ಬೆಂಗಳೂರು ಮಳೆಗೆ ದುರಂತಗಳ ಸರಮಾಲೆ, ಗೋಡೆ ಬಿದ್ದ 100 ಮೀಟರ್ ಅಂತರದಲ್ಲೇ ಮತ್ತೊಂದು ಸಾವು, ತಾಯಿ ಜೊತೆ ಆಗಮಿಸಿದ ಯುವಕ ಗಾಡಿ ಪಾರ್ಕಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಸಾವು ಕಂಡಿದ್ದಾನೆ.

ಬೆಂಗಳೂರು (ಏ.29) ಬೆಂಗಳೂರು ಭಾರಿ ಗಾಳಿ ಮಳೆಗೆ ದುರಂತಗಳ ಸರಮಾಲೆ ನಡೆದಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿಯ ಗೋಡೆ ಕುಸಿದು ಬಿದ್ದು 7 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ದುರಂತ ಘಟನಾ ಸ್ಥಳದಿಂದ ದೂರು ಮೀಟರ್ ದೂರದಲ್ಲಿ ಮತ್ತೊಂದು ದುರಂತ ನಡೆದಿದೆ. ತಾಯಿಯೊಂದಿಗೆ ಬಟ್ಟೆ ಖರೀದಿಸಲು ಬಂದ ಯುವಕ ವಿದ್ಯುತ್ ಸ್ಪರ್ಶಿಸಿ ಸಾವು ಕಂಡ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋಡೆ ಬಿದ್ದ ಸ್ಥಳದಿಂದ 100 ಮೀಟರ್ ದೂರದಲ್ಲಿ ಸಾವು

ಬೌರಿಂಗ್ ಆಸ್ಪತ್ರೆ ಬಳಿಯ ಗೋಡೆ ಬಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಈ ದುರಂತ ನಡೆದಿದೆ. ಗೋಡೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದ ವಿದ್ಯುತ್ ಪ್ರವಹಿಸಿ ಯುವಕ ಸಾವು ಕಂಡಿದ್ದಾನೆ. ಕೆಜಿ ಹಳ್ಳಿ ನಿವಾಸಿ ಸೂಫಿಯನ್ ತನ್ನ ತಾಯಿ ಜೊತೆಗೆ ಶಿವಾಜಿನಗರದಲ್ಲಿ ಬಟ್ಟೆ ಖರೀದಿಸಲು ಆಗಮಿಸಿದ್ದ. ಗೋಡೆ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದ ಕಾರಣ ಎಲ್ಲೆಡೆ ವಿದ್ಯುತ್ ಪ್ರವಹಿಸಿತ್ತು. ತಾಯಿ ಜೊತೆಗೆ ಬಂದ ಸೂಫಿಯನ್ ಬೈಕ್ ಪಾರ್ಕಿಂಗ್ ಮಾಡುವಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಗೋಡೆ ಬಿದ್ದು ಪರಿಣಾಮ ಸುತ್ತಮುತ್ತಲಿನ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಇದರಿಂದ ವಿದ್ಯುತ್ ಪ್ರವಹಿಸಿದೆ. ಇದರ ಅರಿವೇ ಇಲ್ಲದ ಸೂಫಿಯನ್ ಸಾವು ಕಂಡಿದ್ದಾನೆ. ಕಣ್ಣ ಮುಂದೆ ಮಗನ ಸಾವು ಕಂಡ ತಾಯಿ ಆಘಾತಕ್ಕೊಳಗಾಗಿದ್ದಾರೆ.

ಜೆಪಿ ನಗರದಲ್ಲಿ ವಿದ್ಯುತ್ ಕಂಬ ಹಿಡಿದ ವ್ಯಕ್ತಿ ಸಾವು

ಜೆಪಿ ನಗರದಲ್ಲಿ ಸುರಿದ ಭಾರಿ ಮಳೆಗೆ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಗಾಳಿದೆ. ಭಾರಿ ಮಳೆ ನಡೆದು ಕಾಲ್ನಡಿಗೆಯಲ್ಲಿ ಬರುತ್ತಿದ್ದ ವ್ಯಕ್ತಿ ವಿದ್ಯುತ್ ಕಂಬ ಹಿಡಿದಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸುರಿದ ಒಂದು ಮಳೆ ಹಲವರ ಜೀವ ತೆಗೆದುಕೊಂಡಿದೆ. ಒಂದು ಮಳೆಗೆ 7 ಮಂದಿ ಗೋಡೆ ಕುಸಿದು ಮೃತಪಟ್ಟರೆ, ಇಬ್ಬರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.