- Home
- Karnataka Districts
- Bengaluru Urban
- 3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ
3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ
3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ, ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಸೆಲೆಬ್ರೆಟಿಗಳ ಕಾರು ಎಂದೇ ಗುರುತಿಸಿಕೊಂಡಿದೆ. ಆದರೆ ಬೆಂಗಳೂರಲ್ಲಿ ಹಾಗಲ್ಲ.

ಡಿಫೆಂಡರ್ ಟ್ಯಾಕ್ಸಿ
ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಶ್ರೀಮಂತರು, ಸೆಲೆಬ್ರೆಟಿಗಳು, ಉದ್ಯಮಿಗಳು ಖರೀದಿಸುತ್ತಾರೆ. ಕೆಲವೇ ಕೆಲವು ಮಂದಿ ಈ ಕಾರಿನ ಮಾಲೀಕರಾಗಿದ್ದಾರೆ. ಇದು ದುಬಾರಿ ಮಾತ್ರವಲ್ಲ, ಇದರ ನಿರ್ವಹಣೆ ವೆಚ್ಚ ಕೂಡ ಬಲು ದುಬಾರಿ. ಆದರೆ ಈ ದುಬಾರಿ ಹಾಗೂ ಐಷರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿಯಾಗಿದೆ.
ನಿಮಗೂ ಬುಕ್ ಮಾಡಬಹುದು ಡಿಫೆಂಡರ್ ಟ್ಯಾಕ್ಸಿ
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದೆ. ಬೆಂಗಳೂರು ಬಿಗಿನರ್ಸ್‌ಗೆ ಅಲ್ಲ, ಯಾರು ಹೇಳಿದ್ದು ಭಾರತ ಬಡ ರಾಷ್ಟ್ರ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇದು ಪ್ರಚಾರದ ಗಿಮಿಕ್ ಎಂದಿದ್ದಾರೆ. ಆದರೆ ಇದು ಸತ್ಯ. ಬೆಂಗಳೂರಲ್ಲಿ ನಿಮಗೆ ಬೇಕಾದರೂ ಈ ಡಿಫೆಂಡರ್ ಟ್ಯಾಕ್ಸಿ ಬುಕ್ ಮಾಡಲು ಸಾಧ್ಯವಿದೆ.
ಬಾರ್ಬರ್ ರಮೇಶ್ ಬಾಬು ಮಾಲೀಕತ್ವದ ಟ್ಯಾಕ್ಸಿ
ಈ ಡಿಫೆಂಡರ್ ಟ್ಯಾಕ್ಸಿ ಮಾಲೀಕ ಬೇರೆ ಯಾರು ಅಲ್ಲ, ಜನಪ್ರಿಯ ಬಾರ್ಬರ್ ರಮೇಶ್ ಬಾಬು. ಬರ್ಬರ್ ಬಾಬು ಎಂದೇ ಜನಪ್ರಿಯವಾದಿರುವ ರಮೇಶ್ ಬಾಬು ಬಳಿ ಡಿಫೆಂಡರ್ ಮಾತ್ರವಲ್ಲ ರೋಲ್ಸ್ ರಾಯ್ಸ್ ಕಾರುಗಳು ಇವೆ. ಟ್ರಾವೆಲ್ಸ್ ಕಂಪನಿ ನಡೆಸುತ್ತಿರುವ ಬಾರ್ಬರ್ ರಮೇಶ್ ಬಾಬು ಬಳಿ ಮರ್ಸಿಡಿಸ್ ಬೆಂಜ್, ರೋಲ್ಸ್ ರಾಯ್ಸ್, ರೇಂಜ್ ರೋವರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ.
ರಮೇಶ್ ಬಾಬು ಟ್ರಾವೆಲ್ಸ್ ಕಂಪನಿ
ಶ್ರೀಮಂತರು, ಉದ್ಯಮಿಗಳು, ಸೆಲೆಬ್ರೆಟಿಗಳ ಸೇರಿದಂತೆ ಹಲವರು ಮದುವೆ , ಇತರ ಕಾರ್ಯಕ್ರಮಗಳಿಗೆ ಐಷಾರಾಮಿ ಕಾರುಗಳನ್ನು ಬುಕ್ ಮಾಡುತ್ತಾರೆ. ಇವರಿಗಾಗಿ ರಮೇಶ್ ಬಾಬು ಟ್ರಾವೆಲ್ಸ್ ಕಂಪನಿ ಐಷಾರಾಮಿ ಟ್ಯಾಕ್ಸಿ ಕಾರುಗಳನ್ನು ನೀಡುತ್ತಿದೆ. ಈ ಪೈಕಿ ಡಿಫೆಂಡರ್ ಕೂಡ ಸೇರಿಕೊಂಡಿದೆ.
ರೋಲ್ಸ್ ರಾಯ್ಸ್ ಬಾಬು
ರೋಲ್ಸ್ ರಾಯ್ಸ್ ಬಾಬು ಎಂಬ ಹೆಸರು ಪಡೆದಿರುವ ರಮೇಶ್ ಬಾಬು ತಮ್ಮ ಸ್ವಂತ ಬಳಕೆಗೂ ರೋಲ್ಸ್ ರಾಯ್ಸ್ ಕಾರು ಹೊಂದಿದ್ದಾರೆ. ಬೆಂಗಳೂರಿನ ಶ್ರೀಮಂತರ ಪಟ್ಟಿಯಲ್ಲೂ ರಮೇಶ್ ಬಾಬೂ ಕೂಡ ಸ್ಥಾನ ಪಡೆದಿದ್ದಾರೆ. ಪರಿಶ್ರಮ, ಹಾಗೂ ಭಿನ್ನ ಆಲೋಚನೆ ಮೂಲಕ ರಮೇಶ್ ಬಾಬು ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ.

