 4 April 2026Bhagyalakshmi Serial - ಮನೆಹಾಳ ತಾಂಡವ್‌ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way

Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಮಾತ್ರ ಬದಲಾಗಿಲ್ಲ, ಭಾಗ್ಯ ಬದುಕನ್ನು ಇನ್ನಷ್ಟು ಹಾಳು ಮಾಡಬೇಕು, ಭಾಗ್ಯ-ಆದಿ ದೂರ ಆಗಬೇಕು ಎಂದು ಅವನು ಪ್ಲ್ಯಾನ್‌ ಮಾಡಿದ್ದಾನೆ. ಈಗ ಶ್ರೇಷ್ಠ ಅವನಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾಳೆ.

Read Full Story
08:35 PM (IST) Apr 04

Karnataka News Live 4 April 2026ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ, ಜಿಮ್‍‌ಗೆ ಬರುತ್ತಿದ್ದ ಹಿಂದೂ ಹುಡುಗಿಯರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ಕುರಿತು ಮುತಾಲಿಕ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

Read Full Story
07:27 PM (IST) Apr 04

Karnataka News Live 4 April 2026ಶತ್ರುಗಳ ಎದೆ ಮೇಲೆ ಬಿದ್ರೆ ಏಳೋಕೇ ಆಗ್ಬಾರ್ದು; 1,000 ಕೆಜಿ ತೂಕದ Mk-84 ಮಾದರಿ ಬಾಂಬ್‌ ಇನ್ನು ದೇಶದಲ್ಲೇ ನಿರ್ಮಾಣ

ಭಾರತೀಯ ವಾಯುಪಡೆಗಾಗಿ 1,000 ಕೆಜಿ ತೂಕದ ಅತ್ಯಾಧುನಿಕ ವೈಮಾನಿಕ ಬಾಂಬುಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ರಕ್ಷಣಾ ಸಚಿವಾಲಯವು 'Make-II' ಯೋಜನೆಯಡಿ ಮುಂದಾಗಿದೆ. ಅಮೆರಿಕದ 'Mk-84' ಮಾದರಿಗೆ ಸಮಾನವಾದ ಈ ಬಾಂಬುಗಳನ್ನು, ಕನಿಷ್ಠ 50% ಸ್ವದೇಶಿ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.

Read Full Story
06:10 PM (IST) Apr 04

Karnataka News Live 4 April 2026ನನಗೆ ಬಂತು ಆ ಕಾಂಗ್ರೆಸ್ಸಿನ ಕಾಲ್, ಎಲ್ಲಾ IPL ಮಾಯೆ​... ಸುರೇಶ್​ ಕುಮಾರ್ ಕುತೂಹಲದ ಪೋಸ್ಟ್​ ಶೇರ್

ಶಾಸಕರಿಗೆ ಐಪಿಎಲ್ ಪಂದ್ಯದ ಉಚಿತ ಟಿಕೆಟ್ ನೀಡುವ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಈ ವಿಐಪಿ ಸಂಸ್ಕೃತಿಯನ್ನು ವಿರೋಧಿಸಿ ತಮಗೆ ಟಿಕೆಟ್ ನಿರಾಕರಿಸಿದ್ದಾರೆ. ಇದರ ಬೆನ್ನಲ್ಲೇ, ತೆಲಂಗಾಣ ಸಿಎಂ ಸಂಬಂಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ತಮಗೆ ಟಿಕೆಟ್‌ಗಾಗಿ ಕರೆ ಮಾಡಿದ್ದ ವಿಚಿತ್ರ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
Read Full Story
06:08 PM (IST) Apr 04

Karnataka News Live 4 April 20263 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ

3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ, ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಸೆಲೆಬ್ರೆಟಿಗಳ ಕಾರು ಎಂದೇ ಗುರುತಿಸಿಕೊಂಡಿದೆ. ಆದರೆ ಬೆಂಗಳೂರಲ್ಲಿ ಹಾಗಲ್ಲ.

Read Full Story
06:03 PM (IST) Apr 04

Karnataka News Live 4 April 2026ಮಗಳು ಗೌರಿ ಬಗ್ಗೆ ನನ್ನ 2ನೇ ಪತ್ನಿ ಯಾವಾಗಲೂ ಇದೇ ಮಾತಾಡ್ತಾಳೆ; ನಿರ್ದೇಶಕ ಎಸ್‌ ಮಹೇಂದರ್‌ ಮುಕ್ತ ಮಾತು

Director S Mahendar On Daughter Gowri Shruti: ಕನ್ನಡದ ಅನೇಕ ಕೌಂಟುಬಿಕ ಸಿನಿಮಾಗಳ ನಿರ್ದೇಶಕ ಎಸ್‌ ಮಹೇಂದರ್‌ ಹಾಗೂ ಶ್ರುತಿ ಅವರ ದಾಂಪತ್ಯ ಮುರಿದಿದೆ. ಆದರೆ ಇವರ ಮಗಳು ಗೌರಿ ಮಾತ್ರ ತಂದೆ-ತಾಯಿ ಜೊತೆಗೆ ಅದೇ ಬಾಂಧವ್ಯ ಹೊಂದಿದ್ದಾರೆ.

