ವಿಕ್ಟರಿ ವೆಂಕಟೇಶ್ ತೆಲುಗು ಚಿತ್ರರಂಗದಲ್ಲಿ ಯಾವುದೇ ವಿವಾದಗಳಿಲ್ಲದ ನಟ. ಸದ್ಯ ಅವರು ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟು ಅಲ್ಲಿನ ಫೇಮಸ್ ಮಸಾಲೆ ದೋಸೆ ಸೇರಿದಂತೆ ಇತರ ಉಪಹಾರಗಳನ್ನು ಸವಿದಿದ್ದಾರೆ.
ಟಾಲಿವುಡ್ ಸ್ಟಾರ್ ವಿಕ್ಟರಿ ವೆಂಕಟೇಶ್ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿ ಭವನಕ್ಕೆ ಭೇಟಿ ಕೊಟ್ಟು ಅಲ್ಲಿನ ಫೇಮಸ್ ದೋಸೆ ಸೇರಿದಂತೆ ಇತರ ಉಪಹಾರಗಳನ್ನು ಸವಿದಿದ್ದಾರೆ. ಇಂದು ಬೆಳಗ್ಗೆ ವಿದ್ಯಾರ್ಥಿ ಭವನದಲ್ಲಿ ವೆಂಕಟೇಶ್ ದಗ್ಗುಬಾಟಿ ಅವರಿಗೆ ಉಪಹಾರ ಆಯೋಜಿಸುವ ಗೌರವ ಸಿಕ್ಕಿತು. ಟಾಲಿವುಡ್‌ನ ಅತ್ಯುತ್ತಮ ನಟನಿಗೆ ಸೇವೆ ಸಲ್ಲಿಸಲು ನಮಗೆ ನಿಜವಾಗಿಯೂ ಸಂತೋಷವಾಯಿತು! ಎಂದು ವಿದ್ಯಾರ್ಥಿ ಭವನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ವಿಕ್ಟರಿ ವೆಂಕಟೇಶ್ ತೆಲುಗು ಚಿತ್ರರಂಗದಲ್ಲಿ ಯಾವುದೇ ವಿವಾದಗಳಿಲ್ಲದ ನಟ. ಕ್ಲೀನ್ ಇಮೇಜ್‌ನೊಂದಿಗೆ ಮಿಂಚುತ್ತಿದ್ದಾರೆ. ನಾಲ್ಕು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಪ್ರೇಮಕಥೆಗಳು, ಕೌಟುಂಬಿಕ ಚಿತ್ರಗಳಿಂದಲೂ ಗಮನ ಸೆಳೆದಿದ್ದಾರೆ. ಹಲವು ಗೆಲುವುಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ ಕುಟುಂಬ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸೋಗ್ಗಾಡು ಶೋಭನ್ ಬಾಬು ನಂತರ ಫ್ಯಾಮಿಲಿ ಆಡಿಯನ್ಸ್‌ಗೆ, ವಿಶೇಷವಾಗಿ ಮಹಿಳಾ ಪ್ರೇಕ್ಷಕರಿಗೆ ಹತ್ತಿರವಾದ ನಟ ವೆಂಕಟೇಶ್ ಎನ್ನಬಹುದು.
ತಮ್ಮ ಸಿನಿಮಾಗಳು ಕುಟುಂಬ ಸಮೇತರಾಗಿ ನೋಡುವಂತಿದ್ದರೆ ಅವುಗಳ ರೇಂಜ್ ಹೇಗಿರುತ್ತದೆ, ಯಾವ ರೇಂಜ್‌ನಲ್ಲಿ ಯಶಸ್ವಿಯಾಗುತ್ತವೆ ಎಂಬುದನ್ನು ಈ ಕಳೆದ ವರ್ಷ ಸಂಕ್ರಾಂತಿಗೆ ಬಂದ `ಸಂಕ್ರಾಂತಿಕಿ ವಸ್ತುನ್ನಾಂ` ಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ. ಈ ಚಿತ್ರ ಮುನ್ನೂರು ಕೋಟಿಗೂ ಹೆಚ್ಚು ಗಳಿಕೆ ಕಂಡಿರುವುದು ವಿಶೇಷ. ಇನ್ನು ಟಾಲಿವುಡ್‌ನ 90ರ ದಶಕದ ಸ್ಟಾರ್ ಹೀರೋಗಳಲ್ಲಿ ವಿಕ್ಟರಿ ವೆಂಕಟೇಶ್ ಕೂಡ ಒಬ್ಬರು. ತೆಲುಗು ಇಂಡಸ್ಟ್ರೀಲಿ ಅವ್ರಿಗೆ ಒಂದು ವಿಶೇಷ ಇಮೇಜ್ ಇದೆ.
ಫ್ಯಾಮಿಲಿ ಪ್ರೇಕ್ಷಕರ ಬೆಂಬಲದಿಂದ ವೆಂಕಟೇಶ್ ಸ್ಟಾರ್ ಹೀರೋ ಆಗಿ ಬೆಳೆದ್ರು. 65 ವರ್ಷದಲ್ಲೂ ವೆಂಕಿ ತಮ್ಮ ಸಿನಿಮಾ ಜರ್ನಿಯನ್ನ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ಮಾಡ್ತಾ ಫ್ಯಾನ್ಸ್‌ಗಳಿಗೆ ಖುಷಿ ಕೊಡ್ತಿದ್ದಾರೆ. ಸದ್ಯ ವೆಂಕಟೇಶ್‌ಗೆ 1985ರಲ್ಲಿ ನೀರಜ ಜೊತೆ ಮದುವೆಯಾಗಿದೆ. ಇವರಿಗೆ ಮೂವರು ಹೆಣ್ಣು ಮಕ್ಕಳು. ಒಬ್ಬ ಮಗ ಅರ್ಜುನ್ ಇದ್ದಾನೆ. ಈಗಾಗಲೇ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿದ್ದಾರೆ ವೆಂಕಿ. ಮಗ ಅರ್ಜುನ್ ಓದುತ್ತಿದ್ದಾನೆ. ಭವಿಷ್ಯದಲ್ಲಿ ಅರ್ಜುನ್‌ರನ್ನು ನಟನನ್ನಾಗಿ ಮಾಡುವ ಸಾಧ್ಯತೆ ಇದೆ.
ವಿದ್ಯಾರ್ಥಿ ಭವನದ ಬಗ್ಗೆ
ಬೆಂಗಳೂರಿನ ಬಸವನಗುಡಿಯ ಐಕಾನಿಕ್ ವಿದ್ಯಾರ್ಥಿ ಭವನವು ಹಳೆಯ ತಲೆಮಾರಿನಿಂದ ಹಿಡಿದು ಪ್ರಸ್ತುತ ನಟರವರೆಗೆ ಅನೇಕ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಕನ್ನಡದ ನಟರಾದ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶ್ರೀನಾಥ್ ಅವರಲ್ಲದೆ, ಇತ್ತೀಚೆಗೆ ನಟರಾದ ಆಶಿಶ್ ವಿದ್ಯಾರ್ಥಿ, ಮತ್ತು ರಜನೀಕಾಂತ್ ನಂತಹ ತಾರೆಗಳು ಇಲ್ಲಿನ ಮಸಾಲೆ ದೋಸೆಯನ್ನು ಸವಿದಿದ್ದಾರೆ.


