ಕೃತಕ ಬುದ್ಧಿಮತ್ತೆಯ (AI) ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ದಶಕದ ಹಿಂದಿನ ಐಟಿ ಪಾರ್ಕ್ ಯೋಜನೆಯನ್ನು ಕೈಬಿಡಲಾಗಿದೆ. ಇದರ ಪರಿಣಾಮವಾಗಿ, ಕಾಡುಬೀಸನಹಳ್ಳಿಯ 9 ಎಕರೆ ಭೂಮಿಯಲ್ಲಿ ಸಾಫ್ಟ್‌ವೇರ್ ಕಂಪನಿಯ ಬದಲು, 410 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ.
- Home
- News
- State
- Karnataka News Live: ಬೆಂಗಳೂರು - 'AI' ಅಬ್ಬರಕ್ಕೆ ನಲುಗಿದ ಸಾಫ್ಟ್‌ವೇರ್ ಪ್ರಾಜೆಕ್ಟ್; ಐಟಿ ಕಂಪನಿಗೆ ಮೀಸಲಾಗಿದ್ದ ಜಾಗ ಈಗ ವೈದ್ಯಕೀಯ ಕಾಲೇಜು ಪಾಲು!
Karnataka News Live: ಬೆಂಗಳೂರು - 'AI' ಅಬ್ಬರಕ್ಕೆ ನಲುಗಿದ ಸಾಫ್ಟ್‌ವೇರ್ ಪ್ರಾಜೆಕ್ಟ್; ಐಟಿ ಕಂಪನಿಗೆ ಮೀಸಲಾಗಿದ್ದ ಜಾಗ ಈಗ ವೈದ್ಯಕೀಯ ಕಾಲೇಜು ಪಾಲು!

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪಂದ್ರಹ ದಿನ್ ಕಿ ಸರದಾರ’. ಅವರು 15 ದಿನದ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದು, ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ.

ಮೇ 4ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶ ಬರಲಿದ್ದು, ಅಂದು ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಕೂಡ ಬರುತ್ತದೆ. ಅದರ ಜೊತೆಗೆ ಸಿದ್ದರಾಮಯ್ಯ ಅವರ ಕುರ್ಚಿಯ ಫಲಿತಾಂಶ ಕೂಡ ಪ್ರಕಟವಾಗುತ್ತದೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಬೆಂಬಲಿಗರಾದ 40 ಶಾಸಕರು ಹೈಕಮಾಂಡ್ ಬಳಿ ಹೋಗಿ ಲಾಬಿ ಮಾಡುತ್ತಿದ್ದು, ಡಿ.ಕೆ.ಶಿವಕುಮಾರ್ ಅವರ ಪರವಾಗಿ 50 ಜನ ಲಾಬಿ ಮಾಡುತ್ತಿದ್ದಾರೆ. ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಕಿಡಿಕಾರಿದರು.
Karnataka News Live 29 April 2026ಬೆಂಗಳೂರು - 'AI' ಅಬ್ಬರಕ್ಕೆ ನಲುಗಿದ ಸಾಫ್ಟ್‌ವೇರ್ ಪ್ರಾಜೆಕ್ಟ್; ಐಟಿ ಕಂಪನಿಗೆ ಮೀಸಲಾಗಿದ್ದ ಜಾಗ ಈಗ ವೈದ್ಯಕೀಯ ಕಾಲೇಜು ಪಾಲು!
Karnataka News Live 29 April 2026ಸೌಜನ್ಯ ಅ*ತ್ಯಾಚಾರ-ಕೊ*ಲೆ ಪ್ರಕರಣ - ಸುಪ್ರೀಂ ಅಂಗಳದಲ್ಲಿ ಮಹತ್ವದ ತಿರುವು ಪಡೆದುಕೊಂಡ ಕೇಸ್!
ಧರ್ಮಸ್ಥಳದ ಸೌಜನ್ಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮರು ತನಿಖೆ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಪ್ರಕರಣದ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ.
