ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು, ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರೆ, ಪೀಪಲ್ಸ್ ಪಲ್ಸ್ ಸಮೀಕ್ಷೆಯು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಜಯ ಎಂದು ಹೇಳಿದೆ.

ಕೋಲ್ಕತ್ತಾ (ಏ.29): ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈಗ ಎಲ್ಲರ ಕಣ್ಣು ಎಕ್ಸಿಟ್ ಪೋಲ್ ಫಲಿತಾಂಶಗಳ ಮೇಲಿದೆ. ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಐತಿಹಾಸಿಕ ಬದಲಾವಣೆಯ ಗಾಳಿ ಬೀಸುತ್ತಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಆಡಳಿತ ಅಂತ್ಯಗೊಂಡು, ಬಿಜೆಪಿ ಪ್ರಥಮ ಬಾರಿಗೆ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಬಂಗಾಳ ವಿಧಾನಸಭೆಯ ಒಟ್ಟು 294 ಸ್ಥಾನಗಳಲ್ಲಿ ಬಹುಮತಕ್ಕೆ 147 ಸ್ಥಾನಗಳ ಮ್ಯಾಜಿಕ್ ನಂಬರ್ ಅಗತ್ಯವಿದೆ.

Add Asianetnews Kannada as a Preferred SourcegooglePreferred

ಸಮೀಕ್ಷಾ ಸಂಸ್ಥೆಗಳು ನೀಡಿದದ ನಂಬರ್‌ಗಳ ವಿವರ ಇಲ್ಲಿದೆ

1. ಪಿ-ಮಾರ್ಕ್ (P-MARQ) ಸಮೀಕ್ಷೆ

ಈ ಸಮೀಕ್ಷೆಯು ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿದೆ. ಪಿ-ಮಾರ್ಕ್ ಪ್ರಕಾರ, ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಆರಾಮದಾಯಕವಾಗಿ ಸರ್ಕಾರ ರಚಿಸಲಿದೆ. ದೀದಿ ಪಡೆ ನೂರರ ಗಡಿ ದಾಟಿದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

  • ಬಿಜೆಪಿ (BJP): 150 - 175 ಸ್ಥಾನಗಳು
  • ಟಿಎಂಸಿ ಮೈತ್ರಿಕೂಟ (TMC+): 118 - 138 ಸ್ಥಾನಗಳು
  • ಕಾಂಗ್ರೆಸ್ (CONG): 0
  • ಎಡಪಕ್ಷಗಳು (LEFT): 0

2. ಮ್ಯಾಟ್ರಿಜ್ (Matrize) ಸಮೀಕ್ಷೆ

ಮ್ಯಾಟ್ರಿಜ್ ಸಂಸ್ಥೆಯು ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿದೆ. ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಬಹುಮತದ ಅಂಚಿನಲ್ಲಿದ್ದು, ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ. ಆದರೆ, ಟಿಎಂಸಿ ಕೂಡ ಪ್ರಬಲ ಪೈಪೋಟಿ ನೀಡಿದೆ.

  • ಬಿಜೆಪಿ (BJP): 146 - 161 ಸ್ಥಾನಗಳು
  • ಟಿಎಂಸಿ ಪ್ಲಸ್ (TMC+): 125 - 140 ಸ್ಥಾನಗಳು
  • ಇತರರು (OTH): 6 - 10 ಸ್ಥಾನಗಳು

3. ಪೀಪಲ್ಸ್ ಪಲ್ಸ್ (Peoples Pulse) ಸಮೀಕ್ಷೆ

ಇದು ಉಳಿದೆರಡು ಸಮೀಕ್ಷೆಗಳಿಗೆ ವ್ಯತಿರಿಕ್ತವಾದ ಫಲಿತಾಂಶವನ್ನು ನೀಡಿದ್ದು, ಟಿಎಂಸಿಗೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದೆ. ಪೀಪಲ್ಸ್ ಪಲ್ಸ್ ಪ್ರಕಾರ, ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆ ಇನ್ನೂ ಕುಗ್ಗಿಲ್ಲ ಮತ್ತು ಅವರು ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲಿದ್ದಾರೆ. ಬಿಜೆಪಿ ನೂರರ ಗಡಿಯಲ್ಲೇ ತೃಪ್ತಿಪಡಬೇಕಾಗಬಹುದು.

