ಪಾಲಹಳ್ಳಿಯ 80 ವರ್ಷದ ವೃದ್ಧೆ ರುದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿನ ಆಮಿಷಗಳಿಗೆ ಬೇಸತ್ತು 'ನಮ್ಮ ಓಟು ಮಾರಾಟಕ್ಕಿಲ್ಲ, ಖರೀದಿಗೆ ಬಂದವರಿಗೆ ಓಟಿಲ್ಲ' ಎಂಬ ನಾಮಫಲಕವನ್ನು ತಮ್ಮ ಮನೆ ಮುಂದೆ ಹಾಕಿದ್ದಾರೆ. 

ಶ್ರೀರಂಗಪಟ್ಟಣ: ನಮ್ಮ ಓಟು ಮಾರಾಟಕ್ಕಿಲ್ಲ. ಖರೀದಿಗೆ ಬಂದವರಿಗೆ ಓಟಿಲ್ಲ ಎಂದು ತಾಲೂಕಿನ ಪಾಲಹಳ್ಳಿಯ 80 ವರ್ಷದ ವೃದ್ಧೆ ತಮ್ಮ ಮನೆ ಮುಂದೆ ನಾಮಫಲಕ ಹಾಕಿ ಗಮನ ಸೆಳೆದಿದ್ದಾರೆ. 

Add Asianetnews Kannada as a Preferred SourcegooglePreferred

ಗ್ರಾಮದ ರುದ್ರಮ್ಮ ನಾಗರಾಜು (80) ಮಾ.29 ರಂದು ನಡೆಯಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ಮತದಾರರನ್ನು ಸೆಳೆಯುತ್ತಿರುವ ಆಮಿಷಗಳಿಂದ ಬೇಸರಗೊಂಡು ಈ ರೀತಿ ತಮ್ಮ ಮನೆ ಮುಂದೆ ನಾಮಫಲಕ ಹಾಕಿದ್ದಾರೆ. 

ರುದ್ರಮ್ಮಾ ಅಜ್ಜಿ ಹೇಳಿದ್ದೇನು?

ರುದ್ರಮ್ಮರ ಪುತ್ರ ಪ್ರಸನ್ನ ಈ ಸಂಬಂಧ ಪ್ರತಿಕ್ರಿಯಿಸಿ, ನಮ್ಮ ಮನೆಯಲ್ಲಿ ನನ್ನ ತಾಯಿ ರುದ್ರಮ್ಮ ಹಾಗೂ ನನ್ನದು ಸೇರಿ ಎರಡು ಮತಗಳಿವೆ. ಚುನಾವಣೆಗೆ ಸ್ಪರ್ಧಿಸಿರುವವರು ಮತದಾರರಿಗೆ ಹಣ ಸೇರಿದಂತೆ ಇನ್ನಿಲ್ಲದ ಆಮಿಷಗಳನ್ನು ತೋರುತ್ತಿದ್ದಾರೆ. ಸ್ಥಳೀಯ ಸಂಘ, ಸಂಸ್ಥೆಗಳ ಚುನಾವಣೆಗೂ ಆಮಿಷ ಹಾಗೂ ಹಣ ಹಂಚಿಕೆ ಮಾಡಿದರೆ ಸಹಕಾರ ಸಂಘಗಳು ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಈ ವ್ಯವಸ್ಥೆಯಿಂದ ಬೇಸರಗೊಂಡು ನಮ್ಮ ಓಟು ಮಾರಾಟಕ್ಕಿಲ್ಲ, ಖರೀದಿಗೆ ಬಂದವರಿಗೆ ನಮ್ಮ ಓಟಿಲ್ಲ ಎಂಬ ನಾಮಫಲಕ ಹಾಕಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಗೆಜ್ಜಲಗೆರೆ ಗ್ರಾಪಂ ನಗರಸಭೆಯಿಂದ ಹೊರಗಿಡುವುದು ಕಷ್ಟದ ಕೆಲಸ: ಸಚಿವ ಚಲುವರಾಯಸ್ವಾಮಿ

ಇದನ್ನೂ ಓದಿ: ಮಂಡ್ಯ ಕುರುಬರ ಸಂಘದ ಅಧ್ಯಕ್ಷನಿಗೆ ಮಸಿ ಬಳಿದಿದ್ಯಾಕೆ? ಏನಿದು ವಿವಾದ?

Scroll to load tweet…

--------