11:33 PM (IST) Mar 29

Karnataka News Live 29 March 2026 ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ ಪ್ರೀ ವೆಡ್ಡಿಂಗ್‌ನಲ್ಲಿ ಮೇಳೈಸಿದ ಸಂಪ್ರದಾಯ - ಸೀರೆಗೆ ಫ್ಯಾನ್ಸ್ ಫಿದಾ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ನಲ್ಲಿ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story
09:48 PM (IST) Mar 29

Karnataka News Live 29 March 2026 ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆ - ಸಿ.ಟಿ.ರವಿ ವಿಶ್ವಾಸ

ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read Full Story
08:36 PM (IST) Mar 29

Karnataka News Live 29 March 2026 ಅರವಿಂದ ಬೆಲ್ಲದ್‌ ಕೇಂದ್ರ ಸರ್ಕಾರದ ತಾರತಮ್ಯ ಬಗ್ಗೆ ಪ್ರಸ್ತಾಪಿಸಲಿ - ಸಚಿವ ಎಂ.ಬಿ.ಪಾಟೀಲ್‌

ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿರುವ ತಾರತಮ್ಯ ನಿವಾರಣೆಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಪ್ರತಿಕ್ರಿಯಿಸಿದರು.

Read Full Story
06:21 PM (IST) Mar 29

Karnataka News Live 29 March 2026 ಹುಡ್ಗಿನ ಲವ್ವಲ್ಲಿ ಬೀಳಿಸ್ಕೊಳ್ಳೋಕೆ Bigg Boss ಗಿಲ್ಲಿಗೆ ಟಿಪ್ಸ್ ಕೇಳಿದ ಯುವಕ ಸುಸ್ತೋ ಸುಸ್ತು

ಬಿಗ್​ಬಾಸ್​ ಖ್ಯಾತಿಯ ಗಿಲ್ಲಿ ನಟ 'ಗೌರಿ ಕಲ್ಯಾಣ' ಸೀರಿಯಲ್ ಸಂತೆಯಲ್ಲಿ ಭಾಗವಹಿಸಿದ್ದರು. ಈ ವೇಳೆ, ಪ್ರೀತಿಯಲ್ಲಿ ಸೋತ ಯುವಕನೊಬ್ಬ ಸಲಹೆ ಕೇಳಿದಾಗ, ತನಗಾದ ಐದು ಬ್ರೇಕಪ್​ಗಳ ಬಗ್ಗೆ ಹೇಳಿ ತಮಾಷೆಯಾಗಿ ಉತ್ತರಿಸಿದ್ದಾರೆ.

Read Full Story
06:19 PM (IST) Mar 29

Karnataka News Live 29 March 2026 ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ನಟ ವಿಕ್ಟರಿ ವೆಂಕಟೇಶ್ - ವಿಡಿಯೋ ವೈರಲ್!

ವಿಕ್ಟರಿ ವೆಂಕಟೇಶ್ ತೆಲುಗು ಚಿತ್ರರಂಗದಲ್ಲಿ ಯಾವುದೇ ವಿವಾದಗಳಿಲ್ಲದ ನಟ. ಸದ್ಯ ಅವರು ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟು ಅಲ್ಲಿನ ಫೇಮಸ್ ಮಸಾಲೆ ದೋಸೆ ಸೇರಿದಂತೆ ಇತರ ಉಪಹಾರಗಳನ್ನು ಸವಿದಿದ್ದಾರೆ.

Read Full Story
05:32 PM (IST) Mar 29

Karnataka News Live 29 March 2026 Situationship - ಹೊಸ ಟ್ರೆಂಡ್ ಸಿಚುಯೇಷನ್‌ಶಿಪ್‌ ಅಂದ್ರೆ ಏನು? Gen Z ಕಾಲದ ಹೊಸ ಲವ್ ಸ್ಟೋರಿ ಇದು!

ಒಂದು ಕಮಿಟೆಡ್ ಸಂಬಂಧದಲ್ಲಿ ಇಬ್ಬರಿಗೂ ಸ್ಪಷ್ಟತೆ, ನಂಬಿಕೆ ಮತ್ತು ಭವಿಷ್ಯದ ಬಗ್ಗೆ ಯೋಚನೆಗಳಿರುತ್ತವೆ. ಆದರೆ ಸಿಚುಯೇಷನ್‌ಶಿಪ್‌ನಲ್ಲಿ ಪರಿಸ್ಥಿತಿ ಬೇರೆಯೇ ಇರುತ್ತೆ. ಸಂಬಂಧಕ್ಕೆ ಒಂದು ಹೆಸರಿರುವುದಿಲ್ಲ.

