- Home
- Entertainment
- Sandalwood
- ವಿಭಿನ್ನ ಪಾತ್ರಗಳಲ್ಲಿ ನಟಿಸಿ ನನ್ನದೇ ಗುರುತು ಮೂಡಿಸಬೇಕು: ಸಮರ್ಜಿತ್ ಲಂಕೇಶ್ ಕನಸಿದು!
ವಿಭಿನ್ನ ಪಾತ್ರಗಳಲ್ಲಿ ನಟಿಸಿ ನನ್ನದೇ ಗುರುತು ಮೂಡಿಸಬೇಕು: ಸಮರ್ಜಿತ್ ಲಂಕೇಶ್ ಕನಸಿದು!
ಸಮರ್ಜಿತ್ ಲಂಕೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಗೌರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ಇದೀಗ 'ಗುಡ್ಡದ ಭೂತ' ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅವರ ಸಿನಿಮಾ ಜರ್ನಿ ಬಗ್ಗೆ ತಿಳಿಯಿರಿ.

ಹೊಸತನ್ನು ಕಲಿಯುವ ಅವಕಾಶ
‘ಸಿನಿಮಾ ಜರ್ನಿಯಲ್ಲಿ ದೊಡ್ಡ ಯಶಸ್ಸು ಮತ್ತು ಕೆಲವೊಮ್ಮೆ ನಿಧಾನ ಗತಿಯ ಬೆಳವಣಿಗೆ ಇರುವುದು ಸಹಜ. ಆದರೆ ನನಗೆ ಇಷ್ಟೊಂದು ಅವಕಾಶಗಳು ಸಿಗುತ್ತಿರುವುದು, ದೊಡ್ಡ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿ ದಿನವೂ ಹೊಸತನ್ನು ಕಲಿಯುವ ಅವಕಾಶ ದೊರಕುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ’.
‘ಗೌರಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ
ಹೀಗೆ ಹೇಳಿದ್ದು ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್. ‘ಗೌರಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ ಅನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ.
ಸಿಕ್ಕಿಹಾಕಿಕೊಳ್ಳಲು ನನಗೆ ಇಷ್ಟವಿಲ್ಲ
ಇಂದು (ಅ.31) ಅವರ ಹುಟ್ಟುಹಬ್ಬ. ಈ ಸಂಭ್ರಮದಲ್ಲಿರುವ ಸಮರ್ಜಿತ್, ‘ಒಂದೇ ತರಹದ ಪಾತ್ರಗಳನ್ನು ಮಾಡಿಕೊಂಡು ಅದರಲ್ಲೇ ಸಿಕ್ಕಿಹಾಕಿಕೊಳ್ಳಲು ನನಗೆ ಇಷ್ಟವಿಲ್ಲ. ವಿಭಿನ್ನ ಪಾತ್ರಗಳನ್ನು ಮಾಡಿ ನಂದೇ ಆದ ಒಂದು ಗುರುತು, ಹೆಸರನ್ನು ರೂಪಿಸಿಕೊಳ್ಳಬೇಕು ಎಂಬ ಆಸೆಯಿದೆ’ ಎನ್ನುತ್ತಾರೆ.
ಹುಟ್ಟುಹಬ್ಬದ ಸಂಭ್ರಮ
ಅವರ ನಟನೆಯ ಬಹುನಿರೀಕ್ಷಿತ ‘ಗುಡ್ಡದ ಭೂತ’ ಸಿನಿಮಾ ಸಿದ್ಧಗೊಂಡಿದ್ದು, ಇಂದು ಈ ಚಿತ್ರದ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾ ಮೇಲೆ ಅವರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದಾ ಕಲಿಯುವ ಹಂಬಲ, ಕಠಿಣ ಪರಿಶ್ರಮವಿರುವ ಈ ಯುವ ಪ್ರತಿಭೆಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





