ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾನು ಸಿಎಂ ಇದ್ದಾಗ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು (ಏ.29): ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ವ್ಯವಸ್ಥೆ ಬದಲಾವಣೆಯಾಗಿ ರೈತ ಪರ ಸರ್ಕಾರ ಬಂದಾಗ ರೈತರ ಮಕ್ಕಳಿಗೆ ವಿದ್ಯಾನಿಧಿ, ರೈತರಿಗೆ ಡೀಸೆಲ್‌ ಸಬ್ಸಿಡಿ, ಬೀಜ ಗೊಬ್ಬರಕ್ಕೆ ಸಹಾಯಧನ ನೀಡುವ ಯೋಜನೆಗಳು ಮತ್ತೆ ಜಾರಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಎಲ್ಲಿ ಭಕ್ತಿ ಇದೆ. ಅಲ್ಲಿ ತಾಯಂದಿರು ಇರುತ್ತಾರೆ. ಭಕ್ತಿ ಸಂಸ್ಕೃತಿ ನಮ್ಮ ಭಾರತದ ತಾಯಿ, ದ್ಯಾಮವ್ವನ ದೇವಸ್ಥಾನ ಸುಂದರವಾಗಿ ನಿರ್ಮಾಣ ಆಗಿದೆ. ಈ ಊರಿನ ಜನರು ಬಹಳ ದೈವ ಭಕ್ತರಿರುವುದರಿಂದ ಎಲ್ಲ ದೇವಸ್ಥಾನಗಳು ನಿರ್ಮಾಣ ಆಗಿವೆ. ಮಾರುತಿ ದೇವಸ್ಥಾನ, ಪರಮೇಶ್ವರ ದೇವಸ್ಥಾನ, ದ್ಯಾಮವ್ವ, ಮಾಯಮ್ಮನ ದೇವಸ್ಥಾನಗಳ ನಿರ್ಮಾಣ ಆಗಿವೆ ಎಂದು ಹೇಳಿದರು. ಇವತ್ತಿನ ದಿನಮಾನಗಳಲ್ಲಿ ಧರ್ಮ ಜಾಗೃತಿ ಬಹಳ ಮುಖ್ಯವಾಗಿದೆ. ನಮ್ಮ ಬದುಕು ಧರ್ಮದಿಂದ ನಡೆಯಬೇಕು.

ನಂಬಿಕೆಯಿಂದ ಶಕ್ತಿ ಬರುತ್ತದೆ

ನ್ಯಾಯ, ನೀತಿ, ಧರ್ಮ ಈ ಮೂರು ಮನಷ್ಯರಿಗೆ ಅತ್ಯಂತ ಅವಶ್ಯಕತೆ ಇರುವ ಗುಣಗಳು. ಧರ್ಮದಿಂದ ನಡೆಯಬೇಕೆಂದರೆ ಧರ್ಮದ ಜಾಗೃತಿ ಬಹಳ ಮುಖ್ಯ. ನಮ್ಮ ಜನರಿಗೆ ದೈವದಿಂದ ಧರ್ಮ ಹೀಗಾಗಿ ದೇವಸ್ಥಾನಗಳು ಬಹಳ ಮುಖ್ಯ, ದೇವಸ್ಥಾನಗಳಿಗೆ ಭಕ್ತರ ನಂಬಿಕೆಯಿಂದ ಶಕ್ತಿ ಬರುತ್ತದೆ. ಎಲ್ಲ ದೇವರ ಕೃಪಾಶೀರ್ವಾದ ನಿಮ್ಮ ನಂಬಿಕೆಯಿಂದ ದೈವದ ಅನುಗ್ರಹದಿಂದ ಈ ಊರಿಗೆ ಒಳ್ಳೆಯದಾಗುತ್ತದೆ. ಈ ಊರಿನಲ್ಲಿ ರೈತರು, ಕಾಯಕಯೋಗಿಗಳಿದ್ದಾರೆ. ಪ್ರಗತಿಪರ ಚಿಂತನೆ ಮಾಡುವ ಯುವಕರಿದ್ದಾರೆ. ಮಹಿಳಾ ಸಂಘಗಳಿವೆ. ನಿಮ್ಮ ಆದಾಯ ಕೃಷಿ ಮೇಲೆ ನಿಂತಿದೆ. ನಿಮ್ಮ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಾನು ಸಿಎಂ ಇದ್ದಾಗ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಮಾಡಿದೆ. 8ನೇ ತರಗತಿಯಿಂದ ಪಿಜಿವರೆಗೂ ಸ್ಕಾಲರ್ ಶಿಪ್ ನೀಡುತ್ತಿದ್ದೇವು. ಅದರಿಂದ ಸುಮಾರು 11 ಲಕ್ಷ ಮಕ್ಕಳಿಗೆ ಅನುಕೂಲವಾಗಿತ್ತು. ಆ ಯೋಜನೆ ಈಗ ನಿಂತಿದೆ. ಆದರೆ, ಇನ್ನೆರಡು ವರ್ಷದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ವ್ಯವಸ್ಥೆ ಬದಲಾವಣೆಯಾಗಿ ರೈತರ ಸರ್ಕಾರ ಬಂದಾಗ ಮತ್ತೆ ರೈತ ವಿದ್ಯಾನಿಧಿ, ರೈತರಿಗೆ ಡೀಸೆಲ್ ಸಬ್ಸಿಡಿ, ಬೀಜ ಗೊಬ್ಬರಕ್ಕೆ ಸಹಾಯಧನ ನೀಡುವ ಯೋಜನೆಗಳು ಮತ್ತೆ ಜಾರಿಗೆ ಬರುತ್ತವೆ ಎಂದರು.