MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ ಪ್ರೀ ವೆಡ್ಡಿಂಗ್‌ನಲ್ಲಿ ಮೇಳೈಸಿದ ಸಂಪ್ರದಾಯ: ಸೀರೆಗೆ ಫ್ಯಾನ್ಸ್ ಫಿದಾ

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ ಬುರ್ಲಿ ಪ್ರೀ ವೆಡ್ಡಿಂಗ್‌ನಲ್ಲಿ ಮೇಳೈಸಿದ ಸಂಪ್ರದಾಯ: ಸೀರೆಗೆ ಫ್ಯಾನ್ಸ್ ಫಿದಾ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ನಲ್ಲಿ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2 Min read
Author : Govindaraj S
Published : Mar 29 2026, 11:33 PM IST
Share this Photo Gallery
  • FB
  • TW
  • Linkdin
  • Whatsapp
17
ಹೊಸ ಜೀವನದ ಆರಂಭ
Image Credit : Sanjana Burli Instagram

ಹೊಸ ಜೀವನದ ಆರಂಭ

ನಟಿ ಸಂಜನಾ ಬುರ್ಲಿ ಅವರು ಮಾರ್ಚ್‌ 25ನೇ ತಾರೀಖಿನಂದು ಸಮರ್ಥ್ ಚೆನ್ನಗಿರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 'ಪುಟ್ಟಕ್ಕನ ಮಕ್ಕಳು' ಹಾಗೂ 'ಶ್ರೀಗಂಧದಗುಡಿ' ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಸಂಜನಾ, ಈಗ ಹೊಸ ಜೀವನದ ಆರಂಭ ಮಾಡಿದ್ದಾರೆ.

27
ನಾವು ಎಂಬ ಸತ್ಯ
Image Credit : Sanjana Burli Instagram

ನಾವು ಎಂಬ ಸತ್ಯ

ಇದೀಗ ಸಂಜನಾ ಬುರ್ಲಿ ಅವರು ತಮ್ಮ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ನಲ್ಲಿ ತೆಗೆದ ಬ್ಯೂಟಿಫುಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಜೊತೆಗೆ 'ಅಲಂಕಾರ ಮಾಸುತ್ತದೆ, ಆಚರಣೆಗಳು ಮಾಯವಾಗುತ್ತವೆ. ಉಳಿದಿರುವುದು ನಾವು ಎಂಬ ಸತ್ಯ' ಎಂಬ ವಿಶೇಷವಾದ ಕ್ಯಾಪ್ಶನ್ ಕೊಟ್ಟಿದ್ದಾರೆ. ಜೊತೆಗೆ ಸಂಜನಾ ಸೀರೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Related Articles

Related image1
Puttakkana Makkalu ನಟಿ ಸಂಜನಾ ಬುರ್ಲಿ ಮದುವೆ ಸಂಭ್ರಮ: ರಿಸೆಪ್ಷನ್​ ಫೋಟೋಸ್​ ಇಲ್ಲಿವೆ
Related image2
ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ: ಮದ್ವೆಯ ಅಪರೂಪದ​ ಫೋಟೋಸ್​ ಇಲ್ಲಿವೆ
37
ಓದುವಾಗಲೇ ನಟನೆ ಆಫರ್
Image Credit : Sanjana Burli Instagram

ಓದುವಾಗಲೇ ನಟನೆ ಆಫರ್

ಸಂಜನಾ ಬುರ್ಲಿ ಅವರ ಕೈ ಹಿಡಿದಿರುವ ಸಮರ್ಥ್ ಚೆನ್ನಗಿರಿ ಅವರು ವೃತ್ತಿಯಲ್ಲಿ ವೈದ್ಯರು. ಸಂಜನಾ ಅವರು ಕೂಡ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಓದಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದವರು. ಸಂಜನಾ ಅವರು ಇನ್ನೂ ಡಿಗ್ರಿ ಓದುವಾಗಲೇ ನಟನೆ ಆಫರ್ ಬಂದಿತ್ತು.

47
ಖಾಸಗಿ ರೆಸಾರ್ಟ್‌ನಲ್ಲಿ ಮದುವೆ
Image Credit : Sanjana Burli Instagram

ಖಾಸಗಿ ರೆಸಾರ್ಟ್‌ನಲ್ಲಿ ಮದುವೆ

ಸಂಜನಾ ಬುರ್ಲಿ ಮೊದಲ ಧಾರಾವಾಹಿ ‘ಲಗ್ನಪತ್ರಿಕೆ’ ನಂತರ ‘ಪುಟ್ಟಕ್ಕನ ಮಕ್ಕಳು’ ಇದಾದ ಮೇಲೆ ಸಿಕ್ಕ ಆಫರ್ ‘ಶ್ರೀಗಂಧದ ಗುಡಿ’.ಈ ಜೋಡಿ ಮದುವೆ ಅದ್ದೂರಿಯಾಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದಿತ್ತು. ಮಾರ್ಚ್‌ 24ರ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

57
ಬಹುಕಾಲದ ಗೆಳೆಯ
Image Credit : Sanjana Burli Instagram

ಬಹುಕಾಲದ ಗೆಳೆಯ

ಸಮರ್ಥ್ ಅವರು ಸಂಜನಾ ಅವರ ಬಹುಕಾಲದ ಗೆಳೆಯ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಂಜನಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಸಂಜನಾ ಕಂಗೊಳಿಸುತ್ತಿದ್ದರೆ, ಸಮರ್ಥ್ ಕೂಡ ಅಷ್ಟೇ ಮಿಂಚಿದ್ದರು.

67
ಕಿರುತೆರೆಗೆ ರೀಎಂಟ್ರಿ
Image Credit : Sanjana Burli Instagram

ಕಿರುತೆರೆಗೆ ರೀಎಂಟ್ರಿ

ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಎಂಬ ಐಎಎಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಓದಿನ ಕಾರಣ ನೀಡಿ ಅವರು ಈ ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು. ನಂತರ ಕಲರ್ಸ್ ಕನ್ನಡದ 'ಶ್ರೀಗಂಧದಗುಡಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ರೀಎಂಟ್ರಿ ಕೊಟ್ಟರು.

77
ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ
Image Credit : Sanjana Burli Instagram

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ

ಇನ್ನು ಸಂಜನಾ ಅವರ ಪತಿ ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಪುಟ್ಟಕ್ಕನ ಮಕ್ಕಳು
ನಟಿ
ಮದುವೆ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್
Recommended image2
ಬೋಟಿನಲ್ಲಿ ಶೂಟಿಂಗ್ ವೇಳೆ ಅವಘಡ, ನಟ ರಾಹುಲ್ ಸಾವಿಗೆ ಬೆಚ್ಚಿಬಿದ್ದ ಸೀರಿಯಲ್ ಇಂಡಸ್ಟ್ರಿ
Recommended image3
ಧಾರವಾಹಿ ಶೂಟಿಂಗ್ ನಡುವೆ ದುರಂತ, ಸಮುದ್ರದಲ್ಲಿ ಮುಳುಗಿ ಜನಪ್ರಿಯ ನಟ ರಾಹುಲ್ ಸಾವು
Related Stories
Recommended image1
Puttakkana Makkalu ನಟಿ ಸಂಜನಾ ಬುರ್ಲಿ ಮದುವೆ ಸಂಭ್ರಮ: ರಿಸೆಪ್ಷನ್​ ಫೋಟೋಸ್​ ಇಲ್ಲಿವೆ
Recommended image2
ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ: ಮದ್ವೆಯ ಅಪರೂಪದ​ ಫೋಟೋಸ್​ ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved