- Home
- News
- State
- Karnataka News Live: ಶಿವಮೊಗ್ಗ - ಸಂಕೇತ್ ಹತ್ಯೆ ಖಂಡಿಸಿ ಸೂಳೆಬೈಲಿನಲ್ಲಿ ಹಿಂದೂ-ಮುಸ್ಲಿಂ ಬೃಹತ್ ಮುಂಬತ್ತಿ ಮೆರವಣಿಗೆ!
Karnataka News Live: ಶಿವಮೊಗ್ಗ - ಸಂಕೇತ್ ಹತ್ಯೆ ಖಂಡಿಸಿ ಸೂಳೆಬೈಲಿನಲ್ಲಿ ಹಿಂದೂ-ಮುಸ್ಲಿಂ ಬೃಹತ್ ಮುಂಬತ್ತಿ ಮೆರವಣಿಗೆ!

ಯಾದಗಿರಿ: ಗುರುಮಠಕಲ್ನಲ್ಲಿ ಫೆ.21ರಂದು ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತ್ಯುತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಾಂಧೀಜಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಗಾಂಧಿ ಭಾರತ ದೇಶಕ್ಕೆ ರಾಷ್ಟ್ರಪಿತರಲ್ಲ, ಪಾಕಿಸ್ತಾನಕ್ಕೆ ರಾಷ್ಟ್ರಪಿತ ಎಂಬುದು ಸೇರಿದಂತೆ, ಪ್ರಧಾನಿ ನೆಹರು ಹಾಗೂ ಅನ್ಯಕೋಮಿನ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಕ್ಕೆ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.
ಶಾಸಕ ಯತ್ನಾಳ್ ಅವರ ಭಾಷಣ ವ್ಯಾಪಕ ಚರ್ಚೆಗೆ ಗ್ರಾಸವಾಗಿ, ಕೆಲವರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ತಮ್ಮ ವಿರುದ್ಧ ಈಗಾಗಲೇ 79 ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯೂ ಕೂಡ ದಾಖಲಾದರೆ ತಾವೇನು ಹೆದರುವುದಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
Karnataka News Live 25 February 2026 ಶಿವಮೊಗ್ಗ - ಸಂಕೇತ್ ಹತ್ಯೆ ಖಂಡಿಸಿ ಸೂಳೆಬೈಲಿನಲ್ಲಿ ಹಿಂದೂ-ಮುಸ್ಲಿಂ ಬೃಹತ್ ಮುಂಬತ್ತಿ ಮೆರವಣಿಗೆ!
Karnataka News Live 25 February 2026 ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ - 22 ವರ್ಷದ ಯೋಧ ಕ್ಯಾಪ್ಟನ್ ಅಮನ್ ಸಿಂಗ್ ಸಾವು
ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಕರ್ತವ್ಯದಲ್ಲಿದ್ದ 22 ವರ್ಷದ ಸೇನಾ ಕ್ಯಾಪ್ಟನ್ ಅಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರ ಪ್ರದೇಶದ ನಿವಾಸಿಯಾಗಿದ್ದ ಇವರು ಪೋಷಕರ ಏಕೈಕ ಪುತ್ರರಾಗಿದ್ದು, ಇತ್ತೀಚೆಗಷ್ಟೇ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದರು. ಅವರ ಹಠಾತ್ ಸಾವು ಗ್ರಾಮದಲ್ಲಿ ಶೋಕವನ್ನುಂಟುಮಾಡಿದೆ.
Karnataka News Live 25 February 2026 2 KM ಪ್ರಯಾಣಕ್ಕೆ 6 ರೂಪಾಯಿ, 2.5KM ಪ್ರಯಾಣಕ್ಕೆ 12 ರೂಪಾಯಿ - BMTC ಟಿಕೆಟ್ ದರ ವ್ಯವಸ್ಥೆ ವಿರುದ್ಧ ಪ್ರಯಾಣಿಕರ ಆಕ್ರೋಶ!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಹಂತ ಆಧಾರಿತ ಟಿಕೆಟ್ ದರ ಪದ್ಧತಿಯಿಂದಾಗಿ ಪ್ರಯಾಣಿಕರು ಕಡಿಮೆ ದೂರಕ್ಕೂ ಹೆಚ್ಚು ಹಣ ಪಾವತಿಸುವಂತಾಗಿದೆ. ಜಿಪಿಎಸ್ ತಂತ್ರಜ್ಞಾನ ಲಭ್ಯವಿದ್ದರೂ, ಬಿಎಂಟಿಸಿ ಹಳೆಯ ಪದ್ಧತಿಯನ್ನೇ ಮುಂದುವರಿಸಿದೆ.