  • ಟಿಎಂಸಿ ಪ್ಲಸ್ (TMC+): 177 - 187 ಸ್ಥಾನಗಳು
  • ಬಿಜೆಪಿ (BJP): 95 - 110 ಸ್ಥಾನಗಳು
  • ಕಾಂಗ್ರೆಸ್ (CONG): 1 - 3 ಸ್ಥಾನಗಳು
  • ಎಡಪಕ್ಷಗಳು (LEFT): 0 - 1 ಸ್ಥಾನ

4. ಚಾಣಕ್ಯ ಸ್ಟ್ರಾಟಜೀಸ್‌ (Chanakya Strategies)

ಚಾಣಕ್ಯ ಕೂಡ ಬಿಜೆಪಿ ಸರಳವಾಗಿ ಅಧಿಕಾರ ಪಡೆಯುವ ಮುನ್ಸೂಚನೆ ನೀಡಿದ್ದು, ಅಧಿಕಾರಕ್ಕಾಗಿ ಟಿಎಂಸಿ ಕೂಡ ಪ್ರಬಲ ಪೈಪೋಟಿ ನೀಡಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

  • ಟಿಎಂಸಿ ಪ್ಲಸ್ (TMC+): 130 - 140 ಸ್ಥಾನಗಳು
  • ಬಿಜೆಪಿ (BJP): 150 - 160 ಸ್ಥಾನಗಳು
  • ಕಾಂಗ್ರೆಸ್ (CONG): 0
  • ಎಡಪಕ್ಷಗಳು (LEFT):
  • ಇತರೆ: 6-10 ಸ್ಥಾನಗಳು

ಬಹುತೇಕ ಎಕ್ಸಿಟ್ ಪೋಲ್‌ಗಳು (ಪಿ-ಮಾರ್ಕ್, ಮ್ಯಾಟ್ರಿಜ್ ಹಾಗೂ ಚಾಣಕ್ಯ ) ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಹೇಳುತ್ತಿದ್ದರೆ, ಪೀಪಲ್ಸ್ ಪಲ್ಸ್ ಮಾತ್ರ ಟಿಎಂಸಿ ಪರವಾಗಿದೆ. ಹೀಗಾಗಿ, ಬಂಗಾಳದ ನಿಜವಾದ 'ಮತ'ದಾರ ಪ್ರಭು ಯಾರಿಗೆ ಜೈ ಎಂದಿದ್ದಾನೆ ಎಂಬುದು ಮೇ 4ರ ಮತ ಎಣಿಕೆಯ ದಿನದಂದೇ ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ಈ ಎಕ್ಸಿಟ್ ಪೋಲ್ ಹೈಡ್ರಾಮಾ ಮುಂದುವರಿಯಲಿದೆ.

ಸೂಚನೆ: ಎಕ್ಸಿಟ್ ಪೋಲ್‌ಗಳು ತಮ್ಮ ಮತ ಚಲಾಯಿಸಿದ ನಂತರ ಪೋಲಿಂಗ್ ಬೂತ್‌ಗಳಿಂದ ಹೊರಬಂದ ಜನರ ನಡುವೆ ನಡೆಸಿದ ಸಮೀಕ್ಷೆಗಳನ್ನು ಆಧರಿಸಿವೆ. ಎಕ್ಸಿಟ್ ಪೋಲ್‌ಗಳು ಮತದಾರರ ಒಲವನ್ನು ಊಹಿಸುವ ಗುರಿಯನ್ನು ಹೊಂದಿವೆ, ಆದರೆ ಅವುಗಳ ಮುನ್ಸೂಚನೆಗಳು ತಪ್ಪಾಗುವ ಸಾಧ್ಯತೆಯೂ ಇರುತ್ತದೆ.