10:25 PM (IST) Oct 31

Karnataka News Live 31 October 2026 ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ - ಯುವ ಪೀಳಿಗೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೀಡಿದ ಕಿವಿ ಮಾತು ಏನು?

ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 6ನೇ 'ಕನ್ನಡ ಪುಸ್ತಕ ಹಬ್ಬ'ವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಉದ್ಘಾಟಿಸಿದರು. ತಂತ್ರಜ್ಞಾನದ ಯುಗದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಭೌತಿಕ ಪುಸ್ತಕಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಕುರಿತು ಶತಾವಧಾನಿ ಡಾ. ಆರ್. ಗಣೇಶ್ ಮತ್ತು ಗಣ್ಯರು ಒತ್ತು ನೀಡಿದರು.
Read Full Story
09:04 PM (IST) Oct 31

Karnataka News Live 31 October 2026 ಸೂರ್ಯಗೆ ಆದ ಅನುಭವ ಅಯ್ಯರ್‍‌ಗೆ ಪಾಠ ಆಗಬೇಕು, ತಿದ್ದಿಕೊಳ್ಳದಿದ್ದರೆ ಶ್ರೇಯಸ್‌ಗೂ ಅದೇ ಗತಿ

ಟೀಂ ಇಂಡಿಯಾದ ಟಿ20 ನಾಯಕ ಶ್ರೇಯಸ್ ಅಯ್ಯರ್ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದರೂ, ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಆತಂಕ ಸೃಷ್ಟಿಸಿದೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಕೂಡ ನಾಯಕರಾಗಿದ್ದಾಗ ಕಳಪೆ ಫಾರ್ಮ್‌ನಿಂದ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅಯ್ಯರ್ ಕೂಡ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳದಿದ್ದರೆ ಅದೇ ಗತಿ ಎದುರಿಸಬೇಕಾಗಬಹುದು.
Read Full Story
08:15 PM (IST) Oct 31

Karnataka News Live 31 October 2026 'ಹೆಲಿಕಾಪ್ಟರ್ ಕಳುಹಿಸಲಾ' ಎಂದ ಸಿಎಂ, ಸರಳತೆ ಮೆರೆದ ಕಾಗೋಡು; ವಿಡಿಯೋ ಕಾಲ್‌ನಲ್ಲಿ ನಗುನಗುತ್ತ ಡಿಕೆಶಿಗೆ ಏನಂದ್ರು?

ಸಮಾಜ ಸೇವೆ ವಿಭಾಗದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ಹಿರಿಯ ನಾಯಕನಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಅವರು ಇವತ್ತು ಕಾಗೋಡು ಮನೆಗೆ ತೆರಳಿ ಗೌರವಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಡಿಯೋ ಕಾಲ್ ಮಾಡಿ ಕಾಗೋಡು ಜೊತೆ ಮಾತನ್ನಾಡಿದರು.

Read Full Story
07:55 PM (IST) Oct 31

Karnataka News Live 31 October 2026 ಏಕ್‌ ದಂ ಫಿಟ್ ಆಗಿರಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ; ಪ್ರತಿದಿನ ಮುಂಜಾನೆ 30 ನಿಮಿಷ ಹೀಗೆ ಮಾಡಿ ಸಾಕು!

ಆರೋಗ್ಯ ಕಾಪಾಡಿಕೊಳ್ಳಲು ದುಬಾರಿ ಆಹಾರ ಅಥವಾ ಕಠಿಣ ವ್ಯಾಯಾಮದ ಅಗತ್ಯವಿಲ್ಲ. ಪ್ರತಿದಿನ ಬೆಳಗ್ಗೆ ಸ್ವಲ್ಪ ಸಮಯವನ್ನು ಸರಿಯಾದ ಅಭ್ಯಾಸಗಳಿಗೆ ಮೀಸಲಿಡುವುದು ಮುಖ್ಯ. ಈ ಸಣ್ಣ ಬದಲಾವಣೆಗಳನ್ನು ನಿರಂತರವಾಗಿ ಪಾಲಿಸುವುದರಿಂದ ಆರೋಗ್ಯಕರ ಜೀವನಶೈಲಿಯತ್ತ ಹೆಜ್ಜೆ ಇಡಬಹುದು. ಏನದು ನೋಡಿ..

