- Home
- Entertainment
- TV Talk
- Bhagyalakshmi Serial: ಮನೆಹಾಳ ತಾಂಡವ್‌ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way
Bhagyalakshmi Serial: ಮನೆಹಾಳ ತಾಂಡವ್‌ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way
Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಮಾತ್ರ ಬದಲಾಗಿಲ್ಲ, ಭಾಗ್ಯ ಬದುಕನ್ನು ಇನ್ನಷ್ಟು ಹಾಳು ಮಾಡಬೇಕು, ಭಾಗ್ಯ-ಆದಿ ದೂರ ಆಗಬೇಕು ಎಂದು ಅವನು ಪ್ಲ್ಯಾನ್ ಮಾಡಿದ್ದಾನೆ. ಈಗ ಶ್ರೇಷ್ಠ ಅವನಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾಳೆ.

ಮದುವೆ ಆಗಲ್ಲ ಎಂದಿರೋ ಆದಿ
ತನ್ವಿ ಹೇಳಿದ್ದಕ್ಕಾಗಿ ಭಾಗ್ಯಳನ್ನು ನಾನು ಮದುವೆ ಆಗೋದಿಲ್ಲ ಎಂದು ಆದಿ ಹೇಳಿದ್ದಾನೆ. ಇದರ ಹಿಂದೆ ಏನು ಕಾರಣ ಇದೆ ಎಂದು ಇಡೀ ಕುಟುಂಬ ತಲೆ ಕೆಡಿಸಿಕೊಂಡಿದೆ. ಇದು ಭಾಗ್ಯ ತಾಯಿಗೆ ಖುಷಿ ಕೊಟ್ಟಿದೆ. ಇನ್ನೊಂದು ಕಡೆ ತಾಂಡವ್ ತಂದೆಗೆ ಅನಾರೋಗ್ಯ ಆಗಿದೆ.
ಆದಿಯನ್ನು ಮದುವೆಯಾಗುವಾಸೆ
ಆದಿಯನ್ನು ಮದುವೆ ಆಗಬೇಕು, ಚೆನ್ನಾಗಿ ಬದುಕಬೇಕು ಎಂದು ಭಾಗ್ಯ ಕನಸು ಕಾಣುತ್ತಿದ್ದಳು. ಆದರೆ ಈಗ ಆದಿಯೇ ಮದುವೆ ಆಗೋದಿಲ್ಲ ಎಂದು ಹೇಳಿರೋದು ಅವಳಿಗೆ ಚಿಂತೆಯಾಗಿದೆ. ಇದರ ಹಿಂದಿನ ಕಾರಣ ಏನು ಎಂದು ಅವಳು ಕಂಡುಹಿಡಿಯಬೇಕಿದೆ.
ಭಾಗ್ಯಳ ಮಾವನ ಆಸೆ ಏನು?
ಆದಷ್ಟು ಬೇಗ ಭಾಗ್ಯ ತಾಂಡವ್ ಜೊತೆ ಮದುವೆ ಆಗಬೇಕು ಎಂದು ಮಾವ ಧರ್ಮರಾಜ್ ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಭಾಗ್ಯ-ಆದಿ ಮದುವೆ ನಡೆಯೋದು ಡೌಟ್ ಎಂದು ಕಾಣುತ್ತಿದೆ, ಇದಕ್ಕೆ ಇನ್ನೊಂದು ಟ್ವಿಸ್ಟ್ ಕೂಡ ಸಿಗಬಹುದು.
ಈಗ ಶ್ರೇಷ್ಠ ತಾಯಿಯಾಗ್ತಿದ್ದಾಳೆ
ಶ್ರೇಷ್ಠ ತಾಯಿ ಆಗ್ತಿದ್ದಾಳೆ, ಈ ವಿಷಯವನ್ನು ಅವಳು ತಾಂಡವ್‌ಗೆ ಹೇಳಿದ್ದಾಳೆ. ಈ ವಿಷಯ ಏನಾದರೂ ಬಾಕಿಯವರಿಗೆ ಗೊತ್ತಾದರೆ ತಾಂಡವ್ ಪ್ಲ್ಯಾನ್ ಹಾಳಾದಂತೆ. ಒಟ್ಟಿನಲ್ಲಿ ಭಾಗ್ಯ ಬದುಕು ಮಾತ್ರ ಏನಾಗಲಿದೆಯೋ ಏನೋ!
ಮೂರನೇ ಮಗುವಿನ ತಂದೆ
ಭಾಗ್ಯಳನ್ನು ಇಷ್ಟವಿಲ್ಲದೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರೋ ತಾಂಡವ್, ಈಗ ಇಷ್ಟಪಟ್ಟು ಶ್ರೇಷ್ಠಳನ್ನು ಮದುವೆಯಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾನೆ. ಈ ಬಗ್ಗೆ ನೀವು ಏನು ಹೇಳ್ತೀರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