Read Full Story
04:24 PM (IST) Mar 29

Karnataka News Live 29 March 2026 ಮದ್ವೆಗಿಂತ ಬ್ರೇಕಪ್​ ಒಳ್ಳೇದು ಅಂದಿದ್ದೇ ತಪ್ಪಾಯ್ತಾ? ನಂಗೆ ಬೇರೆ ಐಡೆಂಟಿಟಿನೇ ಇಲ್ವಾ? ನಟಿ ಅಮೃತಾ ​ಗರಂ

ನಟಿ ಅಮೃತಾ ಅಯ್ಯಂಗಾರ್ ಅವರು ತಮ್ಮ ವೃತ್ತಿಜೀವನದ ಸಾಧನೆಗಳನ್ನು ಕಡೆಗಣಿಸಿ, ಮಾಧ್ಯಮಗಳು ತಮ್ಮ ಹಿಂದಿನ ಬ್ರೇಕಪ್ ವಿಷಯವನ್ನೇ ನಿರಂತರವಾಗಿ ಹೈಲೈಟ್ ಮಾಡುವುದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಕಾರಾತ್ಮಕ ಪ್ರಚಾರವು ತಮ್ಮ ಗುರುತಾಗಿ ಬದಲಾಗುತ್ತಿರುವುದಕ್ಕೆ  ಬೇಸರ ವ್ಯಕ್ತಪಡಿಸಿದ್ದಾರೆ

Read Full Story
01:49 PM (IST) Mar 29

Karnataka News Live 29 March 2026 ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ

ಬಿಗ್​ಬಾಸ್​ ಸೀಸನ್​ 10ರ ಜನಪ್ರಿಯ ಸ್ಪರ್ಧಿ ಸಂಗೀತಾ ಶೃಂಗೇರಿ, ಶೋನಿಂದ ಹೊರಬಂದ ನಂತರ ಅಭಿಮಾನಿಗಳು ಕಾಯ್ತದ್ದ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್​  ಮೀಡಿಯಾದಲ್ಲಿ ಫೋಟೋಗಳನ್ನು ಶೇರ್​ ಮಾಡಿದ್ದಾರೆ ನಟಿ.

Read Full Story
01:29 PM (IST) Mar 29

Karnataka News Live 29 March 2026 Vastu Tips - T ಜಂಕ್ಷನ್ ಇರುವ ಮನೆ ಖರೀದಿ ಮಾಡಿದ್ರೆ ಏನಾಗುತ್ತೆ? ಇದರ ಹಿಂದಿನ ಸೈಂಟಿಫಿಕ್ ಕಾರಣ ತಿಳಿದರೆ ಅಚ್ಚರಿ ಪಡ್ತೀರಾ!

ವಾಸ್ತು ಶಾಸ್ತ್ರದಲ್ಲಿ T ಜಂಕ್ಷನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೊಸ ಮನೆ ಕಟ್ಟುವವರು ಅಥವಾ ಜಾಗ ಖರೀದಿಸುವವರು ಮೊದಲು ನೋಡುವುದೇ T ಜಂಕ್ಷನ್‌ ಇದೆಯಾ ಇಲ್ವಾ ಅಂತ. ಹಾಗಿದ್ರೆ T ಜಂಕ್ಷನ್‌ ಅಂದ್ರೆ ಏನು? ಇದರಿಂದ ಆಗುವ ನಷ್ಟಗಳೇನು? ಇದರ ಹಿಂದಿನ ವೈಜ್ಞಾನಿಕ ಕಾರಣವೇನು? ನೋಡೋಣ ಬನ್ನಿ

Read Full Story
01:16 PM (IST) Mar 29

Karnataka News Live 29 March 2026 ಆರ್ಥಿಕ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರದ್ದು - ಬೊಮ್ಮಾಯಿ ವಾಗ್ದಾಳಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೆ ಈ ಭಾಗದ ಜನರಿಗೆ ಅನ್ಯಾಯ ಮಾಡಿದೆ ಹಾಗೂ ಗ್ಯಾರಂಟಿ ಯೋಜನೆಗಳಿಗಾಗಿ ಸಾಲ ಮಾಡಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ

Read Full Story
12:42 PM (IST) Mar 29

Karnataka News Live 29 March 2026 ಕಲಬುರಗಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಾಗಿ ಪರದಾಟ, ಕ್ಯೂ ತಪ್ಪದಂತೆ ನಡುರಸ್ತೆಯಲ್ಲೇ ಹಾಸಿಗೆ ಹಾಸಿ ಮಲಗಿದ ಜನ!

ಇರಾನ್-ಇಸ್ರೇಲ್ ಯುದ್ಧ ಸಂಘರ್ಷದಿಂದಾಗಿ ಕಲಬುರಗಿಯ ಆಳಂದ ಪಟ್ಟಣದಲ್ಲಿ ತೀವ್ರ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿದೆ. ಸಿಲಿಂಡರ್‌ಗಾಗಿ ಜನರು ರಾತ್ರಿಯಿಡೀ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದು, ಅಡುಗೆ ಮಾಡಲು ಪರದಾಡುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ಪಟ್ಟಣದ ಜನಜೀವನ ಅಸ್ತವ್ಯಸ್ತಗೊಂಡಿದೆ.
Read Full Story
12:09 PM (IST) Mar 29

Karnataka News Live 29 March 2026 Leftovers - ರಾತ್ರಿ ಉಳಿದ ಅನ್ನ, ಚಿಕನ್, ಪಿಜ್ಜಾ ತಿನ್ನುವ ಮುನ್ನ ಎಚ್ಚರ! ಫುಡ್ ಪಾಯ್ಸನಿಂಗ್ ಅಪಾಯ ಕಾದಿದೆ

ನಿನ್ನೆ ಉಳಿದ ಪಿಜ್ಜಾ, ಚಿಕನ್ ಅಥವಾ ಅನ್ನವನ್ನು ಇಂದು ತಿನ್ನುವುದು ಸುರಕ್ಷಿತವೇ? ಮೈಕ್ರೋಬಯಾಲಜಿಸ್ಟ್ ಒಬ್ಬರು ಇದರಲ್ಲಿರುವ ಗುಪ್ತ ಅಪಾಯಗಳ ಬಗ್ಗೆ ವಿವರಿಸಿದ್ದಾರೆ. ಆಹಾರವನ್ನು ಸರಿಯಾಗಿ ಶೇಖರಿಸಿಡದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಸಾಧ್ಯತೆ ಇದೆ. ಸುರಕ್ಷಿತವಾಗಿರುವುದು ಹೇಗೆಂದು ತಿಳಿಯಿರಿ.

Read Full Story
11:39 AM (IST) Mar 29

Karnataka News Live 29 March 2026 ತಂದೆಯ ಸಾವಿನ ದುಃಖದಲ್ಲೂ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಬರೆದ ವಿದ್ಯಾರ್ಥಿ!

ಬೀರೂರು ತಾಲೂಕಿನ ಬುಕ್ಕಸಾಗರ ಗ್ರಾಮದ ವಿದ್ಯಾರ್ಥಿ ಭರತ್, ತಂದೆಯ ಅಕಾಲಿಕ ಮರಣದ ದುಃಖದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದಿದ್ದಾನೆ. ಶನಿವಾರ ಬೆಳಿಗ್ಗೆ ಗಣಿತ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾನೆ.
Read Full Story
11:20 AM (IST) Mar 29

Karnataka News Live 29 March 2026 ರಾಜ್ಯದಲ್ಲಿ 2028ಕ್ಕೆ ಬಿಜೆಪಿಗೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ - ಬಾಲಚಂದ್ರ ಜಾರಕಿಹೊಳಿ ಭವಿಷ್ಯ

ಗೋಕಾಕದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, 2028ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.

