- Home
- Entertainment
- TV Talk
- Bigg Boss ಗೆಲ್ಲಲು ಯಾರೂ ಅರ್ಹರೇ ಅಲ್ಲ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಮಾಳು ಹೇಳಿದ್ದೇನು?
Bigg Boss ಗೆಲ್ಲಲು ಯಾರೂ ಅರ್ಹರೇ ಅಲ್ಲ: ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಮಾಳು ಹೇಳಿದ್ದೇನು?
ಬಿಗ್ಬಾಸ್ 12ರ ಫೈನಲ್ ಹಂತಕ್ಕೂ ಮುನ್ನ ಮಾಳು ನಿಪನಾಳ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಎಲಿಮಿನೇಷನ್ ಒಂದು ಅನ್ಯಾಯ ಎಂದಿರುವ ಅವರು, ಮನೆಯಲ್ಲಿರುವ ಯಾರೊಬ್ಬರೂ ವಿನ್ನರ್ ಆಗಲು ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರಬಂದ ಮಾಳು ನಿಪನಾಳ
ಬಿಗ್ಬಾಸ್ (Bigg Boss 12) ಮನೆಯಿಂದ ಮಾಳು ನಿಪನಾಳ ಅವರು ಹೊರಕ್ಕೆ ಬಂದಿದ್ದಾರೆ. ಬಿಗ್ಬಾಸ್ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಎಲಿಮಿನೇಷನ್ ಸಹಜವಾಗಿ ಎಲ್ಲರಿಗೂ ಶಾಕ್ ಕೊಡುತ್ತದೆ.
ಶಾಕ್ನಲ್ಲಿ ಮಾಳು
ಅದೇ ರೀತಿ, ಮಾಳು ಅವರಿಗೂ ಈ ಶಾಕ್ ತಡೆದುಕೊಳ್ಳಲು ಆಗುತ್ತಿಲ್ಲ. ತಾವು ಫೈನಲ್ ಸ್ಪರ್ಧಿಯಾಗಬೇಕಿತ್ತು. ನನಗೆ ಅಷ್ಟೊಂದು ಜನ ಪ್ರೀತಿ ಕೊಟ್ಟಿದ್ದಾರೆ. ಎಷ್ಟೆಲ್ಲಾ ಮಂದಿ ನನಗಾಗಿ ದುಡಿದಿದ್ದಾರೆ. ಈ ಸಂದರ್ಭದಲ್ಲಿ ನನ್ನನ್ನು ಎಲಿಮಿನೇಟ್ ಮಾಡಿರೋದು ತುಂಬಾ ಅನ್ಯಾಯ ಎಂದು ಮಾಧ್ಯಮಗಳಿಗೆ ಮಾಳು ತಿಳಿಸುತ್ತಿದ್ದಾರೆ.
ನೋವಿನ ನುಡಿ
ಈ ಸಂದರ್ಭದಲ್ಲಿ ಎಲಿಮಿನೇಟ್ ಆಗಿರುವುದಕ್ಕೆ ತುಂಬಾ ನೋವಿನಿಂದ ನುಡಿದಿರುವ ಅವರು ನಾನು ಫೈನಲಿಸ್ಟ್. ಸ್ಪಂದನಾ ಸೋಮಣ್ಣ (Bigg Boss Spandana Somanna) ಅವರಂಥ ಸ್ಪರ್ಧಿಗಳನ್ನು ಅಲ್ಲಿಯೇ ಇಟ್ಟುಕೊಂಡು ನನ್ನನ್ನು ಹೊರಕ್ಕೆ ಹಾಕಿರುವುದು ಸ್ಪಲ್ಪವೂ ಸರಿಯಲ್ಲ ಎಂದು ದುಃಖಿಸಿದ್ದಾರೆ.
ವಿನ್ನರ್ ಯಾರು?
ಬಿಗ್ಬಾಸ್ ವಿನ್ನರ್ ಯಾರಾಗಬೇಕು? ಗಿಲ್ಲಿ ನಟನ ಹೆಸರು ಕೇಳಿಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ ಮಾಳು.
ಯಾರೂ ಅರ್ಹರಲ್ಲ
ಗಿಲ್ಲಿ ನಟ ಕಾಮಿಡಿ ಮೂಲಕ ಎಲ್ಲರನ್ನೂ ರಂಜಿಸುತ್ತಾರೆ. ಫಿಸಿಕಲ್ ಟಾಸ್ಕ್ ಎಂದು ಬಂದಾಗ ಆಟವಾಡುವುದಿಲ್ಲ. ಹಾಗೆ ನೋಡಿದರೆ ಈಗ ಮನೆಯಲ್ಲಿ ಇರುವ ಯಾರೂ ವಿನ್ನರ್ ಆಗಲು ಅರ್ಹರಲ್ಲ. ಯಾರು ಬಂದರೂ ನಾನು ಅದನ್ನು ಒಪ್ಪುವುದಿಲ್ಲ ಎಂದು ಅತಿ ಕೋಪದಿಂದ ನುಡಿದಿದ್ದಾರೆ ಮಾಳು.
ಎಲ್ಲ ಅರ್ಹತೆ ಇತ್ತು
ನನ್ನಲ್ಲಿ ಎಲ್ಲ ರೀತಿಯ ಅರ್ಹತೆ ಇದ್ದರೂ ಈ ಹಂತದಲ್ಲಿ ಎಲಿಮಿನೇಟ್ ಮಾಡಿರುವುದು ಸರಿಯಲ್ಲ. ಉತ್ತರ ಕರ್ನಾಟಕದವರನ್ನು ಯಾಕೆ ಹೀಗೆ ಮಾಡ್ತಾರೋ ಗೊತ್ತಿಲ್ಲ. ಇಡೀ ಉತ್ತರ ಕರ್ನಾಟಕ ನನ್ನ ಪರವಾಗಿ ಇತ್ತು. ವೋಟ್ ಮಾಡುತ್ತಿದ್ದರು. ಆದರೂ ನನ್ನನ್ನು ಹೊರಕ್ಕೆ ಕಳುಹಿಸಲಾಗಿದೆ. ಈಗ ಇರುವವರಲ್ಲಿ ಯಾರೂ ಅರ್ಹರಲ್ಲ ಎಂದಿದ್ದಾರೆ ಮಾಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

