ಕುಣಿಗಲ್ ಬೈಪಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಕ್ಯಾಂಟರ್ ನಡುವಿನ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
- Home
- News
- State
- Karnataka News Live: ಕುಣಿಗಲ್ ಬೈಪಾಸ್‌ನಲ್ಲಿ ಕಾರು ಅಪಘಾತ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬ ನಾಲ್ವರು ಸಾವು
Karnataka News Live: ಕುಣಿಗಲ್ ಬೈಪಾಸ್‌ನಲ್ಲಿ ಕಾರು ಅಪಘಾತ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬ ನಾಲ್ವರು ಸಾವು

ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ ರಾಜಕೀಯ ಬೆಳವ ಣಿಗೆ ಆಗಬಹುದು ಎಂದು ಹೇಳಿದ್ದಾರೆಯೇ ಹೊರತು ಹೀಗೆಯೇ ಆಗುತ್ತದೆ ಎಂದು ಹೇಳಿಲ್ಲ. ನೀವು ಊಹೆ ಮಾಡಿಕೊಂಡು ಏನೇನೋ ಸುದ್ದಿ ಮಾಡಿದರೆ ಹೇಗೆ? ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡು ವುದು ಉತ್ತಮ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ (2013-2018) ಇದ್ದಂತೆ ಈಗ (ಎರಡನೇ ಅವಧಿಯಲ್ಲಿ) ಇಲ್ಲ ಎಂದು ನೀವು (ಮಾಧ್ಯಮಗಳು) ಹೇಳಬಹುದು. ಬಹುತೇಕ ಜನರ ಅಭಿಪ್ರಾಯ ಕೂಡ ಇದೇ ಆಗಿದೆ. ಇದಕ್ಕೆ ಪಕ್ಷದಲ್ಲಿ ಹಲವು ಪವರ್ ಸೆಂಟರ್ಗಳಿರುವುದೇ ಕಾರಣ ಎಂದು ಕೆಎನ್ ರಾಜಣ್ಣ ಹೇಳಿದ್ದರು.
Karnataka News Live 29 June 2025 ಕುಣಿಗಲ್ ಬೈಪಾಸ್‌ನಲ್ಲಿ ಕಾರು ಅಪಘಾತ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬ ನಾಲ್ವರು ಸಾವು
Karnataka News Live 29 June 2025 ಕರ್ನಾಟಕ ಜನ ಸೈಬರ್ ವಂಚಕರಿಂದ ಕಳೆದುಕೊಂಡಿದ್ದು ಎಷ್ಟು ಕೊಟಿ? ಬೆಚ್ಚಿ ಬೀಳಿಸಿದ ವರದಿ
ಸೈಬರ್ ಫ್ರಾಡ್ ದೇಶಾದ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದೀಗ ಸೈಬರ್ ಫ್ರಾಡ್ ವರದಿ ಬಹಿರಂಗವಾಗಿದೆ. ಐಟಿ ಸಿಟಿ ಹೊಂದಿರುವ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೋಟಿ ಕೋಟಿ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ. ಕರ್ನಾಟಕದ ಅಮಾಯಕರು ಸೈಬರ್ ಫ್ರಾಡ್‌ನಿಂದ ಕಳೆದುಕೊಂಡಿದ್ದು ಎಷ್ಟು ಕೊಟಿ ಗೊತ್ತಾ?
Karnataka News Live 29 June 2025 ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಹಂತಕನ ಸೆರೆ - ಅರಣ್ಯ ಸಿಬ್ಬಂದಿ ಕಾರ್ಯಕ್ಕೆ ಈಶ್ವರ್ ಖಂಡ್ರೆ ಮೆಚ್ಚುಗೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯ ಮೇರೆಗೆ ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
Karnataka News Live 29 June 2025 ಪೆಹಲ್ಗಾಂ ದಾಳಿ ಬಳಿಕ ಎಲ್ಲಾ ಒಪ್ಪಂದ ರದ್ದಾದರೂ ಏಷ್ಯಾಕಪ್‌ನಲ್ಲಿ ಭಾರತ ಪಾಕ್ ಮುಖಾಮುಖಿ?
ಪೆಹಲ್ಗಾಂ ದಾಳಿ ಬಳಿಕ ಐತಿಹಾಸಿಕ ಸಿಂದೂ ನಧಿ ಒಪ್ಪಂದ ಸೇರಿದಂತೆ ಪಾಕಿಸ್ತಾನ ಜೊತೆಗಿನ ಎಲ್ಲಾ ಒಪ್ಪಂದ, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ ಎಂದು ಮೂಲಗಳು ಹೇಳುತ್ತಿದೆ.
