- Home
- Entertainment
- TV Talk
- Bigg Boss ಕಾವ್ಯಾಗೆ ಧರ್ಮ ಸಂಕಟ- ಆ ಮಾತು ಕೇಳಿದ್ರೆ ಹೊರ ಬರೋದು ಗ್ಯಾರೆಂಟಿ! ಸೂರಜ್ ಸಿಂಗ್ ಹೇಳಿದ್ದೇನು?
Bigg Boss ಕಾವ್ಯಾಗೆ ಧರ್ಮ ಸಂಕಟ- ಆ ಮಾತು ಕೇಳಿದ್ರೆ ಹೊರ ಬರೋದು ಗ್ಯಾರೆಂಟಿ! ಸೂರಜ್ ಸಿಂಗ್ ಹೇಳಿದ್ದೇನು?
ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆದ ಸೂರಜ್ ಸಿಂಗ್, ಕಾವ್ಯಾ ಶೈವ ಅವರ ಆಟದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಆಟವನ್ನು ಬದಲಿಸಿಕೊಂಡರೆ, ಅದು ಅವರ ಬಿಗ್ಬಾಸ್ ಪಯಣಕ್ಕೆ ಕಷ್ಟವಾಗಲಿದೆ ಎಂದು ಸೂರಜ್ ಎಚ್ಚರಿಸಿದ್ದಾರೆ. ಏನದು?

ಎಲಿಮಿನೇಟ್ ಆದ ಸೂರಜ್
ಬಿಗ್ಬಾಸ್ ಸೀಸನ್ 12 (Bigg Boss 12)ರಲ್ಲಿ ಸದ್ಯ ನಿನ್ನೆ ಸೂರಜ್ ಸಿಂಗ್ ಮತ್ತು ಮಾಳು ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲವೊಂದು ವಿಷಯಗಳ ಚರ್ಚೆ ಮಾಡುತ್ತಿದ್ದಾರೆ.
ಕಾವ್ಯಾ ಕುಟುಂಬ
ಎಲ್ಲರಿಗೂ ತಿಳಿದಿರುವಂತೆ ಕಾವ್ಯಾ ಶೈವ (Bigg Boss Kavya Shaiva) ಅವರ ಕುಟುಂಬಸ್ಥರು ಬಂದಾಗ ಒಂದು ಎಡವಟ್ಟು ನಡೆದಿತ್ತು. ಅದೇನೆಂದರೆ, ಕಾವ್ಯಾಳ ಸಹೋದರ ಕಾವ್ಯಾ ಅವರಿಗೆ ನೀನು ಗಿಲ್ಲಿ ನಟನನ್ನು ನಾಮಿನೇಟ್ ಮಾಡಬೇಡ. ಆತನಿಂದಲೇ ನೀನು ಉಳಿದುಕೊಂಡಿರೋದು. ಹೊರಗಡೆ ನಿಮ್ಮಿಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದಿದ್ದರು.
ನಿಯಮದ ಉಲ್ಲಂಘನೆ
ಇದು ಬಿಗ್ಬಾಸ್ ನಿಮಯದ ಉಲ್ಲಂಘನೆಯಾಗಿತ್ತು. ಏಕೆಂದರೆ, ಇಂಥ ವಿಷಯಗಳನ್ನು ಕುಟುಂಬಸ್ಥರು ಬಂದಾಗ ಮನೆಯಲ್ಲಿ ಮಾತನಾಡುವಂತೆ ಇರಲಿಲ್ಲ. ಈಗ ಇದರ ಬಗ್ಗೆನೇ ಸೂರಜ್ ಸಿಂಗ್ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.
ಎರಡನೆಯ ವಾರ್ನಿಂಗ್
ಇಂಥ ವಿಷಯ ಬಂದಾಗ ಬಿಗ್ಬಾಸ್ ವಾರ್ನ್ ಮಾಡುತ್ತದೆ. ಮೊದಲ ಬಾರಿ ವಾರ್ನ್ ಮಾಡಿದಾಗಲೇ ಕಾವ್ಯಾ ಅವರು ಹೊರಕ್ಕೆ ಬಂದಿದ್ದರು. ಎರಡನೆಯ ವಾರ್ನಿಂಗ್ ಬರುವ ಮೊದಲೇ ಅವರು ಹೊರಗಡೆ ಇದ್ದರು. ಮತ್ಯಾಕೆ ವಾರ್ನ್ ಬಂತೋ ಗೊತ್ತಿಲ್ಲ ಎಂದಿದ್ದಾರೆ.
ಹೇಳಿದಂತೆ ಕೇಳಿದ್ರೆ ಕಷ್ಟ
ಒಂದು ವೇಳೆ ಫ್ಯಾಮಿಲಿ ಹೇಳಿದಂತೆ ಕಾವ್ಯಾ ನಡೆದುಕೊಂಡರೆ ಅದು ಅವರಿಗೆ ಕಷ್ಟವಾಗುತ್ತದೆ. ಗಿಲ್ಲಿ ನಟನ ಬಗ್ಗೆ ಅವರ ಸಹೋದರ ಹೇಳಿದಂತೆ ಎಲಿಮಿನೇಟ್ ಮಾಡದೇ ಗಿಲ್ಲಿ ಪರ ವಹಿಸಿಕೊಂಡು ಇದ್ದರೆ, ಅದು ಅವರ ಬಿಗ್ಬಾಸ್ ಜರ್ನಿಯ ಅಂತ್ಯಕ್ಕೆ ಕಾರಣವಾಗಲಿದೆ ಎಂದಿದ್ದಾರೆ ಸೂರಜ್ ಸಿಂಗ್.
ಆಟ ಬದಲಾಗಬಾರದು
ಇದೇ ಕಾರಣಕ್ಕೆ ಕಾವ್ಯಾ ಅವರ ಫ್ಯಾಮಿಲಿ ಹೇಳಿದಂತೆ ಕೇಳಬಾರದು. ಅವರು ಆ ರೀತಿ ತಮ್ಮ ಆಟ ಬದಲಿಸಿಕೊಳ್ಳಬಾರದು. ಬದಲಿಸಿಕೊಂಡರೆ ಕಷ್ಟವಾಗುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

