- Home
- Entertainment
- TV Talk
- BBK 12: ನಾಮಿನೇಷನ್‌ನಲ್ಲಿ ಕಾವ್ಯಾ ಹಿಂದೆ ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ ಗಿಲ್ಲಿ ನಟ?
BBK 12: ನಾಮಿನೇಷನ್‌ನಲ್ಲಿ ಕಾವ್ಯಾ ಹಿಂದೆ ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ ಗಿಲ್ಲಿ ನಟ?
ಈ ವಾರದ ಕ್ಯಾಪ್ಟನ್ ಗಿಲ್ಲಿ ನಟ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಕ್ಷಪಾತ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅವರ ನಿರ್ಧಾರಕ್ಕೆ ಅಶ್ವಿನಿ ಗೌಡ ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿದ್ದು, ಗಿಲ್ಲಿ ನಟ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಅಶ್ವಿನಿ ಗೌಡ ವ್ಯಂಗ್ಯ
ಈ ಬಾರಿಯ ಮನೆಯ ಕ್ಯಾಪ್ಟನ್ ಆಗಿರುಗ ಗಿಲ್ಲಿ ನಟ ಅವರ ಕೈಯಲ್ಲಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಪವರ್ ಸಿಕ್ಕಿದೆ. ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಗಿಲ್ಲಿ ನಟ ಪಕ್ಷಪಾತ ಮಾಡಿರುವ ಕೇಳಿ ಬಂದಿದ್ದು, ಕ್ಯಾಪ್ಟನ್ ನಿರ್ಧಾರಕ್ಕೆ ಚಪ್ಪಾಳೆ ತಟ್ಟುವ ಮೂಲಕ ಅಶ್ವಿನಿ ಗೌಡ ವ್ಯಂಗ್ಯ ಮಾಡಿದ್ದಾರೆ.
ನಾಮಿನೇಟ್
14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಇಬ್ಬರು ಸ್ಪರ್ಧಿಗಳು ನಾನೇಕೆ ಮನೆಯಲ್ಲಿ ಉಳಿಯಬೇಕು ಮತ್ತು ಎದುರಾಳಿಗೆ ಯಾಕೆ ಅರ್ಹತೆ ಇಲ್ಲ ಎಂಬುದರ ಬಗ್ಗೆ ಮಾತನಾಡಬೇಕು. ಇವರಿಬ್ಬರ ಮಾತುಗಳನ್ನು ಆಲಿಸಿ ಕ್ಯಾಪ್ಟನ್ ಗಿಲ್ಲಿ ನಟ ತಮ್ಮ ನಿರ್ಧಾರ ಪ್ರಕಟಿಸಬೇಕು. ಇಬ್ಬರಲ್ಲಿ ಒಬ್ಬರು ನಾಮಿನೇಟ್ ಆದ್ರೆ, ಮತ್ತೊಬ್ಬರು ಸೇವ್ ಆಗ್ತಾರೆ.
ಮನುಷ್ಯತ್ವ ಮತ್ತು ಮಾನವೀಯತೆ ಕಾಣಿಸಲ್ಲ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಧ್ರುವಂತ್, ರಾಶಿಕಾ, ಸ್ಪಂದನಾ ಸೋಮಣ್ಣ ಮತ್ತು ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ನಾಮಿನೇಟ್ ಮಾಡಿದ್ದಾರೆ. ರಕ್ಷಿತಾ ತಮ್ಮ ವಾದದಲ್ಲಿ ನಿಮ್ಮಲ್ಲಿ ಮನುಷ್ಯತ್ವ ಮತ್ತು ಮಾನವೀಯತೆ ಕಾಣಿಸಲ್ಲ ಎಂದು ಹೇಳಿದ್ದಾರೆ. ಆದ್ರೆ ಈ ಮಾತು ಯಾರನ್ನ ಉದ್ದೇಶಿಸಿ ಹೇಳಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ
ನಿರ್ಧಾರ ಸಮರ್ಥಿಸಿಕೊಂಡ ಗಿಲ್ಲಿ ನಟ
ಧ್ವಜ ಪಡೆದುಕೊಳ್ಳುವ ವ್ಯಕ್ತಿ ತನ್ನ ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಬಹುತೇಕರು ಕಾವ್ಯಾ ಮತ್ತು ಧ್ರುವಂತ್ ಅವರನ್ನು ಆಯ್ಕೆ ಮಾಡಿಕೊಂಡು ತಾವು ಸೇವ್ ಆಗಲು ಪ್ರಯತ್ನಿಸಿದ್ದಾರೆ. ಆದ್ರೆ ಗಿಲ್ಲಿ ನಟ ತೆಗೆದುಕೊಂಡ ನಿರ್ಧಾರಕ್ಕೆ ನಾಮಿನೇಟ್ ಆಗಿರುವ ಸ್ಪರ್ಧಿಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ನಾನು ಫೇವರಿಸಂ ಮಾಡಿಲ್ಲ ಎಂದು ಗಿಲ್ಲಿ ನಟ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss ಮನೆಯಿಂದ ಹೊರಬರಲು ಆ ಒಂದು ತಪ್ಪು ಕಾರಣವಾಯ್ತು ಎನ್ನಿಸುತ್ತೆ: Suraj Singh ಹೇಳಿದ್ದೇನು?
ಗುಂಡಿ ತೋಡಿಕೊಂಡ್ರಾ ಗಿಲ್ಲಿ?
ನಾಮಿನೇಷನ್ ಪ್ರಕ್ರಿಯೆಯ ಪ್ರೋಮೋ ನೋಡಿದ ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯ ಹಿಂದೆ ಹೋಗುತ್ತಿರುವ ಗಿಲ್ಲಿ ನಟ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಗಿಲ್ಲಿ ಕಾವ್ಯ ಒಬ್ಬಳೇ ಚೆನ್ನಾಗಿ ಆಡುತ್ತಾ ಇರುವುದು ಅಂತ ಅಂದುಕೊಂಡಿದ್ದಾನೆ ಕಾವ್ಯ ಜಂಬದ ಕೋಳಿ ಎಂದು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