Karnataka News Live 25 February 2026 ಬೆಂಗಳೂರಲ್ಲಿ ಕಲರ್ಸ್ ಮೊಬೈಲ್ ಅಂಗಡಿ ಮಾಲೀಕನಿಗೆ ಕಲರ್ ಕಲರ್ ಕಾಗೆ ಹಾರಿಸಿದ ಖತರ್ನಾಕ್ ಖದೀಮ!
ಬೆಂಗಳೂರಿನ ರಾಜಾಜಿನಗರದಲ್ಲಿ, ಮೊಬೈಲ್ ಖರೀದಿಸುವ ನೆಪದಲ್ಲಿ ಬಂದ ವಂಚಕನೊಬ್ಬ, 76 ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ಗಳಿಗೆ ನಕಲಿ ಪೇಮೆಂಟ್ ಸ್ಕ್ರೀನ್‌ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿದ್ದಾನೆ. ಹಣ ಜಮೆಯಾಗದಿರುವುದನ್ನು ಅರಿತ ಮಾಲೀಕರು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Karnataka News Live 25 February 2026 18 ವರ್ಷ ಕಿರಿಯ ಮಹಿಳೆಯ ಜೊತೆ ನಿವೃತ್ತ ಹೈಕೋರ್ಟ್ ಉದ್ಯೋಗಿಯ ಅಫೇರ್, ಕೊಲೆ ಮಾಡಿ ರೈಲ್ವೆ ಟ್ರ್ಯಾಕ್‌ಗೆ ಎಸೆದ!
Retired HC Employee Arrested for Murdering Partner in Kochi ಕೊಚ್ಚಿಯ ರೈಲ್ವೆ ಹಳಿಯಲ್ಲಿ ಸುಧಾ ಬೇಬಿ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃಟ್ಟು ಹೈಕೋರ್ಟ್ ಉದ್ಯೋಗಿ ಶಾಜಿ ಕೆ.ವಿ.ಯನ್ನು ಬಂಧಿಸಲಾಗಿದೆ.
Karnataka News Live 25 February 2026 ಬಾಗಲಕೋಟೆ - ನಾಳೆ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ, ಶಿವಾಜಿ ಮೆರವಣಿಗೆಗೆ ಕಲ್ಲೆಸೆದ ಕಿಡಿಗೇಡಿಗಳ ಕಿವಿ ಹಿಂಡಲು ಸಜ್ಜಾದ ಖಾಕಿ ಪಡೆ
ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ನಡೆದ ಕಲ್ಲೆಸೆತದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಪೊಲೀಸರು ನಗರದಾದ್ಯಂತ ಪಥಸಂಚಲನ ನಡೆಸಿದರು.
Karnataka News Live 25 February 2026 ದಾಖಲೆ ಮಾಡಿದ ಉತ್ತರ ಕನ್ನಡದ ಅಪರೂಪದ ರಾಜಕಾರಣಿ, ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ!
ಉತ್ತರ ಕನ್ನಡ ಮೂಲದ ರಾಜಕಾರಣಿ ಶಶಿಭೂಷಣ್ ಹೆಗಡೆ ಅವರು ಕ್ರೀಡಾ ಲೋಕದಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಲೇಖಕ, ಡಾ ಅಜಿತ್ ಹರೀಶಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 25 February 2026 ಪರದೆಯ ಮೇಲೆ ಮುದ್ದಾದ ಸಂಸಾರ, ಜೀವನದಲ್ಲಿ ಮದುವೆಗೂ ಮುನ್ನವೇ ಸಹಜೀವನ - ಲಿವ್ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
ಸೆಲೆಬ್ರಿಟಿಗಳ ವಿವಾವ ಸಿಕ್ಕಾಪಟ್ಟೆ ಸೌಂಡ್ ಮಾಡುವುದು. ಅದರಲ್ಲಿಯೂ ಕೆಲ ಸೆಲೆಬ್ರಿಟಿಗಳು ಒಂದು, ಎರಡು, ಮೂರು ಮದುವೆ ಆಗುತ್ತಾರೆ. ಇನ್ನೂ ಕೆಲವರು ಡಿವೋರ್ಸ್ ತಗೊಂಡು, ಸಿಂಗಲ್ ಆಗಿಯೇ ಉಳಿದವರು ಕೂಡ ಇದ್ದಾರೆ. ಇನ್ನೂ ಕೆಲವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ.
