- Home
- Entertainment
- Sandalwood
- ಮಗಳು ಗೌರಿ ಬಗ್ಗೆ ನನ್ನ 2ನೇ ಪತ್ನಿ ಯಾವಾಗಲೂ ಇದೇ ಮಾತಾಡ್ತಾಳೆ; ನಿರ್ದೇಶಕ ಎಸ್ ಮಹೇಂದರ್ ಮುಕ್ತ ಮಾತು
ಮಗಳು ಗೌರಿ ಬಗ್ಗೆ ನನ್ನ 2ನೇ ಪತ್ನಿ ಯಾವಾಗಲೂ ಇದೇ ಮಾತಾಡ್ತಾಳೆ; ನಿರ್ದೇಶಕ ಎಸ್ ಮಹೇಂದರ್ ಮುಕ್ತ ಮಾತು
Director S Mahendar On Daughter Gowri Shruti: ಕನ್ನಡದ ಅನೇಕ ಕೌಂಟುಬಿಕ ಸಿನಿಮಾಗಳ ನಿರ್ದೇಶಕ ಎಸ್ ಮಹೇಂದರ್ ಹಾಗೂ ಶ್ರುತಿ ಅವರ ದಾಂಪತ್ಯ ಮುರಿದಿದೆ. ಆದರೆ ಇವರ ಮಗಳು ಗೌರಿ ಮಾತ್ರ ತಂದೆ-ತಾಯಿ ಜೊತೆಗೆ ಅದೇ ಬಾಂಧವ್ಯ ಹೊಂದಿದ್ದಾರೆ.

ಎಸ್ ಮಹೇಂದರ್‌ಗೆ ಎರಡನೇ ಮದುವೆ
Beyond Limits ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಎಸ್ ಮಹೇಂದರ್ ಅವರು ಮಗಳು, 2ನೇ ಪತ್ನಿ ಬಗ್ಗೆ ಮಾತನಾಡಿದ್ದರು.
ಎಸ್ ಮಹೇಂದರ್ ಅವರು ಯಶೋದಾ ಎನ್ನುವವರ ಜೊತೆ ಎರಡನೇ ಮದುವೆಯಾಗಿದ್ದಾರೆ. ಇವರಿಗೆ ಓರ್ವ ಮಗ ಕೂಡ ಇದ್ದಾನೆ. ಅಂದಹಾಗೆ ಗೌರಿ ಅವರು ಎಸ್ ಮಹೇಂದರ್ ಮನೆಗೆ ಹೋಗುತ್ತಿರುತ್ತಾರಂತೆ, ಯಶೋದಾ ಅವರ ಜೊತೆಯೂ ಉತ್ತಮ ಸಂಬಂಧ ಹೊಂದಿದ್ದಾರಂತೆ.
ಯಶೋದಾಗೆ ಗೌರಿ ಅಂದ್ರೆ ಇಷ್ಟ
ಗೌರಿ ಕಂಡರೆ ಎಲ್ಲರಿಗೂ ಇಷ್ಟ. ಎಸ್ ಮಹೇಂದರ್ ಎರಡನೇ ಪತ್ನಿಗೂ ಕೂಡ ಗೌರಿ ಎಂದರೆ ಇಷ್ಟ. ಗೌರಿಯಿಂದ ನಾನು ಆ ವಿಷಯ ಕಲಿತೆ, ಅದು ಗೊತ್ತಾಯ್ತು, ಇದು ಗೊತ್ತಾಯ್ತು ಎಂದು ಯಶೋದಾ ಹೇಳುತ್ತಾರಂತೆ. ಇದನ್ನು ಮಹೇಂದರ್ ಹೇಳಿದ್ದಾರೆ.
ಯಶೋದಾ ಡಿಮ್ಯಾಂಡ್ ಏನು?
ಅಂದಹಾಗೆ ಗೌರಿ ನೋಡಲು ಸುಂದರವಾಗಿದ್ದಾಳೆ, ಅವಳಿಗೆ ಸಿನಿಮಾ ಮಾಡಿ ಎಂದು ಯಶೋದಾ ಅವರು ಪತಿಗೆ ಹೇಳುತ್ತಾರಂತೆ. ಇದನ್ನು ಕೂಡ ಎಸ್ ಮಹೇಂದರ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಇದಕ್ಕೆಲ್ಲ ಕಾಲ ಕೂಡಿ ಬರಬೇಕು ಎನ್ನುತ್ತಾರೆ.
ಮಗನಿಗೆ ಬುದ್ಧಿ ಹೇಳ್ತಾಳೆ
ನನ್ನ ಮಗನಿಗೆ ಯಶೋದಾ, ಅಕ್ಕನ ನೋಡಿ ಕಲಿತುಕೋ ಎಂದು ಬುದ್ಧಿ ಹೇಳ್ತಾಳೆ. ಇಂದು ಜೀವನ ಚೆನ್ನಾಗಿದೆ, ಎಲ್ಲರೂ ಚೆನ್ನಾಗಿದ್ದೇವೆ ಎಂದು ಎಸ್ ಮಹೇಂದರ್ ಹೇಳಿದ್ದಾರೆ.
ಗೌರಿ ಒಳ್ಳೆಯತನ, ಕುಟುಂಬದ ಬಾಂಧವ್ಯ
ಎಸ್ ಮಹೇಂದರ್ ಅವರ ಕುಟುಂಬದ ಎಲ್ಲ ಕಾರ್ಯಕ್ರಮಗಳು, ಜನ್ಮದಿನ ಆಚರಣೆ ಎಂದು ಗೌರಿ ಅವರು ಬರುತ್ತಾರೆ, ತಮ್ಮನಿಗೆ ಚಾಕೋಲೇಟ್ ಕೂಡ ಕೊಡ್ತಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