Read Full Story
05:43 PM (IST) Apr 04

Karnataka News Live 4 April 202630 ಸಾವಿರ ಜನರ ಮಾರಣಹೋಮ ಮಾಡಿದ ಕಂಪೆನಿ; ಉಸಿರಾಡೋಕೂ ಅವಕಾಶ ಕೊಡ್ಲಿಲ್ಲ - ಕವಿರಾಜ್

Company Layoffs:‌ ಇಂದು ಕಂಪೆನಿಗಳು ಲೇಆಫ್‌ ಮಾಡುತ್ತಿವೆ. ಕಷ್ಟಪಟ್ಟು ಓದಿ, ಕಂಪೆನಿಯಲ್ಲಿ ಕೆಲಸ ಮಾಡೋಣ, ಸೆಟಲ್‌ ಆಗೋಣ ಎಂದುಕೊಂಡರೆ ತುಂಬ ಕಷ್ಟ. ಯಾವಾಗ ಯಾರು ಲೇಆಫ್‌ ಆಗುತ್ತಾರೆ ಎಂದು ಹೇಳಲಾಗದು. ಈ ಬಗ್ಗೆ ಗೀತರಚನೆಕಾರ ಕವಿರಾಜ್‌ ಅವರು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story
05:28 PM (IST) Apr 04

Karnataka News Live 4 April 2026ಬೆಂಗಳೂರಲ್ಲಿ ಯುವಕ ವಿಜಯ್ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್, ಹತ್ಯೆ ಹಿಂದಿತ್ತು ಯುವತಿ ವಿಚಾರ

ಬೆಂಗಳೂರಲ್ಲಿ ಯುವಕ ವಿಜಯ್ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್, ಪ್ರಕರಣದ ಹಿಂದಿನ ಯವತಿ ವಿಷ್ಯ ಬೆಳಕಿಗೆ, ಆರಂಭದಲ್ಲಿ ಕ್ಷುಲಕ್ಕ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಅಸಲಿ ವಿಚಾರ ಬೇರೇನೆ ಇದೆ. 

Read Full Story
05:25 PM (IST) Apr 04

Karnataka News Live 4 April 2026ಇದಪ್ಪ ಸ್ನೇಹ ಅಂದ್ರೆ! ಕನ್ನಡ ಯುಟ್ಯೂಬರ್ ಭೂಮಿಕಾ ಬಸವರಾಜ್ ಕೊಟ್ಟ‌ ಗೋಲ್ಡ್ ಗಿಫ್ಟ್‌ ನೋಡಿ ಗೆಳತಿ ಕಣ್ಣೀರು

Bhumika Basavaraj: ಸಾಮಾನ್ಯವಾಗಿ ಕುಟುಂಬದಲ್ಲಿ, ರಕ್ತ ಸಂಬಂಧದಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಇದರ ಹೊರತಾಗಿ ಒಳ್ಳೆಯ ಸ್ನೇಹ ಸಂಬಂಧ ಕೂಡ ಇರುವುದು. ಈಗ ಕನ್ನಡ ಯುಟ್ಯೂಬರ್‌, ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಭೂಮಿಕಾ ಬಸವರಾಜ್‌ ಅವರು ತನ್ನ ಗೆಳತಿಗೆ ದುಬಾರಿ ಗಿಫ್ಟ್‌ ನೀಡಿದ್ದಾರೆ.

Read Full Story
05:18 PM (IST) Apr 04

Karnataka News Live 4 April 2026Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​ - ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು

ಬಿಗ್‌ಬಾಸ್ ಇತಿಹಾಸದಲ್ಲೇ ದಾಖಲೆ ಮತಗಳನ್ನು ಪಡೆದು ಗೆದ್ದ ಗಿಲ್ಲಿ ನಟ, ಇದೀಗ ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ಫಿಟ್ನೆಸ್ ಕಡೆಗಣಿಸಿದ್ದ ಅವರ ಈ ಬದಲಾವಣೆ, ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪಾದಾರ್ಪಣೆ ಮಾಡುವ ಸಿದ್ಧತೆಯೇ ಎಂಬ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.
Read Full Story
04:46 PM (IST) Apr 04