Karnataka News Live 25 February 2026 ಬೆಂಗಳೂರಿಗರಿಗೆ ಸಿಹಿ ಸುದ್ದಿ - ಶೀಘ್ರವೇ 'ಗುಲಾಬಿ ಮೆಟ್ರೋ' ಸಂಚಾರ ಮುಕ್ತ; BMRCL ಎಂಡಿ ಜೆ. ರವಿಶಂಕರ್ ಪರಿಶೀಲನೆ
ಬೆಂಗಳೂರಿನ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗವು ಅಂತಿಮ ಹಂತ ತಲುಪಿದ್ದು, 2026ರ ವೇಳೆಗೆ ಸಾರ್ವಜನಿಕ ಸೇವೆಗೆ ಮುಕ್ತವಾಗುವ ನಿರೀಕ್ಷೆಯಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಕಾಮಗಾರಿಯನ್ನು BMRCL ಎಂಡಿ ರವಿಶಂಕರ್ ಪರಿಶೀಲಿಸಿದರು.
Karnataka News Live 25 February 2026 ಸಿಎಂ, ಸಚಿವಸ್ಥಾನ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತ - ಸಂಸದ ಯದುವೀರ್ ಒಡೆಯರ್
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಸರ್ಕಾರದ ಆಂತರಿಕ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗಿನ ಕರ್ತೋಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
Karnataka News Live 25 February 2026 ಪ್ರೀತಿಯಲ್ಲಿ ಮೋಸ ಹೋದೆ; ರಾಜಾರೋಷವಾಗಿ ಬ್ರೇಕಪ್ ಹೇಳಿಕೊಂಡಿದ್ದ ಕನ್ನಡ ಕಿರುತೆರೆ ನಟಿಯರಿವರು!
Sandalwood Actress Love Marriage News: ಕನ್ನಡದ ಕೆಲ ನಟಿಯರು ಬ್ರೇಕಪ್ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಪ್ರೀತಿ ಅನುಭವ ಆಗಿರುತ್ತದೆ, ಹಾಗೆಯೇ ಬ್ರೇಕಪ್ ಕೂಡ ಆಗಿದೆ ಎಂದು ನಟಿಯರು ಮಾಧ್ಯಮದ ಮುಂದೆ ಕೂಡ ಹೇಳಿದ್ದುಂಟು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 25 February 2026 ಕೊನೆಗೂ ಬೀದಿಗೆ ಬಿದ್ದ ಅಂಬಾನಿ, 3800 ಕೋಟಿ ರೂಪಾಯಿ ಮೌಲ್ಯದ Abode ಮನೆ ಸೀಜ್ ಮಾಡಿದ ED!
ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮುಂಬೈನ 'ಅಬೋಡ್' ನಿವಾಸವನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.
Karnataka News Live 25 February 2026 ವಿದ್ಯಾರ್ಥಿಗಳ ಬೇಸಿಗೆ ರಜಾ ಮಜಾ ಕಟ್ ಮಾಡದಂತೆ ಕರ್ನಾಟಕದ ಶಾಲೆಗಳಿಗೆ CBSE ಖಡಕ್ ಸೂಚನೆ!
ಬೆಂಗಳೂರಿನ ಸಿಬಿಎಸ್‌ಇ ಶಾಲೆಗಳು ಏಪ್ರಿಲ್ 1 ರ ಮೊದಲು 10 ಮತ್ತು 12 ನೇ ತರಗತಿಗಳನ್ನು ಪ್ರಾರಂಭಿಸಬಾರದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಿಸಿದೆ. ವಿದ್ಯಾರ್ಥಿಗಳ ಆತಂಕ ಮತ್ತು ಬಳಲಿಕೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
Karnataka News Live 25 February 2026 Urdu Invitation Row - ನಾವು ಯಾರನ್ನೂ ಓಲೈಕೆ ಮಾಡೋಲ್ಲ, ಪ್ರತಿಭಟನೆ ಮಾಡೋದು ವಿಪಕ್ಶಗಳ ಚಾಳಿ ಎಂದ ಸಿಎಂ
ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಬಳಸಿದ್ದಕ್ಕೆ ವಿಪಕ್ಷಗಳು ಮತ್ತು ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ಯಾರನ್ನೂ ಓಲೈಕೆ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
Karnataka News Live 25 February 2026 Bhagyalakshmi - ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್ ಜೊತೆಗೇ ಬಂದುಬಿಟ್ಟಳಾ ಭಾಗ್ಯ?
