ಬೆಂಗಳೂರಿನ ಕೋನದಾಸಪುರದಲ್ಲಿ ಬಿಡಿಎ ನಿರ್ಮಿಸುತ್ತಿರುವ ಬೃಹತ್ ವಸತಿ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳಿರುವ 1,928 ಫ್ಲ್ಯಾಟ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
- Home
- News
- State
- Karnataka News Live: BDA ನಿರ್ಮಿಸುತ್ತಿರೋ ಹೈಟೆಕ್ ಅಪಾರ್ಟ್‌ಮೆಂಟ್ ಶೀಘ್ರ ಖರೀದಿಗೆ ಲಭ್ಯ - ಬೆಲೆ ಎಷ್ಟು?
Karnataka News Live: BDA ನಿರ್ಮಿಸುತ್ತಿರೋ ಹೈಟೆಕ್ ಅಪಾರ್ಟ್‌ಮೆಂಟ್ ಶೀಘ್ರ ಖರೀದಿಗೆ ಲಭ್ಯ - ಬೆಲೆ ಎಷ್ಟು?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ನೇರ ಶಾಮೀಲಾಗಿದ್ದಾರೆ. ಈ ಸಿಂಡಿಕೇಟ್ನಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದು, ಅಂಗೈ ಹುಣ್ಣಿಗೆ ಕನ್ನಡಿ ಹುಡುಕುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.
ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಸ್ಟಿಂಗ್ ಅನ್ನು ಜೆಡಿಎಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೈಕಮಾಂಡ್ಗೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಟಿಂಗ್ ಮಾಡಿದ್ದು ಯಾರು, ಅದರ ಮಾಸ್ಟರ್ ಮೈಂಡ್ ಯಾರು, ಅದರ ಕಿಂಗ್ಪಿನ್ ಯಾರು, ಶೂಟಿಂಗ್ ಮಾಡುವಾಗ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥನಿಗೆ ಸಹಕರಿಸಿದ ಕಾಂಗ್ರೆಸ್ ಪಕ್ಷದ ಮಹಿಳಾಮಣಿ ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.
ಇನ್ನು ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ದಿಲ್ಲಿ ನಾಯಕರಿಗೆ ವರದಿ ನೀಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.ಈ ಬಗ್ಗೆ ಅಗತ್ಯವಿದ್ದರೆ ಸಿದ್ದರಾಮಯ್ಯರನ್ನು ಭೇಟಿ ಮಾಡಲು ತಯಾರಿದ್ದೇನೆ. ಅವರು ನಮ್ಮ ಪಕ್ಷದಲ್ಲಿದ್ದವರು. ಅವರನ್ನು ಭೇಟಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.
Karnataka News Live 24 October 2026 BDA ನಿರ್ಮಿಸುತ್ತಿರೋ ಹೈಟೆಕ್ ಅಪಾರ್ಟ್‌ಮೆಂಟ್ ಶೀಘ್ರ ಖರೀದಿಗೆ ಲಭ್ಯ - ಬೆಲೆ ಎಷ್ಟು?
Karnataka News Live 24 October 2026 Bengaluru earthquake - ಬೆಂಗಳೂರು ಸಮೀಪ ಬೆಳ್ಳಂಬೆಳಗ್ಗೆ ಲಘು ಭೂಕಂಪ!
earthquake in Bengaluru rural: ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ದಿಢೀರ್ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3ರ ತೀವ್ರತೆ ದಾಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. .
Karnataka News Live 24 October 2026 ಕೋಲಾರದಲ್ಲಿ 80 ಕೋಟಿ ರೂಪಾಯಿ ಹೂಡಿಕೆ - ಪೋಲೆಂಡ್‌ಗೆ ಸಿಎಂ ಡಿಕೆ ಶಿವಕುಮಾರ್ ಆಹ್ವಾನ
ಬೆಂಗಳೂರಿನಲ್ಲಿ ನಡೆದ ಭಾರತ-ಪೋಲೆಂಡ್ ಬ್ಯುಸಿನೆಸ್ ಮೀಟಿಂಗ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೋಲೆಂಡ್ ಅನ್ನು ಆಹ್ವಾನಿಸಿದ್ದಾರೆ. ತಂತ್ರಜ್ಞಾನ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು.
Karnataka News Live 24 October 2026 ಮಳೆಗಾಲ ಮುಗಿತು ಅಂದ್ಕೊಂಡ್ರಾ ಎಚ್ಚರ..! ಇನ್ನೆರಡು ದಿನ ಅಪ್ಪಳಿಸಲಿದೆ ಚಂಡಮಾರುತ!
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್ 26ರ ವೇಳೆಗೆ ಭಾರಿ ಚಂಡಮಾರುತ ಸೃಷ್ಟಿಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Karnataka News Live 24 October 2026 Gadag - 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾದ KRIDL AEE ಫರ್ವೇಜ್; ಜೀವಭಯ ಇತ್ತೇ?
ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕೆಆರ್‌ಐಡಿಎಲ್ ಎಇಇ ಫರ್ವೇಜ್ ಧಾರವಾಡ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ನಾಪತ್ತೆಯ ಹಿಂದಿನ ನಿಖರ ಕಾರಣ ತಿಳಿಯಲು ತೀವ್ರ ವಿಚಾರಣೆ ನಡೆಸಲಿದ್ದಾರೆ.