Read Full Story
07:43 PM (IST) Oct 31

Karnataka News Live 31 October 2026 ಬೆಂಗಳೂರಿಂದ ಚೆನ್ನೈಗೆ ಕೇವಲ 165 ರೂ ಟಿಕೆಟ್, ಲಾಲ್‌ಬಾಗ್ ಎಕ್ಸ್‌ಪ್ರೆಸ್ ಜರ್ನಿ ಅನುಭವ ಹೇಳಿದ ಮಹಿಳೆ

ಬೆಂಗಳೂರಿನಿಂದ ಚೆನ್ನೈ ಪ್ರಯಾಣ ದರ ಕೇವಲ 165 ರೂಪಾಯಿ ಮಾತ್ರ. ಜೊತೆಗೆ ಆರಾಮದಾಯಕ ಪ್ರಯಾಣ, ಈ ಕುರಿತು ಮಹಿಳೆಯೊಬ್ಬರು ವಿಡಿಯೋ ಮಾಡಿದ ಮಹಿಳೆಯೊಬ್ಬರು ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.

Read Full Story
07:15 PM (IST) Oct 31

Karnataka News Live 31 October 2026 ಹೊಸ ನಿಯಮ, ಈ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ಎಸ್‌ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗುತ್ತಿದ್ದು, 30 ಸಾವಿರಕ್ಕಿಂತ ಹೆಚ್ಚಿನ ಸಾರಿಗೆ ಮತ್ತು 50 ಸಾವಿರಕ್ಕಿಂತ ಹೆಚ್ಚಿನ ಇಂಧನ ವಹಿವಾಟುಗಳಿಗೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ಹೊಸ ನಿಯಮವು ಡಿಸೆಂಬರ್ 1 ರಿಂದ ಜಾರಿಗೆ ಬರಲಿದ್ದು, ಗ್ರಾಹಕರು ತಮ್ಮ ಖರ್ಚುಗಳ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ.
Read Full Story
07:13 PM (IST) Oct 31

Karnataka News Live 31 October 2026 ಬೆಂಗಳೂರು ಉಪನಗರ ರೈಲು ಯೋಜನೆ, ಫ್ಲೈಓವರ್ ಸೇರಿ 666 ಕೋಟಿ ರೂ ಗುತ್ತಿಗೆ ಪಡೆದ ಅದಾನಿ ಗ್ರೂಪ್

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರು ಉಪನಗರ ರೈಲು ಯೋಜನೆ ವೇಗ ಪಡೆದುಕೊಂಡಿದೆ. ಇದೀಗ ಫ್ಲೈಓವರ್ ಸೇರಿದಂತೆ ಯೋಜನೆ ಪ್ರಮುಖ ಗುತ್ತಿಯನ್ನು ಅದಾನಿ ಗ್ರೂಪ್ ಬರೋಬ್ಬರಿ 666 ಕೋಟಿ ರೂಪಾಯಿಗೆ ಪಡೆದುಕೊಂಡಿದೆ.

Read Full Story
05:11 PM (IST) Oct 31

Karnataka News Live 31 October 2026 ಐವಿಎಫ್‌ನಿಂದ ಮಗು, ಮಿದುಳಿನ ಕ್ಯಾನ್ಸರ್ ಗೆದ್ದು ಬೀಗಿದ 'ಶಾಸ್ತ್ರಿ' ನಟಿ ಮಾನ್ಯ ನಾಯ್ಡುಗೆ ಈಗ ₹6 ಕೋಟಿಗೂ ಅಧಿಕ ಸ್ಯಾಲರಿ!

