ಬೆಂಗಳೂರು ಮಳೆಗೆ ಬಲಿಯಾದ ಮೃತರ ಪಟ್ಟಿ ಬಿಡುಗಡೆ, ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ, ಭಾರಿ ಮಳೆಗೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.

ಬೆಂಗಳೂರು (ಏ.29) ಬೆಂಗಳೂರಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವೆಡೆ ತಡೆಗೋಡೆ ಶೀಟ್‌ಗಳು, ಮೇಲ್ಛಾವಣಿ ಕುಸಿದಿದೆ. 50ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಕಾಂಪೌಂಡ್ ಕುಸಿದು 7 ಮಂದಿ ಮತೃಪಟ್ಟ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಕಾಂಪೌಂಡ್ ಕುಸಿದು ಮೃತಪಟ್ಟವರ ಪಟ್ಟಿ

ತಬೀನ್ ತಾಜ್ (47 ವರ್ಷ)

ಮುಬಿನ್ ತಾಜ್ (49 ವರ್ಷ)

ಮಾಯ (51 ವರ್ಷ)

ಸಾಜಿದ್ (20 ವರ್ಷ)

ಅಜು (35 ವರ್ಷ)

ಪ್ರೀತಿ (5 ವರ್ಷ)

ಸಿಜಿ (47 ವರ್ಷ)

ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುರಿದ ಮಳೆಗೆ ಒಟ್ಟು 7 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುತ್ತೇವೆ ಎಂದಿದ್ದಾರೆ. ಹಳೇ ಗೋಡೆಗಳ ಕುರಿತು ಪರಿಶೀಲನೆ ನಡೆಸಬೇಕಿತ್ತು. ಚೀಫ್ ಎಂಜಿನಿಯರ್ ಯಾರು? ಯಾವಾಗ ಕಟ್ಟಿದ್ದು..? ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ. ಈತರ ಹಳೆ ಕಾಂಪೌಂಡ್ ಇದ್ರೆ ಅದ್ರ ಬಗ್ಗೆ ಗಮನವಹಿಸಲು ಸೂಚನೆ ನೀಡಿದ್ದಾರೆ.

ಧರೆಗುರುಳಿದ 50ಕ್ಕೂ ಹೆಚ್ಚು ಮರ

ಬೆಂಗಳೂರಲ್ಲಿ ಸುರಿದ ಭಾರಿ ಮಳೆಗೆ ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಪ್ರಕಾರ, 50 ಸ್ಥಳಗಳಲ್ಲಿ ಮರಗಳು ಉರುಳಿವೆ ಎಂದಿದೆ. ಕೆಂಪೇಗೌಡ ರೈಲ್ವೆ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಹಲವು ಕಾರುಗಳು ಜಖಂ ಆಗಿದೆ.