ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಇಲ್ಲಿಯ ಐಎನ್‌ಎಸ್ ಕದಂಬ ನೌಕಾನೆಲೆಗೆ ಆಗಮಿಸಿ ಐಎನ್ಎಸ್ ವಾಗ್ಶೀರ್ ಸಬ್ ಮರೀನ್‌ನಲ್ಲಿ ಪ್ರಯಾಣಿಸಿದರು. ಆ ಮೂಲಕ ಸಬ್ ಮರೀನ್‌ನಲ್ಲಿ ಪ್ರಯಾಣಿಸಿದ ಎರಡನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು
Karnataka News Live: ಸಬ್ ಮರೀನ್‌ನಲ್ಲಿ ರಾಷ್ಟ್ರಪತಿ ಯಾನ

ಮಂಡ್ಯ: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ ಎಬ್ಬಿಸುತ್ತದೆ. ಅಲ್ಲಿಯವರೆಗೂ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನವೆಂಬರ್ ಕ್ರಾಂತಿ ಆಗಲಿಲ್ಲ. ಸಂಕ್ರಾಂತಿ ಕ್ರಾಂತಿಯೂ ಇಲ್ಲ, ಯುಗಾದಿಗೂ ಕ್ರಾಂತಿ ಇಲ್ಲ. 2028ಕ್ಕೆ ನಾವೇ ಅಧಿಕಾರಕ್ಕೆ ಬಂದು ಕ್ರಾಂತಿ ಮಾಡುತ್ತೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟಾಗಿ ಕುಳಿತು ತೀರ್ಮಾನ ಮಾಡುತ್ತಾರೆ. ಯಾರ ಬಳಿಯೂ ಅನಿಸಿಕೆಗಳನ್ನು ಕೇಳುವುದಿಲ್ಲ. ಪಕ್ಷದ ನಿರ್ಧಾರಕ್ಕೆ ನಾವು ಸಂಪೂರ್ಣ ಬದ್ಧರಾಗಿರುತ್ತೇವೆ ಎಂದು ಅವರು ಪುನರುಚ್ಚರಿಸಿದರು.
Karnataka News Live 29 December 2025 ಸಬ್ ಮರೀನ್‌ನಲ್ಲಿ ರಾಷ್ಟ್ರಪತಿ ಯಾನ
Karnataka News Live 29 December 2025 ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ - ಬಿ.ಎಲ್. ಶಂಕರ್ ಲೇಖನ
ಇಂದಿನ ರಾಜಕೀಯದಲ್ಲಿ ವೈಯಕ್ತಿಕ ನಿಂದನೆ ಮತ್ತು ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಹೊಸ ದ್ವೇಷ ಭಾಷಣ ವಿರೋಧಿ ಕಾನೂನಿನ ಅಗತ್ಯತೆ, ಉದ್ದೇಶ ಮತ್ತು ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಮರುಸ್ಥಾಪಿಸುವ ಅದರ ಪಾತ್ರವನ್ನು ಈ ಲೇಖನ ವಿಮರ್ಶಿಸುತ್ತದೆ.
Karnataka News Live 29 December 2025 ಜಾಗೃತ ಜನರೇ ಆಯುರ್ವೇದ ಪಸರಿಸಲಿ - ರಾಘವೇಶ್ವರ ಶ್ರೀ
ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎಂದು ಕುಳಿತುಕೊಳ್ಳಲು ಆಗುವುದಿಲ್ಲ, ಸಮಾಜಕ್ಕೆ ಬೇಕಾದ ಆಯುರ್ವೇದ ಪದ್ಧತಿಯನ್ನು ಜಾಗೃತಿಗೊಂಡ ಜನರೇ ಪಸರಿಸಲಿ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.
Karnataka News Live 29 December 2025 BBK 12 - ಬದಲಾಯ್ತು ಕ್ಯಾಪ್ಟನ್ ಗಿಲ್ಲಿ ನಟನ ನಡವಳಿಕೆ, ಕನಿಕರವೇ ಇಲ್ವಾ? ಬಯಲಾಯ್ತು ಅಸಲಿ ಮುಖ!
ಗಿಲ್ಲಿ ನಟ ಕ್ಯಾಪ್ಟನ್ ಆದ ಮೊದಲ ದಿನವೇ ಅಶ್ವಿನಿ ಗೌಡ ಅವರೊಂದಿಗೆ ಜಗಳವಾಡಿದ್ದಾರೆ. ರಾತ್ರಿ ಕೆಲಸ ಮಾಡುವಂತೆ ಗಿಲ್ಲಿ ಆದೇಶಿಸಿದ್ದು, ಇದನ್ನು ವಿರೋಧಿಸಿದ ಅಶ್ವಿನಿ ಜೊತೆ ಏಕವಚನದಲ್ಲಿ ಮಾತನಾಡಿ, ನಿದ್ದೆಗೆಡಿಸಲು ಪ್ರಯತ್ನಿಸಿದ್ದಾರೆ. ಈ ನಡವಳಿಕೆಗೆ ವೀಕ್ಷಕರಿಂದ ಟೀಕೆ ವ್ಯಕ್ತವಾಗಿದೆ.
Karnataka News Live 29 December 2025 ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು - ಬರಗೂರು
ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದರೆ, ಪುಸ್ತಕೋದ್ಯಮ ಸಂಪಾದನೆಗೆ ಸಂಬಂಧಿಸಿದ್ದು. ಸಂವೇದನೆ ಮತ್ತು ಸಂಪಾದನೆಯನ್ನು ಒಂದುಗೂಡಿಸುವ ಚಾಕಚಕ್ಯತೆ ಕೆಲವರಿಗೆ ಮಾತ್ರ ಇರಲು ಸಾಧ್ಯ. ಆ ಚಾತುರ್ಯ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ಇದೆ ಎಂದು ಚಿಂತಕ ಬರಗೂರು ರಾಮಚಂದ್ರ ಹೇಳಿದ್ದಾರೆ.
Karnataka News Live 29 December 2025 ಜಿಬಿಎ ಚುನಾವಣೆಗೆ ಕಾಂಗ್ರೆಸ್ ಅರ್ಜಿಗೆ ₹ 50 ಸಾವಿರ!
ಜಿಬಿಎ ಚುನಾವಣೆ ಆಕಾಂಕ್ಷಿಗಳಿಗೆ ಭಾನುವಾರದಿಂದಲೇ ಅರ್ಜಿ ಬಿಡುಗಡೆ ಮಾಡಲಾಗುತ್ತಿದೆ. ತಡವಾದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ನಾನು ಗುರುತಿಸುವುದಿಲ್ಲ. ಬೂತ್ ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.