ಕನ್ನಡದ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಮಾನ್ಯ ನಾಯ್ಡು ಅವರ ನಿಜ ಜೀವನದ ಕಥೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ನಂತರ ಉನ್ನತ ವ್ಯಾಸಂಗಕ್ಕಾಗಿ ಸಿನಿಮಾ ರಂಗವನ್ನು ತೊರೆದರು.

Read Full Story
04:45 PM (IST) Oct 31

Karnataka News Live 31 October 2026 ಈ ಚೆಲುವೆ ಸ್ಟಾರ್ ನಟಿ ಇಂಥ ಮಹಾ ತಪ್ಪು ಮಾಡ್ಬಿಟ್ರಾ? 30 ವರ್ಷ ನೇಫಥ್ಯಕ್ಕೆ ಜಾರಿ, ಕೊನೆಗೆ ಹೇಗೆ ಮರೆಯಾಗಿದ್ದು ಹೇಗೆ?

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಇವರ ಬದುಕು ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಖ್ಯಾತಿ, ಅವಕಾಶ ಮತ್ತು ಯಶಸ್ಸು ಇದ್ದರೂ ವೈಯಕ್ತಿಕ ಸಂಕಷ್ಟಗಳು, ತಪ್ಪು ನಿರ್ಧಾರಗಳು ಹೇಗೆ ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಎಂಬುದಕ್ಕೆ ಉದಾಹರಣೆ ಆಗಿಬಿಟ್ಟರು!

Read Full Story
04:26 PM (IST) Oct 31

Karnataka News Live 31 October 2026 ಕರ್ನಾಟಕದ 7 ಶಾಸಕರ ವಿರುದ್ಧ ದಾಖಲಾಗಿದೆ ಮಹಿಳಾ ಮೇಲಿನ ದೌರ್ಜನ್ಯ ಪ್ರಕರಣ - ಎಡಿಆರ್ ವರದಿಯಲ್ಲಿ ಬಹಿರಂಗ

ಎಡಿಆರ್ ಸಂಸ್ಥೆಯ ನೂತನ ವರದಿಯ ಪ್ರಕಾರ, ಕರ್ನಾಟಕದ 7 ಹಾಲಿ ಶಾಸಕರು ಮಹಿಳೆಯರ ಮೇಲಿನ ಅಪರಾಧ ಹಾಗೂ ಕಿರುಕುಳದ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಹೊಂದಿರುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 6ನೇ ಸ್ಥಾನದಲ್ಲಿದೆ.

Read Full Story
04:07 PM (IST) Oct 31

Karnataka News Live 31 October 2026 ಯಶ್ ಹಾದಿಯಲ್ಲಿ 'ಛತ್ರಪತಿ' ರಿಷಬ್ ಶೆಟ್ಟಿ - ಈಗ ಕೈಗೆತ್ತಿಕೊಂಡಿರುವ ಹೊಸ ಜವಾಬ್ದಾರಿ ಏನು?

ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ 'ದಿ ಪ್ರೈಡ್ ಆಫ್ ಭಾರತ್' ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಲಿದ್ದಾರೆ. ಎರಡು ಭಾಗಗಳಲ್ಲಿ ಮೂಡಿಬರಲಿದೆ.

Read Full Story
03:38 PM (IST) Oct 31

Karnataka News Live 31 October 2026 ವಿಭಿನ್ನ ಪಾತ್ರಗಳಲ್ಲಿ ನಟಿಸಿ ನನ್ನದೇ ಗುರುತು ಮೂಡಿಸಬೇಕು - ಸಮರ್ಜಿತ್ ಲಂಕೇಶ್ ಕನಸಿದು!

ಸಮರ್ಜಿತ್ ಲಂಕೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಗೌರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ಇದೀಗ 'ಗುಡ್ಡದ ಭೂತ' ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅವರ ಸಿನಿಮಾ ಜರ್ನಿ ಬಗ್ಗೆ ತಿಳಿಯಿರಿ.