Karnataka News Live 29 June 2025 ಕಳೆದ ಬಾರಿ ಸಮಸ್ಯೆ ಮರುಕಳಿಸದಂತೆ ನಿಗಾ ವಹಿಸಿ - ಸಚಿವ ಸತೀಶ್ ಜಾರಕಿಹೊಳಿ
ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದೆ. ಲಕ್ಷಾಂತರ ಜನ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಜಾತ್ರಾ ಸಮಯದಲ್ಲಿ ಕಳೆದ ಬಾರಿಯಾದ ಸಮಸ್ಯೆಗಳು ಮರುಕಳಿಸದಂತೆ ನಿಗಾವಹಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Karnataka News Live 29 June 2025 ರಿಲಯನ್ಸ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಅನಂತ್ ಅಂಬಾನಿ ವಾರ್ಷಿಕ ಸ್ಯಾಲರಿ ಬಹಿರಂಗ
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಯಸ್ಸು 30. ಆದರೆ ಅನಂತ್ ಅಂಬಾನಿ ರಿಲಯನ್ಸ್‌ನಿಂದ ಪಡೆಯುತ್ತಿರುವ ವಾರ್ಷಿಕ ಸ್ಯಾಲರಿ ಎಷ್ಟು?
Karnataka News Live 29 June 2025 ಸೂಪರ್ ಮಾರ್ಕೆಟ್‌ಗೆ ಬಂದು ಬುರ್ಖಾ ಹಿಡಿಸುವಷ್ಟು ಕಿರಾಣಿ ಸಾಮಾನು ತುಂಬಿಕೊಂಡು ಹೋದ ಕಳ್ಳಿಯರು!
ಕೊಪ್ಪಳದ ಸೂಪರ್ ಮಾರ್ಕೆಟ್ ವಿಎ ಬಜಾರ್‌ನಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ₹20,000 ಮೌಲ್ಯದ ವಸ್ತುಗಳನ್ನು ಕದ್ದ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳತನ ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Karnataka News Live 29 June 2025 ಮುಸ್ಲಿಂ ವ್ಯಕ್ತಿ ಪ್ರೀತಿಸಿ ಮದುವೆಯಾಗಿದ್ದ ಪುಷ್ಪ; ಬಿಬಿಎಂಪಿ ಕಸದ ಲಾರಿಯಲ್ಲಿ ಅನಾಥ ಶವವಾಗಿ ಪತ್ತೆ!
ಬೆಂಗಳೂರಿನ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆಯ ಒಳ ಉಡುಪಿಲ್ಲದ ಶವದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯನ್ನು ಲವ್ ಮ್ಯಾರೇಜ್ ಮಾಡಿಕೊಂಡು ಹುಳಿಮಾವು ಏರಿಯಾದಲ್ಲಿ ವಾಸವಾಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂದು ಗುರುತಿಸಲಾಗಿದೆ. ಗಂಡನೇ ಕೊಲೆ ಮಾಡಿದ ಶಂಕೆಯಿದೆ.
Karnataka News Live 29 June 2025 ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ - ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ. ದೇಶದ ಸಂವಿಧಾನ ಮೂಲಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
Karnataka News Live 29 June 2025 ಗಾಂಜಾ ಪೆಡ್ಲರ್ ಬಂಧಿಸಿ ಕರೆತರುವಾಗ ಪಿಎಸ್‌ಐಗೆ ಗುದ್ದಿ ಹೋದ ಲಾರಿ; ಚಿಕಿತ್ಸೆ ಫಲಿಸದೇ ಸಾವು
Karnataka News Live 29 June 2025 ಸಿಎಂ ಸಿದ್ದರಾಮಯ್ಯ ಇಷ್ಟು ಅಸಹಾಯಕರಾಗಿದ್ದನ್ನು ನೋಡೇ ಇರಲಿಲ್ಲ - ಸಂಸದ ಬೊಮ್ಮಾಯಿ
ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡಿದ್ದೇನೆ, ಆದರೆ ಅವರು ಇಷ್ಟು ಅಸಹಾಯಕರಾಗಿ ಇರೋದನ್ನು ನೋಡೇ ಇರಲಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Karnataka News Live 29 June 2025 18.8 ಕೋಟಿ ಡ್ರಗ್ಸ್ ಸಾಗಣೆ - ಏರ್‌ಪೋರ್ಟ್‌ನಲ್ಲಿ 6ರ ಹರೆಯದ ಬಾಲಕನ ಬಂಧನ
ಮಾರಿಷಸ್ ಏರ್‌ಪೋರ್ಟ್‌ನಲ್ಲಿ 6 ವರ್ಷದ ಬಾಲಕನೂ ಸೇರಿದಂತೆ ಒಟ್ಟು 7ಜನರನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಂದ 18.8 ಕೋಟಿ ರೂ. ಮೌಲ್ಯದ 161 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
Karnataka News Live 29 June 2025 ಇಂದೋರ್‌ನ 32 ಗಂಟೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಮೂವರು ಸಾವು, ಆತಂಕಗೊಂಡ ಸವಾರರು
ಟ್ರಾಫಿಕ್ ಪದ ಕೇಳಿದರೆ ಸಾಕು ಅದು ಬೆಂಗಳೂರು ಎಂದು ಕಣ್ಮುಚ್ಚಿ ಹೇಳುತ್ತೇವೆ. ಆದರೆ ಬೆಂಗಳೂರಿಗಿಂತ ದೇಶದ ಇತರ ನಗರಗಳ ಟ್ರಾಫಿಕ್ ತೀರಾ ಹದಗೆಡುತ್ತಿದೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ 32 ಗಂಟೆ ಟ್ರಾಫಿಕ್ ಜಾಮ್ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.