Karnataka News Live 29 April 2026ಬೆಂಗಳೂರು ಮಳೆಗೆ ದುರಂತಗಳ ಸರಮಾಲೆ, ಗೋಡೆ ಬಿದ್ದ 100 ಮೀಟರ್ ಅಂತರದಲ್ಲೇ ಮತ್ತೊಂದು ಸಾವು
ಬೆಂಗಳೂರು ಮಳೆಗೆ ದುರಂತಗಳ ಸರಮಾಲೆ, ಗೋಡೆ ಬಿದ್ದ 100 ಮೀಟರ್ ಅಂತರದಲ್ಲೇ ಮತ್ತೊಂದು ಸಾವು, ತಾಯಿ ಜೊತೆ ಆಗಮಿಸಿದ ಯುವಕ ಗಾಡಿ ಪಾರ್ಕಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಸಾವು ಕಂಡಿದ್ದಾನೆ.
Karnataka News Live 29 April 2026ಬೆಂಗಳೂರು ಮಳೆಗೆ ಮತ್ತೊಂದು ಬಲಿ, ಜೆಪಿ ನಗರ ಬಳಿ ವಿದ್ಯುತ್ ಕಂಬ ಸ್ಪರ್ಶಿಸಿ ವ್ಯಕ್ತಿ ಸಾವು
ಬೆಂಗಳೂರು ಮಳೆಗೆ ಮತ್ತೊಂದು ಬಲಿ, ಜೆಪಿ ನಗರ ಬಳಿ ವಿದ್ಯುತ್ ಕಂಬ ಸ್ಪರ್ಶಿಸಿ ವ್ಯಕ್ತಿ ಸಾವು, ಕಾಂಪೌಂಡ್ ಕುಸಿದು 7 ಮಂದಿ ಮತೃಪಟ್ಟ ಬೆನ್ನಲ್ಲೇ ಇದೀಗ ವಿದ್ಯುತ್ ಸ್ಪರ್ಶಿಸಿ ಸಾವಾಗಿದೆ. ಒಂದೇ ಮಳೆ 8 ಮಂದಿಯನ್ನು ಬಲಿ ಪಡೆದಿದೆ.
Karnataka News Live 29 April 2026ಹುಲಿಕಲ್ ಘಾಟ್ ಮಣ್ಣು ಕುಸಿತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ - ಸಚಿವ ಮಧು ಬಂಗಾರಪ್ಪ
ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಮಣ್ಣು ಕುಸಿತ ಅವಘಡದ ಕುರಿತು ಸಮಗ್ರ ವಿವರ ಪಡೆದು, ತಪ್ಪಿತಸ್ಥರ ವಿರುದ್ದ ಕಾನೂನಾತ್ಮಕ ಕ್ರಮ ವಹಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Karnataka News Live 29 April 2026ಬೆಂಗಳೂರು ಮಳೆಗೆ ಪ್ರಖ್ಯಾತ ಪುಸ್ತಕ ಮಳಿಗೆಗೆ ನುಗ್ಗಿದ ನೀರು, 14 ಲಕ್ಷ ಮೌಲ್ಯದ 5000 ಬುಕ್ ನಾಶ
ಬೆಂಗಳೂರು ಮಳೆಗೆ ಪ್ರಖ್ಯಾತ ಪುಸ್ತಕ ಮಳಿಗೆಗೆ ನುಗ್ಗಿದ ನೀರು, 14 ಲಕ್ಷ ಮೌಲ್ಯದ 5000 ಬುಕ್ ನಾಶ, ದಿಡೀರ್ ಮಳೆಯಿಂದ ಮಳಿಗೆಗ ನೀರು ನುಗ್ಗಿದೆ. ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಜನಪ್ರಿಯ ಪುಸ್ತಕ ಮಳಿಗೆಯಾಗಿ ಗರುತಿಸಿಕೊಂಡಿದೆ.
Karnataka News Live 29 April 2026ಬೆಂಗಳೂರು ಮಳೆಗೆ ಬಲಿಯಾದ ಮೃತರ ಪಟ್ಟಿ ಬಿಡುಗಡೆ, ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ
ಬೆಂಗಳೂರು ಮಳೆಗೆ ಬಲಿಯಾದ ಮೃತರ ಪಟ್ಟಿ ಬಿಡುಗಡೆ, ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ, ಭಾರಿ ಮಳೆಗೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.
