ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ, ಕಿಚಕ್ ಹಾಗೂ ಡೈನಿಂಗ್ ಹಾಲ್ ಬಳಿ ಈ ಘಟನೆ ನಡೆದಿದೆ. 50ಕ್ಕೂ ಹೆಚ್ಚು ಮಂದಿ ಇರುವ ಪಿಜಿಯಲ್ಲಿ ಈ ಘಟನೆ ಸಂಭವಿಸಿದ್ದು, ಮತ್ತೆ ಸುರಕ್ಷತಾ ಪ್ರಶ್ನೆ ಎದ್ದಿದೆ.
ಬೆಂಗಳೂರು (ಡಿ.29) ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಪಿಜಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾಫ್ಟ್‌ವೇರ್ ಎಂಜಿನೀಯರ್ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. 7 ಹಿಲ್ಸ್ ಸಾಯಿ ಕೊಲಿವಿಂಗ್ ಪಿಜಿಯಲ್ಲಿ ಈ ಅವಘಡ ಸಂಭವಿಸಿದೆ. ಡೈನಿಂಗ್ ಹಾಲ್ ಹಾಗೂ ಅಡುಗೆಕೋಣೆ ಬಳಿ ಸಿಲಿಂಡರ್ ಸ್ಫೋಟಗೊಂಡಿದೆ. 50ಕ್ಕೂ ಹೆಚ್ಚು ಮಂದಿ ಈ ಪಿಜಿಯಲ್ಲಿ ತಂಗಿದ್ದಾರೆ. ಗ್ಯಾಸ್ ಲೀಕ್ ಆಗಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
ಬಳ್ಳಾರಿ ಮೂಲದ ಅರವಿಂದ್ ಸಾಫ್ಟ್ ವೇರ್ ಇಂಜಿನಿಯರ್
ಮೃತ ಅರವಿಂದ್ ಇತ್ತೀಚೆಗಷ್ಟೇ ಈ ಪಿಜಿಗೆ ಸೇರಿಕೊಂಡಿದ್ದರು. ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದ ಅರವಿಂದ್ ಬಳ್ಳೂರಿ ಮೂಲದವನು. ಹಲವು ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದ ಅಱವಿಂದ್ ದುರಂತ ಅಂತ್ಯಕಂಡಿದ್ದಾನೆ. ಇನ್ನು ಕರ್ನೂಲ್ ಮೂಲದ 28 ವರ್ಷದ ವೆಂಕಟೇಶ್, ಉತ್ತರ ಖಂಡದ ಮೂಲದ 23 ವರ್ಷದ ವಿಶಾಲ್ ಹಾಗೂ 24 ವರ್ಷದ ಸಿವಿ ಗೋಯಲ್ ಗಾಯಗೊಂಡಿದ್ದಾರೆ.
ಪಿಜಿಯಲ್ಲಿ ಗ್ಯಾಸ್ ಲೀಕ್ ಅಗುತ್ತಿದ್ದರೂ ನಿರ್ಲಕ್ಷ್ಯ
ಅವಘಡ ಸಂಭವಿಸಿದ ಪಿಜಿಯಲ್ಲಿರುವ ಸಮನ್ವಯ ಘಟನೆ ಕುರಿತು ವಿವರಣೆ ನೀಡಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಪಿಡಿಯಲ್ಲಿ ಗ್ಯಾಸ್ ಲೀಕ್ ಆಗುತ್ತಿದೆ ಅನ್ನೋ ವಿಚಾರ ಗೊತ್ತಾಗಿದೆ. ಎಲ್ಲರೂ ಗ್ಯಾಸ್ ಲೀಕ್ ಕುರಿತು ಮಾತನಾಡಿಕೊಳ್ಳುತ್ತಿದ್ದರು. ನೆಲ ಮಹಡಿಯಲ್ಲಿನ ಡೈನಿಂಗ್ ಹಾಲ್ ಹಾಗೂ ಕಿಚನ್ ಬಳಿ ಗ್ಯಾಸ್ ಲೀಕ್ ಆಗಿ ಸ್ಫೋಟಗೊಂಡಿದೆ. ನಾವು ಮೇಲ್ಗಡೆ ಮಹಡಿಯಲ್ಲಿ ಇದ್ದ ಕಾರಣ ಸುರಕ್ಷಿತವಾಗಿದ್ದೇವೆ ಎಂದು ಸಮನ್ವಯ್ ಹೇಳಿದ್ದಾರೆ. ನಲ ಮಹಡಿಯಲ್ಲಿದ್ದವರಿಗೆ ಗಾಯವಾಗಿದೆ ಎಂದಿದ್ದಾರೆ. ಗ್ಯಾಸ್ ಲೀಕ್ ಆಗುತ್ತಿದೆ ಎಂದು ಗೊತ್ತಾದರೂ ಪಿಜಿ ಮಾಲೀಕರ ನಿರ್ಲಕ್ಷ್ಯ ತೋರಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಸುರಕ್ಷತೆ ವಿಚಾರದಲ್ಲಿನ ನಿರ್ಲಕ್ಷ್ಯ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
7 ಹಿಲ್ಸ್ ಸಾಯಿ ಕೊಲಿವಿಂಗ್ ಪಿಜಿ ಒಟ್ಟು 7 ಮಹಡಿ ಹೊಂದಿದೆ. 43 ಕೊಠಡಿಗಳನ್ನು ಹೊಂದಿದ್ದು, 50ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ಒಟ್ಟು ಏಳು ಪ್ಲೋರ್ 43 ರೂಮ್ ,50 ಕ್ಕೂ ಹೆಚ್ಚು ಜನ ವಾಸ ಮಾಡ್ತಿದ್ದ ಪಿಜಿ ಬ್ರೂಕ್‌ಫೀಲ್ಡ್ ಸುತ್ತ ಮುತ್ತ ಕೆಲಸ ಗಿಟ್ಟಿಸಿಕೊಂಡ ಬಹುತೇಕರು ಇದೇ ಪಿಜಿಯಲ್ಲಿ ತಂಗಿದ್ದಾರೆ. ಕೆಲ ವಿದ್ಯಾರ್ಥಿಗಳು ಇದೇ ಪಿಜಿಯಲ್ಲಿ ಉಳಿದಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


