11:34 PM (IST) Nov 26

Karnataka News Live 26 November 2025ಅಧಿಕಾರ ಹಂಚಿಕೆ ವಿವಾದ, ಮಠಾಧೀಶರ ನಡುವೆ ಭುಗಿಲೆದ್ದ ಅಸಮಾಧಾನ, ಡಿಕೆಶಿ ಪರ ನಿರ್ಮಲಾನಂದ ಶ್ರೀಗಳ ಹೇಳಿಕೆಗೆ ಕಾಗಿನೆಲೆ ಶ್ರೀಗಳು ಆಕ್ಷೇಪ

Karnataka CM power sharing dispute: ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿವಾದದಲ್ಲಿ ಡಿಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶ್ರೀಗಳು ಬ್ಯಾಟಿಂಗ್ ಮಾಡಿದ್ದಕ್ಕೆ ಕಾಗಿನೆಲೆ ಶಾಖಾ ಮಠದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Read Full Story
11:00 PM (IST) Nov 26

Karnataka News Live 26 November 2025ಪೊಲೀಸ್ ಆಕಾಂಕ್ಷಿಗಳಿಗೆ ಬಂಪರ್ ಸುದ್ದಿ ಕೊಟ್ಟ ಗೃಹ ಸಚಿವ, 600 ಪಿಎಸ್‌ಐ, ಒಟ್ಟು 15000 ಪೊಲೀಸ್ ಹುದ್ದೆ ಭರ್ತಿ ಯಾವಾಗ?

ಬೆಳಗಾವಿ ಚಳಿಗಾಲದ ಅಧಿವೇಶನದ ಭದ್ರತೆಗೆ 6,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಜೊತೆಗೆ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 15,000 ಪೇದೆ ಮತ್ತು 600 ಪಿಎಸ್‌ಐ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
Read Full Story
08:46 PM (IST) Nov 26

Karnataka News Live 26 November 2025ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ - ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ!

ಬುಧವಾರ ಭಾರತೀಯ ಮಾರುಕಟ್ಟೆಗಳು ಭರ್ಜರಿ ಆರಂಭ ಕಂಡಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡರೆ, ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕಗಳು ಭಾರೀ ಏರಿಕೆ ದಾಖಲಿಸಿವೆ. ವಿದೇಶಿ ಹೂಡಿಕೆದಾರರ ವಿಶ್ವಾಸ ಮತ್ತು ದುರ್ಬಲ ಡಾಲರ್ ಈ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿವೆ.
Read Full Story
08:18 PM (IST) Nov 26

Karnataka News Live 26 November 2025ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ? ತಜ್ಞರ ಎಚ್ಚರಿಕೆ

ಚಳಿಗಾಲದಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕುಗಳು (UTI) ಹೆಚ್ಚಾಗುತ್ತವೆ. ನೀರು ಕಡಿಮೆ ಕುಡಿಯುವುದು, ಜೀವನಶೈಲಿ ಬದಲಾವಣೆ ಮತ್ತು ರೋಗನಿರೋಧಕ ಶಕ್ತಿ ಕುಗ್ಗುವುದು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಲೇಖನವು ಇದರ ಲಕ್ಷಣಗಳು, ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸುತ್ತದೆ.
Read Full Story
08:04 PM (IST) Nov 26

Karnataka News Live 26 November 2025ಅಮ್ಮನ ಮಡಿಲು ಸೇರದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ; ಅಪಘಾತದ ಕಾರಣ ಕುಟುಂಬಸ್ಥರಿಂದ ಅಗ್ನಿಸ್ಪರ್ಶ!

ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಅಮ್ಮನ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಸಮುದಾಯದ ಹಿರಿಯರ ಸೂಚನೆಯಂತೆ ಕೊನೆಗೆ ಅಗ್ನಿಸ್ಪರ್ಶದ ಮೂಲಕ ರಾಮದುರ್ಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Read Full Story
07:56 PM (IST) Nov 26

Karnataka News Live 26 November 2025ಜ್ವಾಲಾಮುಖಿಯ ಮೇಲೆ ವಿಮಾನಗಳು ಹಾರಾಡುವುದಿಲ್ಲ ಏಕೆ?