Karnataka News Live 29 April 2026ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬೆಂಗಳೂರು, 2 ಗಂಟೆಯಲ್ಲಿ 78MM ಮಳೆ 50ಕ್ಕೂ ಹೆಚ್ಚು ಮರ ಧರಶಾಹಿ, ಪ್ರಾಣಹಾನಿ!
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ 50ಕ್ಕೂ ಹೆಚ್ಚು ಮರಗಳು ಉರುಳಿ, ರಸ್ತೆಗಳು ಜಲಾವೃತಗೊಂಡಿದ್ದು, ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದಾರೆ.
Karnataka News Live 29 April 2026Exit Poll 2026 - ದೀದಿ ಕೋಟೆಗೆ ಲಗ್ಗೆ ಇಟ್ಟ ಕಮಲ; ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತ ಎಂದ ಸಮೀಕ್ಷೆ
Karnataka News Live 29 April 2026ಒಂದೇ ಮಳೆಗೆ ಹಾಳೂರಾದ ಬೆಂಗಳೂರು, 7 ಸಾವು, ಸಂಪೂರ್ಣ ಅಸ್ತವ್ಯಸ್ತಕ್ಕೆ ಯಾರು ಹೊಣೆ?
ಒಂದೇ ಮಳೆಗೆ ಹಾಳೂರಾದ ಬೆಂಗಳೂರು, 7 ಸಾವು, ಸಂಪೂರ್ಣ ಅಸ್ತವ್ಯಸ್ತಕ್ಕೆ ಯಾರು ಹೊಣೆ? ಕಾಂಪೌಂಡ್ ಕುಸಿತ, ಧರೆಗುರುಳಿದ ಮರಗಳು, ವಾಹನಗಳ ಮೇಲೆ ಬಿದ್ದ ಮರ ಸೇರಿದಂತೆ ಒಂದು ಮಳೆ ಬೆಂಗಳೂರಲ್ಲಿ ಅವಾಂತರ ಸೃಷ್ಟಿಸಿದೆ.
Karnataka News Live 29 April 2026ಬೆಂಗಳೂರು ಮಹಾಮಳೆಗೆ 7 ಬಲಿ - ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಭೀಕರ ದುರಂತ; ಮೂವರು ಪುಟ್ಟ ಮಕ್ಕಳೂ ಸಾವು!
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು, ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತ ನಗರದಲ್ಲಿ ಆಘಾತವನ್ನುಂಟು ಮಾಡಿದ್ದು, ಹಳೆಯ ಗೋಡೆಯ ನಿರ್ವಹಣೆ ಕೊರತೆಯೇ ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
Karnataka News Live 29 April 2026ಚಾಮರಾಜನಗರದಲ್ಲಿ ರಣಾಂಗಣವಾದ ಮದುವೆ ಮನೆ - ಚಿನ್ನಾಭರಣ ವಿಚಾರಕ್ಕೆ ಪರಸ್ಪರ ಚಾಕು ಇರಿತ!
ವಧು, ವರ ಎರಡೂ ಕಡೆಯವರು ಚಾಕುವಿನಿಂದ ಪರಸ್ಪರ ಇರಿದುಕೊಂಡಿದ್ದಾರೆ. ಒಬ್ಬರಿಗೊಬ್ಬರು ಬಡಿದಾಡಿಕೊಂಡು ರಕ್ತದ ಕೋಡಿ ಹರಿಸಿದ್ದಾರೆ. ಈ ಘಟನೆ ನಡೆದಿರೋದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ.
Karnataka News Live 29 April 2026Cognizant Q1 revenue rises - ಲೇ-ಆಫ್‌ಗಳ ಮಧ್ಯೆ ಕಾಗ್ನಿಜೆಂಟ್‌ನ ಹೊಸ ಅಧ್ಯಾಯ! ಒಂದೇ ವರ್ಷದಲ್ಲಿ 21,000 ನೇಮಕಾತಿ
ಟೆಕ್ ದೈತ್ಯ 'ಕಾಗ್ನಿಜೆಂಟ್' ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷಕ್ಕೆ ಹೆಚ್ಚಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದ್ದು, ಎಐ ಆಧಾರಿತ ಯೋಜನೆಗಳು ಮತ್ತು ಬೃಹತ್ ಒಪ್ಪಂದಗಳ ಮೂಲಕ ಐಟಿ ವಲಯಕ್ಕೆ ಹೊಸ ಭರವಸೆ ಮೂಡಿಸಿದೆ.