Karnataka News Live 4 April 2026'ಸ್ಯಾಂಡಲ್‌ವುಡ್‌ನಲ್ಲಿ ಸೈಡ್‌ ರೋಲ್‌ ಕೊಡಿಸಿ, ಆಕ್ಟಿಂಗ್‌ ಮಾಡ್ತೀನಿ..' ಕಿಂಗ್‌ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಶಾಕ್‌

ಆರ್‌ಸಿಬಿ ಇನ್ಸೈಡರ್ ವಿಡಿಯೋದಲ್ಲಿ, ಮಿಸ್ಟರ್ ನಾಗ್ಸ್ ಜೊತೆಗಿನ ತಮಾಷೆಯ ಸಂಭಾಷಣೆಯ ವೇಳೆ ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story
04:28 PM (IST) Apr 04

Karnataka News Live 4 April 2026ಹುಡುಗಿ ನೋಡಿದ್ದೇನೆ, ಮುಂದಿನ ವರ್ಷ ಮದ್ವೆ - ಮರು ವಿವಾಹದ ಬಗ್ಗೆ ಮೌನ ಮುರಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ನಂತರ ಅನುಭವಿಸಿದ ನೋವಿನಿಂದ ಹೊರಬಂದಿದ್ದಾರೆ. ಮುಂದಿನ ವರ್ಷ ಮದುವೆಯಾಗಲು ಯೋಜಿಸಿದ್ದು, ಈಗಾಗಲೇ ಹುಡುಗಿಯರನ್ನು ನೋಡಿರುವುದಾಗಿ ಮತ್ತು ಈ ಬಾರಿ ತರಾತುರಿ ಮಾಡದೆ ಪೋಷಕರ ಒಪ್ಪಿಗೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.

Read Full Story
04:18 PM (IST) Apr 04

Karnataka News Live 4 April 2026ಎಎಸ್ಪಿ ಹುದ್ದೆಗೆ ಡಿವೈಎಸ್ಪಿಗಳ ಮಧ್ಯೆ ಬಡ್ತಿ ಸಂಘರ್ಷ, ಜ್ಯೇಷ್ಠತಾ ಪಟ್ಟಿ ಪ್ರಕಟ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಏರುದನಿ!

ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶದಂತೆ ರಾಜ್ಯ ಸರ್ಕಾರವು ಡಿವೈಎಸ್ಪಿ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯು ಎಎಸ್ಪಿ ಹುದ್ದೆಯ ಮುಂಬಡ್ತಿ ವಿಚಾರವಾಗಿ ನೇರ ನೇಮಕಾತಿ ಮತ್ತು ಮುಂಬಡ್ತಿ ಅಧಿಕಾರಿಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಿಆರ್‌ ಅಧಿಕಾರಿಗಳು ಇದು ಅವೈಜ್ಞಾನಿಕವೆಂದು ವಾದಿಸಿದರೆ, ಡಿಆರ್‌ ಅಧಿಕಾರಿಗಳು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Read Full Story
04:00 PM (IST) Apr 04

Karnataka News Live 4 April 2026ಲಾಲ್‌ಬಾಗ್ ಸುರಂಗ ರಸ್ತೆ ಮಾರ್ಗ ಕುರಿತು ಜಿಎಸ್‌ಐ ತಜ್ಞರ ಭೌಗೋಳಿಕ ಮತ್ತು ತಾಂತ್ರಿಕ ಪರಿಶೀಲನೆ

ಬೆಂಗಳೂರಿನ ಪ್ರಸ್ತಾಪಿತ ಸುರಂಗ ರಸ್ತೆ ಯೋಜನೆಗಾಗಿ, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ (ಜಿಎಸ್‌ಐ) ತಜ್ಞರ ಸಮಿತಿಯು ಲಾಲ್‌ಬಾಗ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಲಾಲ್‌ಬಾಗ್ ಬೆಟ್ಟದ ಕೆಳಗೆ ಸುರಂಗ ಹಾದುಹೋಗುವುದರಿಂದ ಉಂಟಾಗಬಹುದಾದ ಭೌಗೋಳಿಕ ಮತ್ತು ಪರಿಸರ ಪರಿಣಾಮಗಳ ಕುರಿತು ತಂಡವು ಅಧ್ಯಯನ ನಡೆಸಿ, ವರದಿ ಸಲ್ಲಿಸಲಿದೆ. ಈ ವರದಿಯು ಯೋಜನೆಯ ಮುಂದಿನ ಹಂತಗಳನ್ನು ನಿರ್ಧರಿಸಲಿದೆ.
Read Full Story