Read Full Story
03:18 PM (IST) Oct 31

Karnataka News Live 31 October 2026 'ಮದುವೆ ಆದೋರು ಮಕ್ಕಳ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ಬೇಕು.. ಹಾಲಿನ ಬೆಲೆ ಹೆಚ್ಚಳಕ್ಕೆ ವಿಜಯೇಂದ್ರ ವಾಗ್ದಾಳಿ!

ದೀಪಾವಳಿ ಮತ್ತು ರಾಜ್ಯೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಿಸಿ ಜನರಿಗೆ ಬರೆ ಎಳೆದಿದೆ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದು ಅತ್ಯಂತ ದುಬಾರಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
Read Full Story
03:18 PM (IST) Oct 31

Karnataka News Live 31 October 2026 Appu Garage Review - ಅಪ್ಪು ಗ್ಯಾರೇಜ್‌ಗೂ ಪುನೀತ್ ರಾಜ್‌ಕುಮಾರ್‌ಗೂ ಸಂಬಂಧವಿದೆಯೇ?

ಪುನೀತ್ ರಾಜ್‌ಕುಮಾರ್‌ ಮೇಲಿನ ಅಭಿಮಾನದಿಂದ ಶೀರ್ಷಿಕೆ ಪಡೆದಿರುವ ಅಪ್ಪು ಗ್ಯಾರೇಜ್ ಸಿನಿಮಾ ಪ್ರೀತಿ, ಸ್ನೇಹ, ಆ್ಯಕ್ಷನ್ ಹಾಗೂ ಹಾಸ್ಯದ ಕಥೆಯನ್ನು ಹೊಂದಿದೆ. ವಿಷ್ಣುತೇಜ, ಜೀವನ್, ರಾಧಿಕಾ ರಾಮ್ ಮತ್ತು ರಕ್ಷಾ ಗೌಡ ಅಭಿನಯದ ಈ ಸಿನಿಮಾ ಹೇಗಿದೆ?

Read Full Story
03:04 PM (IST) Oct 31

Karnataka News Live 31 October 2026 ಕೀರ್ತಿ ಮಾತಿಗೆ ಬಗ್ಗದ ವ್ಯಕ್ತಿಗೆ ಪತಿ ಆಂಟೋನಿ ಮಧ್ಯಪ್ರವೇಶಿಸಿ ಮಾಡಿದ್ದೇನು? ಅಸಲೀ ವಿಷ್ಯ ಇರೋದೇ ಇಲ್ಲಿ!

ಕೀರ್ತಿ ಸುರೇಶ್ ತಮ್ಮ ಪತಿ ಆಂಟೋನಿ ಥಟ್ಟಿಲ್ ಜೊತೆ ಮಿಲನ್‌ನಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಆ ವ್ಯಕ್ತಿ ಮದ್ಯಪಾನ ಮಾಡಿದ್ದನಂತೆ. ಮುಂದೇನಾಯ್ತು? ನೋಡಿ..

Read Full Story
02:46 PM (IST) Oct 31

Karnataka News Live 31 October 2026 ರಾಜ್ಯೋತ್ಸವ ದಿನದಂದೇ ದೆಹಲಿಯಲ್ಲಿ ಪ್ರತಿಭಟನೆ - ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸಿನ ಅಂತ್ಯ ಎಂದ ಛಲವಾದಿ!

ಕನ್ನಡ ರಾಜ್ಯೋತ್ಸವದ ದಿನವೇ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ವಿದೇಶಿ ಶಕ್ತಿಗಳೊಂದಿಗೆ ಸೇರಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story
02:43 PM (IST) Oct 31

Karnataka News Live 31 October 2026 ಹಾಲಿನ ದರ ಏರಿಕೆ ಮಾಡದೇ ಏಳೆಂಟು ವರ್ಷವಾಯ್ತು - ಶಿಕ್ಷಣ ಸಚಿವ ಮಧು ಬಂಗಾರಪ್ಪ ಟ್ರೋಲ್

ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಿದೆ. ಈ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವಾಗ ಸಚಿವ ಮಧು ಬಂಗಾರಪ್ಪ ಅವರು 7-8 ವರ್ಷಗಳಿಂದ ಬೆಲೆ ಏರಿಕೆಯಾಗಿಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ. 2023ರಿಂದ ಇದು ನಾಲ್ಕನೇ ಬಾರಿ ಹಾಲಿನ ದರ ಏರಿಕೆಯಾಗಿದ್ದು, ವಿಪಕ್ಷಗಳ ಟೀಕೆಗೆ ಸಚಿವರು ತಿರುಗೇಟು ನೀಡಿದ್ದಾರೆ.
Read Full Story
02:42 PM (IST) Oct 31

Karnataka News Live 31 October 2026 ಜಾಮೀನು ಸಿಕ್ಕ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಚಿನ್ನ ಕಳ್ಳಸಾಗಣೆ ಆರೋಪಿ ನಟಿ ರನ್ಯಾ ರಾವ್, ವಿಐಪಿ ಮೂಲಕ ಹಾಸನಾಂಬೆ ದರ್ಶನ!

ದುಬೈನಿಂದ ಅಕ್ರಮ ಚಿನ್ನ ಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ತಮ್ಮ ಕುಟುಂಬದೊಂದಿಗೆ ಹಾಸನಾಂಬಾ ದೇವಿಯ ದರ್ಶನ ಪಡೆದಿದ್ದಾರೆ. ನಿವೃತ್ತ ಡಿಜಿಪಿ ಆಗಿರುವ ತಮ್ಮ ತಂದೆಯೊಂದಿಗೆ ವಿಐಪಿ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Read Full Story
02:23 PM (IST) Oct 31

Karnataka News Live 31 October 2026 ದೀಪಾವಳಿಗೆ 2600 KSRTC ಬಸ್ ವ್ಯವಸ್ಥೆ; ಬೆಂಗಳೂರಿನ 3 ನಿಲ್ದಾಣದಿಂದ ಕಾರ್ಯಾಚರಣೆ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನವೆಂಬರ್ 6 ರಿಂದ ನವೆಂಬರ್ 8 ರವರೆಗೆ 2,600 ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ. ಚೆನ್ನೈ, ಕೊಯಮತ್ತೂರ್, ಮಧುರೈ, ತ್ರಿಶೂರ್, ಪಾಲಕ್ಕಾಡ್, ಕೋಯಿಕೋಡ್ ಹಾಗೂ ಎರ್ನಾಕುಲಂ ಮುಂತಾದ ಸ್ಥಳಗಳಿಗೆ ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿಷ್ಠಿತ ಸಾರಿಗೆ ಬಸ್‌ಗಳ ಸೇವೆ ಲಭ್ಯವಿರಲಿದೆ.

Read Full Story
01:28 PM (IST) Oct 31

Karnataka News Live 31 October 2026 ಪಕ್ಕದ ತಮಿಳುನಾಡಲ್ಲಿ ಹಾಲಿನ ಲೀಟರ್‌ಗೆ 40 ರೂಪಾಯಿ, ರಾಜ್ಯದಲ್ಲಿ 54; KMF ಮಾಡ್ತಿರೋ ದೋಖಾ ಜನರಿಗೆ ಗೊತ್ತಾಗ್ತಿಲ್ವಾ?

ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆಯನ್ನು 8 ರಿಂದ 12 ರೂಪಾಯಿವರೆಗೆ ಏರಿಕೆ ಮಾಡಲಾಗಿದ್ದು, ರೈತರ ಹೆಸರಿನಲ್ಲಿ KMF ಗ್ರಾಹಕರಿಗೆ ಬರೆ ಎಳೆಯುತ್ತಿದೆ. ತಮಿಳುನಾಡು ಸರ್ಕಾರವು ರೈತರಿಗೆ ಹೆಚ್ಚಿನ ಹಣ ನೀಡಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿದ್ದರೆ, ಕರ್ನಾಟಕ ಸರ್ಕಾರ ಮಾತ್ರ ಹೊರೆ ಹಾಕುತ್ತಿದೆ.

Read Full Story