ಬಾರ್‌ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ
ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಯುವಕನೊಬ್ಬ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಾಂಜಾ ನೀಡದ್ದಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಪತಿ ಮೇಲೆ ಯುವಕನಿಂದ ಮಾರಣಾಂತಿಕ ಹಲ್ಲೆ
ಶಿವಮೊಗ್ಗ: ಸಾಗರ ರಸ್ತೆಯಲ್ಲಿ ದಂಪತಿ ಮೇಲೆ ಯುವಕನೋರ್ವ ಮಾರಣಾಂತಿಕ ಹಲ್ಲೆ ಮಾಡಿದ್ದು, ಘಟನೆಯಲ್ಲಿ ದಂಪತಿಗಳು ಗಂಭೀರ ಗಾಯಗೊಂಡಿದ್ದಾರೆ.
ಗಾಡಿಕೊಪ್ಪ ಬಳಿಯ ಸಾಗರ ರಸ್ತೆಯಲ್ಲಿ ಘಟನೆ
ಶಿವಮೊಗ್ಗದ ಗಾಡಿಕೊಪ್ಪ ಬಳಿಯ ಸಾಗರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ದಂಪತಿಗಳು ಕುಡಿದ ಮತ್ತಿನಲ್ಲಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿಯ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯ
ಘಟನೆಯಲ್ಲಿ ದಂಪತಿಯ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಅಂಬೇಡ್ಕರ್ ನಗರದ ನಿವಾಸಿ 45 ವರ್ಷದ ರಾಜು ಹಾಗೂ 35 ವರ್ಷದ ಚುಮ್ಮ ಎಂದು ಗುರುತಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಅಲ್ಲಿ ನೂರಾರು ಜನರು ಸೇರಿದ್ದಾರೆ.
ಘಟನೆಯ ಬಳಿಕ ಆರೋಪಿ ಪರಾರಿ
ದಾಳಿಯ ಬಳಿಕ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ದಂಪತಿ ನೀಡಿದ ಹೇಳಿಕೆಯ ಪ್ರಕಾರ, ಆರೋಪಿ ಟಿಪ್ಪು ನಗರದ ನಿವಾಸಿ ಎಂದು ಹೇಳಿಕೊಂಡಿದ್ದಾನೆ.
ಗಾಂಜಾ ನೀಡುವಂತೆ ಕೇಳಿ ಹಲ್ಲೆ
ಬಾರ್‌ಗೆ ನಾವು ಕುಡಿಯುವುದಕ್ಕೆಂದು ಬಂದಾಗ ಆತ ನಿಮ್ಮ ಬಳಿ ಗಾಂಜಾ ಇದ್ದರೆ ಕೊಡಿ ಎಂದು ಮಚ್ಚು ತೆಗೆದು ನಮ್ಮ ಮೇಲೆ ಕಚಕಚ ಅಂತ ಹಲ್ಲೆ ಮಾಡಿದ್ದಾನೆ ಎಂದು ದಂಪತಿ ಹೇಳಿದ್ದಾರೆ. ಗಂಡನನ್ನು ಹಿಡಿದು ಎಳೆದಾಡಿದಾಗ ಬಿಡಿಸಲು ಹೋದ ನನ್ನ ಮೇಲೂ ಆತ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
ಇದನ್ನೂ ಓದಿ: ಧಾರವಾಡ: ಮಹಿಳೆ ಅಪಘಾತದಲ್ಲಿ ಸಾವು ಪ್ರಕರಣಕ್ಕೆ ರೋಚಕ ತಿರುವು: ಬಸ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