Read Full Story
10:04 AM (IST) Mar 29

Karnataka News Live 29 March 2026 ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ

ಅಮೆರಿಕ, ಇಸ್ರೇಲ್ ಮೈತ್ರಿಕೂಟವನ್ನು ಬೆಂಬಲಿಸುವ ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಎಚ್ಚರಿಕೆ ನೀಡಿದದ್ದಾರೆ. ನಿಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಭದ್ರತೆ ಇರಬೇಕು ಎಂದು ಬಯಸಿದರೆ ಅಮೆರಿಕ ಮತ್ತು ಇಸ್ರೇಲ್‌ಗೆ ನಿಮ್ಮ ಭೂಮಿ ಬಳಸಲು ಅನುಮತಿಸಬೇಡಿ ಎಂದು ಎಚ್ಚರಿಸಿದ್ದಾರೆ.

Read Full Story
09:56 AM (IST) Mar 29

Karnataka News Live 29 March 2026 ರೀಲ್ಸ್ ಸ್ಟಾರ್ ಲಕ್ಷ್ಮೀ ಅಜ್ಜಿ ಇನ್ನಿಲ್ಲ; ಕಿವಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ನಟನೆ

ರೀಲ್ಸ್ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಮೊಮ್ಮಗ ಸೂರಜ್ ಜೊತೆ ಸೇರಿ, ಉತ್ತರ ಕನ್ನಡದ ಸ್ಥಳೀಯ ಭಾಷೆಯಲ್ಲಿಯೇ ರೀಲ್ಸ್ ಮಾಡುತ್ತಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
Read Full Story
09:50 AM (IST) Mar 29

Karnataka News Live 29 March 2026 ದುಬೈನ ಅಮೆರಿಕ ನೆಲೆ, ಕುವೈತ್‌ ಏರ್‌ಪೋರ್ಟ್‌ಗೆ ಇರಾನ್‌ ದಾಳಿ

ದುಬೈನಲ್ಲಿರುವ 2 ಅಮೆರಿಕ ಸೈನ್ಯದ ಅಡಗುತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್‌, 500ಕ್ಕೂ ಹೆಚ್ಚು ಅಮೆರಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದ ಈ ಸ್ಥಳಗಳ ಮೇಲೆ ನಿಖರವಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ

Read Full Story
09:02 AM (IST) Mar 29

Karnataka News Live 29 March 2026 ನಮ್ಮ ಮತ ಮಾರಾಟಕ್ಕಿಲ್ಲ - ಮನೆ ಮುಂದೆ ನಾಮಫಲಕ ಅಳವಡಿಸಿದ ಪಾಲಹಳ್ಳಿಯ ರುದ್ರಮ್ಮ ಅಜ್ಜಿ

ಪಾಲಹಳ್ಳಿಯ 80 ವರ್ಷದ ವೃದ್ಧೆ ರುದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿನ ಆಮಿಷಗಳಿಗೆ ಬೇಸತ್ತು 'ನಮ್ಮ ಓಟು ಮಾರಾಟಕ್ಕಿಲ್ಲ, ಖರೀದಿಗೆ ಬಂದವರಿಗೆ ಓಟಿಲ್ಲ' ಎಂಬ ನಾಮಫಲಕವನ್ನು ತಮ್ಮ ಮನೆ ಮುಂದೆ ಹಾಕಿದ್ದಾರೆ. 

Read Full Story
08:44 AM (IST) Mar 29

Karnataka News Live 29 March 2026 ಜನ ನನ್ನನ್ನು ಶಾಂತಿದೂತ ಎಂದು ಸ್ಮರಿಸುವುದು ನನ್ನ ಬಯಕೆ - ಟ್ರಂಪ್‌

ನಾನು ಭಾರತ ನಡುವಿನ ಪಾಕಿಸ್ತಾನ ಸಂಘರ್ಷವೂ ಸೇರಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಜನ ನನ್ನನ್ನು ಮಹಾನ್‌ ಶಾಂತಿದೂತನಾಗಿ ಸ್ಮರಿಸಬೇಕೆನ್ನುವುದು ನನ್ನ ಬಯಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Read Full Story
08:36 AM (IST) Mar 29

Karnataka News Live 29 March 2026 Davanagere Bypolls - ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದ ಪ್ರದೀಪ್ ಈಶ್ವರ್; ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ಮುಖಂಡರ ಸವಾಲು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊರಕೆ, ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಪಕ್ಷಗಳ ನಡುವೆ ಘೋಷಣೆಗಳ ಸಮರ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
Read Full Story