- Home
- Entertainment
- TV Talk
- ಪ್ರೀತಿಯಲ್ಲಿ ಮೋಸ ಹೋದೆ; ರಾಜಾರೋಷವಾಗಿ ಬ್ರೇಕಪ್ ಹೇಳಿಕೊಂಡಿದ್ದ ಕನ್ನಡ ಕಿರುತೆರೆ ನಟಿಯರಿವರು!
ಪ್ರೀತಿಯಲ್ಲಿ ಮೋಸ ಹೋದೆ; ರಾಜಾರೋಷವಾಗಿ ಬ್ರೇಕಪ್ ಹೇಳಿಕೊಂಡಿದ್ದ ಕನ್ನಡ ಕಿರುತೆರೆ ನಟಿಯರಿವರು!
Sandalwood Actress Love Marriage News: ಕನ್ನಡದ ಕೆಲ ನಟಿಯರು ಬ್ರೇಕಪ್ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಪ್ರೀತಿ ಅನುಭವ ಆಗಿರುತ್ತದೆ, ಹಾಗೆಯೇ ಬ್ರೇಕಪ್ ಕೂಡ ಆಗಿದೆ ಎಂದು ನಟಿಯರು ಮಾಧ್ಯಮದ ಮುಂದೆ ಕೂಡ ಹೇಳಿದ್ದುಂಟು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಸುಕೃತಾ ನಾಗ್
ನಾನು ಲವ್ ಮಾಡಿದ್ದೀನಿ, ಬ್ರೇಕಪ್ ಆಗಿದೆ, ಡಿಪ್ರೆಶನ್‌ಗೂ ಹೋಗಿದ್ದೆ, ಥೆರಪಿ ಕೂಡ ತಗೊಂಡಿದ್ದೇನೆ. ಕೊರೊನಾ ಟೈಮ್‌ನಲ್ಲಿ ಬ್ರೇಕಪ್ ಆಯ್ತು. ನಾವು ಇದ್ದೀವಿ ಎಂದು ಟೇಕನ್ ಫಾರ್ ಗ್ರ್ಯಾಂಟೆಡ್ ತಗೊಳ್ತಾರೆ ಎಂದು ಸುಕೃತಾ ನಾಗ್ ಅವರು ಹೇಳಿದ್ದಾರೆ.
ತನಿಷಾ ಕುಪ್ಪಂಡ
ಒಂದೂವರೆ ವರ್ಷ ಸ್ನೇಹದಲ್ಲಿದ್ದು, ಆರು ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದೆ. ಚಿತ್ರರಂಗದಲ್ಲಿ ಇದ್ದವರನ್ನು ಇಷ್ಟಪಟ್ಟಿದ್ದೆ, ಎಲ್ಲ ವಿಷಯವನ್ನು ಅವನ ಬಳಿ ಮಾತನಾಡಬೇಕಿತ್ತು, ಇದೇ ರೀತಿ ಮನಸ್ತಾಪದಿಂದ ದೂರ ಆದೆ ಎಂದು ತನಿಷಾ ಕುಪ್ಪಂಡ ಅವರು ಹೇಳಿದ್ದಾರೆ.
ನಮ್ರತಾ ಗೌಡ
ನಟಿ ನಮ್ರತಾ ಗೌಡ ಅವರು ಚಿತ್ರರಂಗದಿಂದ ದೂರ ಇದ್ದ ವ್ಯಕ್ತಿಯನ್ನು ಪ್ರೀತಿಸದ್ದೆ, ಬ್ರೇಕಪ್ ಆಯ್ತು. ಆಮೇಲೆ ತುಂಬ ಕಷ್ಟಪಟ್ಟೆ ಎಂದು ನಮ್ರತಾ ಗೌಡ ಹೇಳಿದ್ದರು.
ರೂಪಿಕಾ
ನನಗೆ ಲವ್ ಆಗಿ ಬ್ರೇಕಪ್ ಆಗಿದೆ. ಅದು ಟಾಕ್ಸಿಕ್ ರಿಲೇಶನ್‌ಶಿಪ್ ಆಗಿತ್ತು. ಹೆಚ್ಚು ದಿನ ಉಳಿದಿರಲಿಲ್ಲ. ಹೇಳಿಕೊಳ್ಳುವಂತಹ ರಿಲೇಶನ್‌ಶಿಪ್ ಅದಾಗಿರಲಿಲ್ಲ ಎಂದು ನಟಿ ರೂಪಿಕಾ ಹೇಳಿದ್ದಾರೆ.
ಲಾಸ್ಯಾ ನಾಗರಾಜ್
ತಮಿಳು ಇಂಡಸ್ಟ್ರಿಯಲ್ಲಿದ್ದ ಹುಡುಗನನ್ನು ಇಷ್ಟಪಟ್ಟಿದ್ದೆ. ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗುವವರೆಗೆ ಯೋಚಿಸಿದ್ದೆ. ಆಮೇಲೆ ಮನಸ್ತಾಪ ಬಂದು, ಬೇರೆ ಬೇರೆ ಆದೆವು ಎಂದು ಲಾಸ್ಯಾ ನಾಗರಾಜ್ ಅವರು ಹೇಳಿದ್ದಾರೆ.
ನಟಿ ಕೀರ್ತಿ ಭಟ್
ನಟಿ ಕೀರ್ತಿ ಭಟ್ ಅವರು ಇತ್ತೀಚೆಗೆ ವಿಜಯ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಕೀರ್ತಿ ಭಟ್ ಹಾಗೂ ವಿಜಯ್ ಅವರು ಬೇರೆ ಬೇರೆ ಕಾರಣಗಳನ್ನು ನೀಡಿದ್ದಾರೆ.
ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್ ಆಗಿದ್ದರು. ಇದು ಲವ್ ಮ್ಯಾರೇಜ್ ಆಗಿತ್ತು. ಇವರಿಬ್ಬರು ದೂರ ಆಗಿದ್ದಾರೆ. ಈಗ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಮದುವೆ ಆಗುತ್ತಿದ್ದಾರೆ.
ಕಾವ್ಯಶ್ರೀ ಗೌಡ
ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಕಾವ್ಯಶ್ರೀ ಗೌಡ ಅವರು ಓರ್ವ ನಟನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಅವರು ಕೂಡ ಕನ್ನಡ ನಟರಾಗಿದ್ದು, ಇವರಿಬ್ಬರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು.
ನಟಿ ಅನ್ವಿತಾ ಸಾಗರ್
ನಟಿ ಅನ್ವಿತಾ ಸಾಗರ್ ಕೂಡ ಓರ್ವ ನಟರನ್ನೇ ಲವ್ ಮಾಡಿದ್ದರು. ಆಮೇಲೆ ಅವರು ಬ್ರೇಕಪ್ ಮಾಡಿಕೊಂಡರು. ಈ ಬಗ್ಗೆ ಅವರು ಅಷ್ಟಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