ಬರೋಬ್ಬರಿ 12 ಸಾವಿರ ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಇಥಿಯೋಪಿಯಾದಲ್ಲಿ 'ಹೇಲಿ ಗುಬ್ಬಿ' ಹೆಸರಿನ ಜ್ವಾಲಾಮುಖಿ ಸ್ಫೋಟಿಸಿದೆ. ಹೀಗಾಗಿ ದೆಹಲಿಯಿಂದ ಹೊರಡಬೇಕಿದ್ದ ಏಳು ಅಂತರರಾಷ್ಟ್ರೀಯ ವಿಮಾನಗಳ ರದ್ದುಗೊಳಿಸಬೇಕಾಯಿತು. ಹಾಗಾದರೆ ಜ್ವಾಲಾಮುಖಿ ಸ್ಫೋಟಕ್ಕೂ ವಿಮಾನ ಹಾರಾಟ ಸ್ಥಗಿತಕ್ಕೂ ಏನ್ ಸಂಬಂಧ.

Read Full Story
07:42 PM (IST) Nov 26

Karnataka News Live 26 November 2025ಡಿಕೆಶಿ ಶಿಸ್ತಿನ ಸಿಪಾಯಿ, ಉಳಿದ ಅವಧಿಗೆ ಸಿಎಂ ಆಗಬೇಕು - ನಿರ್ಮಲಾನಂದ ಶ್ರೀಗಳಿಂದ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್!

Karnataka Congress power sharing row: ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story
07:21 PM (IST) Nov 26

Karnataka News Live 26 November 2025Amruthadhaare - ಕೆಡಿ ಜೈದೇವ್​ಗೆ ಚಮಕ್​ ಕೊಟ್ಟ ಆಕಾಶ್​- ಗೌತಮ್​ ಪುತ್ರ ಎಂದ್ರೆ ಸುಮ್ನೇನಾ?

ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕುತ್ತಿರುವ ಜೈದೇವ್‌ಗೆ ಆಕೆಯ ಮಕ್ಕಳಾದ ಆಕಾಶ್ ಮತ್ತು ಮಿಂಚು ಮಾಲ್‌ನಲ್ಲಿ ಸಿಕ್ಕಿದ್ದಾರೆ. ಜೈದೇವ್ ಮಲ್ಲಿಯ ಫೋಟೋ ತೋರಿಸಿ ವಿಚಾರಿಸಿದಾಗ, ಬುದ್ಧಿವಂತ ಆಕಾಶ್ ಅವನಿಗೆ ತಿರುಗೇಟು ನೀಡಿ ಸುಸ್ತು ಮಾಡುತ್ತಾನೆ.
Read Full Story
07:06 PM (IST) Nov 26

Karnataka News Live 26 November 2025ಕೊಪ್ಪಳದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಹೆರಿಗೆ ಕೇಸ್ - ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಕ್ಕಳ ಹಕ್ಕು ಆಯೋಗ!

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಸತಿ ನಿಲಯವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು,. ವಾರ್ಡನ್ ಅಮಾನತು ಆರೋಪಿ ಬಂಧನ

Read Full Story
06:36 PM (IST) Nov 26

Karnataka News Live 26 November 2025ಬಿಗ್ ಬಾಸ್ ಮನೆಯೊಳಗೆ ಹಳ್ಳಿಕಾರ್ ಎತ್ತು; ಆಮೇಲೆ ₹10 ಲಕ್ಷ ಕೊಡೋದಾಗಿ ವರ್ತೂರ್ ಸಂತೋಷ್ ಷರತ್ತು!

ಬಿಗ್‌ಬಾಸ್ ಸೀಸನ್ 12ರ ರನ್ನರ್ ಅಪ್‌ಗೆ ₹10 ಲಕ್ಷ ಬಹುಮಾನ ನೀಡುವುದಾಗಿ ವರ್ತೂರ್ ಸಂತೋಷ್ ಘೋಷಿಸಿದ್ದಾರೆ. ಆದರೆ, ತಮ್ಮ ಹಳ್ಳಿಕಾರ್ ಎತ್ತುಗಳನ್ನು ಬಿಗ್ ಬಾಸ್ ಮನೆಯೊಳಗೆ ಪ್ರದರ್ಶಿಸಲು ಅವಕಾಶ ನೀಡಿದರೆ ಮಾತ್ರ ಈ ಬಹುಮಾನ ನೀಡುವುದಾಗಿ ಅವರು ಷರತ್ತು ವಿಧಿಸಿದ್ದಾರೆ.

Read Full Story
06:30 PM (IST) Nov 26

Karnataka News Live 26 November 2025ಸಿಎಂ ಆಗಲು ತುದಿಗಾಲಲ್ಲಿ ನಿಂತ ಡಿಕೆಶಿಗೆ ವಾಟ್ಸಾಪ್‌ನಿಂದಲೇ ಮಹತ್ವದ ಸಂದೇಶ ಕಳಿಸಿದ ರಾಹುಲ್‌ ಗಾಂಧಿ?

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಚರ್ಚೆಗಳು ತೀವ್ರಗೊಂಡಿವೆ. 2.5 ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದದ ಊಹಾಪೋಹಗಳ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. 