Karnataka News Live 29 June 2025 ಶ್ರೀಲೀಲಾ ಸಂಭಾವನೆ ಡಬಲ್, ನಿರ್ಮಾಪಕರಿಗೆ ಶಾಕ್?
ಟಾಲಿವುಡ್‌ನಲ್ಲಿ ಯುವ ನಟಿಯಾಗಿ ವೇಗವಾಗಿ ಹೆಸರು ಮಾಡುತ್ತಿರುವ ಶ್ರೀಲೀಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಶ್ರೀಲೀಲಾ ತಮ್ಮ ಸಂಭಾವನೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.
Karnataka News Live 29 June 2025 ಮದುವೆಯಾಗದ ಕಾರಣ ಕೊಟ್ಟ 79 ವರ್ಷದ ನಿವೃತ್ತ ಸೇನಾಧಿಕಾರಿ - ನೀವೇ ಸ್ಫೂರ್ತಿಯ ಸೆಲೆ ಅಂತಿರೋ ಮಹಿಳೆಯರು!
ನಿವೃತ್ತ ಸೇನಾ ಲೇಡಿ ಅಧಿಕಾರಿಯೊಬ್ಬರು ತಮ್ಮ 79ನೇ ವಯಸ್ಸಿನಲ್ಲಿ ಆಹಾರ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಶಿಸ್ತುಬದ್ಧ ಜೀವನದ ಜೊತೆ ಅವಿವಾಹಿತೆಯಾಗಿರುವ ಇವರು, ಮದುವೆಯಾಗದ ಕಾರಣವನ್ನೂ ನೀಡಿದ್ದಾರೆ. ಇದು ಹಲವು ಮಹಿಳೆಯರ ಶ್ಲಾಘನೆಗೆ ಕಾರಣವಾಗಿದೆ. ಏನಿವರ ಕಥೆ?
Karnataka News Live 29 June 2025 ದ್ವಿಚಕ್ರ ವಾಹನ ಓಡಿಸುವವರಿಗೆ ಶೀಘ್ರವೇ ಕೇಂದ್ರದಿಂದ ಹೊಸ ನಿಯಮ ಜಾರಿ, ಇದು ನೆನಪಿರಲಿ
Karnataka News Live 29 June 2025 ನಿವೃತ್ತ ಶಿಕ್ಷಕನಿಗೆ ಬೆಳ್ಳಿ ರಥದಲ್ಲಿ ಅದ್ದೂರಿ ಬೀಳ್ಕೊಡುಗೆ, ಶಿಕ್ಷಕ ಸೇವೆಗೆ ಗ್ರಾಮಸ್ಥರಿಂದ ಗೌರವ
Karnataka News Live 29 June 2025 ಪೊಲೀಸ್ ವಿಚಾರಣೆ ವೇಳೆ ಯುವಕ ಸಾವು - ಕುಟುಂಬಸ್ಥರಿಂದ ಪ್ರತಿಭಟನೆ
Karnataka News Live 29 June 2025 ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಮಿತಿ ಕಡಿಮೆಯಾಗದಿರಲಿ - ಬಸವರಾಜ ರಾಯರಡ್ಡಿ
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ 16 ನೇ ಹಣಕಾಸು ಯೋಜನೆಯ ಅನುದಾನ ಮಿತಿ ಕಡಿಮೆ ಮಾಡದಂತೆ ಬಿಡುಗಡೆ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
Karnataka News Live 29 June 2025 ವಿಶೇಷ ಚೇತನರ ಭಾವನೆ ಅಭಿವ್ಯಕ್ತಿಸಲು ರೋಟರಿ ಕಾರ್ಯ ಶ್ಲಾಘನೀಯ - ಸಂಸದ ಬೊಮ್ಮಾಯಿ
ಕುರುಡ ಮತ್ತು ಮೂಕ ಮಕ್ಕಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಇದನ್ನು ಅರಿತು ರೋಟರಿ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.