ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಯಸ್ಸು 30. ಆದರೆ ಅನಂತ್ ಅಂಬಾನಿ ರಿಲಯನ್ಸ್‌ನಿಂದ ಪಡೆಯುತ್ತಿರುವ ವಾರ್ಷಿಕ ಸ್ಯಾಲರಿ ಎಷ್ಟು?

ಮುಂಬೈ (ಜೂ. 29) ಶ್ರೀಮಂತ ಉದ್ಯಮಿ, ರಿಲಯನ್ಸ್ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ ಒಂದು ರೂಪಾಯಿ ವೇತನ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಬಳಿಕ ಅಂಬಾನಿ ಸ್ಯಾಲರಿ ಪಡೆಯುತ್ತಿಲ್ಲ. ಆದರೆ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಯ ಎಕ್ಸಿಕ್ಯೂಟೀವ್ ಡೈರೆಕ್ಟರ್ ಸ್ಥಾನಕ್ಕೇರಿದ ಬಳಿಕ ವೇತನವೂ ಬದಲಾಗಿದೆ. ಅಂಬಾನಿಯ ಮೂವರು ಮಕ್ಕಳು ರಿಲಯನ್ಸ್‌ನ ನಾನ್ ಎಕ್ಸಿಕ್ಯೂಟೀವ್ ಬೋರ್ಡ್ ಸದಸ್ಯರಾಗಿದ್ದರು. ಆದರೆ ಈ ವರ್ಷ ಎಪ್ರಿಲ್ ತಿಂಗಳಲ್ಲಿ ಅನಂತ್ ಅಂಬಾನಿ ರಿಲಯನ್ಸ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದರು.

ಅನಂತ್ ಅಂಬಾನಿ ವಾರ್ಷಿಕ ವೇತನ

ಮೇ.01, 2025ರಿಂದ ಅನಂತ್ ಅಂಬಾನಿ ರಿಲಯನ್ಸ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅನಂತ್ ಅಂಬಾನಿ ವಾರ್ಷಿಕ ಸ್ಯಾಲರಿ 10 ರಿಂದ 20 ಕೋಟಿ ರೂಪಾಯಿ. ಇದರಲ್ಲಿ ಅಂಬಾನಿ ಮನೆ ಬಾಡಿಗೆ, ಮನೆ ನಿರ್ವಹಣೆ, ಪ್ರಯಾಣ ಭತ್ಯೆ ಸೇರಿದಂತೆ ಇತರ ಖರ್ಚು ವೆಚ್ಚಗಳು ಸೇರಿವೆ. 10 ರಿಂದ 20 ಕೋಟಿ ಎಂದರೆ 10 ಕೋಟಿ ರೂ ವೇತನವಾಗಿದ್ದರೆ, ಕಂಪನಿಯ ನಿವ್ವಳದ ಲಾಭದ ಅನುಗಣುವಾಗಿ ವೇತನ ಗರಿಷ್ಠ 20 ಕೋಟಿ ವರೆಗೆ ತಲುಪಲಿದೆ.

ಕಳೆದ ವರ್ಷ ಅನಂತ್ ಅಂಬಾನಿ ನಾನ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿದ್ದರು. ಈ ವೇಳೆ ಬೋರ್ಡ್ ಮೀಟಿಂಗ್, ಸಿಟ್ಟಿಂಗ್ ಶುಲ್ಕ, ಕಮಿಷನ್ ಹಾಗೂ ಲಾಭದ ಮೇಲೆ ನಿಗದಿಯಾಗಿತ್ತು. 2024-25ರ ಸಾಲಿನಲ್ಲಿ ಅನಂತ್ ಅಂಬಾನಿ 2.31 ಕೋಟಿ ರೂಪಾಯಿ ವೇತನ ಪಡೆದಿದ್ದರು. ಇದೀಗ ಜವಾಬ್ದಾರಿ ಹೆಚ್ಚಾಗಿದೆ, ಸ್ಥಾನ ಬದಲಾಗಿದೆ. ಹೀಗಾಗಿ ವಾರ್ಷಿಕ ವೇತನ 10 ರಿಂದ 20 ಕೋಟಿ ರೂಪಾಯಿ ಆಗಿದೆ.

ಅನಂತ್ ಅಂಬಾನಿ ರಿಲಯನ್ಸ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಜೊತೆಗೆ ರಿಲಯನ್ಸ್ ರಿನಿವೇಬಲ್ ಹಾಗೂ ಗ್ರೀನ್ ಎನರ್ಜಿಯ ಜಾಗತಿಕ ಆಪರೇಶನ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹತ್ತು ಹಲವು ಜವಾಬ್ದಾರಿಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿದ್ದಾರೆ. 2015ರಿಂದ ಅನಂತ್ ಅಂಬಾನಿ ರಿಲಯನ್ಸ್ ಕಂಪನಿಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕಳೆದ 10 ವರ್ಷದಿಂದ ರಿಲಯನ್ಸ್ ಕಂಪನಿಯಲ್ಲಿ ಹಂತ ಹಂತವಾಗಿ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮುಕೇಶ್ ಅಂಬಾನಿಯ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಅನಂತ್ ಅಂಬಾನಿ ರಿಲಯನ್ಸ್‌ನಲ್ಲಿ ಶೇಕಡಾ 0.12 ರಷ್ಟು ಈಕ್ವಿಟಿ ಷೇರು ಹೊಂದಿದ್ದಾರೆ. ಅಂಬಾನಿ ಕುಟುಂಬ ಒಟ್ಟು ಶೇಕಡಾ 41.46ರಷ್ಟು ಈಕ್ವಿಟಿ ಷೇರು ಹೊಂದಿದೆ.