Read Full Story
06:21 PM (IST) Nov 26

Karnataka News Live 26 November 2025ಲವ್​ ಬ್ರೇಕಪ್​ - Bigg Bossನಲ್ಲಿ ಟ್ಯಾಲೆಂಟ್​ ಷೋನಲ್ಲಿ ವಿ*ಷ ಕುಡಿದು ಬೆಚ್ಚಿಬೀಳಿಸಿದ ಸ್ಪಂದನಾ ಸೋಮಣ್ಣ!

ಬಿಗ್​ಬಾಸ್​ ಮನೆಗೆ ಮಾಜಿ ಸ್ಪರ್ಧಿಗಳ ಆಗಮನದಿಂದ ಮನರಂಜನೆ ಹೆಚ್ಚಾಗಿದೆ. ಈ ನಡುವೆ, ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರು ವಿಷ ಕುಡಿಯುವ ಸ್ಕಿಟ್‌ನಲ್ಲಿ ಅದ್ಭುತವಾಗಿ ನಟಿಸಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದರು. ಮೈಸೂರಿನ ಇಂಜಿನಿಯರಿಂಗ್ ಪದವೀಧರೆಯಾದ ಸ್ಪಂದನಾ, 'ಕರಿಮಣಿ' ಸೀರಿಯಲ್ ಮೂಲಕ ಮನೆಮಾತಾದವರು.
Read Full Story
06:11 PM (IST) Nov 26

Karnataka News Live 26 November 2025ಪಾಕಿಸ್ತಾನ ಜೈಲಿನಲ್ಲಿ ಇಮ್ರಾನ್ ಖಾನ್ ಹ*ತ್ಯೆ? ಬಲೂಚ್ ಸಚಿವಾಲಯ ಸ್ಫೋಟಕ ಹೇಳಿಕೆ, ಅಸಿಮ್ ಮುನೀರ್, ಐಎಸ್‌ಐ ಕೊಲೆ ಸಂಚು ಆರೋಪ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಡಿಯಾಲಾ ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿವೆ. ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಕುಟುಂಬಸ್ಥರಿಗೆ, ಪಕ್ಷದ ನಾಯಕರಿಗೆ ಭೇಟಿಗೆ ಅನುಮತಿ ನೀಡದಿರುವುದು ಅನುಮಾನಕ್ಕೆ ಕಾರಣ

Read Full Story
05:54 PM (IST) Nov 26

Karnataka News Live 26 November 2025Bengaluru - ನನ್ನ ದೇಹಕ್ಕೆ ಪತಿ ಪಾದರಸ ಇಂಜೆಕ್ಟ್‌ ಮಾಡಿದ್ದಾರೆ ಎಂದು ಎಫ್‌ಐಆರ್‌ ದಾಖಲಿಸಿದ ಮರುದಿನವೇ ಪತ್ನಿ ಸಾವು!

ಬೆಂಗಳೂರಿನ ಅತ್ತಿಬೆಲೆಯಲ್ಲಿ, ಪತಿಯೇ ಪಾದರಸದ ಇಂಜೆಕ್ಷನ್ ನೀಡಿದ ಪರಿಣಾಮ 9 ತಿಂಗಳ ಕಾಲ ಚಿಕಿತ್ಸೆ ಪಡೆದ ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿಗೂ ಮುನ್ನ, ಪತಿ ಹಾಗೂ ಮಾವನಿಂದ ನಡೆದ ದೌರ್ಜನ್ಯ ಮತ್ತು ವಿಷಪ್ರಾಶನದ ಬಗ್ಗೆ ಅವರು ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.
Read Full Story
05:50 PM (IST) Nov 26

Karnataka News Live 26 November 2025ಮುರುಘಾಶ್ರೀ ನಿರಪರಾಧಿ ತೀರ್ಪು - ಇದು 'ನಮ್ಮ ವ್ಯವಸ್ಥೆಯ ಸೋಲು' ಎಂದ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ!

ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣದ ನಿರಪರಾಧಿ ತೀರ್ಪು 'ನಮ್ಮ ವ್ಯವಸ್ಥೆಯ ಸೋಲು' ಎಂದು ಮೈಸೂರಿನ ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನ್ಲಿ ಹೇಳಿದ್ದಾರೆ. ತನಿಖಾ ಹಂತದಲ್ಲಿನ ಲೋಪಗಳೇ ಇದಕ್ಕೆ ಕಾರಣ ಎಂದಿದ್ದಾರೆ. ಮಕ್ಕಳ ಪರ ಕಾನೂನು ಹೋರಾಟ ಮುಂದುವರಿಸುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

Read Full Story
05:48 PM (IST) Nov 26

Karnataka News Live 26 November 2025ಒಂದು ದಿನಕ್ಕಾಗಿ ವರ್ಷದ ಸಾವು-ಬದುಕಿನ ಹೋರಾಟ - ಪತಿಯ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಮಾತು

'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೋತ ಪತಿ ಅರುಣ್ ವೆಂಕಟೇಶ್ ಕುರಿತು ಭಾವುಕ ವಿಡಿಯೋ ಹಂಚಿಕೊಂಡಿದ್ದಾರೆ. ಸ್ಪರ್ಧಿಗಳು ಪಡುವ ಕಷ್ಟ ಮತ್ತು ಸೋಲಿನ ನಿರಾಸೆಯನ್ನು ವಿವರಿಸಿದ ಅವರು, ಸೋಲನ್ನು ನಗುತ್ತಾ ಸ್ವಾಗತಿಸಿದರೆ ಗೆಲುವು ನಮ್ಮದಾಗುತ್ತದೆ ಎಂದಿದ್ದಾರೆ.

Read Full Story
05:35 PM (IST) Nov 26

Karnataka News Live 26 November 2025ಕೊಪ್ಪಳ - ಯಲಬುರ್ಗಾ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ವಿಧಿವಶ

Yelburga former MLA Death: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ (79) ಅವರು ಅನಾರೋಗ್ಯದಿಂದಾಗಿ ತುಮಕೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1999 ರಿಂದ 2004 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದ ಅವರ ಅಂತ್ಯಕ್ರಿಯೆಯು ಸ್ವಗ್ರಾಮ ಹುಣಿಸ್ಯಾಳದಲ್ಲಿ ನಡೆಯಲಿದೆ.

Read Full Story
05:10 PM (IST) Nov 26

Karnataka News Live 26 November 2025ತುಂಡುಡುಗೆ ರಾಣಿ Niveditha Gowda ಬಳಿ ಈ ಪುಸ್ತಕ? 2ನೇ ಮದ್ವೆಗೆ ತಯಾರಿನಾ? ಏನಿದೆ ಈ ಬುಕ್​ನಲ್ಲಿ ನೋಡಿ

ತುಂಡುಡುಗೆಯಿಂದಲೇ ಖ್ಯಾತರಾದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಇದೀಗ 'ಮೆನ್ ಆರ್ ಫ್ರಮ್ ಮಾರ್ಸ್, ವಿಮೆನ್ ಆರ್ ಫ್ರಮ್ ವೀನಸ್' ಎಂಬ ಪುಸ್ತಕದೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಬಂಧಗಳ ಕುರಿತಾದ ಈ ಪುಸ್ತಕವನ್ನು ಅವರು ಯಾಕೆ ಹಿಡಿದಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

Read Full Story
05:08 PM (IST) Nov 26

Karnataka News Live 26 November 2025ಡಿಕೆಶಿ 5 ವರ್ಷ ಸಿಎಂ ಆಗಲಿ, ಆದರೆ ಮೊದಲು ಪರಮೇಶ್ವರ್ 'ಹಳೆ ಕೂಲಿ' ಕ್ಲಿಯರ್ ಆಗಲಿ - ರಾಜಣ್ಣ ಹೊಸ ಬಾಂಬ್!

ಮಾಜಿ ಸಚಿವ ಕೆಎನ್‌ ರಾಜಣ್ಣ, ಮುಖ್ಯಮಂತ್ರಿ ಹುದ್ದೆಯ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ. ಡಿಕೆ ಶಿವಕುಮಾರ್‌ಗಿಂತ ಮೊದಲು ಜಿ ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಬೇಕು, ಅವರ 'ಹಳೇ ಕೂಲಿ' ಮೊದಲು ಕ್ಲಿಯರ್ ಆಗಲಿ ಎಂದು ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

Read Full Story
04:17 PM (IST) Nov 26

Karnataka News Live 26 November 2025ತಾಯಿಗಾಗಿಯೇ ಐಎಎಸ್ ಅಧಿಕಾರಿಯಾದ ಮಗ - ತಾಯಿ ಸಮಾಧಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ!

ಕಾರು ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಜೀವನವು ನೋವಿನಿಂದ ಪ್ರೇರಿತವಾಗಿತ್ತು. ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ತಾಯಿಯ ಪಿಂಚಣಿ ನೋವಿನಿಂದ ಪ್ರೇರಿತರಾಗಿ 'ಪಿಂಚಣಿ ಅದಾಲತ್' ಜಾರಿಗೆ ತಂದಿದ್ದರು. ರಾಮದುರ್ಗದಲ್ಲಿ ಅವರ ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

Read Full Story