- Home
- Entertainment
- TV Talk
- ಒಂದು ದಿನಕ್ಕಾಗಿ ವರ್ಷದ ಸಾವು-ಬದುಕಿನ ಹೋರಾಟ: ಪತಿಯ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಮಾತು
ಒಂದು ದಿನಕ್ಕಾಗಿ ವರ್ಷದ ಸಾವು-ಬದುಕಿನ ಹೋರಾಟ: ಪತಿಯ ಸೋಲಿನ ಬಗ್ಗೆ ನಟಿ ರಜಿನಿ ಭಾವುಕ ಮಾತು
'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೋತ ಪತಿ ಅರುಣ್ ವೆಂಕಟೇಶ್ ಕುರಿತು ಭಾವುಕ ವಿಡಿಯೋ ಹಂಚಿಕೊಂಡಿದ್ದಾರೆ. ಸ್ಪರ್ಧಿಗಳು ಪಡುವ ಕಷ್ಟ ಮತ್ತು ಸೋಲಿನ ನಿರಾಸೆಯನ್ನು ವಿವರಿಸಿದ ಅವರು, ಸೋಲನ್ನು ನಗುತ್ತಾ ಸ್ವಾಗತಿಸಿದರೆ ಗೆಲುವು ನಮ್ಮದಾಗುತ್ತದೆ ಎಂದಿದ್ದಾರೆ.

ರಜಿನಿ-ಅರುಣ್ ಜೋಡಿ
'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಹಾಗೂ ರೀಲ್ಸ್ ಪಾರ್ಟನರ್ ಆಗಿದ್ದ ಅರುಣ್ ವೆಂಕಟೇಶ್ ಜೊತೆ ದಿಢೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು 'ವಿಡಿಯೋ ಪಾರ್ಟನರ್' ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ, ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಬೀಳ್ಕೊಟ್ಟಿದ್ದ ನಟಿ
ಪತಿ ಅರುಣ್ ಗೌಡ ಅಥ್ಲಿಟ್ ಆಗಿರುವ ಕಾರಣ, ಅವರು ಮೊನ್ನೆಯಷ್ಟೇ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ನಲ್ಲಿ ಭಾಗವಹಿಸಲು ತೆರಳಿದ್ದರು. ಅವರನ್ನು ಕಳುಹಿಸಿಕೊಡುವಾಗಲೂ ರಜಿನಿ ವಿಡಿಯೋ ಮಾಡುವ ಮೂಲಕ ಪತಿಯನ್ನು ಬೀಳ್ಕೊಟ್ಟಿದ್ದರು.
ಮೆಡಲ್ ಸಿಗಲಿಲ್ಲ
ಇದೀಗ ಪತಿ ವಾಪಸ್ ಆಗಿದ್ದಾರೆ. ಆದರೆ ಅವರು ಸ್ಪರ್ಧೆಯಲ್ಲಿ ಗೆಲುವು ಸಾಧಿಸಲಿಲ್ಲ. ಅದರ ಬಗ್ಗೆ ರಜಿನಿ ಅವರು ಈಗ ಭಾವುಕವಾಗಿರುವ ಹಾಗೂ ಸೋತ ಸ್ಪರ್ಧಿಗಳಲ್ಲಿಯೂ ಧೈರ್ಯ ತುಂಬುವಂಥ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.
ಯಾವ ಶತ್ರುಗೂ ಬೇಡ
ಮೊದಲಿಗೆ ಬೆಸ್ಟ್ ವಿಷಸ್ ಮಾಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ ನಟಿ. ಮೆಡಲ್ ತರಲಿಲ್ಲ ಆದರೆ ನಿಮ್ಮೆಲ್ಲರ ಪ್ರೀತಿ ಸಿಕ್ಕಿದೆ ಎಂದಿದ್ದಾರೆ ನಟಿ. ಇದು ಬರೀ ಅರುಣ್ ಒಬ್ಬರ ಕಥೆಯಲ್ಲ. ಅಲ್ಲಿ ಬಂದಿದ್ದ ಸಾವಿರಾರು ಅಥ್ಲೀಟ್‌ಗಳ ಕಥೆ. ಉಪ್ಪು ಖಾರ ಇಲ್ಲದೇ ಊಟ ಮಾಡಿದ ನಿದ್ದೆ ಇಲ್ಲದೇ ರಾತ್ರಿಗಳು. ಈ ಒಂದು ದಿನಕ್ಕೆ ಒಂದು ವರ್ಷ ಸಾವು ಬದುಕಿನ ಹೋರಾಟ. ಆದರೆ ಕೊನೆಗೆ ಏನೂ ಇಲ್ಲದೇ ಬರೀಗೈಯಲ್ಲಿ ನಿಲ್ಲುವುದು ಇದೆಯಲ್ಲ, ಯಾವ ಶತ್ರುಗೂ ಬೇಡ ಎಂದಿದ್ದಾರೆ.
ಬಾಡಿ ಕಂಡೀಷನ್
ನನ್ನ ಬೆಬೋ ಬಾಡಿ ಕಂಡೀಷನ್ ಬಹಳ ಚೆನ್ನಾಗಿತ್ತು ಅಂತ ಕೋಚ್ ಕೂಡ ಹೇಳಿದ್ದರು. ನಾವು ಮಾಡುವ ಕೆಲಸ ಗುರುಗಳಿಗೆ ಇಷ್ಟವಾದರೆ ದೇವರಿಗೆ ಇಷ್ಟವಾದಂತೆ ಎಂದು ನನ್ನ ಬೆಬೋ ಕೂಡ ಎಕ್ಸೈಟ್ ಆಗಿದ್ದ. ಆದರೆ ಅದೃಷ್ಟ ಕೈಕೊಟ್ಟಿತ್ತು ಎಂದು ನುಡಿದಿದ್ದಾರೆ.
ಇದೇ ಮೊದಲಲ್ಲ
ಅವರು ಸ್ಟೇಜ್ ಮೇಲೆ ಸೋಲುತ್ತಿರುವುದು ಇದೇ ಮೊದಲಲ್ಲ ಎಂದಿರುವ ರಜಿನಿ, ಅವರು ಸ್ಟೇಜ್ ಮೇಲೆ ಇರುವ ವಿಡಿಯೋ ನೋಡಿ ಹೇಗಿತ್ತು ಹೇಳಿ ಎಂದಿದ್ದಾರೆ.
ತಲೆ ಬಾಗಬೇಕು
ಯಶಸ್ಸಿನ ಹಾದಿಯಲ್ಲಿ ಏರಿಳಿತ ಸಹಜ ಹಾಗೆಯೇ ಮುಂದಿನ ನಮ್ಮ ಗೆಲುವು ಹೇಗಿರಬೇಕು ಅಂದ್ರೆ ಸೋಲು ಕೂಡ ನಮ್ಮ ಮುಂದೆ ತಲೆ ಬಾಗಬೇಕು. ಬದುಕನ್ನು ಪ್ರೀತಿಸುತ್ತಾ ಸಾಗಿ ಬದುಕು ನಮ್ಮನ್ನು ಪ್ರೀತಿಸುತ್ತೆ ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲುವು ನಮ್ಮನ್ನು ಸ್ವಾಗತಿಸುತ್ತೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