Karnataka News Live 29 April 2026ಗಂಗಾವತಿಯಲ್ಲಿ ಫುಟ್‌ಪಾತ್ ಆಕ್ರಮಣಕ್ಕೆ ಬ್ರೇಕ್ - 150ಕ್ಕೂ ಹೆಚ್ಚು ಅಂಗಡಿಗಳ ತೆರವು
ಗಂಗಾವತಿ ನಗರದ ವಿವಿಧ ವೃತ್ತಗಳು ಮತ್ತು ರಸ್ತೆ ಪಕ್ಕದ ಚರಂಡಿಗಳ ಮೇಲೆ ನಿರ್ಮಿಸಲಾಗಿದ್ದ ಫುಟ್‌ಪಾತ್‌ಗಳಲ್ಲಿರುವ 150ಕ್ಕು ಹೆಚ್ಚು ಅಂಗಡಿಗಳನ್ನು ನಗರಸಭೆಯವರು ತೆರವು ಕಾರ್ಯಾಚರಣೆ ನಡೆಸಿದರು.
Karnataka News Live 29 April 2026ಕರ್ನಾಟಕದಲ್ಲಿ 56,834 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಗ್ರೀನ್ ಸಿಗ್ನಲ್ - ಗೃಹ ಸಚಿವ ಪರಮೇಶ್ವರ
Karnataka News Live 29 April 2026ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ - ಸಂಸದ ಬೊಮ್ಮಾಯಿ
ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾನು ಸಿಎಂ ಇದ್ದಾಗ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Karnataka News Live 29 April 2026ಸಿದ್ದರಾಮಯ್ಯ ಮಾಡಿದ ಮೀಸಲು ಒಳಮೀಸಲೇ ಅಲ್ಲ - ಸಂಸದ ಗೋವಿಂದ ಕಾರಜೋಳ
ಒಳ ಮೀಸಲಾತಿಯೆಂದರೆ ಎಷ್ಟೇ ಹುದ್ದೆಗಳಿದ್ದರೂ ಆ ಹುದ್ದೆಗಳಿಗೆ ಅದು ಅನ್ವಯ ಆಗಬೇಕು. ತಾರತಮ್ಯ ಆಗಬಾರದು. ಆದರೆ, ಈ ತಾರತಮ್ಯ ನಿಮ್ಮವರಿಂದಲೇ ಆಗಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪ ಮಾಡಿದರು.
Karnataka News Live 29 April 2026ಮಡಿಕೇರಿ ಜೈಲಿನಲ್ಲಿ ನಿವೃತ್ತ ಅಧಿಕಾರಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಕೇರ್ ಟೇಕರ್ ಮಹಿಳೆಯಿಂದಲೇ ಹನಿಟ್ರ್ಯಾಪ್ ಆರೋಪ!
ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿತರಾಗಿದ್ದ ಕೊಡಗಿನ ವಿಚಾರಣಾಧೀನ ಕೈದಿ ಚಂಗಪ್ಪ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಇದು ಕೇರ್ ಟೇಕರ್ ಮಹಿಳೆಯ ಬ್ಲಾಕ್‌ಮೇಲ್ ಮತ್ತು ವಕೀಲರೊಬ್ಬರ ಹಣಕಾಸು ವಂಚನೆಯಿಂದ ಮಾನಸಿಕ ಆಘಾತಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
Karnataka News Live 29 April 2026ಗಂಗಾವತಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪ್ರಕರಣ - ಮೂವರಿಗೆ 3 ವರ್ಷ ಜೈಲು ಶಿಕ್ಷೆ
ಅಕ್ರಮ ಪಡಿತರ ಅಕ್ಕಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರೋಪಿಗಳಿಗೆ ಮೂರು ವರ್ಷ ಸೆರೆಮನೆವಾಸ ಮತ್ತು ಪ್ರತಿಯೊಬ್ಬರಿಗೆ 10 ಸಾವಿರ ದಂಡವನ್ನು ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯ ತೀರ್ಪು ನೀಡಿದೆ.