ದ್ವಿಚಕ್ರ ವಾಹನಗಳಿಗೆ ಎರಡು ಹೆಲ್ಮೆಟ್ ಕಡ್ಡಾಯಗೊಳಿಸುವ ಹಾಗೂ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಅಳವಡಿಸುವ ಕುರಿತು ಸರ್ಕಾರದ ಹೊಸ ಪ್ರಸ್ತಾವನೆ. ಇದರಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ.
ದ್ವಿಚಕ್ರ ವಾಹನ ತಯಾರಕರು ವಾಹನ ಖರೀದಿಯ ಸಮಯದಲ್ಲಿ ಎರಡು ಹೆಲ್ಮೆಟ್‌ಗಳನ್ನು ಉಚಿತವಾಗಿ ಒದಗಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಪ್ರಸ್ತಾಪಿಸಿದೆ. ಏಕೆಂದರೆ ಭಾರತದಲ್ಲಿ ಅತೀ ಹೆಚ್ಚು ಅಪಘಾತದ ಪ್ರಕರಣಗಳು ಮತ್ತು ಮೃತ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದಾಗ ಬೈಕ್ ಸವಾರರೇ ಹೆಚ್ಚು ಅದರಲ್ಲಿ ಪ್ರಮುಖ ಕಾರಣಗಳಲ್ಲಿ ಹೆಲ್ಮೆಟ್ ಧರಿಸದೇ ಓಡಿಸಿರುವುದೇ ಹೆಚ್ಚು. ಈ ಹಿನ್ನೆಲೆಯಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ನಿಯಮಗಳು 2025ರ ಎರಡು ಮಹತ್ವದ ಕರಡು ತಿದ್ದುಪಡಿ ಮಸೂದೆಗಳನ್ನು ಹೊರಡಿಸಿದೆ.
ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಕಡ್ಡಾಯ
2026ರ ಜನವರಿ 1ರಿಂದ ತಯಾರಾಗುವ ಎಲ್ಲಾ ತ್ರಿಚಕ್ರ ವಾಹನಗಳಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ABS) ಅನ್ನು ಕಡ್ಡಾಯಗೊಳಿಸಲಾಗಿದೆ. ಈ ತಂತ್ರಜ್ಞಾನವು ಬ್ರೇಕ್ ಹಾಕಿದಾಗ ಟೈರ್‌ಗಳು ಬಿದ್ದುಹೋಗುವುದನ್ನು ತಡೆಯುತ್ತವೆ ಮತ್ತು ವಾಹನದ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಪರಿಣಾಮವಾಗಿ ಅಪಘಾತಗಳ ತೀವ್ರತೆಯನ್ನು ಕಡಿಮೆ ಮಾಡಬಹುದು. ಈ ವ್ಯವಸ್ಥೆ ಐಎಸ್ 14664:2010 ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಕರಡು ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ
ಸರ್ಕಾರವು ನಾಗರಿಕರಿಂದ ತಮ್ಮ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳನ್ನು 30 ದಿನಗಳ ಒಳಗೆ comments-morth@gov.in ಗೆ ಕಳುಹಿಸಲು ಆಹ್ವಾನಿಸಿದೆ. ಈ ನಿಯಮಗಳು ಅನ್ವಯವಾಗುವುದರಿಂದ ಸಾರ್ವಜನಿಕರಲ್ಲಿ ಸುರಕ್ಷತೆ ಕುರಿತು ಜಾಗೃತಿ ಹೆಚ್ಚುವುದು ಮಾತ್ರವಲ್ಲದೆ, ರಸ್ತೆ ಸಂಚಾರದಲ್ಲಿ ಹೊಣೆಗಾರಿಕೆ ಹಾಗೂ ಜವಾಬ್ದಾರಿಯುತ ಮನೋಭಾವವನ್ನು ಬೆಳೆಸಲಿದೆ.
ಇದೇ ಸಂದರ್ಭದಲ್ಲಿ, ಪ್ರತಿಯೊಬ್ಬ ಬೈಕ್ ಸವಾರನು ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯಲ್ಲ – ಅದು ನಿಮ್ಮ ಜೀವ ಉಳಿಸುವ ರಕ್ಷಣೆಯ ಮಿತಿ ರೇಖೆ. ರಸ್ತೆ ಮೇಲೆ ಪ್ರತಿದಿನವೂ ಅಪಾಯ ಅಡಗಿದೆ. ಎಚ್ಚರಿಕೆ ನಿಮ್ಮ ಕೈಯಲ್ಲಿದೆ ಎಂಬುದನ್ನು ಎಂದಿಗೂ ಮರೆಯಬಾರದು.
ಸರ್ಕಾರದ ಕ್ರಮಗಳೊಂದಿಗೆ ನಮ್ಮಲ್ಲಿ ಬದಲಾಗಿರಬೇಕಾಗಿರುವುದು ಏನು?
ಸರ್ಕಾರವು ಸಮಸ್ಯೆಗಳ ತೀವ್ರತೆಗೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಿಂದೆ, ದ್ವಿಚಕ್ರ ವಾಹನಗಳ ಸಮಯದಲ್ಲಿ ದಿನದ ಹೊತ್ತಿನಲ್ಲಿ ಸಾಗುವ ವೇಳೆಲೂ ಹಳೆಯ ವಾಹನಗಳಲ್ಲಿ ಫ್ರಂಟ್ ಲೈಟ್ ಬೆಳಗುವ ವ್ಯವಸ್ಥೆ ಇರಲಿಲ್ಲ. ಇದೀಗ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಬೆಳಕು ಆನ್ ಆಗುವಂತೆ ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಆಂಟಿ-ಲಾಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.
ಇನ್ನು ಮುಂದೆ ಎರಡು ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿಸಲು ಕೂಡ ಉದ್ದೇಶಿಸಲಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರನಿಗೆ ತನ್ನ ಪ್ರಯಾಣದ ಅಪಾಯವನ್ನು ಅರಿಯಲು ನೆರವಾಗುತ್ತದೆ. ಬೈಕ್ ಓಡುವುದು ಸುಲಭವಾದುದಾದರೂ ಅಪಾಯಕಾರಿ ಎಂಬುದನ್ನು ನಾವು ಎಲ್ಲಾ ಸಂದರ್ಭದಲ್ಲಿಯೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಹೀಗಾಗಿ, ಇಂದಿನಿಂದಲೇ ಬೈಕ್ ಅಥವಾ ಸ್ಕೂಟರ್‌ನ್ನು ಓಡಿಸುವ ಮೊದಲು ಜಾಗರೂಕರಾಗಿ, ಹೆಲ್ಮೆಟ್ ಧರಿಸುವುದನ್ನು ತಪ್ಪಿಸಬೇಡಿ. ಇಂದಿನ ಅಪಘಾತಗಳಲ್ಲಿ ಹೆಚ್ಚು ಜೀವಗಳು ಕಳೆದುಹೋಗುತ್ತಿರುವುದು ತಲೆಮೇಲೆ ಆಗುವ ಗಂಭೀರ ಗಾಯಗಳಿಂದಾನೇ. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿರಿ. ನಿಮ್ಮ ಜೀವ ನಿಮ್ಮ ಕೈಯಲ್ಲಿ.
