ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ, ಕೇಸರಿ ಶಾಲು ಹಾಕಿ ಕೃತ್ಯ, ಸಂಘಟಕ ವಶಕ್ಕೆ ಪಡೆಯಲಾಗಿದೆ. ಬಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದೀಗ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಬಾಗಲಕೋಟೆ (ಏ.04) ಕರ್ನಾಟಕ ವಿಧಾನಸಭೆ ಉಪ ಚುನಾವಣೆ ಕಣ ರಂಗೇರಿದೆ. ದಾವಣೆಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಕೋಲಾಹಗಳು ಶುರುವಾಗಿದೆ. ಇದೀಗ ಬಾಗಲಕೋಟೆಯಲ್ಲಿ ಗೆಲ್ಲಲು ಅಡ್ಡ ದಾರಿ ಹಿಡಿದಿರುವುದು ಬಯಲಾಗಿದೆ. ಬಿಜೆಪಿ ಅಭ್ಯರ್ಥಿ ಚರಂತಿಮಠ ವಿರುದ್ಧ ಎನ್‌ಎಸ್‌ಯುಐ ಸಂಘಟನೆ ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಕರಪತ್ರ ಹಂಚುತ್ತಾ ಅಪಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ NSUI ಸಂಘಟನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಭಾರಿ ಪ್ರತಿಭಟನೆ ಹಮ್ಮಿಕೊಂಡಿದೆ. ಸುಮಾರು 10 ಮಂದಿ ಇದ್ದ ಈ ತಂಡದ ಎಲ್ಲಾ ಸದಸ್ಯರನ್ನು ಅರೆಸ್ಟ್ ಮಾಡುವಂತೆ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ.

ಕ್ಯಾಂಪಸ್‌ನಲ್ಲಿ ಗಲಾಟೆ

ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಸೋಗಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಾಗಲಕೋಟೆ ನಗರದ ಕುಮಾರೇಶ್ವರ ಕ್ಯಾಂಪಸ್‌ಗೆ ಎಂಟ್ರಿಕೊಟ್ಟ NSUI ಸಂಘಟನೆ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಚರಂತಿಮಠ ವಿರುದ್ಧ ಕರಪತ್ರ ಹಂಚಿ ಅಪಪ್ರಚಾರ ನಡೆಸಿದ್ದಾರೆ. ಕರಪತ್ರದಲ್ಲಿ ಬಿಜೆಪಿ ಗೆ ವೋಟ್ ಹಾಕಿದ್ರೆ ಜೈಲು ಫಿಕ್ಸ್‌ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಚರಂತಿಮಠ ಭಾವಚಿತ್ರಕ್ಕೆ ಎಕ್ಸ್ ಮಾರ್ಕ್ ಹಾಕಿ, ಬಿಜೆಪಿ ವಿರುದ್ಧ ವಿದ್ಯಾರ್ಥಿಗಳು ಎಚ್ಚರದಿಂದಿರಿ ಎಂದು ಉಲ್ಲೇಖಿಸಲಾಗಿದೆ. ಈ ಕರಪತ್ರ ಹಂಚುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಇದರಿಂದ ಗಲಾಟೆ ಶುರುವಾಗಿದೆ.

ಕರಪತ್ರ ಹಂಚಿಕೆ ಮಾಡ್ತಿದ್ದವರ ಮೇಲೆ ದೂರು ದಾಖಲಿಸುವಂತೆ ಬಿಜೆಪಿ ಕಾರ್ಯಕರ್ತರ ಆಗ್ರಹಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಜನರನ್ನ ವಶಕ್ಕೆ ಪಡೆಯಲಾದಗಿದೆ. ಇನ್ನುಳಿದವರ ಬಂಧನಕ್ಕೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕರಪತ್ರ ಹಂಚುತ್ತಿದ್ದ ಓರ್ವನ ಹಿಡಿದ ಬಿಜೆಪಿ ಕಾರ್ಯಕರ್ತರು

ಕರಪತ್ರ ಹಂಚುತ್ತಿದ್ದ ಎಂದು ಓರ್ವ ಯುವಕನನ್ನು ಬಿಜೆಪಿ ಕಾರ್ಯಕರ್ತರು ಹಿಡಿದಿದ್ದಾರೆ. ಕಾರಲ್ಲಿ ಕೂತಿದ್ದ ಯುವಕನನ್ನು ಕಾರ್ಯಕರ್ತರು ಹಿಡಿದಿದ್ದಾರೆ. ಬಳಿಕ ಯುವಕನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.

ಬಿಜೆಪಿ ಮುಖಂಡ ಅರುಣ ಶಹಾಪೂರ ಪ್ರತಿಕ್ರಿಯೆ

ಮೊನ್ನೆ ಡಿಸಿಎಂ ಮಾದ್ಯಮಗೋಷ್ಠಿಯಲ್ಲಿ ಕೆಲ ಹೇಳಿಕೆ ನೀಡಿದ್ದರು. ವಿದ್ಯಾರ್ಥಿಗಳು ಯಾರಾದ್ರೂ ಡಬಲ್ ಓಟ್ ಮಾಡಿದ್ರೆ ಅರೆಸ್ಟ್ ಮಾಡ್ತೀವಿ ಎಂದಿದ್ರು. ಡಿಸಿಎಂ ಹೇಳಿಕೆಯಂತೆ ಈಗ ಕರಪತ್ರ ಹಂಚಿದ್ದಾರೆ. ಕೇಸರಿ ಶಾಲು ಹಾಕಿಕೊಂಡು ಕಾಲೇಜ್ ಕ್ಯಾಂಪಸ್ ಗೆ ಬಂದಿದ್ದಾರೆ. ಈಗಾಗಲೇ ಕೆಲವು ಜನರನ್ನ ವಶಕ್ಕೆ ಪಡೆದಿದ್ದಾರೆ. ಇನ್ನುಳಿದವರನ್ನೂ ಬಂಧಿಸಬೇಕು. ಮೋದಿಯವರು ಪ್ರಜಾಪ್ರಭುತ್ವದಲ್ಲಿ ಫೇರ್ ಆಂಡ್ ಫ್ರೀ ಎಲೆಕ್ಷನ್ ಆಗಬೇಕು ಎಂದಿದ್ದಾರೆ. ಆದ್ರೆ ಕಾಂಗ್ರೆಸ್ಸಿಗರು ಈ ರೀತಿ ಮಾಡೋದು ಸರಿಯಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ಹೋರಾಟ ಮಾಡ್ತೇವೆ ಎಂದು ಅರುಣ ಶಹಾಪೂರ ಹೇಳಿದ್ದಾರೆ.