Karnataka News Live 25 February 2026 Kunigal hotel fire - ಹೆದ್ದಾರಿ ಬದಿಯ ಹೋಟೆಲ್‌ಗೆ ಬೆಂಕಿ, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಸುಟ್ಟು ಕರಕಲು!
ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ 'ತಾಜ್ ದರ್ಬಾರ್' ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದೆ.
Karnataka News Live 25 February 2026 ಇಂದು ಮಧ್ಯರಾತ್ರಿಯಿಂದಲೇ ಮದ್ಯ ಮಾರಾಟ ನಿಷೇಧ; ಜಿಲ್ಲಾಧಿಕಾರಿ ಆದೇಶ, ಪೊಲೀಸರಿಂದ ಹೈ-ಅಲರ್ಟ್!
ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲೆಸೆತವನ್ನು ಖಂಡಿಸಿ, ಹಿಂದೂ ಸಂಘಟನೆಗಳು ಫೆಬ್ರವರಿ 26ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ, ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Karnataka News Live 25 February 2026 ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಕರಾವಳಿಗರಿಗೆ ಗುಡ್‌ನ್ಯೂಸ್ ನೀಡಿದ ರೈಲ್ವೇಸ್!
ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಅಳವಡಿಸಲಾದ ಐದು ಹೆಚ್ಚುವರಿ ಬೋಗಿಗಳ ಸೇವೆಯನ್ನು ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಬದಲಾವಣೆಯಿಂದಾಗಿ ರೈಲು ಒಟ್ಟು 19 ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
Karnataka News Live 25 February 2026 ಗಿಫ್ಟ್ ಡೀಡ್ ಮಾಡಿದ್ದ ಅತ್ತೆಯನ್ನೇ ಅಳಿಯ ಮನೆಯಿಂದ ಹೊರಹಾಕಿದ, ಗೃಹ ಬಂಧನದಲ್ಲಿದ್ದ ವಯೋವೃದ್ಧೆಗೆ ಆಸರೆ ಅಡಿಯಲ್ಲಿ ಸಿಕ್ಕಿದ ನ್ಯಾಯ
ರಾಮನಗರ ಪೊಲೀಸ್ ಇಲಾಖೆಯ 'ಆಸರೆ' ಯೋಜನೆಯು ನಿರ್ಲಕ್ಷ್ಯ ಮತ್ತು ದೌರ್ಜನ್ಯಕ್ಕೊಳಗಾದ ಹಿರಿಯ ನಾಗರಿಕರು ಮತ್ತು ಒಂಟಿ ಮಹಿಳೆಯರಿಗೆ ಆಸರೆಯಾಗಿದೆ. ಗೃಹಬಂಧನದಲ್ಲಿದ್ದ ತಾಯಿ ಹಾಗೂ ಅಳಿಯನಿಂದ ಮನೆಯಿಂದ ಹೊರಹಾಕಲ್ಪಟ್ಟ ಅತ್ತೆಯಂತಹ ಪ್ರಕರಣಗಳಲ್ಲಿ ಈ ಯೋಜನೆ ನ್ಯಾಯ ಒದಗಿಸಿದೆ.
Karnataka News Live 25 February 2026 ಕರಾವಳಿಯ ಬದಲಾಗುತ್ತಿರುವ ಚಿತ್ರಣ - ಬೆಂಗಳೂರು ಬಿಟ್ಟು ಬ್ಯಾಕ್ ಟು ಊರು, ಐಟಿ ಹಬ್ ಆಗಿ ಬದಲಾಗ್ತಿರುವ ಮಂಗಳೂರು!
ಕೋಮು ರಾಜಕೀಯದಿಂದ ಕಂಗೆಟ್ಟಿದ್ದ ಮಂಗಳೂರು-ಉಡುಪಿ ವಲಯವು ಈಗ 'ಭಾರತದ ಸಿಲಿಕಾನ್ ಬೀಚ್' ಆಗಿ ರೂಪುಗೊಳ್ಳುತ್ತಿದೆ. ಸರ್ಕಾರದ 'ಬಿಯಾಂಡ್ ಬೆಂಗಳೂರು' ಯೋಜನೆ, ವರ್ಕ್ ಫ್ರಮ್ ಹೋಮ್ ಪರಿಣಾಮ ಮತ್ತು ಸ್ಥಳೀಯ ಉದ್ಯಮಶೀಲತೆಯಿಂದಾಗಿ ಐಟಿ ಆದಾಯ ಮತ್ತು ಉದ್ಯೋಗಾವಕಾಶಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.